Connect with us
Ad Widget

ಸುದ್ದಿ

ರೈತರಿಗೆ ಹಾಗೂ ಯುವಜನತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೃಷಿ ಕಾಯಕದ ರಾಯಭಾರಿಯಾಗಿ ಪದಗ್ರಹಣ

Published

on

ಬೆಂಗಳೂರು : ಕೃಷಿ ಇಲಾಖೆಯ ಯೋಜನೆಗಳನ್ನು, ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು, ರೈತರಿಗೆ ಹಾಗೂ ವಿಶೇಷವಾಗಿ ಯುವಜನತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೃಷಿ ಕಾಯಕದ ರಾಯಭಾರಿಯಾಗಿ ಪದಗ್ರಹಣ ಮಾಡಿದ ಜನಪ್ರಿಯ ಕಲಾವಿದ ದರ್ಶನ್ ಅವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ರವರು ಇಂದು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಶ್ರೀ ಮಹಾಸತಿ ಭೈರವಿ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ

Published

on

ಉತ್ತರ ಕನ್ನಡ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಉತ್ತರ ಕನ್ನಡ ಜಿಲ್ಲೆ ಶಾಖಾ ಮಠದ ಕುಮಟಾ ತಾಲ್ಲೂಕಿನ ಬಿಜಿಎಸ್ ಸೆಂಟ್ರಲ್ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಮಹಾಸತಿ ಭೈರವಿ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಮತ್ತು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎಲ್ಲಾ ಪೂಜ್ಯ ಸ್ವಾಮೀಜಿಯವರು, ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮ ಗೌಡರವರು, ಮಾಜಿ ಶಾಸಕರಾದ ಮಂಕಾಳು ವೈದ್ಯರವರು, ಮತ್ತು ಗಣ್ಯರು, ಹಾಗೂ ಶ್ರೀ ಮಠದ ಸದ್ಭಕ್ತರು, ಉಪಸ್ಥಿತರಿದ್ದರು.

Continue Reading

ಸುದ್ದಿ

ಬೆಳ್ಳಿಗನೂರ ಗ್ರಾಮದ ಶೀತಲ ವ್ಯವಸ್ಥೆಯಲ್ಲಿ ಬಸ್ ನಿಲ್ದಾಣ

Published

on

ಮಸ್ಕಿ :- ತಾಲೂಕಿನ ಬೆಳ್ಳಿಗನೂರ ಗ್ರಾಮದ, ಬಸ್ ನಿಲ್ದಾಣ ಕಟ್ಟಡ ಶೀತಲವಸ್ಥೆ ತಲುಪಿದೆ. ಹೀಗಾಗಿ ಪ್ರಯಾಣಿಕರು ಬೀದಿಯಲ್ಲಿ , ಮಳೆ, ಬಿಸಿಲಿನಲ್ಲಿಯೂ, ಬಸ್ ಗೆ ಕಾಯುವಂತಾಗಿದೆ.

ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ಈ ಚಿಕ್ಕ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದೆ ಮೇಲ್ಛಾವಣಿಯ ಕಾಂಕ್ರೀಟ್ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ, ಹೀಗಾಗಿ ಪ್ರಯಾಣಿಕರು ಪ್ರಾಣಭೀತಿಯಿಂದ ನಿಲ್ದಾಣದೊಳಗೆ ಕುಳಿತುಕೊಳ್ಳದೇ ಅದರ ಮುಂಭಾಗ ನಿಲ್ಲುತ್ತಾರೆ .

ಬೇಸಿಗೆ ಬಿಸಿಲಿನಲ್ಲಿ ಹಾಗೂ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ ಮತ್ತು ಶಾಲಾ , ಕಾಲೇಜ್ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಇತರ ಪ್ರಯಾಣಿಕರು, ಈ ಬಸ್ ನಿಲ್ದಾಣ ಮೂಲಕ ವಿವಿಧಡೆ ಪ್ರಯಾಣ ಬೆಳೆಸುತ್ತಾರೆ .

ಬಸ್ ಸಂಚಾರ ವ್ಯವಸ್ಥೆ ಸರಿ ಇದ್ದರು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ಗ್ರಾಮಸ್ಥರಲ್ಲಿ ಬೇಸರ ಉಂಟುಮಾಡಿದೆ . ಸಂಬಂಧಪಟ್ಟ ಅಧಿಕಾರಿಗಳು ಶೀತಲಗೊಂಡ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ .

ಈ ಸಂದರ್ಭದಲ್ಲಿ ಬೆಳ್ಳಿಗ ನೂರು ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳು ಗಗನಕ್ಕೆ ಸಮವಾಗಿದೆ, ತುಂಗುದಾಣ ದಲ್ಲಿ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆಯಿಲ್ಲ, ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಹೊಸ ನಿಲ್ದಾಣವನ್ನು ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ನಿವಾಸಿಯಾದ ದೇವರಾಜ್ ಪೊಲೀಸ್ ಪಾಟೀಲ್ ಬೆಳ್ಳಿಗನೂರು ತಿಳಿಸಿದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಶ್ರೀ ತುಳಸಿ ಮುನಿರಾಜು ಗೌಡರನ್ನು ಭೇಟಿಯಾಗಿ ಅಭಿನಂದಿಸಿದ ತೇಜಸ್ವಿ ಸೂರ್ಯ

Published

on

ಬೆಂಗಳೂರು : ಮಾನ್ಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶ್ರೀ ತುಳಸಿ ಮುನಿರಾಜು ಗೌಡರನ್ನು ಭೇಟಿಯಾಗಿ ತೇಜಸ್ವಿ ಸೂರ್ಯ ರವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಆರ್ ಅಶೋಕ್, ಶ್ರೀ ಬಸವರಾಜ್ ಬೊಮ್ಮಾಯಿ, ಶ್ರೀ ಎಸ್ ಟಿ ಸೋಮಶೇಖರ್, ಶ್ರೀ ಭೈರತಿ ಬಸವರಾಜು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್ ಆರ್ ವಿಶ್ವನಾಥ್, ಶಾಸಕರಾದ ಶ್ರೀ ಸುನಿಲ್ ಕುಮಾರ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್