ಸುದ್ದಿ
ಕೊರೊನಾ ಆತಂಕ : ಚುನಾವಣಾ ಸಿಬ್ಬಂದಿಗೆ ಪಿಪಿಇ ಕಿಟ್ – ಮಧ್ಯಾಹ್ನ ಹೊತ್ತಿಗೆ ಶೇ.50 ರಷ್ಟು ಮತದಾನ
ಈಶಾನ್ಯ ಶಿಕ್ಷಕರ ಕ್ಷೇತ್ರ : ಶಾಂತಿಯುತ ಕೆಲವೆಡೆ ಮಂದ – ಬಿರುಸು ಮತದಾನ
ರಾಯಚೂರು.ಅ.28- ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಾದ್ಯಂತ ಅತ್ಯಂತ ಉರುಪಿನಿಂದ ಮತದಾನ ನಡೆಯಿತು.
ಕೊರೊನಾ ಮಹಾಮಾರಿಯ ಭೀತಿಯ ಮಧ್ಯೆ ಈ ಚುನಾವಣೆಯನ್ನು ಎಲ್ಲೆಡೆ ಮುಂಜಾಗ್ರತಾ ಕ್ರಮಗಳೊಂದಿಗೆ ನಿರ್ವಹಿಸಲಾಯಿತು. ಕೊರೊನಾ ಆತಂಕ ಮತ್ತು ಚುನಾವಣೆಯ ಅಕ್ರಮ ಮುಕ್ತವಾಗಿ ಅತ್ಯಂತ ಶಾಂತಿ ಸುವ್ಯವಸ್ಥೆಯೊಂದಿಗೆ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ನಡೆಯಿತು. ಒಟ್ಟು 3528 ಮತದಾರರು ಜಿಲ್ಲೆಯಲ್ಲಿದ್ದು, 2423 ಪುರುಷರು ಮತ್ತು 1104 ಮಹಿಳಾ ಮತದಾರರನ್ನು ಈ ಕ್ಷೇತ್ರ ಹೊಂದಿದೆ.
ಮತದಾನಕ್ಕಾಗಿ ಒಟ್ಟು ಐವರು ಈ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಹಾಲಿ ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶಿಲ್ ಜೀ ನಮೋಶಿ, ಜಾದಳ ಪಕ್ಷದಿಂದ ತಿಮ್ಮಯ್ಯ ಪುರ್ಲೆ, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ ಹಾಗೂ ಪಕ್ಷೇತರರಾಗಿ ಡಾ.ಚಂದ್ರಕಾಂತ ಸಿಂಗೆ ಅವರು ಕಣದಲ್ಲಿದ್ದರು.
ಕೊರೊನಾ ಭೀತಿ ಮತದಾನದ ಮೇಲೆ ಯಾವುದೇ ಪರಿಣಾಮ ಬೀರದಿರಲೆಂಬ ಉದ್ದೇಶದಿಂದ ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ರಾಯಚೂರು ನಲ್ಲಿ ಒಟ್ಟು 5 ಕೇಂದ್ರಗಳನ್ನು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ರಾಯಚೂರು 5, ಮತಗಟ್ಟೆಗಳು ಸೇರಿದಂತೆ ಎಲ್ಲೆಡೆಯೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಮತದಾನಕ್ಕಾಗಿ ಆಗಮಿಸುವವರಿಗೆ ಕೊರೊನಾದ ಯಾವುದೇ ಸೋಂಕು ಹರಡದಂತೆ ತಡೆಯಲು ಅನೇಕ ಕಡೆ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲದೇ, ಮತದಾನಕ್ಕಾಗಿ ಬರುವವರಿಗೆ ಕನಿಷ್ಟ ದೂರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ ಮತದಾನ ನಿಧಾನಕ್ಕೆ ನಡೆದರು, ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣ ತೀವ್ರಗೊಂಡು 12 ಗಂಟೆಗೆ ಜಿಲ್ಲೆಯಲ್ಲಿ ಶೇ.41 ರಷ್ಟು ಮತದಾನ ಪೂರ್ಣಗೊಂಡಿತು. ರಾಜಕೀಯ ಪಕ್ಷಗಳು ಮತಗಟ್ಟೆಗಳ ಅಕ್ಕಪಕ್ಕದಲ್ಲಿ ಟೆಂಟ್ ಹಾಕಿ ಕುಳಿತುಕೊಂಡಿದ್ದರು. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳ ಬಗ್ಗೆ ವರದಿಯಾಗಿಲ್ಲ. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶ ಕುಮಾರ ಅನೇಕ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿ ಗತಿ ಪರಿಶೀಲಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಮತದಾನಕ್ಕೆ ಹೆಚ್ಚಿನ ಶಿಕ್ಷಕರು ಗೈರು ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಶಿಕ್ಷಕರು ಮತದಾನ ಹಾಕಿ ಸೆಲ್ಫಿ ತೆಗೆದುಕೊಳ್ಳುವುದನ್ನು ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಗಮನ ಸೆಳೆಯಿತು. ಆದರೆ, ಆಯಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಮತ್ತು ಮತದಾನಕ್ಕೆ ಹೆಚ್ಚಿನ ಜನರನ್ನು ಕರೆತರುವ ಪ್ರಯತ್ನದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಶೇ.69 ರಷ್ಟು ಮತದಾನ ಪೂರ್ಣಗೊಂಡಿತು. ಈ ಮತದಾನದ ತೀವ್ರತೆ ಗಮನಿಸಿದರೇ, ಶೇ.75 ಕ್ಕೂ ಅಧಿಕ ಮತದಾನ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಎಲ್ಲಿಯೂ ಸಹ ಯಾವುದೇ ಅಹಿತಕರ ಘಟನೆಯ ಮಾಹಿತಿ ದೊರೆಯಲಿಲ್ಲ.
ಮತದಾನ ಕೇಂದ್ರದಿಂದ ಎಲ್ಲರೂ ನಿರ್ದಿಷ್ಟ ಅಡಿಗಳವರೆಗೂ ನಿಷೇಧವೇರಿದ್ದರಿಂದ ರಾಜಕೀಯ ಪಕ್ಷಗಳು ನಿಷೇಧಿತ ಪ್ರದೇಶದಿಂದಲೇ ದೂರ ಉಳಿದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
ಎಲ್ಲಾ ಮತಗಟ್ಟೆಗಳಲ್ಲೂ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವರದಿ : ದುರ್ಗೇಶ್ ಬೋವಿ ಮಸ್ಕಿ
ಸುದ್ದಿ
ಸೋಮನಾಥಪುರ ಗ್ರಾ.ಪಂ.ಅಧ್ಯಕ್ಷರಾಗಿ ರತ್ನಮ್ಮ ,ಉಪಾಧ್ಯಕ್ಷರಾಗಿ ಬಿ.ಎನ್.ಈಶ್ವರಮ್ಮ ಆಯ್ಕೆ
ಬಾಗೇಪಲ್ಲಿ: ತಾಲ್ಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ರತ್ನಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಈಶ್ವರಮ್ಮ. ಬಿ.ಎನ್ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಆವರಣದಲ್ಲಿ ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ)ಕ್ಕೆ ಮೀಸಲಾಗಿತ್ತು.
ಸೋಮನಾಥಪುರ ಒಟ್ಟು 16 ಸದಸ್ಯರು ಇದ್ದು
ಅದ್ಯಕ್ಷ ಸ್ಥಾನಕ್ಕೆ ರತ್ನಮ್ಮ ಅವರು 8 ಮತ ಪಡೆದರೆ, ಪ್ರತಿಸ್ಪರ್ಧಿ 7 ಮತಗಳನ್ನು ಪಡೆದು ಒಂದು ಮತ ಅಮಾನ್ಯವಾಗಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿ.ಎನ್.ಈಶ್ವರಮ್ಮ 9 ಮತ ಹಾಗೂ ಪ್ರತಿಸ್ಪರ್ಧಿ7 ಮತ ಪಡೆದರು. ಕೊನೆಯ ಘಳಿಗೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ಮಹಿಳೆ ರತ್ನಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಬಿ.ಎನ್.ಈಶ್ವರಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳಾದ ಡಾ.ನೊವೇಶ್ ಕುಮಾರ್ ಉಪ ಚುನಾವಣೆ ಅಧಿಕಾರಿಗಳಾದ ಶಿವಪ್ಪ ರವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ರಾಚವಾರಿಪಲ್ಲಿ ಕೃಷ್ಣಾರೆಡ್ಡಿ, ಸೀಮನ್ನಗಾರಿಪಲ್ಲಿ ಉತ್ತರೆಡ್ಡಿ, ಎಂ.ವಿ.ರಮಣ ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿ
ಕಲಾವಿದ ಅಯ್ಯಪ್ಪ ಬಡಿಗೇರ ಇವರಿಂದ ಜನಪದ ಕಾರ್ಯಕ್ರಮ
ಕುಷ್ಟಗಿಯ ಶಾಖಾಪೂರ ರಸ್ತೆಯ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ನೆಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಶ್ರೀ ಮಂಜುನಾಥ ಗ್ರಾಮೀಣ ವಿವಿದೋದ್ಧೇಶಗಳ ಅಭಿವೃದ್ಧಿ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ)ನೆರಬೆಂಚಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜನಪದ ಕಾರ್ಯಕ್ರಮವನ್ನು ಕಲಾವಿದ ಅಯ್ಯಪ್ಪ ಬಡಿಗೇರ ನೆಡೆಸಿಕೊಟ್ಟರು.
ಪುರಸಭೆ ಸದಸ್ಯೆ ಶ್ರೀಮತಿ ಮೋದನಬಿ ಹುಸನಸಾಬ ಯಲಬುರ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೋಹನಲಾಲ್ ಜೈನ್ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಕಾರ್ಯಮವನ್ನು ಕುರಿತು ಮಾತನಾಡಿ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಪ್ರೋತ್ಸಾಹಿಸುವಂತಹ ಪ್ರತಿಯೊಬ್ಬ ನಾಗರಿಕರಲ್ಲಿ ಬರಬೇಕಾಗಿದ್ದು ಕಲಾವಿದರು ತಮ್ಮ ಜೀವನಕ್ಕಾಗಿ ಅನೇಕ ಹಾಡುಗಳನ್ನು ಹಾಡುತ್ತ ಈ ದೇಶದ ಸಂಸ್ಕೃತಿಯನ್ನು ಉಳಿಸಲು ಮತ್ತು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಕಮ್ಮಾರ, ಸಿದ್ಧಪ್ಪ ಬಡಿಗೇರ, ಶರಣಪ್ಪ ಬನ್ನಿಗೊಳ, ಲಲಿತಮ್ಮ ಹಿರೇಮಠ, ಕಲಾವಿದರಾದ ಶೇಷಗಿರಿ ಸೋನಾರ,ಬಸವರಾಜ ಉಪ್ಪಲದಿನ್ನಿ, ಮಲ್ಲನಗೌಡ ಅಗಸಿಮುಂದಿನ್, ದೇವೇಂದ್ರಪ್ಪ ಬಡಿಗೇರ, ಪವಾಡೆಪ್ಪ ಚೌಡ್ಕಿ, ಕೊಳ್ಳಪ್ಪ ಬೂದ, ಶುಖಮುನಿ ಗಡಿಗಿ, ಈರಪ್ಪ ತೋಟದ, ಸಂಗಪ್ಪ ಬಡಿಗೇರ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.
ಸುದ್ದಿ
ಗ್ರಾನೈಟ್ ಕ್ವಾರಿ ಮಾಲೀಕರ ಪೂರ್ವಭಾವಿ ಸಭೆ
ಮಾನ್ಯ ಡಿ. ಎಸ್.ಪಿ ಗಂಗಾವತಿಯ ಶ್ರೀ ಆರ್. ಎಸ್. ಉಜ್ಜನಕೊಪ್ಪ ಸಾಹೇಬರ ನೇತೃತ್ವದಲ್ಲಿ ಗ್ರಾನೈಟ್ ಕ್ವಾರಿ ಮಾಲೀಕರ ಪೂರ್ವಭಾವಿ ಸಭೆ.
ಕುಷ್ಟಗಿ: ಕುಷ್ಟಗಿ ತಾಲ್ಲೂಕಿನಲ್ಲಿ ಬರುವಂತಹ ಎಲ್ಲಾ ಗ್ರಾನೈಟ್ ಕ್ವಾರಿಯ ಮಾಲೀಕರಿಗೆ ತಿಳಿಸುವುದೇನೆಂದರೆ ಇತ್ತೀಚೆಗೆ ಶಿವಮೊಗ್ಗ ಮತ್ತು ಇತರ ಕಡೆ ಜರುಗಿದ ಪ್ರಕರಣಗಳು ಹಾಗೂ ಪೋಲಿಸ್ ಅಧಿಕಾರಿಗಳು ಕಾನೂನು ಅಡಿಯಲ್ಲಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದರು.
*) ಗ್ರಾನೈಟ್ ಕ್ವಾರಿಗೆ ಸಂಬಂಧಿಸಿದಂತೆ ಎಲ್ಲಾ ಲೀಜ್ ಮೂಲ ದಾಖಲೆಗಳು ಮತ್ತು ಮೂಲ ದಾಖಲೆಯ 3 ಝರಾಕ್ಸ ಪ್ರತಿಗಳು, ಅಥವಾ ಲೈಸನ್ಸ್ ಪ್ರತಿಗಳು. ಅಥವಾ ಪಹಣಿ ಪತ್ರಿಕೆಗಳು.
*) ಒಂದು ವೇಳೆ ಬ್ಲಾಸ್ಟಿಂಗ್ ಅನುಮತಿ ಇದ್ದರೆ ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳು.
*) ಸಪ್ಲೈ ಲೈಸನ್ಸ್ ಪ್ರತಿಗಳು.
*) ಮೈನ್ಸ್ ಮ್ಯಾನೇಜರ್ ಸರ್ಟಫಿಕೇಟ್ ಪ್ರತಿ.
*) ಮೈನ್ಸ್ ಪೋರಮನ್ ಸರ್ಟಫಿಕೇಟ್ ಪ್ರತಿ.
*) ಬ್ಲಾಸ್ಟರ್ ಸರ್ಟಿಫಿಕೇಟ್ ಪ್ರತಿ.
*) ಕ್ಯಾಟರ್ಲಿ ರಿಟರ್ನ್ ಕಾಫಿ ಮತ್ತು ಇತರೆ ಯಾವುದಾದರೂ ದಾಖಲಾತಿಗಳು.
*) ಸುರಕ್ಷತಾ ಕ್ರಮ ಕೈಗೊಂಡ ದಾಖಲಾತಿಗಳು.
ಈ ಸಂದರ್ಭದಲ್ಲಿ ಕುಷ್ಟಗಿಯ ಸಿ.ಪಿ.ಐ ಸಾಹೇಬರು ಶ್ರೀ ನಿಂಗಪ್ಪ ಎನ್. ಆರ್, ಕುಷ್ಟಗಿಯ ಪಿ.ಎಸ್.ಐ ತಿಮ್ಮಣ್ಣ ನಾಯಕ, ತಾವರಗೇರ ಪಿ.ಎಸ್.ಐ ಗೀತಾಂಜಲಿ ಸಿಂಧೆ, ಹಾಗೂ ಹನಮಸಾಗರ ಪಿ.ಎಸ.ಐ ಅಶೋಕ ಬೇವೂರು, ಹಾಗೂ ಕುಷ್ಟಗಿ ತಾಲ್ಲೂಕಿನ ಎಲ್ಲಾ ಗ್ರಾನೈಟ್ ಕ್ವಾರಿಯ ಮಾಲೀಕರು ಇದ್ದರು.