ಕ್ರೀಡೆ
ಧೋನಿ ಪ್ರಶಂಸೆಗೆ ಛೀಮಾರಿ ಶಿಕ್ಷೆ
ಇದೇ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಸೈಕ್ಲೆನ್ ಮುಸ್ತಾಕ್ ರವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಚೀಮಾರಿ ಹಾಕಿದೆ.
ಭಾರತದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟಿನಿಂದ ವಿದಾಯ ಗೋಷಿಸಿದ ಬಳಿಕ ಇವರ ಬಗ್ಗೆ ಮುಷ್ತಾಕ್ ರವರು ಯೂಟ್ಯೂಬ್ನಲ್ಲಿ ಮೆಚ್ಚುಗೆಯ ಮಾತುಗಳು ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಧೋನಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸುವುದರ ಜೊತೆಗೆ ‘ಧೋನಿಯವರಿಗೆ ಬಿಸಿಸಿಐ ಉತ್ತಮ ರೀತಿಯ ಬೀಳ್ಕೊಡುಗೆ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’.
ಇವರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ನೀವು ಮಂಡಳಿಯ ಉದ್ಯೋಗಿಯಾಗಿರುವ ಕಾರಣ ಯೂಟ್ಯೂಬ್ ನಲ್ಲಿ ಯಾವುದೇ ರೀತಿಯ ಪೋಸ್ಟ್ ಮಾಡಬಾರದು ಹಾಗೂ ಭಾರತೀಯ ಕ್ರಿಕೆಟ್ ಅಥವಾ ಆಟಗಾರರನ್ನು ಕುರಿತು ಯಾವುದೇ ರೀತಿಯ ಪ್ರಕ್ರಿಯೆಯನ್ನು ವ್ಯಕ್ತಪಡಿಸಬಾರದು ಎಂದು ಪಿಸಿಬಿ ಪಾಕ್ ಆಟಗಾರರಿಗೆ ಸೂಚನೆ ನೀಡಲಾಗಿತ್ತು ಎಂದು ತಿಳಿಸಿದೆ ಎನ್ನಲಾಗಿದೆ.
ಕ್ರೀಡೆ
ಕೆಕೆಆರ್ ಗೆ ಆರ್ ಸಿಬಿ ಸವಾಲ್
ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡವು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆ ಇಂದು ಸೆಣಸಾಡಲಿದೆ.
ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮಿಗೆ ಮರಳಿರುವುದರಿಂದ ಮತ್ತು ಕ್ರಿಸ್ ಮರಿಶ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ಸಿ ಎಸ್ ಕೆ ವಿರುದ್ಧ 37 ರನ್ನುಗಳ ಜಯ ಪಡೆದಿರುವುದರಿಂದ ಇಂದೂ ಸಹ ಗೆಲುವಿನ ತವಕದಲ್ಲಿದೆ.
ಕ್ರೀಡೆ
ಐಪಿಎಲ್ ನಲ್ಲಿ ಎಂ.ಎಸ್ ಧೋನಿಯ ವಿಶೇಷ ದಾಖಲೆ
ಕೂಲ್ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯವಾಡಿದ ದಾಖಲೆಗೆ ಭಾಜನರಾಗಿದ್ದಾರೆ. ಧೋನಿ ಶುಕ್ರವಾರ ಸನ್ರೈಸರ್ಸ್ ತಂಡದ ವಿರುದ್ಧ ಹಾಡುವುದರೊಂದಿಗೆ ಸುರೇಶ್ ರೈನಾ ರವರ ದಾಖಲೆಯನ್ನು ಮುರಿದಿದ್ದಾರೆ.
ಪ್ರಸ್ತುತ ಟೂರ್ನಿಯಿಂದ ಹೊರಗುಳಿದಿರುವ ರೈನಾ 193 ಪಂದ್ಯಗಳನ್ನು ಆಡುವ ಮೂಲಕ ದಾಖಲೆಯನ್ನು ನಿರ್ಮಿಸಿದರು ಆದರೆ ಧೋನಿ 194 ಪಂದ್ಯಗಳನ್ನಾಡುವ ಮೂಲಕ ಅವರವರ ದಾಖಲೆಯನ್ನು ಮುರಿದಿದ್ದಾರೆ
ಕ್ರೀಡೆ
ಬೆಂಗಳೂರು ಬಿಡಲ್ಲ ಎಂದ ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದು ಹೋಗುವ ಯೋಚನೆಯನ್ನು ತಾವೆಂದಿಗೂ ಮಾಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ತಂಡದೊಂದಿಗೆ 12ವರ್ಷಗಳ ಪ್ರಯಾಣವು ಅಮೋಘವಾಗಿದೆ. ಲಕ್ಷಾಂತರ ಅಭಿಮಾನಿಗಳ ಪ್ರೀತಿ ಅಭಿಮಾನ ಗಳಿಸಿದ್ದೇವೆ, ಅನುಭವ ಅಮೂಲ್ಯವಾದದ್ದು, ಅತ್ಯಮೂಲ್ಯ ಎಂದು ಆರ್ಸಿಬಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದಲೂ ವಿರಾಟ್ ಆರ್ಸಿಬಿ ತಂಡದಲ್ಲಿದ್ದಾರೆ, ಕೆಲವು ವರ್ಷಗಳಿಂದ ತಂಡದ ನಾಯಕರಾಗಿದ್ದಾರೆ ಆರ್ಸಿಬಿಎಲ್ಲಿ ಮೊದಲಿನಿಂದಲೂ ಇರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದಾಗಿದೆ.
-
ಸುದ್ದಿ2 weeks ago
ಹೃದಯವಂತ ದಿ: ಹೊನ್ನಪ್ಪ ಮಳಸಿದ್ದಪ್ಪ ಮೇತ್ರಿ ಅವರ ದ್ವಿತೀಯ ಪುಣ್ಯಸ್ಮರಣೆ
-
ಸುದ್ದಿ3 weeks ago
28 ರ ಕರ್ನಾಟಕ ಬಂದ್ಗೆ ಪ್ರಜಾ ಸಂಘರ್ಷ ಸಮಿತಿ ಸಂಘಟನೆ ಬೆಂಬಲ; ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ
-
ಸುದ್ದಿ3 weeks ago
ಶಿಕ್ಷಕರಿಗೆ ಜೀವನ ಕೌಶಲ್ಯ ಕಾರ್ಯಗಾರ
-
ಸುದ್ದಿ4 weeks ago
ನಗರದಲ್ಲಿನ ವಿವಿಧ ಮಹನೀಯರ ಪ್ರತಿಮೆಗಳಿಗೆ ಪುಷ್ಪಾರ್ಚನೆ : ಕರ್ನಾಟಕ ಕ್ಷತ್ರಿಯ ಒಕ್ಕೂಟ