Connect with us

ಸುದ್ದಿ

ಹಾಲಗೇರಾ ಗ್ರಾಮದ ರೈತರಿಗೆ ಎಕರೆಗೆ 30 ಸಾವಿರ ರೂ. ಬೆಳೆ ಪರಿಹಾರ ಕೊಡದಿದ್ದರೆ ಉಗ್ರ ಹೋರಾಟ

Published

on

ಯಾದಗಿರಿ: ಭೀಮಾನದಿಯ ಪ್ರವಾಹದಿಂದ ಯಾದಗಿರಿ ಜಿಲ್ಲೆಯ ಹಾಲಗೇರಾ ಗ್ರಾಮದಲ್ಲಿ ರೈತರು ಬೆಳೆದಿರುವ ಸುಮಾರು ಎಕರೆ ಹತ್ತಿ , ಭತ್ತದ ಬೆಳೆಗಳು ನಾಶವಾಗಿವೆ.
ರೈತರಿಗೆ ಒಂದು ಎಕರೆಗೆ 30 ಸಾವಿರ ರೂಪಾಯಿ ಬೆಳೆ ಪರಿಹಾರ ಕೊಡದಿದ್ದರೆ, ಪಕ್ಷದ ವತಿಯಿಂದ ಮತ್ತು ರೈತ ಮುಖಂಡರಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ ಹೋರಾಟ ಮಾಡುವ ಮುಂಚೆಯೇ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಆಗ್ರಹಿಸಿದರು.

ನಮ್ಮ ಜಿಲ್ಲೆಗೆ ಆಗಮಿಸಿದ ಕಂದಾಯ ಸಚಿವರು ಕೇವಲ ಹುರಸುಂಡಗಿ ಗ್ರಾಮವನ್ನು ನೋಡಿಕೊಂಡು ಗುಲ್ಬರ್ಗಕ್ಕೆ ಹೋಗಿದ್ದಾರೆ.ನಮ್ಮ ಭಾಗಕ್ಕೆ ಭೇಟಿ ಕೊಟ್ಟಿರುವುದಿಲ್ಲ. ಯಾದಗಿರಿ ಜಿಲ್ಲೆಯ ಹಾಲಗೇರಾ ಗ್ರಾಮದಲ್ಲಿ ಸುಮಾರು ಎಕರೆ ಬೆಳೆಯ ಭೂಮಿ ನೀರಿನಲ್ಲಿ ಮುಳುಗಿದೆ.ಒಂದು ಎಕರೆಗೆ 30 ಸಾವಿರ ರೂಪಾಯಿ ಪರಿಹಾರ ಕೊಟ್ಟರೆ ಮಾತ್ರ ರೈತರು ಬದುಕುತ್ತಾರೆ.ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ನಡೆಯುತ್ತವೆ.ಸರ್ಕಾರ ಎಚ್ಚೆತ್ತುಕೊಂಡು ರೈತರ ಬೆಳೆ ಸಮೀಕ್ಷೆ ಮಾಡಿ ಬೆಳೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ವರದಿ: ಬೀರಲಿಂಗಪ್ಪ.ಕಿಲ್ಲನಕೇರಾ
ಕುಸುಮಾ ನ್ಯೂಸ್ ಯಾದಗಿರಿ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಮಸ್ಕಿ ಚೆನ್ನಬಸವ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಿ- ವೆಂಕಟೇಶ್ ವಂದಾಲ

Published

on

ರಾಯಚೂರು ಅ.24- ಮಸ್ಕಿ ಹಳ್ಳಕ್ಕೆ ಕೊಚ್ಚಿ ಹೋದ ಚೆನ್ನಬಸವ ಮಡಿವಾಳ ಕುಟುಂಬಕ್ಕೆ ಕೂಡಲೇ ಸರಕಾರ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಭೋವಿ ವಡ್ಡರ ಯುಕರ ಸಂಘ ಜಿಲ್ಲಾ ಅಧ್ಯಕ್ಷರು ವೆಂಕಟೇಶ್ ವಂದಾಲ ಒತ್ತಾಯಿಸಿದರು.

ಕಳೆದ ಕೆಲವು ದಿನಗಳ ಹಿಂದೆ ಮಸ್ಕಿಯ ಹಿರೇಹಳ್ಳದಲ್ಲಿ ಪ್ರವಾದ ಹೊಂಡತಕ್ಕೆ ಕೊಚ್ಚಿ ಹೋದ ಚೆನ್ನಬಸವ ಮಡಿವಾಳ ಅವರನ್ನು ಸಂಬಂಧಿಸಿದ, ಅಧಿಕಾರಿಗಳು ಹಾಗೂ ಸಮಾಜದ ಮುಖಂಡರಗಳು ಸೇರಿ ಸತತ ಶೋಧ ಕಾರ್ಯ ನಡೆಸಿದರು. ಇಲ್ಲವರಿಗೂ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಬರಸಿಡಿಲು ಬಡದಂತಾಗಿದೆ.ಅವರು ಇಲ್ಲದೇ ಕುಟುಂಬದಲ್ಲಿ ನೀರವೆ ಮೌನ ಅವರಿಸಿದ್ದು, ಕೂಡಲೆ ಸರ್ಕಾರ ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡಬೇಕು ಹಾಗೂ ಚೆನ್ನಬಸವ ಮಡಿವಾಳ ಅವರ ಪತ್ತೆಗಾಗಿ ಜಿಲ್ಲಾ ಆಡಳಿತ ತೊರೆತಗತಿಯಲ್ಲಿ ಕಾರ್ಯಚರಣೆ ಮುಂದುವರಿಸಿ, ಅವರ ಪತ್ತೆಹಚ್ಚುವ ಮೂಲಕ ಅವರ ಕುಟುಂಬಕ್ಕೆ ನ್ಯಾಯಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ವರದಿ ದುರ್ಗೇಶ್ ಬೋವಿ ಮಸ್ಕಿ.

Continue Reading

ಸುದ್ದಿ

ದಸರಾ: ಕಳೆಗುಂದಿದ ಮಾರುಕಟ್ಟೆ- ಈರುಳ್ಳಿ ಗ್ರಾಹಕರಿಗೆ ಬೆಲೆ

Published

on

ರಾಯಚೂರು,ಅ.24– ಕಳೆದ ಆರುತಿಂಗಳಿಂದ ಕೊರೋನಾ ಮಹಾಮಾರಿ ದೇಶವ್ಯಾಪಿ ಹಬ್ಬಿದೆ. ಇದರಿಂದ ಸಾಕಷ್ಟು ಜನರು ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗಿಗಳಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಿಂಧೂಗಳ ಪವಿತ್ರ ಹಬ್ಬಗಳಲ್ಲೊಂದಾದ ದಸರಾ ಹಬ್ಬವು, ಸಾರ್ವಜನಿಕರು ಸಣ್ಣ ಪುಟ್ಟ ಉದ್ಯೋಗಗಳನ್ನು ಮಾಡಿಕೊಂಡು ಈ ಬಾರಿ ಸರಳವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ವಸ್ತುಗಳ ಬೆಲೆ ಗಗನ್ನಕ್ಕೇರಿದೆ. ಆದರೂ ದೃತಿಗೆಡದೆ ಸಾರ್ವಜನಿಕರು ಸಾಲ ಮಾಡಿ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮುಂದಾಗಿದ್ದಾರೆ.


ಪ್ರತಿವರ್ಷ ದಸರಾದಲ್ಲಿ ಜನರಿಂದ ತುಂಬಿ ಹೋಗುತ್ತಿದ್ದ ನಗರದ ಭಂಗಿ ಕುಂಟ, ಮಾರುಕಟ್ಟೆ ಬಜಾರ್‌ನಲ್ಲಿ ಕೊರೋನಾದಿಂದಾಗಿ ಜನತೆ ಕಳೆಗುಂದಿಂತಾಗಿದ್ದು, ನಿನ್ನೆಯೆ ದಸರಾ ಹಬ್ಬದ ಪೂಜಾ ಸಾಮಗ್ರಿ ಖರೀದಿಯಲ್ಲಿ ಕೊಂಚ ಹಿನ್ನಡೆಯಾದಂತಿದೆ.

ಮೂರು ದಿನಗಳಿಂದ ಖರೀದಿ ಕಾರ್ಯದಲ್ಲಿ ನಿರತರಾಗುತ್ತಿದ್ದ ಜನರು, ಕೊರೋನಾ ವೈರಸ್‌ನಿಂದ ಹೊರಬರಲು ಯೋಚಿಸುವಂತಾಗಿದ್ದು, ವ್ಯಾಪಾರ ಕಳೆಗುಂದಿದೆ. ಕಳೆದ ಬಾರಿಗಿಂತ ಈ ಬಾರಿ ಹಣ್ಣು ಹಂಪಲು, ಕುಂಭಳಕಾಯಿ, ಬಾಳೆದಿಂಬು, ಚೆಂಡು ಹೂ ಸೇರಿದಂತೆ ಇನ್ನಿತರ ಪೂಜಾ ಸಾಮಾಗ್ರಿಗಳ ದರ ಆಕಾಶಕ್ಕೆರಿದೆ.

ಕೊರೋನಾ ವೈರಸ್‌ನಿಂದ ಜನರು ಖರೀದಿಗೆ ಹೊರ ಬರುತ್ತಿಲ್ಲ. ಹಬ್ಬವನ್ನು ಸರಳವಾಗಿ ಆಚರಿಸಲು ಇಷ್ಟ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಭಾರಿ ಮಳೆಯಿಂದಾಗಿ ರೈತರ ಬೆಳೆಗಳೆಲ್ಲ ಸಂಪೂರ್ಣ ಜಲಾವೃತವಾಗಿ ನಾಶವಾಗಿವೆ. ಆದ್ದರಿಂದ ಉಳಿದ ಸ್ವಲ್ಪ ಪ್ರಮಾಣದ ತರಕಾರಿ, ಹಣ್ಣು ಹಂಪಲು, ಹೂ ಸೇರಿದಂತೆ ಇನ್ನಿತರ ವಸ್ತುಗಳು ಆಗಮಿಸಿವೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪ್ರತಿನಿಧಿಯಿಂದ ಮಾತನಾಡಿಸಿದಾಗ ವ್ಯಾಪಾರಿಯೊಬ್ಬರು
ಈರುಳ್ಳಿಬೆಲೆ ಮಾತ್ರ ಗಗಕ್ಕೇರಿದೆ. 1 ಕೆಜಿ ಈರುಳ್ಳಿ 50 ರೂ. ರಿಂದ 100. ರೂ. ತನಕ ಇದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರನ್ನು ವಿಚಾರಿಸಿದಾಗ ಕೊರೋನಾ ವೈರಸ್‌ನಿಂದ ಹೊರಬರಲು ಭಯವಾಗುತ್ತಿದೆ. ಆದರೆ ಕೆಲ ಜನರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವ್ಯಾಪಾರದಲ್ಲಿ ನಿರತರಾಗಿದ್ದು, ಇವರಿಗೆ ಕೊರೋನಾ ಅರಿವಿದೆಯ ಎಂಬ ಪ್ರಶ್ನೆ ಮೂಡುತ್ತಿದೆ. ದರಗಳು ಹೆಚ್ಚು ಕಡಿಮೆಯಾದರೂ ಹಬ್ಬದಂಗವಾಗಿ ಖರೀದಿಸಬೇಕಾದ ಅನಿವಾರ್ಯತೆ ಮೂಡಿದೆ ಎಂದರು.

ವರದಿ ದುರ್ಗೇಶ್ ಬೋವಿ ಮಸ್ಕಿ.

Continue Reading

ಸುದ್ದಿ

ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಕಾರ್ಯಕರ್ತರೊಂದಿಗೆ ಸಭೆ

Published

on

ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಮೇಶ್ ಬಾಬು ಅವರು ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು

ಪದವೀಧರ ನಿರುದ್ಯೋಗಿಗಳ ಹಾಗೂ ಸೇವಾ ಭದ್ರತೆ ಇಲ್ಲದೆ ಖಾಸಗಿ ಮತ್ತು ಅನುದಾನರಹಿತ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲು ನಾನು ಸದಾ ಸಿದ್ಧನಿದ್ದೆನೆ.ಅವರ ಕಷ್ಟಗಳಿಗೆ ಸ್ಪಂದಿಸಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ವಿದ್ಯಾವಂತ ಯುವ ಸಮುದಾಯ ಮತ ನೀಡಿ ಕ್ಷೇತ್ರದ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಶ್ರಮಿಸುತ್ತೇನೆ ಎಂದರು

ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15 ತಿಂಗಳ ಅಲ್ಪ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಿ 5 ಕೋಟಿ ಅನುದಾನದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವ ನನಗೆ ನಿರುದ್ಯೋಗಿ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿಕೊಡ ಬೇಕೆಂದು ಆಗ್ನೇಯ ಪದವೀಧರ ಕ್ಷೇತ್ರದ ಆಭ್ಯರ್ಥಿ ರಮೇಶ್‌ ಬಾಬು ಮನವಿ ಮಾಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮತಯಾಚನೆ ಮಾಡಿ ನಂತರ ಮಾತನಾಡಿ, ಕಳೆದ ಶಿಕ್ಷಕರ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ನನಗೆ ಮತ ನೀಡಿ ಆಯ್ಕೆ ಮಾಡಿದ್ದ ಸಂದರ್ಭದಲ್ಲಿ ಕೇವಲ 15 ತಿಂಗಳ ಅವಧಿಯಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳೊಂದಿಗೆ 6ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಅನ್ಯಾಯ ವಾಗದಂತೆ ಎಲ್ಲಾ ಶಿಕ್ಷಕರಿಗೂ ಲಾಭದಾಯಕವಾದ ವೇತನ ಶ್ರೇಣಿ ನಿಗದಿಗೆ ಶ್ರಮಿಸಿದ್ದೇನೆ .

ಪಿಯು ಪ್ರಾಂಶುಪಾಲರಿಗೆ ಕಳೆದ 50 ವರ್ಷಗಳಿಂದ ನಿವಾರಣೆಯಾಗದೆ ನನೆಗುಂದಿಗೆ ಬಿದ್ದಿದ್ದ ವೇತನ ಶ್ರೇಣಿಯನ್ನು ನಿಗದಿ ಮಾಡಿಸಲು ಸತತ ಪ್ರಯತ್ನಪಟ್ಟು ಫಲ ಸಿಕ್ಕಿದೆ ಸಾಮಾಜಿಕ ಕಾಳಜಿ ಹೊಂದಿರುವಂಥಹ ವ್ಯಕ್ತಿಗಳನ್ನು ವಿದ್ಯಾವಂತರಾದ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ .

ಎಲ್ಲಾ ಪದವೀಧರರನ್ನು ಹಾಗೂ ನಿರುದ್ಯೋಗಿ ಪದವೀಧರರನ್ನು ಸಂಪಿರ್ಕಿಸಿ ಅವರಕುಂದು-ಕೊರತೆ ಸಮಸ್ಯೆಯನ್ನು ಅರಿತಿದ್ದು ಈ ಕಾರಣದಿಂದಾಗಿ ಆಗ್ನೇಯಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದು ನನನ್ನು ಆಯ್ಕೆ ಮಾಡಿದಲ್ಲಿ ಹಂತಹಂತವಾಗಿ ಪ್ರಮಾಣಿಕ ಪ್ರಯತ್ನ ಮಾಡಿ ಪದವೀಧರರ ಹಾಗೂ ಶಿಕ್ಷಣ ಕ್ಷೇತ್ರದ ಎಲ್ಲಾ ವರ್ಗದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕಾಲ ಸನ್ನಿಧಿ ಆಗಿದೆ
ದಿನೇದಿನೇ ಯುವಪೀಳಿಗೆ ಹೆಚ್ಚುತ್ತಾ ಹೋದಂತೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ .

ಕಳದ ನನ್ನ ಅಧಿಕಾರ ಅವಧಿಯಲ್ಲಿ ನನ್ನ 2 ಕೋಟಿ ಅನುದಾನದೊಂದಿಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಯೋಜನಾ ಮಂತ್ರಿಗಳಾ ಗಿದ್ದ ಎಂ.ಆರ್‌.ಸೀತಾರಂ ಅವರ 1 ಕೋಟಿ ಸೇರಿದಂತೆ ಒಟ್ಟು 5 ಕೋಟಿ ರೂಗಳನ್ನುಹಾಗೂಕೇಂದ್ರ ಸರ್ಕಾರದಿಂದ ಸರ್ಕಾರಿಶಾಲೆಗಳ ಅಭಿವೃದ್ಧಿಗಾಗಿ 12 ಕೋಟಿ ರೂಗಳನ್ನು ಕ್ಷೇತ್ರದ 33 ತಾಲೂಕುಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೇನೆ ಎಂದು ತಿಳಿಸಿದರು.

ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಪ್ರಥಮ ಪ್ರಾಶಸ್ತ್ಯ ನೀಡಿ ಮತ ನೀಡುವ ಮೂಲಕ ನಿಮ್ಮ ಸೇವಕನಾಗುವ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು

ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಎಂ ಮುನಿಯಪ್ಪ ಮಾತನಾಡಿ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಮೇಶ್‌ಬಾಬು ಅವರು ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಥಮ ಬಾರಿಗೆ ಧ್ವನಿ ಎತ್ತಿದ ಇವರು ಸಾಮಾಜಿಕ ಕಳಕಳಿ ವ್ಯಕ್ತಿತ್ವ ಒಂದಿದ್ದದ್ದು
ಕಾಂಗ್ರೆಸ್ ಪಕ್ಷದ ಒಮ್ಮತದ ಆಭ್ಯರ್ಥಿಯಾಗಿ ಪ್ರಾಮಾಣಿಕ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರು ಪದವೀಧರ ಸಮಸ್ಯೆಗೆ ಸಕಾರತ್ಮಾಕವಾಗಿ ಸ್ಪಂದಿಸುವ ಗುಣವಿದೆ.

ಬಿಜೆಪಿ ಸರಕಾರ ಚುನಾವಣೆ ಪೂರ್ವದಲ್ಲಿ ಸುಳ್ಳು ಭರವಸೆ ಗಳನ್ನು ಕೊಡುವುದರಲ್ಲಿ ನಿಸ್ಸೀಮರು ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ವಿಫ ಲವಾಯಿತು ಲಕ್ಷಾಂತರ ಪದವೀಧರರು ಕೆಲಸವಿಲ್ಲದೆ ಮನೆಯಲ್ಲಿ ರುವಂತಾಗಿದೆ ಬಿಜೆಪಿಯವರು ಸುಳ್ಳು ಭರವಸೆಗಳನ್ನು ನೀಡಿ ಯುವಕರನ್ನ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಾರೆ ಇವರ ಮಾತುಗಳಿಗೆ ಮರುಳಾಗಬೇಡಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಮೇಶ್ ಬಾಬು ಪದವೀಧರರ ಪರ ಕೆಲಸ ಮಾಡುವ ಶಕ್ತಿ ಇದೆ     ಸರ್ಕಾರದ ಮಟ್ಟದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ನಿರುದ್ಯೋಗ ಪದವಿದಾರರ ಹಾಗೂ ಶಿಕ್ಷಕರ ಸಂಕಷ್ಟಗಳ ಬಗ್ಗೆ ಹೆಚ್ಚಿನ ಗಮನ ಹರಿಸುವರು   ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಒಟ್ಟು 2444 ಮತದಾರ ಬಂಧುಗಳು ರಮೇಶ್ ಬಾಬು ಅವರಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಹೆಚ್ಚು ಮತಗಳನ್ನು ಗಳಿಸುವಂತೆ ಕಾರ್ಯೋನ್ಮುಖರಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು 

ಈ ಸಂರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ತೋಪಡ ನಾಗರಾಜ್, ಕಾಂಗ್ರೆಸ್ ಹಿರಿಯ ಮುಖಂಡ ಟಿ ಕೆ ನಟರಾಜ್, ಕೆ.ಪಿ.ಸಿ.ಸಿ ಸದಸ್ಯ ಶ್ರಿನಿವಾಸ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಲ್ ಮಧುಸೂದನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ಸಾದಿಕ್ ದಿಬ್ಬೂರಹಳ್ಳಿ ಡಿ.ಎಸ್ ಎಸ್ ರಾಜು, ಎನ್ .ಎಸ್ .ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ನಗರಸಭಾ ಸದಸ್ಯರಾದ ಮಂಜುನಾಥ್ ವಕೀಲ ಮುನಿರಾಜು, ಕೃಷ್ಣಮೂರ್ತಿ. ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ಇಂತಿಯಾಜ್ ಪಾಷ.ಮುಖಂಡ ಮುಸ್ತು. ಟ್ರ್ಯಾಕ್ಟರ್ ಮಂಜುನಾಥ್,ದೊಡ್ಡ ದಾಸರಹಳ್ಳಿ ದೇವರಾಜು ಮುಂತಾದವರು ಹಾಜರಿದ್ದರು

ವರದಿ. ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್