Connect with us
Ad Widget

ಸುದ್ದಿ

ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ

Published

on

ಸಿಂದಗಿ :- ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರವೇ ವೈದ್ಯಕೀಯ ಜಿಲ್ಲಾ ಘಟಕ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ (ಕೂಲ್ ಡೇ) ಎಂದು ಆಚರಿಸುವ ಮೂಲಕ ಪಕ್ಷಿಗಳಿಗೆ ನೀರು ಮತ್ತು ಆಹಾರ ದಾನ್ಯದ ಅರವಟ್ಟಿಗೆಗಳನ್ನು ಇಟ್ಟು ಪಕ್ಷಿಗಳಿಗೆ ಸಹಾಯವಾಗುವಂತೆ ಅಥ೯ ಪೂಣ೯ ದಿನವಾಗಿ ಆಚರಿಸಲಾಯಿತು ಮತ್ತು ಉಚಿತ ರಕ್ತ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅತಿಥಿಯಾದ ಯುವ ಸಾಹಿತಿ ಕುಮಾರಿ ಸುಕೃತಾ ಪಟ್ಟಣಶೆಟ್ಟಿ ಮಾತನಾಡಿ ನಾಗರಿಕತೆ ಬೆಳೆದಂತೆ ಪ್ರಾಣಿ ಪಕ್ಷಿ ಸಂಕುಲ ನಮ್ಮಿಂದ ದೂರವಾಗುತ್ತಿದೆ. ಪಕ್ಷಿಗಳಿಗೆ ಆಹಾರಕ್ಕಿಂತಲೂ ನೀರಿನ ಕೊರತೆ ಹೆಚ್ಚಾಗಿದೆ. ಗಣಿಹಾರ ಶಾಲಾ ಮಕ್ಕಳು ಪಕ್ಷಿಗಳಿಗೆ ಆಹಾರದೊಂದಿಗೆ ನೀರು ಪೂರೈಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಕಾಯ೯. ಪರಿಸರ ಸಂರಕ್ಷಣೆಯಿಂದ ಪ್ರಾಣಿ ಪಕ್ಷಿ ಸಂಕುಲ ರಕ್ಷಿಸಬಹುದು. ಕೆಲ ವಷ೯ಗಳ ಹಿಂದೆ ನೈಸಗಿ೯ಕ ವಿಕೋಪದ ಬಗ್ಗೆ ಪಕ್ಷಿಗಳಿಂದ ಸೂಚನೆ ದೊರೆಯುತ್ತಿತ್ತು. ಸಾಹಿತ್ಯ, ನಿಸರ್ಗ ಮತ್ತು ವಿಜ್ಞಾನಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ಮಾಡುತ್ತವೆ. ಆದರೆ ಮನುಷ್ಯ ಮಾತ್ರ ಈ ಮೂರನ್ನೂ ಮೂರು ದಿಕ್ಕಿನಲ್ಲಿ ನೋಡಿ ಕಲುಷಿತ ಗೊಳಿಸುತ್ತಿರುವುದು ವಿಷಾದನೀಯ ಎಂದರು.
ಕಾಯ೯ಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರವೇ ಮುಖಂಡರು ಶ್ರೀ ಸಂತೋಷ ಪಾಟೀಲ ಮಾತೃ ಸಂಸ್ಕೃತಿ ಮರೆತು ಬದುದಕುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ತನ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹುಟ್ಟುಹಬ್ಬ, ಮದುವೆ, ಹೊಸ ವರ್ಷಗಳ ಸಂದಭ೯ಗಳಲ್ಲಿ ಗಿಡ ನೆಟ್ಟು ಬೆಳೆಸುವುದು. ಪರಿಸರ ಮಾಲಿನ್ಯದಿಂದ ಪಕ್ಷಿಗಳ ಸಂತತಿ ನಶಿಸುತ್ತಿದೆ. ಆದ್ದರಿಂದ ಅವುಗಳನ್ನು ರಕ್ಷಿಸುವದರ ಜೊತೆಗೆ ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಡುಬೇಕು ಎಂದರು.
ಇದೇ ಸಂದರ್ಭದಲ್ಲಿ ಕರವೇ ವೈದ್ಯಕೀಯ ಜಿಲ್ಲಾ ಘಟಕದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಕ್ತ ತಪಾಸಣೆಯನ್ನು ನಡೆಸಿ ರಕ್ತದ ಗುಂಪಿನ ವರದಿಯನ್ನು ನೀಡಲಾಯಿತು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಮಾತೆ ಶ್ರೀಮತಿ ಸೈನಾಬಿ ಮಸಳಿ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಶೈಲ ಚಳ್ಳಗಿ, ಸಂದೀಪ ಚೌರ್, ಮಲ್ಲನಗೌಡ ಬಗಲಿ, ಭೀಮಾಶಂಕರ ಕೋಟಾರಗಸ್ತಿ, ಶಶಿಧರ ಗಣಿಹಾರ, ಪೀರು ಕೆರೂರ, ಶರಣಯ್ಯ ನಂದಿಕೋಲ ವೇದಿಕೆಯ ಮೇಲೆ ಆಸೀನರಾಗಿದ್ದರು.
ಕ ಸಾ ಪ ಅಧ್ಯಕ್ಷ ಶ್ರೀ ಸಿದ್ಧಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕರಿಸಿದರು. ಶಿಕ್ಷಕ ಸಂಜುಕುಮಾರ ಬುಲಬುಲೆ ನಿರೂಪಿಸಿದರು. ಶ್ರೀ ಎಸ್ ಬಿ ಬಿರಾದಾರ ವಂದಿಸಿದರು.

ವರದಿ :- ರಾಘವೇಂದ್ರ ಭಜಂತ್ರಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮದಿನದ ನಿಮಿತ್ಯ ನೀರಿನ ಅರವಟಿಗೆ ಉದ್ಘಾಟನೆ

Published

on

ಮಸ್ಕಿ.ಎ.೦1 :- ಸಿದ್ದಗಂಗಾ ಮಠದ: ಶ್ರೀ ಶಿವಕುಮಾರ ಸ್ವಾಮಿ ಅವರ 114ನೇ ಜನ್ಮ ದಿನದ ಆಚರಣೆ ಅಂಗವಾಗಿ ಶುದ್ಧಕುಡಿಯುವ ನೀರಿನ ಅರವಟಿಕೆ ಉದ್ಘಾಟನೆಯನ್ನು ನೆರವೇರಿಸಿದರು.

ಮಸ್ಕಿ ನಗರದ ಕೇಂದ್ರ ಶಾಲೆ ಹತ್ತಿರ ನೀರಿನ ಅರವಟ್ಟಿಗೆಯನ್ನು ಶ್ರೀ ಸ್ವಾಮಿ ವಿವೇಕಾನಂದ ಜೀವನಿಧಿ ಟ್ರಸ್ಟ್ (ರಿ) ವತಿಯಿಂದ ಶುದ್ಧಕುಡಿಯುವ ನೀರಿನ ಅರವಟ್ಟಿಗೆಯನ್ನು ಉದ್ಘಾಟಿಸಲಾಯಿತು. ಶ್ರೀ ವರ ರುದ್ರಮುನಿ ಮಹಾ ಸ್ವಾಮಿಗಳು ಗಚ್ಚಿನಮಠ ಮಸ್ಕಿ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆದಿಮನಿ ವೀರಲಕ್ಷ್ಮಿ, ದವಲಾಸಾಬ್ ಮುದ್ದಾಪುರ್, ಸಂಸ್ಥೆಯ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಪತ್ರಿಕಾ ಮಾಧ್ಯಮದವರು, ಆಟೋ ಚಾಲಕರು, ಮಸ್ಕಿ ತಾಲೂಕಿನ ಗುರುಹಿರಿಯರು, ಸೇರಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಮಂಗಳೂರು ಮೂಲದ ಹೋಟೆಲ್ ಉದ್ಯಮಿ ಆತ್ಮಹತ್ಯೆ

Published

on

ವಿಜಯಪುರ: ಅರ್ಥಿಕ ನಷ್ಟದಿಂದ ಕುಗ್ಗಿದ್ದ ಮಂಗಳೂರು ಮೂಲದ ಹೊಟೇಲ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ. ಮೃತರನ್ನು ಗಣೇಶ್ ಎಂದು ಗುರುತಿಸಲಾಗಿದೆ.

ಕೋವಿಡ್’ನಿಂದಾಗಿ ಭಾರೀ ನಷ್ಟಕ್ಕೆ ಗುರಿಯಾಗಿದ್ದರು ಎನ್ನಲಾಗಿದೆ. ಅಮರ್ ಎಂಬ ಹೊಟೇಲ್ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೋಟೆಲ್ ಉದ್ಯಮ ನಡೆಸಲು ಅವರು 30 ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಾಲದ ಮೇಲಿನ ಬಡ್ಡಿಯನ್ನು ಪಾವತಿಸುವುದು ಅವರಿಗೆ ಕಷ್ಟವಾಗುತ್ತಿತ್ತು.

ಇಂಡಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

Continue Reading

ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ವಿಭಿನ್ನ ಪ್ರತಿಭಟನೆ

Published

on

ಬಾಗೇಪಲ್ಲಿ : ನಿಗದಿತ ಗಡುವು ಮೀರಿದ್ದರೂ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಸಿಗದ ಕಾರಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಡ ಏಪ್ರಿಲ್ 7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತವೆ ಎಂದು ಬಾಗೇಪಲ್ಲಿ ಕ.ರಾ.ರ.ಸಾ.ಸಂಸ್ಥೆ ಬಾಗೇಪಲ್ಲಿ ಘಟಕದ ಅದ್ಯಕ್ಷ ಚಂಡೂರು ಮೂರ್ತಿ ನೇತೃತ್ವದಲ್ಲಿ ಬೆಳಗ್ಗೆ ಸ್ವಲ್ಪ ಸಮಯ ಪ್ರತಿಭಟನೆ ಮಾಡಿದರು.

ದಿನಕ್ಕೊಂದು ಪ್ರತಿಭಟನೆ ಏ.1ರಂದು ನೌಕರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಮತ್ತು ಸರ್ಕಾರದ ಗಮನ ಸೆಳೆಯಲಿದ್ದಾರೆ. ಏ.2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ, ಬಜ್ಜಿ, ಬೋಂಡ ತಯಾರಿಸಿ ಮಾರಾಟ ಮಾಡಲಿದ್ದಾರೆ. 3ರಂದು ನೌಕರರು ಮತ್ತು ಕುಟುಂಬ ಸದಸ್ಯರು ಎಲ್ಲಾ ನಗರಗಳ ಮುಖ್ಯ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶನ ಮಾಡುವರು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ತಿಳಿಸಿದೆ.

ಈ ಸಂದರ್ಭದಲ್ಲಿ ಸಾರಿಗೆ ನೌಕರರಾದ ನಲ್ಲಪ್ಪರೆಡ್ಡಿಪಲ್ಲಿ ಮಂಜು,ಮಹೇಶ್, ತುಳುಸಿ, ನಯಾಜ್, ಕಲೀಮುಲ್ಲಾ, ರಮೇಶ್, ನರಸಿಂಹ ಮೂರ್ತಿ,ನಾರಾಯಣಪ್ಪ, ಅನಿಲ್ ,ವೆಂಕಟರೆಡ್ಡಿ,ರಘು ಹೈದರವಲ್ಲಿ,ಶ್ರೀನಿವಾಸ್,ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್