Connect with us
Ad Widget

ರಾಜ್ಯ

ಸತ್ತ ಕುರಿಯನ್ನ ಮರಕ್ಕೆ ನೇತು ಹಾಕಿ ಗ್ರಾಮ ದೇವತೆಯ ಮೊರೆ ಹೋಗುತ್ತಿದ್ದಾರೆ ಕುರಿಗಾಹಿಗಳು!!

Published

on

ಚಿಕ್ಕಬಳ್ಳಾಪುರ: ತಮ್ಮ ಗ್ರಾಮದಲ್ಲಿ ಪದೇ ಪದೇ ಕುರಿ, ಮೇಕೆಗಳು ಸಾವನ್ನಪ್ಪುತ್ತಿವೆ. ಕುರಿಗಳ ಈ ಸರಣಿ ಸಾವಿಗೆ ಗ್ರಾಮದೇವತೆಯಾದರೂ ನೆರವಿಗೆ ಬರಲಿ ಎಂಬ ಕಾರಣ ಗ್ರಾಮಸ್ಥರು ಸತ್ತ ಕುರಿ,ಮೇಕೆಗಳನ್ನು ಮರಕ್ಕೆ ನೇತು ಹಾಕಿ ದೇವರ ಮೊರೆ ಹೋಗುತ್ತಿರುವ ಘಟನೆಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾಡಪ್ಪಲ್ಲಿ ,ಹೊನ್ನಂಪಲ್ಲಿ ,ಕೊತ್ತಕೋಟೆ ಮುಂತಾದ ಗ್ರಾಮಗಳಲ್ಲಿ ನಡೆಯುತ್ತಿವೆ.

ಅಂದಹಾಗೆ ತಾಲೂಕಿನ ಕುಗ್ರಾಮಗಳಲ್ಲಿ ಬಹುತೇಕರು ಕೃಷಿಯ ಜೊತೆಗೆ ಕುರಿ,ಮೇಕೆ ಸಾಕಾಣಿಕೆಯೇ ಮೂಲ ಕಸುಬಾಗಿಸಿಕೊಂಡಿದ್ದಾರೆ.

ಕುರಿ-ಮೇಕೆ ಗಳ ಸಾಕಾಣಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದು. ಪ್ರತಿ ಗ್ರಾಮದಲ್ಲೂ ೧೦೦೦ ಕ್ಕೂ ಹೆಚ್ಚು ಕುರಿ ಮೇಕೆಗಳಿವೆ. ಆದ್ರೆ ಇತ್ತೀಚೆಗೆ ಕುರಿ ಹಾಗೂ ಮೇಕೆಗಳ ಸರಣಿ ಸಾವು ಸಂಭವಿಸುತ್ತಿದೆ. ಹೀಗಾಗಿ ಸರಣಿ ಸಾವಿಗೆ ಬೆದರಿದ ಗ್ರಾಮಸ್ಥರು ಸತ್ತ ಕುರಿ ಅಥವಾ ಮೇಕೆಯೊಂದನ್ನ ಗ್ರಾಮ ಹೊರವಲಯದ ಮರವೊಂದಕ್ಕೆ ನೇತು ಹಾಕಿದ್ದಾರೆ. ಹೀಗೆ ಮರಕ್ಕೆ ಸತ್ತ ‌ಕುರಿಗಳನ್ನ ನೇತು ಹಾಕಿದ್ರೆ ಗ್ರಾಮದೇವತೆ ಆ‌ ಸತ್ತ ಕುರಿಯನ್ನ ಅವಾಹನೆ ಮಾಡಿಕೊಂಡು ಗ್ರಾಮದಲ್ಲಿನ ಬೇರ್ಯಾವ ಕುರಿಗಳನ್ನ ಬಲಿ ಪಡೆಯುವುದಿಲ್ಲ ಅನ್ನೋದು ಮುಗ್ಧ ಗ್ರಾಮಸ್ತರ ಮೂಢನಂಬಿಕೆ.

ಆದ್ರೆ ನಮ್ಮ ಗ್ರಾಮೀಣ ಕುರಿಗಾಹಿಗಳು ಬಹಳ ಮುಗ್ದ ಜನರಾಗಿದ್ದು….ಕುರಿ ಸಾಕಾಣಿಕೆ ಮೂಲಕವೇ ಬದುಕು ಕಟ್ಟಿಕೊಂಡಿದ್ದಾರೆ. ಮಳೆ ಇಲ್ಲದೆ ಬೆಟ್ಟ ಗುಡ್ಡದ ಪಕ್ಕದಲ್ಲೇ ಇರೋ ಕುಗ್ರಾಮದಲ್ಲಿ ಬರಗಾಲದ ನಡುವೆ ಜನರಿಗೆ ಈ ಕುರಿ ಸಾಕಾಣಿಕೆಯೇ ಬದುಕಿಗೆ ಮೂಲ ಆದಾಯ. ಆದ್ರೆ ಕೆಲವು ಬೇರೆ ಅನಾರೋಗ್ಯ ಸೇರಿದಂತೆ ವಿಶೇಷವಾಗಿ ಚಳಿಗಾಲದಲ್ಲಿ ವಿಪರೀತ ಚಳಿಗೆ ಹಾಗೂ ಸಾಂಕ್ರಾಮಿಕ ಖಾಯಿಲೆಗಳಿಂದ ಕುರಿ ಗಳ ಸರಣಿ ಸಾವನ್ನಪ್ಪುತ್ತಿರುತ್ತವೆ. ಹೀಗೆ ಕುರಿಗಳು ಸತ್ತಾಗ ಅದನ್ನ ಬಿಸಾಡಿ ಸುಮ್ಮನಾಗುತ್ತಾರೆ..ಇನ್ನೂ ಕೆಲವರು ಸಾಯೋ ಲಕ್ಷಣ ಕಂಡು ಬರುತ್ತಿದ್ದಂತೆ ಮಾರಾಟ ಮಾಡಿಬಿಡುತ್ತಾರೆ. ಕೆಲವರು ಸತ್ತಾಗ ಈ ರೀತಿ ಮರಕ್ಕೆ ನೇತು ಹಾಕಿ ವಿಚಿತ್ರ ಆಚರಣೆ ಮಾಡ್ತಾರೆ. ನಮ್ಮ ಗ್ರಾಮದ ಜನ ಮುಗ್ಧರಾಗಿದ್ದು, ಗ್ರಾಮಸ್ಥರಿಗೆ ಈ ಮೂಢನಂಬಿಕೆ ಹಾಗೂ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಅಂತ ಪ್ರಜ್ಞಾವಂತರ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಸಾಂಕ್ರಾಮಿಕ ರೋಗಗಳು ಸುತ್ತಲಿನ ಬೆಟ್ಟಗುಡ್ಡಗಳಲ್ಲಿನ ಕಲ್ಲುಗಣಿಗಾರಿಕೆಯಿಂದಾಗಿ ಸ್ಪೋಟಕಗಳ ರಾಸಾಯನಿಕ ವಿಷ ಗಾಳಿ, ವಿಪರೀತ ದೂಳು, ಮೇವಿನ ಕೊರತೆ, ಅಶುದ್ದ ನೀರಿನ ಸೇವನೆಗಳಿಂದ ಹರಡಿದಾಗ ಈ ರೀತಿಯ ಸರಣಿ ಸಾವು ಸಂಭವಿಸುತ್ತವೆ.ಹೀಗಾಗಿ ಸಾಂಕ್ರಾಮಿಕ ರೋಗಗಳನ್ನ ತಡೆಯಬೇಕಾದರೆ ವೈಜ್ಞಾನಿಕ ವಾಗಿ ಸತ್ತ ಕುರಿ ಆಗಲೀ ಯಾವುದೇ ಪ್ರಾಣಿಗಳನ್ನ ಹಾಗೆ ಬಿಸಾಡಬಾರದು.ಈ ರೀತಿ ಗಾಳಿಗೆ ಬಿಟ್ಟು ಮರಕ್ಕೆ ನೇತು ಹಾಕಬಾರದು. ಹೀಗೆ ಮಾಡಿದ್ರೆ ಸಾಂಕ್ರಾಮಿಕ ರೋಗಗಳು ಮತ್ತಷ್ಟು ಹರಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸತ್ತ ಪ್ರಾಣಿಗಳ ದೇಹವನ್ನು ಮಣ್ಣಿನಲ್ಲಿ ಮುಚ್ಚಿದರೆ ಸಾಂಕ್ರಾಮಿಕ ರೋಗಗಳನ್ಮ‌ ತಡೆಯಬಹದಾಗಿದ್ದು ಅರಿವಿನ ಅಗತ್ಯವಿದೆ. ಹೀಗಾಗಿ ಸಂಬಂಧಪಟ್ಟ ಸ್ಥಳೀಯ ಪಶು ವೈದ್ಯರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾಯಕ ಮಾಡಬೇಕಿದೆ. ಗಣಿಗಾರಿಕೆಯಂತಹ ಚಟುವಟಿಕೆಗಳನ್ನು ತಡೆಯಬೇಕಾಗಿದೆ ಎಂದು ಐವಾರಪಲ್ಲಿ ಹರೀಶ್ ರವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ.

Continue Reading
Advertisement
Click to comment

Leave a Reply

Your email address will not be published. Required fields are marked *

ರಾಜ್ಯ

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ”

Published

on

ಬೆಂಗಳೂರು : ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ “ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ” ಎಂಬ ಸಾಂಕೇತಿಕ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಆರ್. ಅಶೋಕ್ ರವರು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಭರವಸೆ ನೀಡಿದರು.

Continue Reading

ರಾಜ್ಯ

ಶಾಲೆಯ ಸಭಾಂಗಣ ಮತ್ತು ಕೊಠಡಿಯ ಉದ್ಘಾಟನೆ : ಅರವಿಂದ ಲಿಂಬಾವಳಿ

Published

on

ಬೆಂಗಳೂರು : ಇಂದು ಹಾಲನಾಯಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ಒಂದು ಸಭಾಂಗಣ ಹಾಗೂ ಎರಡು ಕೊಠಡಿಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಅರವಿಂದ ಲಿಂಬಾವಳಿ, ಗ್ರಾಮದ ಮುಖಂಡರು, ಇಲಾಖೆಯ ಅಧಿಕಾರಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Continue Reading

ರಾಜ್ಯ

ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿಗೆ ಅಧಿಸೂಚನೆ

Published

on

ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ನೀಡಿದ್ದಾರೆ.

ಬೆಂಗಳೂರು: ಇತ್ತೀಚೆಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗೆ ಮೀಸಲಾತಿ ಪ್ರಕಟಗೊಂಡು ಹಲವಡೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ.‌ ಆದರೆ ಇದೀಗ ಹೈಕೋರ್ಟ್ ಈ ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ಮಾಡಿದ್ದಾರೆ.

ಮೀಸಲಾತಿ ಕುರಿತು ಹೈಕೋರ್ಟ್ ನಲ್ಲಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದ್ದು, ನ್ಯಾಯಧೀಶರು ಸಮರ್ಪಕ ಪರಾಮರ್ಶಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ 4 ವಾರಗಳಲ್ಲಿ ಹೊಸ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಕುರಿತು ಈಗಾಗಲೇ ನೂತನ ಅಧ್ಯಕ್ಷ,‌ ಉಪಾಧ್ಯಕ್ಷ‌ರಾಗಿ ಆಯ್ಕೆಯಾದವರ ನೇಮಕಾತಿ ಅಸಿಂಧು ಆಗಲಿದೆ. ನ್ಯಾಯಾಲಯದ ಆದೇಶದಂತೆ ಹಳೇ ಮೀಸಲಾತಿ ರದ್ದುಗೊಳಿಸಿ ಇದೀಗ ಪ್ರಸಕ್ತ ಹೊಸ ಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿದನ್ವಯ‌ ಮತ್ತೊಮ್ಮೆ ಹೊಸ ಮೀಸಲಾತಿ ಅನ್ವಯ ಅಧ್ಯಕ್ಷ,‌ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಲು 10 ದಿನಗಳ ಅವಕಾಶ ನೀಡಿದೆ. ರಾಜ್ಯದ 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಹಲವಾರು ಕಡೆ ಚುನಾವಣೆಗಳು ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆದಿದೆ. ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಹುಮತ ಪಡೆದಿದ್ದರೂ ಮೀಸಲಾತಿ ಪ್ರಕಾರ ಅಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಲಾಗಿತ್ತು.

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್