ಸುದ್ದಿ
ವಕೀಲ ಮಂಜುನಾಥ್ ರವರನ್ನು ನಿಂದಿಸಿದವರನ್ನು ಬಂಧಿಸಿ
ಬಾಗೇಪಲ್ಲಿ :ಜ.8 ರಂದು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಂಘದ ವಕೀಲರ ಮೇಲೆ ಪ್ರತಿಭಟನಾಕಾರರು ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ನಡೆಸಲು ಯತ್ನಿಸಿರುವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಾಗೇಪಲ್ಲಿ ತಾಲ್ಲೂಕು ವಕೀಲರ ಸಂಘದ ಸದಸ್ಯರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ,ತಾಲ್ಲೂಕು ವಕೀಲರ ಕೋರ್ಟ್ ಕಲಾಪದಿಂದ ಹೊರಗುಳಿದು ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲರು
ಬಾಗೇಪಲ್ಲಿ ವಿಧಾನ ಸಭಾಕ್ಷೇತ್ರದ ಶಾಸಕರಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಯಾವುದೇ ಅನುಮತಿಯಿಲ್ಲದೇ ಪ್ರತಿಭಟನೆ ನಡೆಸುತ್ತಿದ್ದರು.
ನ್ಯಾಯಾಲಯ ಕಲಾಪಕ್ಕೆ ಹಾಜರಾಗಲು ತೆರಳುತ್ತಿದ್ದ ಗುಡಿಬಂಡೆ ವಕೀಲರ ಸಂಘದ ವಕೀಲ ಮಂಜುನಾಥ್ ಮೇಲೆ ಪ್ರತಿಭಟನಾ ಕಾರರು ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದರ ಜತೆಗೆ ಹಲ್ಲೆ ಮಾಡಲು ಯತ್ನಿಸಿರುತ್ತಾರೆ. ಒಬ್ಬ ವಕೀಲರ ಮೇಲೆ ಈ ರೀತಿಯಲ್ಲಿ ಮಾಡಿದರೆ, ಇನ್ನೂ ಸಾಮಾನ್ಯ ಜನರಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದು ಗೊತ್ತಾಗುತ್ತದೆ.
ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಕೂಡಲೇ ಈ ಕೃತ್ಯ ಎಸಗಿರುವವರನ್ನು ಬಂಧಿಸಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಕೀಲ ಸಂಘದ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ನಮ್ಮ ವಕೀಲರನ್ನು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿ ಅವರಿಗೆ ಮಾನಹಾನಿ ಮಾಡಿರುವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಪ್ರಸನ್ನಕುಮಾರ್ , ಪಿವಿ ಅಪ್ಪಸ್ವಾಮಿ, ಕರುಣಾಕರ ರೆಡ್ಡಿ , ನರಸಿಂಹರೆಡ್ಡಿ , ಎಂಕೆ ಅಲ್ಲಾಬಕಾಶ್, ನಂಜಪ್ಪ , ಸತ್ಯನಾರಾಯಣ್ ರಾವ್, ನಾರಾಯಣ , ಜಿ ಎಸ್ ನಾಗರಾಜ್ಆರ್ ಚಂದ್ರಶೇಖರ್ , ಜಯಪ್ಪ , ನರೇಂದ್ರಬಾಬು , ಬಾಬು , ಜಿ ಎಸ್ ಶ್ರೀನಿವಾಸ್ , ರಾಧಾಕೃಷ್ಣ , ಸತೀಶ ,ಮಲ್ಲಿ, ಮಹೇಶ್ , ನಾಗಭೂಷಣ , ಬಾಲುನಾಯಕ್ , ಮಂಜುನಾಥ್ , ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಸುದ್ದಿ
ಬಿಳ್ಳೂರು ಶಾಲೆಯಲ್ಲಿ ಕೊರೊನಾ ಕುರಿತು ಪ್ರಬಂಧ ಸ್ಪರ್ಧೆ
ಬಾಗೇಪಲ್ಲಿ:(ಫೆ.18) :ಕೊರೋನಾ ಸೋಂಕಿನ ಲಕ್ಷಣಗಳನ್ನು ಇದ್ದವರು, ಇನ್ನೊಬ್ಬ ವ್ಯಕ್ತಿಗೆ ಹರಡದಂತೆ ಅವರಿಗೆ ಮನೆಯಲ್ಲಿಯೇ ಇರಲು ಸಂದೇಶವನ್ನು ನೀಡುವುದು ಅತ್ಯಗತ್ಯ ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ವಿ.ಮಲ್ಲಪ್ಪ ತಿಳಿಸಿದರು.
ಅವರು ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಕೋ ಕ್ಲಬ್ ಅಡಿಯಲ್ಲಿ ಇಲ್ಲಿನ ಪ್ರೌಢಶಾಲೆಯ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೊರೋನಾ ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮಗಳು’ ಕುರಿತು ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡುತ್ತಿದ್ದರು.ಇಂತಹ ಸಮಯದಲ್ಲಿ ನಿಮ್ಮ
ಸಹೋದ್ಯೋಗಿಗಳು ನಿಮ್ಮ ಆರೋಗ್ಯದ ಬಗ್ಗೆ ಪೋಸ್ಟ್ ಮಾಡುವುದು ಅತ್ಯಗತ್ಯ. ಇತರರು ಯಾವುದೇ ಸೋಂಕು ಅಥವಾ ರೋಗದಿಂದ ಸುರಕ್ಷಿತವಾಗಿರಲು ಇದು ಸುಲಭವಾಗಿಸುತ್ತದೆ ಎಂದು ಅವರು ಹೇಳಿದರು.
ಸ್ಯಾನಿಟೈಸರ್ ಅಥವಾ ಸಾಬೂನುಗಳಿಂದ ಕೈಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಿರಿ.ಈ ರೀತಿ ಮಾಡುವುದರಿಂದ ಕೈ ಗಳಲ್ಲಿ ಕೋವಿಡ್ ವೈರಾಣು ಸೇರಿದ್ದಲ್ಲಿ,ಅವನ್ನು ನಾಶಪಡಿಸುತ್ತದೆ.ಕೆಮ್ಮು ಅಥವಾ ಸೀನುತ್ತಿರುವ ವ್ಯಕ್ತಿಯಿಂದ ಕನಿಷ್ಟ 1 ಮೀಟರ್ ಅಂತರವನ್ನು ಕಾಯ್ದುಕೊಳಿ.ಏಕೆಂದರೆ ಸೀನು ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಬರುತ್ತದೆ.ಇದರಲ್ಲಿ ವೈರಸ್ ಇರುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.
ಅನಾರೋಗ್ಯ ಕಂಡು ಬಂದಲ್ಲಿ ಮನೆಯಲ್ಲಿಯೇ ಇರಿ.ಉಸಿರಾಟದ ಸಮಸ್ಯೆಯ ಜತೆಗೆ ನಿಮಗೆ ಜ್ವರ,ಕೆಮ್ಮು ,ಶೀತ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ,ಚಿಕಿತ್ಸೆ ಪಡೆದುಕೊಳ್ಳಿ.ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯನ್ನು ಪಾಲಿಸಿ ಎಂದು ತಿಳಿಸಿದರು.
ಈ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ 9 ನೇ ತರಗತಿಯ ವಿದ್ಯಾರ್ಥಿ ಪ್ರಿಯಾಂಕ,ದ್ವೀತಿಯ ಸ್ಥಾನ 10 ನೇ ತರಗತಿಯ ತೇಜಶ್ವಿನಿ ಹಾಗೂ ತೃತಿಯ ಸ್ಥಾನ ಪಡೆದ 9 ನೇ ತರಗತಿ ನಿಖಿತ ನಗದು ಬಹುಮಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರಾದ ಎನ್.ಆರ್.ಕುಮಾರ್, ಹೆಚ್.ಪಿ.ಚಿಕ್ಕಣ್ಣ, ಕೆ.ಎಂ.ಕೃಷ್ಣಪ್ಪ, ಹೆಚ್.ಕೆ.ಕೃಷ್ಣಮೂರ್ತಿ, ಸಂಗಪ್ಪ ಹಡಗಿನಾಳ್ , ವೇಣಿಬಾಯಿ ಮತ್ತು ಆರೋಗ್ಯ ಕಾರ್ಯಕರ್ತೆ ಶ್ಯಾಮಲಮ್ಮ ಮತ್ತಿತರರು ಹಾಜರಿದ್ದರು.
ಸುದ್ದಿ
ತಾಲ್ಲೂಕಿನಲ್ಲಿ ‘ಕೈ’ ಬಲಪಡಿಸುತ್ತಿರುವುದು ಹರ್ಷದಾಯಕ : ಶಾಸಕ ಎಸ್.ಎನ್ ಸುಬ್ಬಾರೆಡ್ಡಿ
ಬಾಗೇಪಲ್ಲಿ: ಕಾಂಗ್ರೆಸ್ ಪಕ್ಷದ ಸಿದ್ದಾಂತಗಳು ದೇಶದ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯನ್ನು ನೆಚ್ಚಿ ವಿವಿಧ ಪಕ್ಷಗಳಿಂದ ತೊರೆದು ನೂರಾರು ಅಲ್ಪಸಂಖ್ಯಾತರು ಹಾಗೂ ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಅವರು ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮುದ್ದೀನ್ ಅವರ ಸ್ವ ಗೃಹದಲ್ಲಿ ಪಟ್ಟಣದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಪಿ.ಶಬೀರ್ ಭಾಷಾ,ಉಪಾಧ್ಯಕ್ಷರಾಗಿ ಷೇಕ್ ಮುಬಾರಕ್,ಪ್ರಧಾನ ಕಾರ್ಯದರ್ಶಿಯಾಗಿ ಖಯಾಮ್ ಪೀರ್ ರವರಿಗೆ
ನೇಮಕಾತಿ ಪತ್ರವನ್ನು ಹಸ್ತಂತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಇದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ದೇಶ ಕಟ್ಟುವ ಪಕ್ಷ ಎಂದರು. ಜಾತ್ಯತೀತ ನಿಲುವು ಹೊಂದಿರುವ ಹಾಗೂ ದೇಶದ ಜನಪರವಾದ ಪಕ್ಷ ಎಂದು ಹೇಳಿದರು. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುತ್ತಿದ್ದು, ಎಲ್ಲರೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ
ಪಕ್ಷ ಮತ್ತು ಸಮ ಸಮಾಜಕ್ಕಾಗಿ ಇನ್ನಷ್ಟು ತೊಡಗಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮುದ್ದೀನ್ ಮಾತನಾಡಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆಯಂತೆ ತಾನು ಪಕ್ಷದಲ್ಲಿ ಕಾರ್ಯನಿರ್ವಹಿಸಲಿದ್ದೇನೆ ನನಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಅರಿವು ಇದೆ. ಪಟ್ಟಣದ 23 ವಾರ್ಡ್ ಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಯೋಜನೆಯನ್ನು ಮನೆಮನೆಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಗೆಲುವುಗಾಗಿ ಶ್ರಮಿಸುತ್ತನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಡಿ ಪಿ ಸದಸ್ಯರಾದ ಅಮರನಾಥ್ ರೆಡ್ಡಿ, 7 ನೇ ವಾರ್ಡ್ ಪುರಸಭೆ ಸದಸ್ಯರಾದ ನಂಜುಂಡಪ್ಪ, ಡಿ.ಸಿ
ಸಿ.ಅಲ್ಪಸಂಖ್ಯಾತ ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಅನ್ಸರ್ ಪಾಷಾ,ಹಾಗೂ ನೂರಾರು ಅಲ್ಪಸಂಖ್ಯಾತ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸುದ್ದಿ
ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ
ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಭದ್ರಾವತಿಯಲ್ಲಿ ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.