ಮನರಂಜನೆ
“ವರ್ಷದ ಕನ್ನಡಿಗ ಪ್ರಶಸ್ತಿ 2021” : ಆ.ರ್ ಅಶೋಕ್
ಬೆಂಗಳೂರು : ಜೆಡಬ್ಲ್ಯೂ ಮ್ಯಾರಿಯೊಟ್ ಹೋಟೆಲ್ ನಲ್ಲಿ ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯ ವತಿಯಿಂದ ಪ್ರತಿವರ್ಷ ಕೊಡಮಾಡುವ “ವರ್ಷದ ಕನ್ನಡಿಗ ಪ್ರಶಸ್ತಿ 2021″ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್ ಅಶೋಕ್ ಅವರು ಸಾಧಕರಿಗೆ ಪ್ರಶಸ್ತಿ ವಿತರಿಸಿದರು.
“ವರ್ಷದ ಕನ್ನಡಿಗ ಪ್ರಶಸ್ತಿ”ಯ ಮೂಲಕ ಕನ್ನಡಿಗರು ಮಾಡಿದ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಎಂದರು.
ಮನರಂಜನೆ
ಹಳ್ಳಿ ವಾತಾವರಣಗಳಲ್ಲಿ ಪ್ರೊಡಕ್ಷನ್ ನಂ.5 ಕಿರುಚಿತ್ರ ಒಂದು ಸುಂದರ ಪ್ರೇಮ ಕಥೆ
ರಾಯಚೂರು ಮಾ.22- ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ತಾಲೂಕಿನ ಕಲ್ಲೂರು, ಗಂಜಳ್ಳಿ, ಮನ್ಸಲಾಪುರ, ಕೊರ್ತೆಕುಂದ, ಗ್ರಾಮದ ಸುಂದರ ಪರಿಸರದಲ್ಲಿ ನಡೆದಿದ್ದ ಪ್ರೊಡಕ್ಷನ್ ನಂ 5 ಒಂದು ಸುಂದರ ಪ್ರೇಮ ಹಾಗೂ ಕಮರಷಿಯಲ್ ವಿಷಯ ಹೊಂದಿದ ಕಿರುಚಿತ್ರವು10 ದಿನಗಳ ಕಾಲ ಚಿತ್ರಿಕರಣ ಮಾಡಿ ಇಂದು ಯಶಸ್ವಿ ಯಾಗಿ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಬರುವ ಮುಂದಿನ ದಿನಗಳಲ್ಲಿ ಚಿತ್ರದ ಸಂಪೂರ್ಣ ತಾಂತ್ರಿಕ ಕೆಲಸವನ್ನು ಮುಗಿಸಿ ಜನರ ಮುಂದೆ ನೀಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಂದರ್ಭದಲ್ಲಿ ಈ ಚಿತ್ರದ ನಿರ್ದೇಶಕ ರಾಜ ರಾಯ್, ಚಿತ್ರದ ನಾಯಕ ರೆಮೋ, ನಾಯಕಿ ಖುಷಿ, ಖಳನಾಯಕ ಮಾಂತೂ ಕ್ರಿಶ್, ಛಾಯಾಗ್ರಾಹಕ,ವಿಜಯಕುಮಾರ್ ಜಿ ಹಾಗೂ ರಂಗಭೂಮಿ ಕಲಾವಿದರದ ನರಸಿಂಹ,ವಿಶಾಲ್ ಕಲಾವಿದರದ,ಶ್ಯಾಮ್,ಲಕ್ಶ್ಮಣ ಗೌಡ,ಪ್ರಭು, ಕೋಟೆ ರಾಜು, ದ್ರುವ (ಸಣ್ಣ ) ಪ್ರಭು,ವಿಜಯಲಕ್ಷ್ಮಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ ಕೆ.ಶಂಕರ್ ಕುರುಬದೊಡ್ಡಿ,ಮುತ್ತುರಾಜ್ ,
ಪವನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಮನರಂಜನೆ
ಪುನೀತ್ ರಾಜಕುಮಾರ್ : 46ನೇ ಹುಟ್ಟುಹಬ್ಬ ಆಚರಣೆ
ರಾಯಚೂರು ಮಾ.17- ಅಪ್ಪು ಯೂತ್ ಬ್ರಿಗೇಡ್ ಜಿಲ್ಲಾ ಘಟಕದ ರಾಯಚೂರು ವತಿಯಿಂದ ಪುನೀತ್ ರಾಜಕುಮಾರ್ ರವರ 46ನೇ ಹುಟ್ಟುಹಬ್ಬವನ್ನು ಇಂದು ಪಬ್ಲಿಕ್ ಗಾರ್ಡನ್ ನಲ್ಲಿ ಆಚರಿಸಲಾಯಿತು.ಜಿಲ್ಲಾಧ್ಯಕ್ಷ ಸಾದಿಕ್ ಖಾನ್ ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಾಯಕ ನಟ. ಅಭಿಮಾನಗಳಿಂದ ಅಪ್ಪು ಎಂದು ಕರೆಸಿಕೊಳ್ಳುವ ಪುನೀತ್ ನಟನೆಯಲ್ಲಿದೇ ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿಯೂ, ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಹೈದ್ರಾಬಾದ್ ಕರ್ನಾಟಕದ ಉಸ್ತುವಾರಿ ಆಗಿರುವಂತಹ ಸಾದಿಕ್ ಖಾನ್, ರಾಯಚೂರು ಜಿಲ್ಲಾಧ್ಯಕ್ಷ ಅಭಿಮಾನಿಗಳ ಬಳಗದ ಮೌಲಾಲಿ,ನಗರಧ್ಯಕ್ಷ ಮಂಜು, ನಗರ ಉಪಾಧ್ಯಕ್ಷ ಖಲೀಲ್, ನಾಗು,ಸಿರಿ, ಜಿಲನ್, ಹೊಸೂರ್ ನಾಸಿರ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಮನರಂಜನೆ
ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದ
ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದ ಚಾಲೆಂಜಿಂಗ್ ಸ್ಟಾರ್
ಬೆಂಗಳೂರು : ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ ಎಂದು ಚಂದನವನದ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದ್ದಾರೆ.
ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು ಎಂದಿದ್ದಾರೆ.
-
Uncategorized2 weeks ago
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
-
Politics7 days ago
ಪುರಸಭೆಯ ಸ್ಥಾಯಿ ಸಮಿತಿಗೆ ಎ.ನಂಜುಂಡಪ್ಪ ಅವಿರೋಧ ಆಯ್ಕೆ
-
Politics4 weeks ago
ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ತಲುಪಿಸುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ
-
ಸುದ್ದಿ4 weeks ago
ಬಾಗೇಪಲ್ಲಿ ತಾಲ್ಲೂಕು ಕಚೇರಿ ಕಟ್ಟಡ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ