Uncategorized
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
ಗ್ರಾಮೀಣ ಜನತೆಯ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಾರೆ. ಅದರಂತೆ ಹೊಗೆರಹಿತ ಗ್ರಾಮಗಳನ್ನು ಸೃಷ್ಟಿಸಲು ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ, ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ವಿತರಣೆಯಂತಹ ಕಾರ್ಯಗಳು ನಡೆದವು. ಹಾಗಾಗಿ 2015 ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮರದ ಕಟ್ಟಿಗೆಯಂತಹಾ ಸಾಂಪ್ರದಾಯಿಕ ಅಡುಗೆ ಇಂಧನಗಳಿಗೆ ವಿದಾಯ ಹೇಳಿದ್ದ, ಹೊಗೆ ರಹಿತವಾಗಿದ್ದ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ವೈಚಕುರಹಳ್ಳಿಯಲ್ಲೀಗ ಆರು ವರ್ಷಗಳ ತರುವಾಯ ಮತ್ತೆ ಸಾಂಪ್ರದಾಯಿಕ ಇಂಧನ, ಕಟ್ಟಿಗೆ ಒಲೆ ಉರಿಸಲು ಜನ ಸಿದ್ದವಾಗಿದ್ದಾರೆ. ಎಲ್‌ಪಿಜಿ ಬೆಲೆ ಗಗನಕ್ಕೇರಿರುವುದರಿಂದ ಗ್ಯಾಸ್ ಸ್ಟೌವ್‌ಗಳ ಬದಲಿಗೆ ಉರುವಲು ಅಥವಾ ಕಲ್ಲಿದ್ದಲು ಬಳಸಿ ಅಡುಗೆ ತಯಾರಿಗೆ ಇಲ್ಲಿನ ನೂರಾರು ಮನೆಗಳು ಯೋಜಿಸುತ್ತಿದೆ.
ಅತಿ ಹೆಚ್ಚು ಜನಪ್ರಿಯವಾದ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಮತ್ತು ಹಳ್ಳಿಗಳನ್ನು ಹೊಗೆ ಮುಕ್ತವಾಗಿಸಲು ಅನಾರೋಗ್ಯಕರ ಅಡುಗೆ ಇಂಧನಗಳಿಂದ ದೂರವಿರಿಸಲು ಸಬ್ಸಿಡಿ ನೀಡಲಾಗುತ್ತದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‌ನ ಪ್ರಕಟಣೆ ಹೇಳುವಂತೆ ಡಿಸೆಂಬರ್ 2020 ಮತ್ತು ಫೆಬ್ರವರಿ 2021 ರ ನಡುವೆ ಒಟ್ಟಾರೆ ಎಲ್‌ಪಿಜಿ ಬಳಕೆಯಲ್ಲಿ ಶೇಕಡಾ 7.3 ರಷ್ಟು ಹೆಚ್ಚಳವಾಗಿದೆ ಎಂದಿದ್ದರೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ರಿಯಾಲಿಟಿ ಚೆಕ್ ಬೇರೆಯದೇ ಕಥೆ ಹೇಳಿದೆ.
ಕೇಂದ್ರ ಸರ್ಕಾರದ ಜನವಿರೋಧಿ ಹಾಗೂ ಬೆಲೆ ಏರಿಕೆಯಿಂದಾಗಿ ಗ್ರಾಮೀಣ ಪ್ರದೇಶಗಳ ಜನತೆಯ ಬದುಕುಗಳು ಸಂಕಷ್ಟಗಳಿಗೆ ಸಿಲುಕುತ್ತಿವೆ. ಅಡುಗೆ ಎಣ್ಣೆಯಿಂದ ಹಿಡಿದು, ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲಾಗದೆ ತತ್ತರಿಸುತ್ತಿದ್ದಾರೆ. ಧನಾತ್ಮಕವಾಗಿ ಅಭಿವೃದ್ಧಿಯತ್ತ ಸಾಗಬೇಕಿದ್ದ ದೇಶದ ದಿಶೆ, ಋಣಾತ್ಮಕವಾಗಿ ದೇಶದ ಜನರ ಬದುಕು ಸಾಗುತ್ತಿರುವುದು ಬೇಸರ ಸಂಗತಿ ಎಂದು ಪ್ರಜ್ಞಾವಂತರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Uncategorized
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಅಂಗನವಾಡಿ ನೌಕರರ ಉಪವಾಸ ಸತ್ಯಾಗ್ರಹ
ಬಾಗೇಪಲ್ಲಿ:ಅಂಗನವಾಡಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ಸರ್ಕಾರದ ಧೋರಣೆ ವಿರೋಧಿಸಿ ಇಂದು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದೆ ನೂರಾರು ಅಂಗನವಾಡಿ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು.
.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ರತ್ನಮ್ಮ ಮಾತನಾಡಿ, ‘ವೇತನ ತಾರತಮ್ಯ ನಿವಾರಣೆ ಮತ್ತು ನಿವೃತ್ತಿ ಸೌಲಭ್ಯ ಒದಗಿಸುವ ಬಗ್ಗೆ ಬಜೆಟ್‍ನಲ್ಲಿ ಸೇರಿಸಲಾಗುವುದೆಂದು ನೀಡಿದ ಸರ್ಕಾರದ ಭರವಸೆ ಹುಸಿಯಾಗಿದೆ. ಹೀಗಾಗಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹೇಳಿದರು
ಗೌರವ ಧನ ಹೆಚ್ಚಳ, ಕೋವಿಡ್ ಕಾರ್ಯದ ವೇಳೆ ಮೃತಪಟ್ಟ ಅಂಗನವಾಡಿ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ನಡೆಸಿದರು.
ಕೋವಿಡ್-19 ಕಾರ್ಯದ ವೇಳೆ ಮೃತಪಟ್ಟ 26ಮಂದಿಯ ಕುಟುಂಬಸ್ಥರಿಗೆ ಇಲ್ಲಿಯವರೆಗೂ ಪರಿಹಾರ ನೀಡಲಾಗಿಲ್ಲ. ಹಾಗೂ 2016 ರಿಂದ ಇದುವರೆಗೆ ನಿವೃತ್ತರಾದ 7304 ಮಂದಿ ನೌಕರರಿಗೆ ನೀಡಬೇಕಾದ ನಿವೃತ್ತಿ ವೇತನವನ್ನು ನೀಡಿಲ್ಲ.
ಪ್ರಧಾನ ಕಾರ್ಯದರ್ಶಿ ಕೆ.ಗೀತಾ ಮಾತನಾಡಿ ನಾಳೆಯಿಂದ ಎಲ್ಲಾ ಅಂಗನವಾಡಿ ನೌಕರರು ಮಾಡಬೇಕಾದ ಹೆಚ್ಚುವರಿ ಕೆಲಸಗಳಾದ ಇ-ಸರ್ವೇ, ಬಿಪಿಎಲ್ ಕಾರ್ಡ್, ಆರ್‍ಸಿಎಸ್ ಸರ್ವೇ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ ಹಾಗೂ ಚುನಾವಣಾ ಕಾರ್ರ್ಯಗಳನ್ನು ಈ ಮೂಲಕ ಬಹಿಷ್ಕರಿಸಿದ್ದೇವೆ ಎಂದು ಅವರು ಹೇಳಿದರು.
ಸಿಐಟಿಯು ಮುಖಂಡ ಆಂಜನೇಯ ರೆಡ್ಡಿ ಮಾತನಾಡಿ
ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಮತ್ತು ಕೊರೊನಾ ಸೋಂಕು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ಸರ್ಕಾರದ ಧೋರಣೆ ವಿರೋಧಿಸಿ ಹಾಗೂ ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಮುಖಂಡ ಆಂಜನೇಯ ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಮುಸ್ತಫಾ, ವೆಂಕಟರವಣಮ್ಮ, ಸುಜಾತಮ್ಮ,ರಮಾದೇವಿ,ಗಾಯತ್ರಿ,ವಿಮಲ,ಗಂಗರತ್ನಮ್ಮ,ಸಾವಿತ್ರಮ್ಮ, ಶಾಂತಮ್ಮ,ಪಾರ್ವತಿ, ಅಲುವೇಲಮ್ಮ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
Uncategorized
ಗಮೇಸಾ ಕಂಪನಿಯ ಕಾರ್ಮಿಕರ ಹೋರಾಟಕ್ಕೆ SFI – DYFI ಬೆಂಬಲ
ಕವಿತಾಳ : ಸಿರವಾರ ತಾಲೂಕಿನ ಕವಿತಾಳ ಪಕ್ಕದ ತೊಪ್ಪಲದೊಡ್ಡಿ ಹತ್ತಿರ ಇರುವ ಗಮೇಸಾ ವಿಂಡ್ ಟರ್ಬೈನ್ ಹೆಸರಿನ ಗಾಳಿ ಹಾಗೂ ಸೂರ್ಯನ ಕಿರಣಗಳಿಂದ ವಿದ್ಯತ್ ಉತ್ಪಾದಿಸುವ ತೊಪ್ಪಲದೊಡ್ಡಿ ಘಟಕದಲ್ಲಿ 2015ರಿಂದ ಕೆಲಸ ಮಾಡುತಿದ್ದ ಸುಮಾರು 20ಜನ ಕಾರ್ಮಿಕರನ್ನು ನಿಯಮ ಬಾಹಿರವಾಗಿ ಕೆಲಸದಿಂದ ವಜಾ ಮಾಡಿದ್ದು, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿ ಕಂಪನಿಯ ಮುಂಭಾಗದಲ್ಲಿ CITU ನೇತೃತ್ವದಲ್ಲಿ ನಡೆಯುತ್ತಿರುವ ಎರಡನೆಯ ದಿನದ ಹೋರಾಟ ಕ್ಕೆ
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ( DYFI ), ಭಾರತ ವಿದ್ಯಾರ್ಥಿ ಫೆಡರೇಷನ್ ( SFI ) ಹಾಗೂ ಇತರೆ ಸಂಘಟನೆ ಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು.
ಹೋರಾಟವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಗಮೇಸಾ ವಿಂಡ್ ಟರ್ಬೈನ್ ಕಂಪನಿಯು ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ ಮನಬಂದಂತೆ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಈ ಕೆಲಸ ಮಾಡಿದಾಗ ನಾವು ಮಧ್ಯ ಪ್ರವೇಶ ಮಾಡಿ ತಕ್ಕ ಪಾಠ ಕಲಿಸಿದ್ದೇವು ಈಗ ಮತ್ತೆ ತನ್ನ ಹಳೆಯ ಛಾಳಿಯನ್ನು ಮುಂದುವರಿಸಿದೆ ಜೊತೆಗೆ ಕಳೆದ ಆರು ವರ್ಷಗಳ ಹಿಂದಿನಿಂದಲೂ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಈಗ ಕುಂಟು ನೆಪ ಇಟ್ಟುಕೊಂಡು ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಸ್ಥಳೀಯರಲ್ಲದ ಹೊರ ರಾಜ್ಯದ ಕಾರ್ಮಿಕರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸುತ್ತಿದ್ದಾರೆ ಭೂಮಿ, ಗಾಳಿ, ನೀರು ನಮ್ಮದಾದರು ಕೆಲಸ ಮಾತ್ರ ನಮ್ಮಗೆ ಇಲ್ಲದಿರುವುದು ದುರಂತ ಕೂಡಲೇ ಕಾರ್ಮಿಕರನ್ನು ಮರು ನೇಮಕ ಮಾಡಿಕೊಂಡು ಅವರಿಗೆ ನೀಡಬೇಕಾದ ಕಾನೂನು ಬದ್ದ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಈ ಕಂಪನಿಯು ನೈಸರ್ಗಿಕ ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸುವ ಘಟಕವಾಗಿದೆ ಇದರಲ್ಲಿ ಸುಮಾರು 20 ಜನ ಕಾರ್ಮಿಕರು ಕಳೆದ 7 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತಿದ್ದರು ಸದರಿ ಕಾರ್ಮಿಕರು ತಮಗೆ ಬರಬೇಕಾದ ಕಾನೂನುಬದ್ದ ಸೌಲಭ್ಯಗಳನ್ನು ಒದಗಿಸಲು ಒತ್ತಾಯ ಮಾಡಿದ ಕಾರಣ ಉದ್ದೇಶ ಪೂರ್ವಕವಾಗಿ ಸದರಿ ಸಂಸ್ಥೆಯ ಗುತ್ತಿಗೆದಾರರ ಗುತ್ತಿಗೆ ಅವಧಿಯು ಮುಕ್ತಾಯವಾಗಿದೆ ಎಂಬ ನೆಪ ಒಡ್ಡಿ ಹಾಲಿ ಕಾರ್ಮಿಕರನ್ನು ದಿನಾಂಕ 20-02-2021 ರಿಂದ ಕೆಲಸಕ್ಕೆ ಬರದಂತೆ ಕೆಲಸದಿಂದ ನಿಯಮ ಬಾಹಿರವಾಗಿ ವಜಾ ಮಾಡಿದ್ದು ಖಂಡನೀಯ. ಕಾರ್ಮಿಕರ ಕಾನೂನು ಬದ್ದ ಬೇಡಿಕೆಗಳ ಕುರಿತು ಮಾನ್ಯ ಕಾರ್ಮಿಕ ಅಧಿಕಾರಿಗಳು ರಾಯಚೂರು ಇವರಿಗೆ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಮಾಲಿಕರು ಕಾರ್ಮಿಕ ಇಲಾಖೆಯ ಯಾವುದೇ ಸೂಚನೆಗಳನ್ನು, ಆದೇಶಗಳನ್ನು ಮತ್ತು ನಿಯಮಗಳನ್ನು ಇಲ್ಲಿಯವರೆಗೂ ಪಾಲಿಸುತ್ತಿಲ್ಲ. ಕಾರಣ ಪರಿಸಿಲಿಸಿ ಸದರಿ ಸಂಸ್ಥೆಯ ಮಾಲಿಕರಿಗೆ ಕಾರ್ಮಿಕ ಇಲಾಖೆಯ ನಿರ್ದೇಶನ, ಸೂಚನೆ ಪಾಲಿಸುವಂತೆ ಮತ್ತು ಕಾರ್ಮಿಕರನ್ನು ಪುನ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಸಿಗಬೇಕಾದ ಎಲ್ಲಾ ರೀತಿಯ ಕಾನೂನಾತ್ಮಕ ಸೌಲಭ್ಯಗಳನ್ನು ಒದಗಿಸುವಂತೆ ಮಾಡಲು ಜಿಲ್ಲಾಧಿಕಾರಿ ಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಕಂಪನಿಗೆ ಬೀಗ ಮುದ್ರೆಯನ್ನು ಹಾಕಿ ಹೋರಾಟ ವನ್ನು ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.
ಈ ಹೋರಾಟ ದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್,
SFI ಕವಿತಾಳ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ಮಹಾದೇವ ಬಿ, ಮರಿಸ್ವಾಮಿ, ಯಂಕೋಬಾ ತೊಪ್ಪಲದೊಡ್ಡಿ, ಕಾರ್ಮಿಕರಾದ ಸಿದ್ದರಾಮ, ಲಕ್ಷ್ಮಣ್ ಸಿಂಗ್, ಮಹೇಶ್, ಅಮರೇಶ, ಶರಬಸವ, ನಿಂಗಪ್ಪ, ಸಮೀರ್, ಜಾಹೀದ್, ಅರುಣ್ ಕುಮಾರ್, ದೇವರಾಜ ಗ್ರಾಮಸ್ಥರಾದ ರಮೇಶ್ ಹುಸೇನಪುರ್, ಮೌನೇಶ ಬಡಿಗೇರ್, ಬಸವರಾಜ ಸಾಹುಕಾರ್, ಮಲ್ಲಯ್ಯ ಮೇಟಿ ತೊಪ್ಪಲದೊಡ್ಡಿ, ಉಮೇಶ್ ತೊಪ್ಪಲದೊಡ್ಡಿ, ಗೋವಿಂದಪ್ಪ, ಹನುಮಂತ, ಶರಣಪ್ಪ ಸೇರಿದಂತೆ ಅನೇಕರಿದ್ದರು.
Uncategorized
ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಕಾನೂನಾತ್ಮಕವಾಗಿ ಇದೀಗ ಮತ್ತಷ್ಟು ರೋಚಕತೆ ಪಡೆಯುತ್ತಿದ್ದು, ಇಂದು ಯುವತಿಗೆ ನೋಟಿಸ್ ಜಾರಿ ಮಾಡಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಶನಿವಾರ ರಮೇಶ್ ಜಾರಕಿಹೊಳಿ ದೂರು ದಾಖಲಿಸುತ್ತಿದ್ದಂತೆ ಯುವತಿ ಕೂಡ ವಿಡಿಯೋ ಮೂಲಕ ಪ್ರತ್ಯಕ್ಷಳಾಗಿದ್ದಳು. ಕೆಲಸದ ಆಮಿಷ ಒಡ್ಡಿ ರಮೇಶ್ ಜಾರಕಿಹೊಳಿ ಅವರೇ ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ದಳು.
ಈ ಬೆನ್ನಲ್ಲೇ, ಪೊಲೀಸರು ಯುವತಿಗೆ ನೋಟಿಸ್ ನೀಡಿದ್ದಾರೆ. ಶೀಘ್ರವೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿ, ಯುವತಿಯ ಮನೆ ಎನ್ನಲಾದ ವಿಜಯಪುರದ ಗ್ರಾಮವೊಂದರ ಮನೆಗೆ ನೋಟಿಸ್ ನೀಡಿದ್ದಾರೆ. ಜೊತೆಗೆ, ಇ-ಮೇಲ್ ಮೂಲಕವೂ ನೋಟಿಸ್ ಕೊಟ್ಟಿದ್ದಾರೆ. ವಿಜಯಪುರದ ಮನೆ, ಬೆಂಗಳೂರಿನ ಪಿಜಿ, ಆಕೆಯ ಸ್ನೇಹಿತರಿಗೆ ನೋಟಿಸ್ ನೀಡಲಾಗಿದೆ.
-
Politics4 weeks ago
ಬಾಗೇಪಲ್ಲಿ ತಾಲ್ಲೂಕು ಶಾಸಕರಿಂದ ಉಚಿತ ಡಿಜಿಟಲ್ ಸೇವಾ ಕೇಂದ್ರಕ್ಕೆ ಚಾಲನೆ
-
Politics2 weeks ago
ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ತಲುಪಿಸುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ
-
ಸುದ್ದಿ3 weeks ago
ಬಾಗೇಪಲ್ಲಿ ತಾಲ್ಲೂಕು ಕಚೇರಿ ಕಟ್ಟಡ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
-
ರಾಜ್ಯ7 days ago
ಪಟ್ಟಣದ ಎಲೆಟ್ ಪದವಿಪೂರ್ವ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ