Connect with us
Ad Widget

ರಾಜ್ಯ

ನೌಕರರ ಕೆಲಸದ ಪುನರ್ ವಿಮರ್ಶೆಯ ಕಮಿಟಿಯನ್ನು ರದ್ದುಗೊಳಿಸಲು, ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ಪ್ರತಿಭಟನೆ

Published

on

ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳ ಮುಖಾಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಮನವಿ.

ಯಾದಗಿರಿ: ಕರ್ನಾಟಕ ರಾಜ್ಯದ 6024 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 4 ಕೋಟಿಗೂ ಹೆಚ್ಚಿನ ಗ್ರಾಮೀಣ ಪ್ರದೇಶದ ಜನಸಂಖ್ಯೆಗೆ ಕಿರು ನೀರು ಸರಬರಾಜು , ಕೊಳವೆಬಾವಿ ನೀರು ಸರಬರಾಜು ಯೋಜನೆಯಡಿ , 73,000 ನೀರು ಸರಬರಾಜು ಸ್ಥಾವರಗಳಿವೆ. ಕುಡಿಯುವ ನೀರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿವೆ. ಈ ಎಲ್ಲಾ ಸ್ಥಾವರಗಳಲ್ಲಿ ಪ್ರತಿದಿನ ಮನೆಮನೆಗೆ ನೀರು ಪೂರೈಸಲು ಹಗಲು-ರಾತ್ರಿಯೆನ್ನದೆ ರಜಾದಿನಗಳು ಇಲ್ಲದೇ ಟ್ಯಾಂಕರ್ ಗಳಿಗೆ ನೀರು ತುಂಬಿಸುವುದು ಗ್ರಾಮದ ಪ್ರತಿ ಬೀದಿಗಳಿಗೆ ನೀರು ಹೋಗಲು ಗೇಟ್ ವಾಲ್ ತೆಗೆಯುವುದು. ನೀರು ಸರಬರಾಜು ಆದಮೇಲೆ ಗೇಟ್ ವಾಲ್ ಮುಚ್ಚುವುದು. ಟ್ಯಾಂಕರ್ ಗಳಿಗೆ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛ ಮಾಡುವುದು. ಮೋಟಾರು ಕೆಟ್ಟರೆ ತೆಗೆದುಕೊಂಡುಹೋಗಿ ರಿಪೇರಿ ಮಾಡಿಸುವುದು. ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಹಾಕಿ ಕೊಡುವುದು. ನೀರಿನ ಕಲೆಕ್ಷನ್ ಪೈಪ್ಗಳು ಹೊಡೆದು ಹೋದರೆ ರಿಪೇರಿ ಮಾಡುವುದು. ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕುವುದು. ಕಚೇರಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ರಾಷ್ಟ್ರ ಧ್ವಜ ಹಾರಿಸುವುದು ಮತ್ತು ಇಳಿಸುವುದು. ಆಡಳಿತ ಮಂಡಳಿಯಿಂದ ಕೆಲಸಗಳು ಪಂಚಾಯಿತಿ ಅಭಿವೃದ್ಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಹೇಳಿದ ಕೆಲಸಗಳನ್ನು ಮಾಡುವುದು. ವಾರ್ಡ್ ಸಭೆ ಗ್ರಾಮಸಭೆ ಸಿದ್ಧತೆಗಳನ್ನು ಮಾಡುವುದು. ಇನ್ನು ಮುಂತಾದ ಸೇವೆಗಳನ್ನು ಮನಗಂಡು.ಸರ್ಕಾರ ದಿ:10-1-1994 ಮತ್ತು 4-1-2008 ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದ ಮಾದರಿ ಹಾಗೂ ನೌಕರರ ನೇಮಕಾತಿ ವಿಧಾನದ ಆದೇಶದಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಪ್ರತ್ಯೇಕವಾದ ನೀರಿನ ಸ್ಥಾವರಗಳ.( ಓವರ್ ಹೆಡ್ ಟ್ಯಾಂಕ್) ಸರಬರಾಜು(ಕೊರವೆ ಬಾವಿ ನೀರು ಸರಬರಾಜು ಹೊಂದಿದ್ದರೆ) ಅದರ ಅಗತ್ಯಕ್ಕೆ ತಕ್ಕಂತೆ ಪ್ರತಿ ಸರಬರಾಜು ಸ್ಥಾವರಕ್ಕೆ ಒಬ್ಬ ವಾಟರ್ ಮ್ಯಾನ್ / ಆಪರೇಟರ್ ನೇಮಿಸಿಕೊಳ್ಳಲು ಸರ್ಕಾರವು ಈಗಾಗಲೇ ಸಂಖ್ಯೆ: ಗ್ರಾ.ಪಂ.ಕ 2012 ದಿನಾಂಕ 04-01-2012 ರಲ್ಲಿ ನೌಕರರ ಕೆಲಸದ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದಂತೆ ಪ್ರಸ್ತುತ ರಾಜ್ಯದಲ್ಲಿ 34587 ಸಾವಿರ ಸಿಬ್ಬಂದಿಗಳು , 60,000 ಜನವಸತಿ ಪ್ರದೇಶಗಳಾದ ಗ್ರಾಮಗಳು.


ತಾಂಡಗಳು , ಗೊಲ್ಲರಹಟ್ಟಿಗಳು , ವಾರ್ಡಗಳು ಮತ್ತೀತರ ಪ್ರದೇಶಗಳಿಗೆ ಕಿರು ನೀರು ಸರಬರಾಜು , ಕೊಳವೆಬಾವಿ ನೀರು ಸರಬರಾಜು , ಬಹು ಗ್ರಾಮ ಯೋಜನೆಗಳ ಮುಖಾಂತರ 73,000 ಸಾವಿರ ಸ್ಥಾವರಗಳಿಂದ ಕುಡಿಯುವ ನೀರು ಹಂಚಿಕೆ ಮಾಡುತ್ತಿದ್ದಾರೆ.


ಇದನ್ನು ಮನಗಂಡು ಸರ್ಕಾರವು ನೌಕರರ ಕೆಲಸದ ಪುನರ್ ವಿಮರ್ಶೆ ಮಾಡಲಿಕ್ಕೆ ಕಮಿಟಿ ಮಾಡಲಿದೆ ಎಂದು ತಿಳಿದು ಬಂದಿದೆ. ಇದು ನೌಕರರ ವಿರೋಧಿ ಧೋರಣೆಯಾಗಿದ್ದು , ಸರ್ಕಾರವು ಈಗಾಗಲೇ ಸಂಖ್ಯೆ: ಗ್ರಾ.ಪಂ. 392 ಗ್ರಾ.ಪಂಕ2012 ದಿ 04-01-2012 ರಲ್ಲಿ ನೌಕರರ ಕೆಲಸ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಆದ್ದರಿಂದ ಕೆಲಸದ ಪುನರ್ವಿಮರ್ಶೆಯ ಕಮಿಟಿಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದೆ.


ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಬಸವರಾಜ್ ದೊರೆ ಗೌಡರೇರಾ , ತಾಲೂಕ ಖಜಾಂಚಿಯಾದ ಮರೆಪ್ಪ ಬಾಡಿಯಾಳ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಾಲಿಸಾಬ್ ಎಂ.ಬೆಳಗೇರಾ , ಗ್ರಾ.ಪಂ.ನೌಕರರ ಮುಖಂಡರಾದ ಮಲ್ಲಿಕಾರ್ಜುನ ಬಳಿಚಕ್ರ , ಮಹಾದೇವಪ್ಪ ಯಂಪಾಡ , ಗುಂಡಪ್ಪ ಮುಂತಾದವರು ಇದ್ದರು.

ವರದಿ: ಬೀರಲಿಂಗಪ್ಪ. ಕಿಲ್ಲನಕೇರಾ

Continue Reading
Advertisement
Click to comment

Leave a Reply

Your email address will not be published. Required fields are marked *

ರಾಜ್ಯ

ಜನವರಿ ಒಂದರಿಂದ ಶಾಲೆ ಆರಂಭ : ವೇಳಾಪಟ್ಟಿ ಪ್ರಕಟ

Published

on

ಬೆಂಗಳೂರು: ಜನವರಿ 1 ರಿಂದ ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. 10 ನೇ ತರಗತಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಾರದಲ್ಲಿ 6 ದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 30 ರವರೆಗೆ ತಲಾ 45 ನಿಮಿಷಗಳ ಮೂರು ಪಿರಿಯಡ್ ಗಳಲ್ಲಿ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪಾಠ ಮಾಡಲಾಗುವುದು.

Continue Reading

ರಾಜ್ಯ

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”

Published

on

ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.

Continue Reading

ರಾಜ್ಯ

ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ

Published

on

ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್