ರಾಜ್ಯ
ಶುದ್ಧ ಕುಡಿಯುವ ನೀರಿನ ಘಟಕದ ಕಳಪೆ ಕಾಮಗಾರಿ; ಎರಡು ತಿಂಗಳಲ್ಲಿ ಹಾಳಾದ ಘಟಕ
ಜಮಖಂಡಿ:_ ತಾಲ್ಲೂಕಿನ ಸಾವಳಗಿ ಗ್ರಾಮದ ಭಜಂತ್ರಿ ಓಣಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಕೇವಲ ಎರಡು ತಿಂಗಳಲ್ಲಿ ಬಂದ್ ಆಗಿರುವದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಗ್ರಾಮಸ್ಥರ ಮನವಿ ಮೇರಗೆ ದಿ.ಶಾಸಕ ಸಿದ್ದು ನ್ಯಾಮಗೌಡರು ಜಮಖಂಡಿ ತಾಲ್ಲೂಕಿನಲ್ಲಿಯೇ ಎರಡು ಹೈಟೆಕ್ ಶುದ್ದೀಕರಣ ಘಟಕ ಮಂಜೂರಿ ಪಡೆದುಕೊಂಡಿದ್ದರು. ಅದರಂತೆ ಗ್ರಾಮದ ಭಜಂತ್ರಿ ಓಣಿಯಲ್ಲಿನ ಘಟಕವೂ ಒಂದು ಇದು ೧೨ ಲಕ್ಷ ಅನುದಾನದ ಈ ಶುದ್ಧ ನೀರಿನ ಘಟಕವೂ ಐದು ಸಾವಿರ ಲೀಟರ ಶುದ್ಧೀಕರಣ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಎಲ್ಲವೂ ಜಿ.ಪಿ.ಎಸ್ಸಿ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕಾಗಿದ್ದರು ಇಲ್ಲಿ ನೋಡಲು ಅಂತಹಾ ಯಾವುದೇ ಉಪಕರಣಗಳು ಕಾಣಿಸುವುದಿಲ್ಲ ಇದು ಸಾಮಾನ್ಯ ಶುದ್ಧೀಕರಣ ಘಟಕದ ಹಾಗೇ ಇರುತ್ತದೆ ಮತ್ತು ಪ್ರಾರಂಭವಾದ ಕೆಲವೇ ದಿನಗಳಲ್ಲಿ ದುರಸ್ತಿ ಹಂತಕ್ಕೆ ತಲುಪಿದೆ ಇಲ್ಲಿ ಎಲ್ಲವೂ ಕಳಪೆ ಸಾಮಾಗ್ರಿಗಳು ಹೊಂದಿದೆ.
ಕಳೆದ ೨೧ ದಿನಗಳಿಂದ ವಿದ್ಯುತ್ ಪೂರೈಕೆ ಮಾಡದಿರುವ ಕಾರಣ ಈಗ ಶುದ್ಧೀಕರಣ ಘಟಕವೂ ಬಂದ್ ಆಗಿರುತ್ತದೆ ಹಾಗೂ ಕೆಲವೂ ಸಾಮಾಗ್ರಿಗಳು ಸಂಪೂರ್ಣ ಕಳಪೆ ಮಟ್ಟದಾಗಿದ್ದು ಒಳಗಡ ಇರುವ ಎಲ್ಲಾ ಟ್ಯಾಂಕ್, ಪಿಲ್ಟರ್ ಸಿಲಿಂಡರ್, ಬ್ಯಾಕ್ ವಾಷ್ ಸಿಸ್ಟಮ್, ಸೆನ್ಸಾರ್ ಸಿಸ್ಟಮಗಳು ನೀರು ಸೋರಿಕೆಯಿಂದ ಸಂಪೂರ್ಣ ಹಾಳಾಗಿದೆ.
ಒಪ್ಪಂದದ ಪ್ರಕಾರ ಗುತ್ತಿಗೆ ಹಿಡಿದ ಕಂಪನಿಯವರು ಐದು ವರ್ಷಗಳ ಸಂಪೂರ್ಣ ನಿರ್ವಹಣೆ ಕಾರ್ಯ ಮಾಡಬೇಕಾಗಿದೆ, ದುರಸ್ತಿಯಾದ ಮೂರು ದಿನಗಳಲ್ಲಿ ರೀಪೇರಿ ಮಾಡಬೇಕಾಗಿದೆ ಆದರೆ ಯಾವುದೇ ದುರಸ್ತಿ ಮಾಡದೆ ತಮ್ಮ ಬಿಲ್ ತೆಗೆದುಕೊಂಡು ಸುಮ್ಮನೇ ಕುಳತಿದ್ದಾರೆ. ಆದರೆ ಈ ಹಿಂದೆ ಲಾಕಡೌನ ಸಂದರ್ಭದಲ್ಲಿ ದುರಸ್ತಿಯಾದಾಗ ಗುತ್ತಿಗೆ ಹಿಡಿದ ಕಂಪನಿಯವರು ಬರೆದೆ ಇದ್ದಾಗ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡಿಸಿದ್ದಾರೆ, ಕಂಪನಿಯವರು ವಿದ್ಯುತ್ ಠೇವಣಿ ಇಡದಕಾರಣ ಈಗ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಲಾಗಿದೆ.
ಅನೇಕ ಬಾರಿ ಗ್ರಾಮಸ್ಥರು ಸಂಬಂಧ ಪಟ್ಟ ಇಂಜಿನಿಯರ್ ಅವರಿಗೆ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲಾ. ಇತ್ತ ವಾರ್ಡಗೆ ಸಂಬಂಧಿಸಿದ ಯಾವ ಒಬ್ಬ ಗ್ರಾ.ಪಂ. ಸದಸ್ಯನು ಇತ್ತ ಸುಳಿಯುತ್ತಿಲ್ಲ.
ವರದಿ: ಕೆ. ವಿ. ಒಡೆಯರ್.
ರಾಜ್ಯ
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”
ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ
ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ರಾಜ್ಯ
ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿಗೆ ಅಧಿಸೂಚನೆ
ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ನೀಡಿದ್ದಾರೆ.
ಬೆಂಗಳೂರು: ಇತ್ತೀಚೆಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗೆ ಮೀಸಲಾತಿ ಪ್ರಕಟಗೊಂಡು ಹಲವಡೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಆದರೆ ಇದೀಗ ಹೈಕೋರ್ಟ್ ಈ ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ಮಾಡಿದ್ದಾರೆ.
ಮೀಸಲಾತಿ ಕುರಿತು ಹೈಕೋರ್ಟ್ ನಲ್ಲಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದ್ದು, ನ್ಯಾಯಧೀಶರು ಸಮರ್ಪಕ ಪರಾಮರ್ಶಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ 4 ವಾರಗಳಲ್ಲಿ ಹೊಸ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಈಗಾಗಲೇ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರ ನೇಮಕಾತಿ ಅಸಿಂಧು ಆಗಲಿದೆ. ನ್ಯಾಯಾಲಯದ ಆದೇಶದಂತೆ ಹಳೇ ಮೀಸಲಾತಿ ರದ್ದುಗೊಳಿಸಿ ಇದೀಗ ಪ್ರಸಕ್ತ ಹೊಸ ಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿದನ್ವಯ ಮತ್ತೊಮ್ಮೆ ಹೊಸ ಮೀಸಲಾತಿ ಅನ್ವಯ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಅವಕಾಶ ನೀಡಿದೆ. ರಾಜ್ಯದ 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಹಲವಾರು ಕಡೆ ಚುನಾವಣೆಗಳು ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದಿದೆ. ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಹುಮತ ಪಡೆದಿದ್ದರೂ ಮೀಸಲಾತಿ ಪ್ರಕಾರ ಅಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಲಾಗಿತ್ತು.