ಸುದ್ದಿ
ರಸ್ತೆ ದುರಸ್ತಿ ಗೊಂದಲ ಸೃಷ್ಟಿ – ಆತಂಕ ಬೇಡ ಡಾ. ಶಿವರಾಜ್ ಪಟೇಲ್
ರಾಯಚೂರು.ಅ.18- ನಗರದ ರಸ್ತೆಗಳಿಗೆ ಸಂಬಂಧಿಸಿ ಕೆಲವೊಂದು ಮಾಧ್ಯಮಗಳು ಅದನ್ನು ದೊಡ್ಡದು ಮಾಡಿ, ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಈ ಮಾಧ್ಯಮಗಳು ವಿರೋಧ ಪಕ್ಷದವರ ಕೈಗೆ ತಮ್ಮ ಹೇಳಿಕೆ ಕೊಟ್ಟಿವೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದ್ದಾರೆ.
ಇಂದು ಉಪ್ಪಾರ ಸಮಾಜದ ಸಮುದಾಯ ಭವನ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ನಗರದ ಜನರಿಗೆ ಹೇಳೋದು ಒಂದೇ ಇದೆ. ನಗರದ ಎಲ್ಲಾ ಮುಖ್ಯರಸ್ತೆಗಳಿಗೆ ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ. ಈ ವಿಷಯ ಅನೇಕ ಸಲ ಹೇಳಿದ್ದೇನೆ. ಆದರೆ, ಕೆಲ ಮಾಧ್ಯಮಗಳು ಅದನ್ನು ದೊಡ್ಡದು ಮಾಡಿ, ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಅವು ವಿರೋಧ ಪಕ್ಷದ ಕೈಗೆ ತಮ್ಮ ಹೇಳಿಕೆ ಕೊಟ್ಟಿದ್ದಾರೆಂದು ದೂರಿದರು. ಈ ಹಿನ್ನೆಲೆಯಲ್ಲಿ ಯಾರು ಆತಂಕ ಪಡುವುದು ಬೇಡ. ಮಳೆ ಅ.21-25 ರವರೆಗೆ ಮುಂದುವರೆಯುವ ಸೂಚನೆ ಹವಮಾನ ಇಲಾಖೆಯಿಂದ ನೀಡಿದೆ.
ಹೀಗಾಗಿ ಮಳೆ ನಿಂತ ಮೇಲೆ ಎಲ್ಲಾ ರಸ್ತೆಗಳು ದುರಸ್ತಿ ಮಾಡುವ ಬದ್ಧತೆ ನನ್ನದು ಎಂದು ಹೇಳಿದರು. ಉಪ್ಪಾರ ಸಮಾಜಕ್ಕೆ ಸುಂದರವಾದ ಸಮುದಾಯ ಭವನ ನಿರ್ಮಾಣಕ್ಕೆ ಬೇಡಿಕೆ ಮಂಡಿಸಿದ್ದರು. ಈ ಸಮುದಾಯ ಭವನಕ್ಕೆ ಮೊದಲನೇ ಕಂತಾಗಿ 50 ಲಕ್ಷ ಮಂಜೂರಾತಿ ಮಾಡಲಾಗಿದೆ. 25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ಕಾಮಗಾರಿವರೆಗೂ ಇನ್ನೂ 25 ಲಕ್ಷ ಅನುದಾನ ನೀಡಿದ ಯೋಜನೆಯಂತೆ ಭವನವನ್ನು ನಿರ್ಮಿಸಲಾಗುತ್ತದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಸಮಾಜದ ಮುಖಂಡರಾದ ವೆಂಕೋಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಚಾಲಕರ ವೇತನದಿಂದ ದಂಡದ ಮೊತ್ತ ವಸೂಲಿ
ಬೆಂಗಳೂರು : ಸಂಚಾರ ನಿಯಮ ಉಲ್ಲಂಘಿಸುವ ಬಸ್ ಚಾಲಕರ ವೇತನದಿಂದ ದಂಡದ ಮೊತ್ತವನ್ನು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗಿಯ ಸಂಚಾರ ಅಧಿಕಾರಿಗಳ ಸಭೆಯಲ್ಲಿ ದಂಡದ ಮೊತ್ತ ಪಾವತಿ ಕುರಿತು ಚರ್ಚೆ ಮಾಡಲಾಯಿತು.
ಸುದ್ದಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು ಮನವಿ
ಅತ್ಕೂರು ಗ್ರಾ.ಪಂ: ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಸ್ಥಾನ ಮುಂದುವರೆಸಲು- ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಮನವಿ.
ರಾಯಚೂರು.ಅ.23: ಅತ್ಕೂರು ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರೆಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಅತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಎರಡು ಮೀಸಲು ಸ್ಥಾನಗಳು ನಿಗದಿಗೊಳಿಸಲಾಗಿತ್ತು. ಆದರೆ ಒಂದು ಸ್ಥಾನವನ್ನು ಸರ್ಜಾಪುರು ಗ್ರಾಮಕ್ಕೆ ನಿಗದಿಗೊಳಿಸಲಾಗಿದೆ. ಸರ್ಜಾಪುರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 100 ಜನರಿಗಿಂತ ಕಡಿಮೆ. ಆದರೆ ಅತ್ಕೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದವರು 1400 ಕಿಂತ ಜಾಸ್ತಿ. ಆದಕಾರಣ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಸ್ಥಾನಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅಬ್ರಹಾಂ ಕಮಲಾಪೂರು, ಆಂಜನೇಯ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಕಲ್ಲು ಚಪ್ಪಡಿ ಬಿದ್ದು ತಂದೆ, ಮಗ ಸಾವು
ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿ: ಬೆಂಗಳೂರು ರಸ್ತೆಯಲ್ಲಿರು ವೈಜಕೂರು ಗ್ರಾಮದಲ್ಲಿ ಕಲ್ಲು ಚಪ್ಪಡಿಯ ಮನೆಯೊಂದು ಕುಸಿದುಬಿದ್ದು ಮನೆಯಲ್ಲಿದ್ದ ನಾಲ್ವರ ಪೈಕಿ ತಂದೆ ಮಗ ಸಾವನ್ನಪ್ಪಿದ್ದು ಇನ್ನಿಬ್ಬರು ತಾಯಿ ಮಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗಿನ ಜಾವ ಸುಮಾರು ೬-೩೦ ಗಂಟೆ ಸಮಯದಲ್ಲಿ ನಡೆದಿದೆ.
ಕಲ್ಲುಚಪ್ಪಡಿ ಕೆಳೆಗೆ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿರುವವರನ್ನು ವೈಜಕೂರು ಗ್ರಾಮದ ನಿವಾಸಿ ಕೈವಾರದಲ್ಲಿ ಪೋಸ್ಟ್ ಮೆನ್ ಆಗಿ ಕೆಲಸ ನಿರ್ವಸುತ್ತಿದ್ದ ರವಿಕುಮಾರ್ (೪೦) ಮತ್ತು ಆತನ ಮಗ ರಾಹುಲ್ (೧೨) ಎಂದು ಗುರುತಿಲಾಗಿದ್ದು, ಗಾಯಗೊಂಡ ಮಹಿಳೆಯನ್ನು ರವಿಕುಮಾರ್ ಪತ್ನಿ ಅಂಗ ನವಾಡಿ ಶಿಕ್ಷಕಿ ರಾಧಮ್ಮ (೩೫) ಮತ್ತು ರುಚಿತಾ (೧೪) ವರ್ಷದ ಹುಡುಗಿ ಎಂದು ಗುರುತಿಸಲಾಗಿದೆ.
ಇನ್ನು ಗಾಯಗೊಂಡವರನ್ನು ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಕೃಷ್ಣಾರೆಡ್ಡಿ ಮತ್ತು ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ವರದಿ : ಕೆ.ಮಂಜುನಾಥ್ ಶಿಡ್ಲಘಟ್ಟ