ರಾಜ್ಯ
ಟೀ, ಕಾಫಿ ಬೊಂಡ ತಿಂಡಿ ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ
ಬಾಗೇಪಲ್ಲಿ: ತಾಲೂಕಿನ ಕ.ರಾ.ರ.ಸಾ.ಸ.ಘಟಕದ ವತಿಯಿಂದ ಸಾರಿಗೆ ನೌಕರರು, ಶುಕ್ರವಾರ ಕಪ್ಪುಪಟ್ಟಿ ಧರಿಸಿ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಟೀ, ಕಾಫಿ ಬೊಂಡ ತಿಂಡಿ ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ನೌಕರರ ರಾಜ್ಯ ಕ.ರಾ.ರ.ಸಾ.ಸ ಬಾಗೇಪಲ್ಲಿ ತಾಲ್ಲೂಕು ಘಟಕದ ಅದ್ಯಕ್ಷ ಚಂಡೂರು ಮೂರ್ತಿ ಮಾತನಾಡಿ ಸರ್ಕಾರ ನೌಕರರ ಕಷ್ಟವನ್ನು ಅರ್ಥಮಾಡಿಕೊಂಡು, ಆರನೇ ವೇತನವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದಿನನಿತ್ಯದ ಎಲ್ಲಾ ಬೆಲೆಗಳು ದುಬಾರಿಯಾಗಿದ್ದು, ಸರ್ಕಾರ ನೀಡುತ್ತಿರುವ ಅತ್ಯಂತ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು.
ನಲ್ಲಪ್ಪರೆಡ್ಡಿಪಲ್ಲಿ ಮಂಜುನಾಥ ಮಾತನಾಡಿ, 6ನೇ ವೇತನ ಜಾರಿಗೊಳಿಸಲು ಸರ್ಕಾರ ನೀಡಿದ್ದ ಗಡುವು ಪೂರ್ಣಗೊಂಡಿದೆ.
ನೌಕರರ ಸಂಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ನಮ್ಮನ್ನು ಸರ್ಕಾರಿ ನೌಕರರೆಂದು ಘೋಷಿಸಿ ಎಂದು ಹೋರಾಡುತ್ತಲೇ ಬಂದಿದ್ದೇವೆ. ಹಾಗಾಗಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ರಾಜ್ಯ
ಮಹಿಳಾ ಪೊಲೀಸ್ ಪೇದೆ ತುಂಬು ಗರ್ಭಿಣಿಗೆ ಮನೆಯ ಸಂಪ್ರದಾಯದಂತೆ ಸೀಮಂತ
ಶಿಡ್ಲಘಟ್ಟ : ಕರ್ತವ್ಯ ನಿರತ ಮಹಿಳಾ ಪೋಲಿಸ್ ಪೇದೆ ತುಂಬು ಗರ್ಭಿಣಿ ಶ್ರೀಮತಿ ಜಮುನಾ ಅವರಿಗೆ ತವರು ಮನೆಯ ಸಂಪ್ರಾದಯದಂತೆ ಶಿಡ್ಲಘಟ್ಟ ನಗರ ಠಾಣೆ ಪಿ.ಎಸ್.ಐ ಕೆ.ಸತೀಶ್ ಮತ್ತುಮಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಪದ್ಮಮ್ಮ ಹಾಗೂನ ಸಹದ್ಯೋಗಿಗಳಾದ ಅಂಬಿಕಾ ಮತ್ತು ಶ್ವೇತ ಇವರ ತಂಡದವರ ಸಹಕಾರದಿಂದ ತುಂಬು ಗರ್ಭೀಣಿಯವರಾದ ಜಮುನಾಅವರಿಗೆ ಸೀಮಂತ ಮಾಡಿ ಕಳುಹಿಸಿಕೊಡಬೇಕು ಎಂಬ ಒಳ್ಳೆಯ ಅಲೋಚನೆಯಿಂದ ಇನ್ಸ್ ಪೆಕ್ಟರ್ ಸತೀಶ್ ಅವರ ಅನುಮತಿ ಮೇರೆಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹೆಣ್ಣು ಮಕ್ಕಳಿಗೆ ಎಲ್ಲಾ ಶಾಸ್ತ್ರಗಳ ಪೈಕಿ ” ಸೀಮಂತ” ಶಾಸ್ತ್ರವು ಒಂದು ಭಾವನಾತ್ಮಕ ಸಂಬಂಧ ಹೆಣ್ಣಿನೊಂದಿಗೆ ಹೊಂದಿದೆ. ತನ್ನ ಕರುಳ ಕುಡಿಯನ್ನ ಗರ್ಭದಲ್ಲಿ ಹೊತ್ತ ಹೆಣ್ಣು ಪುಟ್ಟ ಕಂದನ ಆಗಮನದ ನಿರೀಕ್ಷೆಯಲ್ಲಿದ್ದು ಮಹಿಳಾ ಪೊಲೀಸ್ ಪೇದೆ ಜಮುನಾಗೆ ಸೀಮಂತ ಮಾಡಿದರು.
ತಲೆ ತುಂಬಾ ಹೂ ಮುಡಿಸಿ, ಕೈ ಗೆ ಬಳೆ ತೊಡಿಸಿ ಹರಿಶಿಣ, ಕುಂಕುಮ ಹಚ್ಚಿ ಮುತ್ತೈದೆ ಶಾಸ್ತ್ರ ಅಣ್ಣನ ಸ್ಥಾನದಲ್ಲಿ ನಿಂತು ಇನ್ಸ್ ಪೆಕ್ಟರ್ ಸತೀಶ್ ರವರು ಸೇರಿದಂತೆ ಅವರ ಸಿಬ್ಬಂದಿ ಹೆಣ್ಣುಮಗಳಿಗೆ ತಲೆ ಮೇಲೆ ಅಕ್ಷತೆಕಾಳು ಹಾಕಿ ಜೀವನದಲ್ಲಿ ಒಳ್ಳೆಯದಾಗಲೀ ಎಂದು ಶುಭ ಹಾರೈಸಿ ಆರ್ಶೀವದಿಸಿದರು
ಪೊಲೀಸ್ ಠಾಣೆಯಲ್ಲಿ ಒಬ್ಬ ಸಹದ್ಯೋಗಿ ಮಹಿಳಾ ಪೊಲೀಸ್ ಪೇದೆಗೆ ಸೀಮಂತ ಮಾಡಿ ಖುಷಿಯಾಗಿ ಕಳುಹಿಸಿರುವ ಶುಭ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮಂಜುನಾಥ, ರೆಡ್ಡಿ, ಗುಪ್ತ, ವೆಂಕಟೇಶ್, ಅಮರನಾಥ, ಸುಭ್ರಮಣಿ, ಅಂಬಿಕಾ, ಶ್ವೇತ ಸೇರಿದಂತೆ ನಗರ ಠಾಣೆಯ ಎಲ್ಲಾ ಪೋಲಿಸ್ ಸಿಬ್ಬಂದಿ ಹಾಜರಿದ್ದರು.
ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ
ರಾಜ್ಯ
ಸ್ನೇಹಜೀವಿ ಕ್ರಿಕೆಟರ್ಸ್ ತಂಡ ದ್ವಿತೀಯ ಬಹುಮಾನ ಪಡೆದು ಸಂಭ್ರಮಾಚರಣೆ
ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂ.ಇ.ಐ ಮೈದಾನದಲ್ಲಿ ರಾಯಲ್ಸ್ ಆಫ್ ಕರುನಾಡು (ರಿ.) ಬೆಂಗಳೂರು ಇವರು ಆಯೋಜಿಸಲಾದ ಎರಡು ದಿನಗಳ ಹೊನಲು ಬೆಳಕಿನ ಟೆನ್ನಿಸ್ ಲಾಂಗ್ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು. ಇದರಲ್ಲಿ ಸ್ನೇಹಜೀವಿ ಕ್ರಿಕೆಟರ್ಸ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸ್ನೇಹಜೀವಿ ಕ್ರಿಕೆಟರ್ಸ್ ತಂಡದ ಮುಖ್ಯಸ್ಥರಾದ ಶಶಿಕಾಂತ್ ರಾವ್ ಅವರೊಂದಿಗೆ ಗೆಲುವಿನ ಆಕರ್ಷಕ ಟ್ರೋಫಿ ಪ್ರದರ್ಶಿಸಿ ಸಂಭ್ರಮಿಸಿದರು.
ರಾಜ್ಯ
ಮಾದಕ ವಸ್ತುಗಳನ್ನು ಎಳೆ ವಯಸ್ಸಿನವರಿಗೆ, ಯುವಕರಿಗೆ ಮಾರಬಾರದು ಎಂದು ಆದೇಶ
ಶಿಡ್ಲಘಟ್ಟ :ನಗರದ ಪೊಲೀಸ್ ಠಾಣೆಯಲ್ಲಿ ಔಷಧಿ ವ್ಯಾಪಾರಿಗಳು, ಸ್ಟೇಷನರಿ ಅಂಗಡಿ ಮಾಲೀಕರು ಹಾಗೂ ಪಂಚರ್ ಶಾಪ್ ಮಾಲೀಕರ ಸಭೆಯಲ್ಲಿ ಪಿ.ಎಸ್.ಐ ಸತೀಶ್ ಮಾತನಾಡಿ ಪೆಟ್ರೋಲ್, ಈಥರ್, ಕ್ಲೋರೊಫಾರಂ, ನೈಟ್ರಿಕ್ ಆಕ್ಸೈಡ್, ಪೈಂಟ್ ಥಿನ್ನರ್, ವೈಟ್‍ನರ್, ಶುಚಿಗೊಳಿಸಲು ಬಳಸುವ ದ್ರವ ಮತ್ತು ಸಲ್ಯೂಷನ್ ಮೊದಲಾದ ವಸ್ತುಗಳನ್ನು ಎಳೆ ವಯಸ್ಸಿನವರಿಗೆ, ಯುವಕರಿಗೆ ಮಾರಬಾರದು ಎಂದು ತಿಳಿಸಿದರು.
ಸಲ್ಯೂಷನ್ ದ್ರವವನ್ನು ಬಿಡಿಯಾಗಿ ಮಾರಾಟ ಮಾಡಬಾರದು ಮತ್ತು ವೈಟ್‍ನರ್ ಅನ್ನು ಪೆನ್ ರೂಪದಲ್ಲಿ ಮಾತ್ರ ಮಾತ್ರ ಮಾರಾಟ ಮಾಡಲು ಸೂಚನೆ ನೀಡಿದರು.
ಮನಸ್ಸನ್ನು ಪರಿವರ್ತಿಸುವ ಎಲ್ಲಾ ಮದ್ದುಗಳು ಚಟ ಹಿಡಿಸುತ್ತವೆ. ಮದ್ದನ್ನು ಪಡೆಯಲು ವ್ಯಸನಿ ಕಳ್ಳತನ, ದರೋಡೆ, ಖೂನಿ ಮತ್ತಿತರ ಹೇಯಕೃತ್ಯಗಳನ್ನು ಮಾಡಲೂ ಹೇಸುವುದಿಲ್ಲ. ಮಾದಕ ವ್ಯಸನಿದೈಹಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಅಧೋಗತಿ ತಲುಪಿ, ಎಲ್ಲವನ್ನೂ,ಎಲ್ಲರನ್ನೂ ಬಿಟ್ಟು ಮದ್ದಿನ ಲೋಕದ ಸೆರೆಯಾಳಾಗುತ್ತಾನೆ. ವ್ಯಸನಿಗಳನ್ನು ಗುರುತಿಸುವುದು ಸುಲಭ. ಈ ರೀತಿಯವರನ್ನು ಅಂಗಡಿ ಬಳಿಯೂ ಬಿಟ್ಟುಕೊಳ್ಳಬೇಡಿ. ಅಕಸ್ಮಾತ್ ಹಣದ ಆಸೆಯಿಂದ ಈ ರೀತಿಯ ವಸ್ತುಗಳನ್ನು ಮಾರಿದ್ದು ತಿಳಿದುಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ವಿ.ಎಸ್ ಗುಪ್ತ, ಮಂಜುನಾಥ್, ಸುರೇಶ್, ಸ್ಟೇಷನರಿ ಅಂಗಡಿ ಮಾಲೀಕರು ಹಾಗೂ ಪಂಚರ್ ಶಾಪ್ ಮಾಲೀಕರು ಮುಂತಾದವರು ಹಾಜರಿದ್ದರು.
ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ