Politics
ಡಿಸೆಂಬರ್ 3, 4 ರಂದು ದೇಶದ ಕೃಷಿ ಬಿಕ್ಕಟ್ಟು ಕುರಿತು ದುಂಡು ಮೇಜಿನ ಸಭೆ
ಡಿಸೆಂಬರ್ 3, 4 ರಂದು ದೇಶದ ಕೃಷಿ ಬಿಕ್ಕಟ್ಟು ಕುರಿತು ದುಂಡು ಮೇಜಿನ ಸಭೆ 14 ಜನರಿಂದ ವಿಷಯ ಮಂಡನೆ- ರಾಘವೇಂದ್ರ ಕುಷ್ಟಗಿ.
ರಾಯಚೂರು ಡಿ. 01- ಭಾರತದ ಕೃಷಿ ಬಿಕ್ಕಟ್ಟು ಕಾರಣ ಪರಿಣಾಮ ಮತ್ತು ಪರಿಹಾರ ವಿಷಯವಾಗಿ ಡಿಸೆಂಬರ್ 3 ಮತ್ತು 4ರಂದು ದುಂಡುಮೇಜಿನ ಸಭೆಯನ್ನು ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ರಾಘವೇಂದ್ರ ಕುಷ್ಟಗಿ ಹೇಳಿದರು.
ಅವರಿಂದ ಮಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿ ಜನಸಂಗ್ರಾಮ ಪರಿಷತ್ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯಲಿರುವ ಸಭೆಯನ್ನು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಹಿರೇಮಠ್ ಉದ್ಘಾಟಿಸಲಿದ್ದಾರೆ ಎಂದರು.
ಪಾರಂಪರಿಕ ಕೃಷಿಯ ಮೇಲೆ ನವ ಉದಾರೀಕರಣ ನೀತಿ ದುಷ್ಟ ಪರಿಣಾಮದ ಕುರಿತು ಡಾ. ಮಂಜುನಾಥ್, ಸಿ. ಯುತಿ ರಾಜ, ಚಾಮರಸ ಮಾಲಿ ಪಾಟೀಲ್ ವಿಷಯ ಮಂಡಿಸಲಿದ್ದಾರೆ ಎಂದರು.
2014 ರಿಂದ 2020 ರವರೆಗೆ ಜಾರಿಯಾದ ಕೃಷಿ ಕಾನೂನು ಗಳ ವಿವರ ಮತ್ತು ಮೌಲ್ಯಮಾಪನ ವಿಷಯವಾಗಿ ಪತ್ರಕರ್ತ ಶಿವ ಸುಂದರ, ಸಿ. ಯತಿರಾಜ, ಎಸ್. ಆರ್. ಹಿರೇಮಠ ವಿಷಯ ಮಂಡಲಿಸಲಿದ್ದಾರೆ ಎಂದರು.
ನಂತರ ಮಾತನಾಡಿದ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ ದೇಶದ ರೈತರ ಕೃಷಿ ಬಿಕ್ಕಟ್ಟಿನ ಸವಾಲುಗಳನ್ನು ಸರಕಾರಕ್ಕೆ ತಿಳಿಸಲು ದೆಹಲಿಗೆ ಬಂದರೆ ರೈತರ ಮೇಲೆ ಆಶ್ರಯ ವಾಯ, ಜಲ ಪಿರಂಗಿ, ತಿಳಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಭಾವನೆಗಳನ್ನು ಆಲಿಸಬೇಕಾದ ದೇಶದ ಪ್ರಧಾನಿ ವಾರಣಾಸಿಗೆ ಹೋಗಿ ದೇವ ದೀಪಾವಳಿಯಲ್ಲಿ ಭಾಗವಹಿಸಲು ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ರೈತರ ಬಗ್ಗೆ ಕನಿಷ್ಠ ಜವಾಬ್ದಾರಿಯಿಲ್ಲದಂತಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ತಾಯಣ್ಣ, ಖಾಜಾ ಅಸ್ಲಂ ಪಾಷ, ಸೇರಿದಂತೆ ಇನ್ನಿತರರು ಇದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
Politics
ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ
ಶಿಡ್ಲಘಟ್ಟ : ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಈಗಾಗಲೇ 1.2 ಲಕ್ಷ ಕ್ಕಿಂತ ಹೆಚ್ಚು ಆದಾಯ ಹೊಂದಿರುವವರ ಪಡಿತರ ಚೀಟಿ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಮಾರ್ಚ್ ಅಂತ್ಯದೊಳಗೆ ಅಂತಹವರು ಸ್ವಯಂ ಪ್ರೇರಿತರಾಗಿ ಪಡಿತರ ಚೀಟಿ ವಾಪಸ್ಸು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪಡಿತರ ಅಕ್ಕಿಯ ದುರುಪಯೋಗದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಪಡಿತರ ವಿತರಕರಿಂದ ಅಕ್ಕಿಯ ದುರ್ಬಳಕೆ ಹಾಗೂ ಕಳ್ಳತನದಂತಹ ಪ್ರಕರಣಗಳು ಕಂಡು ಬಂದಲ್ಲಿ ಪಡಿತರ ವಿತರಕರು ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗುವ ಪಡಿತರ ಅಕ್ಕಿಯ ದುರುಪಯೋಗದ ಕುರಿತು ಆರೋಪಗಳು ಕೇಳಿ ಬರುತ್ತಿದ್ದು, ಪಡಿತರ ವಿತರಿಸುವ ಅಂಗಡಿಗಳಲ್ಲಿ, ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪಡಿತರ ಅಕ್ಕಿ ದುರ್ಬಳಕೆಯನ್ನು ತಡೆಯಬೇಕು ಎಂದರು.
ನಗರದ ಹೊರವಲಯದ ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳು ಕೆಟ್ಟು ತಿಂಗಳುಗಳು ಕಳೆದರೂ ದುರಸ್ತಿ ಪಡಿಸಿಲ್ಲ ಕೂಡಲೇ ದುರಸ್ತಿಗೊಳಿಸುವಂತೆ ನಗರಸಭೆ ಸೇರಿದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ರಸ್ತೆಯ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಸೇರಿದಂತೆ ಫುಟ್ ಪಾತ್ ಮೇಲೆ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುವುವವರನ್ನು ತೆರವುಗೊಳಿಸಿ ಎಂದರು.
ಎಲ್ಲಾ ಇಲಾಖೆಗಳಿಂದ ಸರ್ಕಾರದ ಯೋಜನೆಗಳು ಅಥವಾ ಕಾಮಗಾರಿಗಳನ್ನು ಜಾರಿಗೊಳಿಸುವ ಮುನ್ನ ನಮ್ಮ ಗಮನಕ್ಕೆ ತರುವ ಜೊತೆಗೆ ಸಕಾಲದಲ್ಲಿ ಅನುದಾನ ಬಳಸಿಕೊಂಡು ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಇಓ ಚಂದ್ರಕಾಂತ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ . ಡಾ.ಬಿ.ಆರ್ .ಅಂಭೆಡ್ಕರ್ ಅಭಿವೃದ್ದಿ ನಿಗಮದ ಶಿಡ್ಲಘಟ್ಟ ತಾಲೂಕು ಅಭಿವೃದ್ದಿ ಅಧಿಕಾರಿ ಎಂ.ರಾಜಶೇಖರ್ ಸೇರಿದಂತೆ ತಾಲೂಕು ಮಟ್ಟದವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ
Politics
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ
ಮಸ್ಕಿ: ಎರಡು ವರ್ಷಗಳ ಹಿಂದೆ ಫೆ ೧೪ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಳಗುರ್ಕಿ ಗ್ರಾಮದ ಹಾಲಿ ಸೈನಿಕ ವೆಂಕಟೇಶ್ ,ಮಾಜಿ ಸೈನಿಕರದ ಚನ್ನಾಗೌಡ, ಗುರಪ್ಪ,ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಓಂಕಾರ ಜಿ ಎಂ, ಮಧ್ವರಾಜ್ ಆಚಾರ್ಯ, ವಿನೋದ್ ಭಾಂಡಗೆ, ಅನಿಲರಾಜ್ ವಕೀಲರು, ಪ್ರಲ್ಹಾದ ಕೆಂಗಲ್, ಹನುಮೇಶ ಜಾಗೀರದಾರ ಅವಿನಾಶ್ ದೇಶಪಾಂಡೆ, ಸಾಬಣ್ಣ ಭೂಪನವರ್ , ವಿರೇಶ ಮಾಳಿಗಿ, ಶರಣಪ್ಪ ಮರಳಿ, ಶಿವರಾಜ ಸಸಾಲಮಾರಿ, ದ್ರಾಕ್ಷಿಯಣಿ ಬಸವನ ಗೌಡ, ರೇಷ್ಮಾ, ಚನ್ನ, ಕೃಷ್ಣ, ಚಂದ್ರು, ಮಲ್ಲಿಕಾರ್ಜುನ ಜೇನುರು ಹಲವರಿದ್ದರು.
ವರದಿ : ದುರ್ಗೇಶ್ ಬೋವಿ ಮಸ್ಕಿ
Politics
ನೂತನ ಹೆಲಿಪ್ಯಾಡ್ ಮೈದಾನ, ಆರೋಗ್ಯ ಕೇಂದ್ರಕ್ಕೆ ಮಂಜೂರಾದ ವಾಹನದ ಉದ್ಘಾಟನೆ
ಹಿರೇಕೆರೂರು : ತಾಲೂಕಿನ ಬಸರಿಹಳ್ಳಿ ಗ್ರಾಮದ ಬಳಿ ಎಮ್.ಐ.ಡಿ.ಪಿ. ಯೋಜನೆಯಡಿ ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಹೆಲಿಪ್ಯಾಡ್ ಮೈದಾನವನ್ನು ಇಂದು ಉದ್ಘಾಟಿಸಲಾಯಿತು. ನಂತರ, ಆರೋಗ್ಯ ಇಲಾಖೆ ವತಿಯಿಂದ ಕೊಡ ಗ್ರಾಮದ ಆರೋಗ್ಯ ಕೇಂದ್ರಕ್ಕೆ ನೂತನವಾಗಿ ಮಂಜೂರಾದ ವಾಹನದ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಬಿ.ಸಿ ಪಾಟೀಲ್, ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್, ಅಧಿಕಾರಿಗಳು, ಸ್ಥಳೀಯ ಮುಖಂಡರು, ಗಣ್ಯರು ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.