ದೇಶ
ವಾಲ್ಮೀಕಿ ಯುವತಿ ಅತ್ಯಾಚಾರ : ಗಲ್ಲು ಶಿಕ್ಷೆಗೆ ಕರ್ನಾಟಕ ಪ್ರದೇಶ ಯುವ ಕುರಬರ ಸಂಘ ಜಿಲ್ಲಾ ಸಮಿತಿ ವತಿಯಿಂದ ಆಗ್ರಹ
ರಾಯಚೂರು.ಅ.5- ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ವಾಲ್ಮೀಕಿ ಯುವತಿಯ ಸಾಮೂಹಿಕ ಅತ್ಯಾಚಾರಗೈದ 4 ಜನ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕೆಂದು ಕರ್ನಾಟಕ ಪ್ರದೇಶ ಯುವ ಕುರಬರ ಸಂಘ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾದಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿದ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಕೊಲೆ ಘಟನೆ ಅತ್ಯಂತ ಹೇಯಾ ಮತ್ತು ಪೈಶಾಚಿಕ ಕೃತ್ಯವಾಗಿದ್ದು ಠಾಕೂರ ಸಮೂದಾಯಕ್ಕೆ ಸೇರಿದ ಸೇದೀಪ್ ಠಾಕೂರ್, ರವಿ ಠಾಕೂರ್, ಲವಕುಶ ಠಾಕೂರ್ ಹಾಗೂ ರಾಮ್ ಟಾಕೂರ್ ಎಂಬ ಮೇಲ್ವರ್ಗದ ನಾಲ್ಕು ಜನ ದುರ್ಷ್ಕಮಿಗಳು ಸೆ. 14 ರಂದು ಯುವತಿ ಹೊಲದ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬರುತ್ತಿರುಬೇಕಾದರೆ ಯುವತಿಯನ್ನು ಅಪಹರಿಸಿ ನಾಲ್ಕು ಜನರು ಸಾಮೂಹಿಕ ಅತ್ಯಾಚಾರವನ್ನು ವೆಸಗಿಸಿ ಬೆನ್ನು ಮೂಳೆ ಮುರಿದು ನಾಲಿಗೆ ಕತ್ತರಿಸಿ ಅಮಾನೀಯವಾಗಿ ಕೊಲೆ ಮಾಡಿ ವಿಕೃವಾಗಿ ಬೀಸಾಡಿದ್ದಾರೆ.
ಕೂಡಲೇ ಯುವತಿಯನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ಸೆ. 29 ರಂದು ಮೃತಪಟ್ಟಿರುತ್ತಾರೆ. ಮೃತ ದೇಹವನ್ನು ಕುಟುಂಬಕ್ಕೆ ಒಪ್ಪಿಸದೆ ಗುಂಡಾ ವರ್ತನೆಯಿಂದ ವಾಲ್ಮೀಕಿ ಯುವತಿಯ ಸ್ವಗ್ರಾಮಕ್ಕೆ ಮೃತ ದೇಹವನ್ನು ತಂದು ರಾತ್ರಿ ಸುಟ್ಟು ಹಾಕಿರುತ್ತಾರೆ. ಆದ ಕಾರಣ ಕೂಡಲೇ ಅತ್ಯಾಚಾರ ವೆಸಗಿದ ನಾಲ್ಕು ಜನ ಆರೋಪಿಗಳಿಗೆ ಕಠಿಣ ವಿಧಿಸಿ ಯೋಗಿನಾಥ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗುರು ಪ್ರತಾಪ್, ಜಿಲ್ಲಾ ಉಪಾಧ್ಯಕ್ಷ ಅಯ್ಯಪ್ಪ ಗಬ್ಬೂರು, ತಿಮ್ಮಪ್ಪ, ರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
ದೇಶ
ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ
ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ : ಹನ್ನೆರಡು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಹೈ ಕೋರ್ಟ್ ಟ್ವಿಸ್ಟ್
ಬೆಂಗಳೂರು: ಚಾಲಕನೇ ಅಪರಾಧಿ ಎಂದು ನ್ಯಾಯಾಧೀಶರು ಷರಾ ಬರೆದಿದ್ದ ಹನ್ನೆರಡು ವರ್ಷಗಳ ಹಿಂದಿನ ಅಪಘಾತ ಪ್ರಕರಣಕ್ಕೆ ಹೈ ಕೋರ್ಟ್ ಟ್ವಿಸ್ಟ್ ನೀಡಿದೆ.ತನ್ನ ಕೆಳಗಿನ ಎರಡು ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಪಕ್ಕಕ್ಕಿಟ್ಟಿರುವ ಕೋರ್ಟ್, ಈ ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂಬ ಮಹತ್ವದ ತೀರ್ಪು ಕೊಟ್ಟಿದೆ.
2006ರಲ್ಲಿ ಗುಡಿಬಂಡೆ-ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ಮ್ಯಾಕ್ಸಿ ಕ್ಯಾಬ್ ಟಯರ್ ಸ್ಫೋಟಗೊಂಡು ಪಲ್ಟಿಹೊಡೆದಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಅಶ್ವತ್ಥಮ್ಮ ಎಂಬುವವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ವಾಹನ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
2009ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ಸಿ ಕೋರ್ಟ್, ಐಪಿಸಿ ಕಾಯ್ದೆ 279,337,338,304-ಎ ಅಡಿ ಚಾಲಕ ಅತಾವುಲ್ಲಾಗೆ ಒಂದೂವರೆ ವರ್ಷ ಜೈಲು ಹಾಗೂ 2.5 ಸಾವಿರ ದಂಡ ವಿಧಿಸಿತ್ತು.ಜೆಎಂಎಫ್ಸಿ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸೆಷನ್ ಕೋರ್ಟ್ ಮೊರೆ ಹೋದ ಡ್ರೈವರ್ಗೆ ಅಲ್ಲಿಯೂ ನ್ಯಾಯ ಸಿಗಲಿಲ್ಲ. ಇದೀಗ ಹೈಕೋರ್ಟ್ ಈ ಅಪಘಾತ ಪ್ರಕರಣ ಸಂಬಂಧ ಮಹತ್ವದ ತೀರ್ಪು ಪ್ರಕಟಿಸಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಗರಂ ಆಗಿದೆ.ಸಾಲು ಸಾಲು ರಸ್ತೆಗುಂಡಿಗಳೇ ಅಶ್ವತ್ಥಮ್ಮಳ ಸಾವಿಗೆ ಕಾರಣ. ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ. ಚಾಲಕನ ನಿರ್ಲಕ್ಷ್ಯವನ್ನ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲ ವಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ದೇಶ
ಗಾಂಧೀಜಿ ಮೊಮ್ಮಗ ಕೊರೊನಾಗೆ ಬಲಿ
ದಕ್ಷಿಣ ಆಫ್ರಿಕಾ : ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ಸತೀಶ್ ಧುಪೆಲಿಯಾ ಅವರು ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೂರು ದಿನಗಳ ನಂತರ ಕೋವಿಡ್-19ನಿಂದಾಗಿ ಭಾನುವಾರ ಜೋಹಾನ್ಸ್‌ಬರ್ಗ್‌ನಲ್ಲಿ ಮೃತಪಟ್ಟಿರುವುದಾಗಿ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಒಂದು ತಿಂಗಳ ಕಾಲ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್-19 ಸೋಂಕು ತಗುಲಿದ್ದರಿಂದಾಗಿ ಮೃತಪಟ್ಟಿರುವುದಾಗಿ ಧುಪೆಲಿಯಾ ಅವರ ಸಹೋದರಿ ಉಮಾ ಧುಪೆಲಿಯಾ-ಮೆಸ್ಟ್ರಿ ದೃಢಪಡಿಸಿದರು.
‘ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಒಂದು ತಿಂಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಆ ವೇಳೆ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಅವರಿಗೆ ಇಂದು (ಭಾನುವಾರ) ಸಂಜೆ ತೀವ್ರ ಹೃದಯಾಘಾತವಾಗಿತ್ತು’ ಎಂದು ಎಂಎಸ್ ಉಮಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಬಹುಪಾಲು ಜೀವನವನ್ನು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೊಗ್ರಾಫರ್ ಮತ್ತು ಫೊಟೊಗ್ರಾಫರ್ ಆಗಿ ಕಳೆದ ಧುಪೆಲಿಯಾ, ಮಹಾತ್ಮ ಗಾಂಧಿ ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಡರ್ಬನ್ ಬಳಿಯ ಫೀನಿಕ್ಸ್ ಸೆಟಲ್‌ಮೆಂಟ್‌ನಲ್ಲಿ ಸ್ಥಾಪಿತವಾದ ಗಾಂಧಿ ಅಭಿವೃದ್ಧಿ ಟ್ರಸ್ಟ್‌ಗೆ ಸಹಾಯ ಮಾಡುವಲ್ಲಿ ಬಹಳ ಸಕ್ರಿಯರಾಗಿದ್ದರು. ಅಲ್ಲದೆ ಎಲ್ಲಾ ಸಮುದಾಯಗಳ ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಸಾಮಾಜಿಕ ಕಲ್ಯಾಣ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಸ್ನೇಹಿತರು ಮತ್ತು ಆತ್ಮೀಯರು ಮೃತರಿಗೆ ಗೌರವ ಸಲ್ಲಿಸಿದ್ದಾರೆ.
ಧುಪೆಲಿಯಾ ಅವರು 1860ರ ಹೆರಿಟೇಜ್ ಫೌಂಡೇಶನ್ ಮಂಡಳಿಯ ಸದಸ್ಯರೂ ಆಗಿದ್ದರು.
ದೇಶ
ದೆಹಲಿಯಲ್ಲಿ 6.9 ಡಿಗ್ರಿ ಸೆಲ್ಸಿಯಸ್ ತಾಪಮಾನ
ನವದೆಹಲಿ : 2003ರ ನಂತರ ನವಂಬರ್ ನಲ್ಲಿ ದಾಖಲಾದ ಅತ್ಯಂತ ಕಡಿಮೆ ಉಷ್ಣಾಂಶ ವಾಗಿರುವ ಇದು, ರಾಷ್ಟ್ರ ರಾಜಧಾನಿಯಲ್ಲಿ ಚಳಿ ಆರ್ಭಟ ಮುಂದುವರೆದಿದ್ದು ಭಾನುವಾರ ಕನಿಷ್ಠ ತಾಪಮಾನ 6.9 ಡಿಗ್ರಿಗೆ ಇಳಿದಿದೆ. ನಗರದ ಅನೇಕ ಭಾಗಗಳಲ್ಲಿ ಶೀತ ಮಾರುತ ಬೀಸುತ್ತಿದ್ದು ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.