Connect with us
Ad Widget

ದೇಶ

ಆರೋಪಿಗಳಿಗೆ ಉಗ್ರ ಶಿಕ್ಷೆ ಹಾಗೂ ಯುಪಿ ಸರ್ಕಾರ ವಜಾಕ್ಕೆ

Published

on

ಆರೋಪಗಳಿಗೆ ಉಗ್ರ ಶಿಕ್ಷೆ ಹಾಗೂ ಯುಪಿ ಸರ್ಕಾರ ವಜಾಕ್ಕೆ – ಕಲ್ಯಾಣ ಕರ್ನಾಟಕ ಭೋವಿ ವಡ್ಡರ್ ಯುವಕರ ಸಂಘ ಒತ್ತಾಯ.

ರಾಯಚೂರು.ಅ.05- ಉತ್ತರ ಪ್ರದೇಶ ದಲಿತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ, ಭೀಕರ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಹಾಗೂ ದುರಾಡಳಿತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರದಿಂದ ತೊಲಗಿಸುವಂತೆ ರಾಷ್ಟ್ರಪತಿಗಳಿಗೆ ಕಲ್ಯಾಣ ಕರ್ನಾಟಕ ಭೋವಿ (ವಡ್ಡರ) ಯುವಕರ ಸಂಘ ರಾಯಚೂರು ಸಮಿತಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ವಂದಾಲ
ಉತ್ತರ ಪ್ರದೇಶ ಹತ್ರಾಸ್ ಗ್ರಾಮದಲ್ಲಿ ಮನಿಶಾ ಎಂಬ ಬಾಲಕಿಯ ಅತ್ಯಾಚಾರ ತೀವ್ರವಾಗಿ ಖಂಡಿಸುತ್ತೇವೆ. ಅತ್ಯಾಚಾರ ವೆಸಗಿದ ಆರೋಪಿಗಳಿಗೆ ಶಿಕ್ಷಿಸಬೇಕಾದ ಅಲ್ಲಿಯ ಬಿಜೆಪಿ ಸರ್ಕಾರ ಅವರ ರಕ್ಷಣೆಗೆ ನಿಂತಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವುದಲ್ಲದೇ, ಈ ಪ್ರಕರಣದಲ್ಲಿ ಬಾಲಕಿಗೆ ರಕ್ಷಣೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾದ ಯೋಗಿ ಆದಿತ್ಯನಾಥ ಸರ್ಕಾರ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ವೆಂಕಟೇಶ್ ವಂದಾಲ, ಉಪಾಧ್ಯಕ್ಷ ಅಮರೇಶ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಬಿಚ್ಚಾಲಿ, ಜಿಲ್ಲಾ ಖಜಾಂಚಿ ಶಂಕರ್, ವೆಂಕಟೇಶ ಕಲ್ಲೂರ್, ಕುಮಾರ್ ಹಿರೇಮನಿ, ರಮೇಶ್ ಸಿಂಧನೂರು, ಮಹಿಳಾ ಪ್ರತಿನಿಧಿ ಬಸಲಿಂಗಮ್ಮ, ಕುಮಾರಿ ಅಶ್ವಿನಿ, ಹೇಮಾವತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ದೇಶ

ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ

Published

on

ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ : ಹನ್ನೆರಡು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಹೈ ಕೋರ್ಟ್​ ಟ್ವಿಸ್ಟ್

ಬೆಂಗಳೂರು: ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ ಬರೆದಿದ್ದ ಹನ್ನೆರಡು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಹೈ ಕೋರ್ಟ್​ ಟ್ವಿಸ್ಟ್​ ನೀಡಿದೆ.ತನ್ನ ಕೆಳಗಿನ ಎರಡು ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಪಕ್ಕಕ್ಕಿಟ್ಟಿರುವ ಕೋರ್ಟ್,​ ಈ ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂಬ ಮಹತ್ವದ ತೀರ್ಪು ಕೊಟ್ಟಿದೆ.

2006ರಲ್ಲಿ ಗುಡಿಬಂಡೆ-ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ಮ್ಯಾಕ್ಸಿ ಕ್ಯಾಬ್​ ಟಯರ್ ಸ್ಫೋಟಗೊಂಡು ಪಲ್ಟಿಹೊಡೆದಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಅಶ್ವತ್ಥಮ್ಮ ಎಂಬುವವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ವಾಹನ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2009ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ​ಜೆಎಂಎಫ್​ಸಿ ಕೋರ್ಟ್​, ಐಪಿಸಿ ಕಾಯ್ದೆ 279,337,338,304-ಎ ಅಡಿ ಚಾಲಕ ಅತಾವುಲ್ಲಾಗೆ ಒಂದೂವರೆ ವರ್ಷ ಜೈಲು ಹಾಗೂ 2.5 ಸಾವಿರ ದಂಡ ವಿಧಿಸಿತ್ತು.ಜೆಎಂಎಫ್​ಸಿ ಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸೆಷನ್​ ಕೋರ್ಟ್​ ಮೊರೆ ಹೋದ ಡ್ರೈವರ್​ಗೆ ಅಲ್ಲಿಯೂ ನ್ಯಾಯ ಸಿಗಲಿಲ್ಲ. ಇದೀಗ ಹೈಕೋರ್ಟ್​ ಈ ಅಪಘಾತ ಪ್ರಕರಣ ಸಂಬಂಧ ಮಹತ್ವದ ತೀರ್ಪು ಪ್ರಕಟಿಸಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಗರಂ ಆಗಿದೆ.ಸಾಲು ಸಾಲು ರಸ್ತೆಗುಂಡಿಗಳೇ ಅಶ್ವತ್ಥಮ್ಮಳ ಸಾವಿಗೆ ಕಾರಣ. ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ. ಚಾಲಕನ ನಿರ್ಲಕ್ಷ್ಯವನ್ನ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲ ವಾಗಿದ್ದಾರೆ ಎಂದು ಕೋರ್ಟ್​ ಹೇಳಿದೆ.

Continue Reading

ದೇಶ

ಗಾಂಧೀಜಿ‌ ಮೊಮ್ಮಗ ಕೊರೊನಾಗೆ ಬಲಿ

Published

on

ದಕ್ಷಿಣ ಆಫ್ರಿಕಾ : ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ಸತೀಶ್ ಧುಪೆಲಿಯಾ ಅವರು ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೂರು ದಿನಗಳ ನಂತರ ಕೋವಿಡ್-19ನಿಂದಾಗಿ ಭಾನುವಾರ ಜೋಹಾನ್ಸ್‌ಬರ್ಗ್‌ನಲ್ಲಿ ಮೃತಪಟ್ಟಿರುವುದಾಗಿ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಒಂದು ತಿಂಗಳ ಕಾಲ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್-19 ಸೋಂಕು ತಗುಲಿದ್ದರಿಂದಾಗಿ ಮೃತಪಟ್ಟಿರುವುದಾಗಿ ಧುಪೆಲಿಯಾ ಅವರ ಸಹೋದರಿ ಉಮಾ ಧುಪೆಲಿಯಾ-ಮೆಸ್ಟ್ರಿ ದೃಢಪಡಿಸಿದರು.

‘ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಒಂದು ತಿಂಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಆ ವೇಳೆ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಅವರಿಗೆ ಇಂದು (ಭಾನುವಾರ) ಸಂಜೆ ತೀವ್ರ ಹೃದಯಾಘಾತವಾಗಿತ್ತು’ ಎಂದು ಎಂಎಸ್ ಉಮಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಬಹುಪಾಲು ಜೀವನವನ್ನು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೊಗ್ರಾಫರ್ ಮತ್ತು ಫೊಟೊಗ್ರಾಫರ್ ಆಗಿ ಕಳೆದ ಧುಪೆಲಿಯಾ, ಮಹಾತ್ಮ ಗಾಂಧಿ ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಡರ್ಬನ್ ಬಳಿಯ ಫೀನಿಕ್ಸ್ ಸೆಟಲ್‌ಮೆಂಟ್‌ನಲ್ಲಿ ಸ್ಥಾಪಿತವಾದ ಗಾಂಧಿ ಅಭಿವೃದ್ಧಿ ಟ್ರಸ್ಟ್‌ಗೆ ಸಹಾಯ ಮಾಡುವಲ್ಲಿ ಬಹಳ ಸಕ್ರಿಯರಾಗಿದ್ದರು. ಅಲ್ಲದೆ ಎಲ್ಲಾ ಸಮುದಾಯಗಳ ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಸಾಮಾಜಿಕ ಕಲ್ಯಾಣ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಸ್ನೇಹಿತರು ಮತ್ತು ಆತ್ಮೀಯರು ಮೃತರಿಗೆ ಗೌರವ ಸಲ್ಲಿಸಿದ್ದಾರೆ.

ಧುಪೆಲಿಯಾ ಅವರು 1860ರ ಹೆರಿಟೇಜ್ ಫೌಂಡೇಶನ್‌ ಮಂಡಳಿಯ ಸದಸ್ಯರೂ ಆಗಿದ್ದರು.

Continue Reading

ದೇಶ

ದೆಹಲಿಯಲ್ಲಿ 6.9 ಡಿಗ್ರಿ ಸೆಲ್ಸಿಯಸ್ ತಾಪಮಾನ

Published

on


ನವದೆಹಲಿ : 2003ರ ನಂತರ ನವಂಬರ್ ನಲ್ಲಿ ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶ ವಾಗಿರುವ ಇದು, ರಾಷ್ಟ್ರ ರಾಜಧಾನಿಯಲ್ಲಿ ಚಳಿ ಆರ್ಭಟ ಮುಂದುವರೆದಿದ್ದು ಭಾನುವಾರ ಕನಿಷ್ಠ ತಾಪಮಾನ 6.9 ಡಿಗ್ರಿಗೆ ಇಳಿದಿದೆ. ನಗರದ ಅನೇಕ ಭಾಗಗಳಲ್ಲಿ ಶೀತ ಮಾರುತ ಬೀಸುತ್ತಿದ್ದು ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್