ಕ್ರೀಡೆ
ಐಪಿಎಲ್ : ಸುರೇಶ್ ರೈನಾ ಹಿಂದೆ ಸರಿದಿದ್ದಕ್ಕೆ ಅಸಲಿ ಕಾರಣ ಬಹಿರಂಗ
ನವದೆಹಲಿ: ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್ಸ್) ಆಲ್ ರೌಂಡರ್ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ರೈನಾ ಈ ಬಾರಿಯ ಐಪಿಎಲ್ನಲ್ಲಿ ಆಡುತ್ತಿಲ್ಲ ಎಂದಷ್ಟೇ ಸಿಎಸ್ಕೆ ಸಿಇಒ ಕೆಎಸ್ ವಿಶ್ವನಾಥನ್ ಹೇಳಿದ್ದರು. ಆದರೆ ರೈನಾ ಐಪಿಎಲ್ನಲ್ಲಿ ಆಡದಿರುವುದಕ್ಕೆ ನಿಜವಾದ ಕಾರಣ ಬಹಿರಂಗವಾಗಿದೆ.
ಜಾಗ್ರಣ್ ಡಾಕ್ ಕಾಮ್ ವರದಿಯ ಪ್ರಕಾರ, ಪಠಾಣ್ಕೋಟ್ನ ತಾರಿಯಲ್ ಗ್ರಾಮದಲ್ಲಿ ನಡೆದ ದಾಳಿಯಿಂದಾಗಿ ರೈನಾ ಸಂಬಂಧಿಕರೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ರೈನಾ ಮಾವ ಒಬ್ಬರು ಮೃತರಾಗಿದ್ದಾರೆ.
ಕುಟುಂಬದ ಸದಸ್ಯರು ತೊಂದರೆಯಲ್ಲಿರುವುದರಿಂದ ರೈನಾ ಐಪಿಎಲ್ ತ್ಯಜಿಸುವ ನಿರ್ಧಾರ ತಾಳಿದ್ದಾರೆ ಎಂದು ತಿಳಿದು ಬಂದಿದೆ.
ಕ್ರೀಡೆ
ವಿಶೇಷ ದಾಖಲೆಗೆ ಹೆಸರಾದ ಆರ್ಸಿಬಿ ಸೂಪರ್ ಸ್ಟಾರ್ ಎಬಿಡಿ
ಬೆಂಗಳೂರು ತಂಡದ ಸೂಪರ್ಸ್ಟಾರ್ ಎ.ಬಿ ಡಿವಿಲಿಯರ್ಸ್ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಸ್ಪೋಟಕ ಆಟದ ಜೊತೆಗೆ ಸ್ಥಿರ ಪ್ರದರ್ಶನಕ್ಕೆ ಮತ್ತು 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅತಿ ಹೆಚ್ಚು ಅರ್ಥ ಶತಕ ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
ಶನಿವಾರದಂದು ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 55 ರನ್ ಸಿಡಿಸಿ ಆರ್ಸಿಬಿ ರೋಚಕ ಜಯ ತಂದುಕೊಟ್ಟರು.
ಕ್ರೀಡೆ
ಬೆಂಗಳೂರಿಗೆ ಇಂದು ರಾಯಲ್ಸ್ ಸವಾಲು
ಗುರುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ತಂಡ ಇಂದು ಮಧ್ಯಾಹ್ನ ರಾಜಸ್ಥಾನ ರಾಯಲ್ಸ್ ಎದುರು ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಛಲದಲ್ಲಿದೆ.
ಮೊದಲ ಸುತ್ತಿನಲ್ಲೇ ರಾಜಸ್ಥಾನದ ಎದುರು ಜಯ ಗಳಿಸಿರುವ ಕೊಹ್ಲಿ ಪಡೆ ಈಗಲೂ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಕ್ರೀಡೆ
ಸಹನೆ ಕಳೆದುಕೊಳ್ಳುತ್ತಿರುವ ಕೂಲ್ ಕ್ಯಾಪ್ಟನ್
ಕೂಲ್ ಕ್ಯಾಪ್ಟನ್ ಎಂದೆ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಸಹನೆ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗುತ್ತಿದೆ. ಮಂಗಳವಾರದಂದು ನಡೆದ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆಯಲ್ಲಿ ಧೋನಿ ಅಂಪೈರ್ ವಿರುದ್ಧ ಸಿಟ್ಟಾದ ಪ್ರಸಂಗ ಕಂಡುಬಂದಿದೆ. ಕೂಲ್ ಕ್ಯಾಪ್ಟನ್ ಸಿಟ್ಟಿಗೆ ವಿಚಲಿತರಾದ ಅಂಪೈರ್ ಪೌಲ್ ರೈಫೆಲ್ ನೀಡಬೇಕಿದ್ದ ವೈಟ್ ಕೂಡ ನೀಡದೆ ಸುಮ್ಮನಾಗಿದ್ದಾರೆ. ಇದರಿಂದಾಗಿ ಮೊದಲ ಬಾಲ್ ನಲ್ಲೆ ಔಟ್ ಆದ ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅಸಮಾಧಾನ ಹೊರಹಾಕಿದರು.