ಕ್ರೀಡೆ
ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಎಂ.ಎಸ್.ಧೋನಿ
ರಾಂಚಿ: ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರ ಉಳಿದಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಂಗಳವಾರ 39ನೇ ಜನ್ಮದಿನ ಆಚರಿಸಿಕೊಂಡ ಧೋನಿ, ಕಳೆದ ಒಂದು ವರ್ಷದಿಂದ ಯಾವುದೇ ಕ್ರಿಕೆಟ್ ಪಂದ್ಯವನ್ನೂ ಆಡಿಲ್ಲ.
ಧೋನಿ ಈಗ ಯಾವುದೇ ಬ್ರಾಂಡ್‌ಗಳ ಪ್ರಚಾರ ಅಥವಾ ಜಾಹೀರಾತುಗಳಿಗೆ ನೋ ಎನ್ನುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹಾಗೂ ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ತಿಳಿಸಿದ್ದಾರೆ. ಧೋನಿ ಅವರು ಸೇನೆ ಮತ್ತು ಕೃಷಿ ಸೇವೆಯಲ್ಲಿ ಅವರು ತೀವ್ರ ಉತ್ಸಾಹ ಹೊಂದಿರುತ್ತಾರೆ.
ಅವರು 40-50 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಅಲ್ಲಿ ಅವರು ಪಪ್ಪಾಯ, ಬಾಳೆಹಣ್ಣು ಮುಂತಾದ ಸಾವಯವ ಬೆಳೆ ಬೆಳೆಸುವುದಲ್ಲಿ ಮಗ್ನರಾಗಿದ್ದಾರೆ. ಎಲ್ಲವೂ ಸಹಜಸ್ಥಿತಿಗೆ ಬರುವವರೆಗೆ ಧೋನಿ ಬ್ರಾಂಡ್‌ಗಳ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿಯಲಿದ್ದಾರೆ. ಯಾವುದೇ ವಾಣಿಜ್ಯ ಚಟುವಟಿಕೆಯಲ್ಲಿ ಅವರು ಭಾಗವಹಿಸುವುದಿಲ್ಲ’ ಎಂದು ದಿವಾಕರ್ ತಿಳಿಸಿದ್ದಾರೆ.
ಧೋನಿ ಜತೆಗೆ ಕ್ರಿಕೆಟ್ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಅವರನ್ನು ನೋಡಿದಾಗ ಅವರು ನಿವೃತ್ತಿಯ ಬಗ್ಗೆ ಆಲೋಚಿಸುತ್ತಿರುವಂತೆ ಕಾಣುತ್ತಿಲ್ಲ. ಅವರು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಲಾಕ್‌ಡೌನ್‌ಗೆ ಮುನ್ನ ಚೆನ್ನೈನಲ್ಲಿ ಒಂದು ತಿಂಗಳು ಇದ್ದಾಗ ಅವರು ಮರಳಿ ಕಣಕ್ಕಿಳಿಯಲು ಸಾಕಷ್ಟು ಕಠಿಣ ಪರಿಶ್ರಮ ವಹಿಸಿದ್ದರು. ಫಾರ್ಮ್‌ಹೌಸ್‌ನಲ್ಲೂ ಈಗ ಅವರ ಫಿಟ್ನೆಸ್ ವ್ಯಾಯಾಮಗಳು ಮುಂದುವರಿದಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಅಭ್ಯಾಸವನ್ನೂ ಆರಂಭಿಸಲಿದ್ದಾರೆ ಎಂದು ದಿವಾಕರ್ ತಿಳಿಸಿದ್ದಾರೆ.
ವರದಿ: ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ.
ಕ್ರೀಡೆ
ಕೆಕೆಆರ್ ಗೆ ಆರ್ ಸಿಬಿ ಸವಾಲ್
ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡವು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆ ಇಂದು ಸೆಣಸಾಡಲಿದೆ.
ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮಿಗೆ ಮರಳಿರುವುದರಿಂದ ಮತ್ತು ಕ್ರಿಸ್ ಮರಿಶ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ಸಿ ಎಸ್ ಕೆ ವಿರುದ್ಧ 37 ರನ್ನುಗಳ ಜಯ ಪಡೆದಿರುವುದರಿಂದ ಇಂದೂ ಸಹ ಗೆಲುವಿನ ತವಕದಲ್ಲಿದೆ.
ಕ್ರೀಡೆ
ಐಪಿಎಲ್ ನಲ್ಲಿ ಎಂ.ಎಸ್ ಧೋನಿಯ ವಿಶೇಷ ದಾಖಲೆ
ಕೂಲ್ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯವಾಡಿದ ದಾಖಲೆಗೆ ಭಾಜನರಾಗಿದ್ದಾರೆ. ಧೋನಿ ಶುಕ್ರವಾರ ಸನ್ರೈಸರ್ಸ್ ತಂಡದ ವಿರುದ್ಧ ಹಾಡುವುದರೊಂದಿಗೆ ಸುರೇಶ್ ರೈನಾ ರವರ ದಾಖಲೆಯನ್ನು ಮುರಿದಿದ್ದಾರೆ.
ಪ್ರಸ್ತುತ ಟೂರ್ನಿಯಿಂದ ಹೊರಗುಳಿದಿರುವ ರೈನಾ 193 ಪಂದ್ಯಗಳನ್ನು ಆಡುವ ಮೂಲಕ ದಾಖಲೆಯನ್ನು ನಿರ್ಮಿಸಿದರು ಆದರೆ ಧೋನಿ 194 ಪಂದ್ಯಗಳನ್ನಾಡುವ ಮೂಲಕ ಅವರವರ ದಾಖಲೆಯನ್ನು ಮುರಿದಿದ್ದಾರೆ
ಕ್ರೀಡೆ
ಬೆಂಗಳೂರು ಬಿಡಲ್ಲ ಎಂದ ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದು ಹೋಗುವ ಯೋಚನೆಯನ್ನು ತಾವೆಂದಿಗೂ ಮಾಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ತಂಡದೊಂದಿಗೆ 12ವರ್ಷಗಳ ಪ್ರಯಾಣವು ಅಮೋಘವಾಗಿದೆ. ಲಕ್ಷಾಂತರ ಅಭಿಮಾನಿಗಳ ಪ್ರೀತಿ ಅಭಿಮಾನ ಗಳಿಸಿದ್ದೇವೆ, ಅನುಭವ ಅಮೂಲ್ಯವಾದದ್ದು, ಅತ್ಯಮೂಲ್ಯ ಎಂದು ಆರ್ಸಿಬಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದಲೂ ವಿರಾಟ್ ಆರ್ಸಿಬಿ ತಂಡದಲ್ಲಿದ್ದಾರೆ, ಕೆಲವು ವರ್ಷಗಳಿಂದ ತಂಡದ ನಾಯಕರಾಗಿದ್ದಾರೆ ಆರ್ಸಿಬಿಎಲ್ಲಿ ಮೊದಲಿನಿಂದಲೂ ಇರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದಾಗಿದೆ.
-
ಸುದ್ದಿ2 weeks ago
ಹೃದಯವಂತ ದಿ: ಹೊನ್ನಪ್ಪ ಮಳಸಿದ್ದಪ್ಪ ಮೇತ್ರಿ ಅವರ ದ್ವಿತೀಯ ಪುಣ್ಯಸ್ಮರಣೆ
-
ಸುದ್ದಿ2 weeks ago
28 ರ ಕರ್ನಾಟಕ ಬಂದ್ಗೆ ಪ್ರಜಾ ಸಂಘರ್ಷ ಸಮಿತಿ ಸಂಘಟನೆ ಬೆಂಬಲ; ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ
-
ಸುದ್ದಿ3 weeks ago
ಶಿಕ್ಷಕರಿಗೆ ಜೀವನ ಕೌಶಲ್ಯ ಕಾರ್ಯಗಾರ
-
ಸುದ್ದಿ4 weeks ago
ನಗರದಲ್ಲಿನ ವಿವಿಧ ಮಹನೀಯರ ಪ್ರತಿಮೆಗಳಿಗೆ ಪುಷ್ಪಾರ್ಚನೆ : ಕರ್ನಾಟಕ ಕ್ಷತ್ರಿಯ ಒಕ್ಕೂಟ