ಸುದ್ದಿ
ಇಂಗ್ಲೀಷ್ ನ ‘ಹೆಲ್ದಿ ಲೈಫ್’ ಪಾಠವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಶಿಕ್ಷಕ
ಬಾಗೇಪಲ್ಲಿ: ಸರ್ಕಾರಿ ಶಾಲೆಗಳೆಂದರೆ ಪೋಷಕರಲ್ಲಿ ಒಂದು ರೀತಿಯ ನಿರ್ಲಕ್ಷ್ಯಿಸುವ ಮಟ್ಟಿಗೆ ಶಾಲೆಗಳ ಕಾರ್ಯ ವೈಖರ ಬದಲಾದ ಈ ಕಾಲಘಟ್ಟದಲ್ಲಿ ತಾಲ್ಲೂಕಿನ ಆಚೇಪಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಭಿನ್ನವೆನಿಸಿದೆ. ಸುಸಜ್ಜಿತ ಶಾಲಾ ಕೊಠಡಿಗಳು, ಮಾದರಿ ಶಿಕ್ಷಕ ವೃಂದ ಮಕ್ಕಳಾಕರ್ಷಕ ಕಲಿಕಾ ಚಟುವಟಿಕೆಗಳು ಈ ಶಾಲೆಯ ವೈಶಿಷ್ಟ್ಯವಾಗಿವೆ. ಇಲ್ಲಿನ ಶಿಕ್ಷಕರ ತುಡಿತಾ ಸದಾ ವಿದ್ಯಾರ್ಥಿಗಳ ಅಭಿವೃದ್ಧಿಯ ಕಡೆ ಇರುತ್ತದೆ.
ಇಂದು ಇಂಗ್ಲೀಷ್ ಭಾಷಾ ಶಿಕ್ಷಕರಾದ ಸುಬ್ರಹ್ಮಣ್ಯ ರವರು 7 ನೇ ತರಗತಿಯ ಇಂಗ್ಲೀಷ್ ನ ಮೊದಲ ಪಾಠವಾದ Healthy Life ನ ವಿವರಣೆಯನ್ನು ಮಾಡಿದರು. ಪಾಠ ಬೋಧನೆಯ ಸಮಯದಲ್ಲಿ ಆಹಾರ ಕ್ರಮ ಮತ್ತು ಮೂಲಗಳನ್ನು ವಿವರಿಸಲು ಏಕಧಳ ಮತ್ತು ದ್ವಿಧಳ ಧಾನ್ಯಗಳ ಕುರಿತು ವಿವರಣೆಗಾಗಿ ಶಾಲೆಯ ಪಕ್ಕದಲ್ಲಿನ ಹೊಲಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆಯನ್ನು ತೋರಿಸಿ ಪಾಠ ಮಾಡಿದರು.
ನಮ್ಮ ಹಳ್ಳಿ ಮಕ್ಕಳಿಗೆ ಇಂತಹ ಸಮಾಜನ್ಯ ತಿಳುವಳಿಕೆ ಸಾಕಷ್ಟಿದೆ ಆದರೆ ಅಂತಹ ಅರಿವನ್ನು ನಾವು ಪಠ್ಯದ ಜ್ಞಾನಕ್ಕೆ ಸಮೀಕರಿಸಿ ಪಠ್ಯಕ್ಕೂ ಮತ್ತು ನಿಜ ಜೀವನಕ್ಕೆ ಕೊಂಡಿಯನ್ನು ಕಲ್ಪಿಸಬೇಕಿದೆ ಎಂದು ಶಿಕ್ಷಕ ಸುಬ್ರಹ್ಮಣ್ಯ ರವರು ತಿಳಿಸಿದರು.
ಈ ಮೂಲಕ ಮಕ್ಕಳ ಪೂರ್ವಜ್ಞಾನಕ್ಕೆ ಪೂರಕವಾದ ಕಲಿಕಾ ವಾತಾವರಣ ನಿರ್ಮಾಣವಾಗಿ ಶಾಶ್ವತ ಕಲಿಕೆ ಸಹಕಾರಿಯಾಗುತ್ತದೆ. ಮಕ್ಕಳಾಕರ್ಷಕ ಕಲಿಕಾ ವಿಧಾನಗಳನ್ನು ಶಿಕ್ಷಕರು ಅಳವಡಿಸಿಕೊಂಡು ಬೋಧನೆ ಮಾಡುವುದರಿಂದ ಸರ್ಕಾರಿ ಶಾಲೆಗಳ ಉಳಿವು ಸಾಧ್ಯವಾಗುತ್ತದೆ. ಶಿಕ್ಷಕರಿಗೆ ಬೋಧನೆ ಮಾಡಲು ಮುಕ್ತ ಅವಕಾಶಗಳನ್ನು ಕಲ್ಪಿಸಿ ಅನ್ಯ ಒತ್ತಡಗಳಿಂದ ಮುಕ್ತರನ್ನಾಗಿಸಬೇಕಿದೆ.
ಸುದ್ದಿ
ತಾಲ್ಲೂಕಿನಲ್ಲಿ ‘ಕೈ’ ಬಲಪಡಿಸುತ್ತಿರುವುದು ಹರ್ಷದಾಯಕ : ಶಾಸಕ ಎಸ್.ಎನ್ ಸುಬ್ಬಾರೆಡ್ಡಿ
ಬಾಗೇಪಲ್ಲಿ: ಕಾಂಗ್ರೆಸ್ ಪಕ್ಷದ ಸಿದ್ದಾಂತಗಳು ದೇಶದ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯನ್ನು ನೆಚ್ಚಿ ವಿವಿಧ ಪಕ್ಷಗಳಿಂದ ತೊರೆದು ನೂರಾರು ಅಲ್ಪಸಂಖ್ಯಾತರು ಹಾಗೂ ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಅವರು ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮುದ್ದೀನ್ ಅವರ ಸ್ವ ಗೃಹದಲ್ಲಿ ಪಟ್ಟಣದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಪಿ.ಶಬೀರ್ ಭಾಷಾ,ಉಪಾಧ್ಯಕ್ಷರಾಗಿ ಷೇಕ್ ಮುಬಾರಕ್,ಪ್ರಧಾನ ಕಾರ್ಯದರ್ಶಿಯಾಗಿ ಖಯಾಮ್ ಪೀರ್ ರವರಿಗೆ
ನೇಮಕಾತಿ ಪತ್ರವನ್ನು ಹಸ್ತಂತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಇದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ದೇಶ ಕಟ್ಟುವ ಪಕ್ಷ ಎಂದರು. ಜಾತ್ಯತೀತ ನಿಲುವು ಹೊಂದಿರುವ ಹಾಗೂ ದೇಶದ ಜನಪರವಾದ ಪಕ್ಷ ಎಂದು ಹೇಳಿದರು. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುತ್ತಿದ್ದು, ಎಲ್ಲರೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ
ಪಕ್ಷ ಮತ್ತು ಸಮ ಸಮಾಜಕ್ಕಾಗಿ ಇನ್ನಷ್ಟು ತೊಡಗಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮುದ್ದೀನ್ ಮಾತನಾಡಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆಯಂತೆ ತಾನು ಪಕ್ಷದಲ್ಲಿ ಕಾರ್ಯನಿರ್ವಹಿಸಲಿದ್ದೇನೆ ನನಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಅರಿವು ಇದೆ. ಪಟ್ಟಣದ 23 ವಾರ್ಡ್ ಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಯೋಜನೆಯನ್ನು ಮನೆಮನೆಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಗೆಲುವುಗಾಗಿ ಶ್ರಮಿಸುತ್ತನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಡಿ ಪಿ ಸದಸ್ಯರಾದ ಅಮರನಾಥ್ ರೆಡ್ಡಿ, 7 ನೇ ವಾರ್ಡ್ ಪುರಸಭೆ ಸದಸ್ಯರಾದ ನಂಜುಂಡಪ್ಪ, ಡಿ.ಸಿ
ಸಿ.ಅಲ್ಪಸಂಖ್ಯಾತ ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಅನ್ಸರ್ ಪಾಷಾ,ಹಾಗೂ ನೂರಾರು ಅಲ್ಪಸಂಖ್ಯಾತ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸುದ್ದಿ
ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ
ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಭದ್ರಾವತಿಯಲ್ಲಿ ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ
ತಾಲ್ಲೂಕು ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ
ಶಿಡ್ಲಘಟ್ಟ : ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕು ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್ ಮಾತನಾಡಿದರು.
ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೊತೆಗೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುತ್ತದೆ ಎಂದು ಅವರು ತಿಳಿಸಿದರು.
ಪ್ರತಿನಿತ್ಯ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವ ಜೊತೆಗೆ ಸರ್ಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರಡ್ಡಿ, ಗೌರವಾಧ್ಯಕ್ಷ ಟಿ.ವಿಜಯ್‌ಕುಮಾರ್, ತಾಲ್ಲೂಕು ಪಂಚಾಯಿತಿ ಇಓ ಬಿ.ಕೆ.ಚಂದ್ರಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಸಿಡಿಪಿಓ ನಾಗಮಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯಲು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ದೈಹಿಕ ಶಿಕ್ಷಕರ ಸಂಘದ ರಂಗನಾಥ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ