Politics
ಬಿಜೆಪಿ ಸೇರಿದ ಮಿಥುನ್ ಚಕ್ರವರ್ತಿ
Politics
ಸ್ವಚ್ಛತೆಯ ಕುರಿತು ಜನಜಾಗೃತಿ : ಬೀದಿ ನಾಟಕಕ್ಕೆ ಚಾಲನೆ
ಶಿಡ್ಲಘಟ್ಟ : ನಗರದ ಬಸ್ ನಿಲ್ದಾಣದ ಬಳಿ ಶುಕ್ರವಾರ ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ಪರಿವರ್ತನಾ ಕಲಾ ಸಂಸ್ಥೆಯ ಮೂಲಕ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಪೌರಾಯುಕ್ತ ಶ್ರೀನಿವಾಸ್ ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನಿಮ್ಮ ಮನೆ ಅಥವಾ ಅಂಗಡಿಗಳ ತ್ಯಾಜ್ಯವನ್ನು ರಸ್ತೆಯಲ್ಲಿ ಸುರಿಯಬಾರದು ಎಂದು ಅವರು ತಿಳಿಸಿದರು.
ನಗರ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ತರ ವಾಗಿದ್ದು, ಅವರ ಸೇವೆಯನ್ನಿಲ್ಲಿ ಸ್ಮರಿಸಲಾಗಿದೆ. ಜೊತೆಗೆ ಜನರು ಯಾವ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಕಸದ ವಾಹನ ಬಂದಾಗ ಮನೆಯ ಕಸವನ್ನು ಯಾವ ರೀತಿಯಲ್ಲಿ ವಿಂಗಡಿಸಿ ನೀಡಬೇಕು, ಎಂಬುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ತ್ಯಜಿಸುವುದು, ನೈರ್ಮಲ ಜಾಗೃತಿ ಮೂಡಿಸುವುದರ ಕುರಿತು ನಾಟಕದ ಮೂಲಕ ಹೇಳಲಾಗುತ್ತಿದೆ ಎಂದರು.
ನಾಗರಿಕರು ಮನೆಯಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು. ರಸ್ತೆಯಲ್ಲಿ ಕಸಕಡ್ಡಿ ಅಥವಾ ತ್ಯಾಜ್ಯವನ್ನು ಸುರಿದರೆ ಅದನ್ನು ಮನೆಯ ಮುಂದೆ ಅಥವಾ ಅಂಗಡಿಯ ಮುಂದೆ ಡಂಪ್ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕಿ ಶೋಭಾ, ನೀರು ಸರಬರಾಜು ವಿಭಾಗದ ಮುರಳಿ ಹಾಜರಿದ್ದರು.
ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ
Politics
ಕಲಬುರ್ಗಿ ವೃತ್ತದ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅರವಿಂದ ಲಿಂಬಾವಳಿ
ಕಲಬುರಗಿ : ಇಂದು ಜಿಲ್ಲೆಯ ಚಂದ್ರಂಪಳ್ಳಿ ನಿಸರ್ಗಧಾಮದಲ್ಲಿ, ಜಿಲ್ಲೆಯ ಗೌರವ ರಕ್ಷೆ ಸ್ವೀಕರಿಸಿ,ಕಲಬುರ್ಗಿ ವೃತ್ತದ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅರವಿಂದ ಲಿಂಬಾವಳಿ ರವರು ಇಲಾಖೆಯ ಮಾಹಿತಿ ಪಡೆದು,ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಇದಕ್ಕೂ ಮುನ್ನ ಚಂದ್ರಂಪಳ್ಳಿ ಜಲಾಶಯದ ಆವರಣದಲ್ಲಿ ಗಿಡ ನೆಟ್ಟು ನೀರುಣಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Politics
ಬಂಗಾಳದ ಹೆಣ್ಣು ಹುಲಿಗೆ ಬೆಂಬಲ ಘೋಷಿಸಿದ ಶಿವಸೇನೆ
ಮುಂಬೈ : ಪಕ್ಷಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಶಿವಸೇನೆಯು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ, ” ಮಮತಾ ಬ್ಯಾನರ್ಜಿ ಬಂಗಾಳದ ಹೆಣ್ಣು ಹುಲಿ, ಅವರು ಈ ಚುನಾವಣೆಯಲ್ಲಿ ಗೆಲ್ಲಬೇಕು. ಆದ್ದರಿಂದ ಟಿಎಂಸಿಗೆ ಬೆಂಬಲ ನೀಡುತ್ತೇವೆ,” ಎಂದು ಶಿವಸೇನೆಯ ಸಂಜಯ್ ರಾವತ್ ತಿಳಿಸಿದ್ದಾರೆ.