Connect with us
Ad Widget

Politics

ಕೃಷ್ಣಾ “ಬಿ ಸ್ಕೀಂ” ಕೆರೆ ತುಂಬಿಸುವ ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ

Published

on

ಗುಣಮಟ್ಟದ ಕಾಮಗಾರಿ ನೆಡೆಸುವಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಒತ್ತಾಯ.

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಕೃಷ್ಣ ಬಿ ಸ್ಕೀಂನ ಅಡಿಯಲ್ಲಿ ನೆಡೆಯುತ್ತಿರುವ ಕೆರೆ ತುಂಬಿಸುವ ಹಾಗೂ ಏತನೀರಾವರಿ ಯೋಜನೆಯು ಈ ಭಾಗದ ಜನತೆ ಹಾಗೂ ರೈತರಿಗೆ ಸೌಭಾಗ್ಯವಾಗಿದೆ.

ಭಗೀರಥ ತನ್ನ ತಪ್ಪಿಸಿನಿಂದ ಧರೆಗೆ ನೀರು ತಂದಂತೆ, ಒಣ ಭೂಮಿ ಪ್ರದೇಶವಾದ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿಗೆ ಕೃಷ್ಣ ಬಿ ಸ್ಕೀಮ್ ಅಡಿಯಲ್ಲಿ ಏತ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಯನ್ನು ಸುಮಾರು 502 ಕೋಟಿ ವಿನಿಯೋಗಿಸುವ ಮುಖಾಂತರ ಕಾಮಗಾರಿಯನ್ನು ಜಾರಿಗೆ ತರಲಾಗಿದೆ.

ಆದರೆ ಗುತ್ತಿಗೆ ದಾರರು ಹಾಗೂ ಅಧಿಕಾರಿಗಳು ಈ ಒಂದು ಕಾಮಗಾರಿಯನ್ನು ಗುಣಮಟ್ಟದಿಂದ ನೆಡೆಸದೇ, ಮಣ್ಣು ಮಿಶ್ರಿತ ಮರಳನ್ನು ಬಳಸುವ ಮುಖಾಂತರ ಕಾಮಗಾರಿಯನ್ನು ಸಂಪೂರ್ಣವಾಗಿ ಕಳಪೆ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಕಲಾಲಬಂಡಿ ಮತ್ತು ಕೃಷ್ಣಾ ಬೀ ಸ್ಕೀಂ ಯೋಜನೆ ಜಾಕವೇಲ್ ಹತ್ತಿರ ಇರುವ ಸುತ್ತ ಮುತ್ತಲಿನ ರೈತರು ಆರೋಪಿಸಿದ್ದಾರೆ.

ಹೌದು….. ಈ “ಕೃಷ್ಣಾ ಬಿ ಸ್ಕೀಂ” ಅಡಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಜಾರಿಗೆ ಆಗಬೇಕಾದರೆ ಸಾಕಷ್ಟು ಹಿರಿಯ ಜೀವಿಗಳು, ಸ್ವಾಮಿಜೀಯವರು ಹಾಗೂ ಕನ್ನಡ ಪರ ಸಂಘಟನೆಗಳು ಮತ್ತು ರೈತರು ಸೇರಿದಂತೆ ಹಲವು ಹೋರಾಟಗಾರರು ೫೦ ವರ್ಷಗಳ ಕಾಲ ಹೋರಾಟ ನೆಡೆಸಿದ್ದಾರೆ. ಅದರ ಫಲವಾಗಿ ಸರಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

ಇಂದಿನ ಬಿಜೆಪಿ ಸರಕಾರದಲ್ಲಿ ಬೃಹತ್ ಕೈಗಾರಿಕಾ ಅಭಿವೃದ್ಧಿ ಸಚಿವರಾಗಿರುವ ಜಗದೀಶ್ ಶೆಟ್ಟರ್ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು ಹಾಗೂ ಈಗಿನ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಜಾರಿಗೊಂಡ ಈ ಯೋಜನೆಯು ವಿವಿಧ ಮಠಾಧೀಶರ ಅಮೃತ ಹಸ್ತದಿಂದ 2013ರಲ್ಲಿ ಅಡಿಗಲ್ಲು ಹಾಕಿ ಚಾಲನೆ ನೀಡಿಲಾಗಿತ್ತು.

ಆಗ ಮೊದಲನೇಯ ಹಂತದ ಭಾಗವಾಗಿ ಸುಮಾರು 100 ಕೋಟಿ ಹಣ ನೀಡಿ‌ ಚಾಲನೆ ಕೊಡಲಾಗಿತ್ತು. ಆದರೆ ಇವತ್ತು ಈ ಒಂದು ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿರುವುದು ವಿಪರ್ಯಾಸ ಎಂದು ಹೇಳಬಹುದು.

ನಿಧಾನವಾಗಿ ನೆಡೆಯುತ್ತಿರುವ ಕಾಮಗಾರಿಗೆ “ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಣ್ಣು ಮಿಶ್ರಿತ ಮರಳನ್ನು ಬಳಸಿ ಅತ್ಯಂತ ಕಳಪೆ ಮಟ್ಟದಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಆ ಮುಖಾಂತರ ರೈತರ ಕನಸಿನ ಗೋಪುರ ಕೆಡವಿ, ಹೊಟ್ಟೆಗೆ ತಣ್ಣಿರಿನ ಬಟ್ಟೆ ಹಾಕುತ್ತಿದ್ದಾರೆ.

ಈ ಒಂದು ಕಳಪೆ ಕಾಮಗಾರಿಯ ಬಗ್ಗೆ ಸ್ಥಳಿಯ ಶಾಸಕ ಅಮರೇಗೌಡ ಬಯ್ಯಾಪೂರ್ ಅವರಿಗೆ ತಿಳಿಸಿದಾಗ, ಮಾಧ್ಯಮದವರ ಕರೆಗೆ ಓಗೊಟ್ಟು ದಿಢೀರನೆ ಸ್ಥಳಕ್ಕೆ ಆಗಮಿಸಿ, ಕಾಮಗಾರಿಯನ್ನು ವೀಕ್ಷಣೆ ಮಾಡಿ, ಗುತ್ತಿಗೆದಾರರನ್ನು ಹಾಗೂ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕರು ಮರಳನ್ನು ಪರಿಶೀಲನೆ ಮಾಡಿದಾಗ ಮಣ್ಣು ಮಿಶ್ರಿತ ಮರಳು ಕಂಡು ಅಧಿಕಾರಿಗಳ ಮೇಲೆ ಗರಂ ಆಗಿ, ಸ್ಥಳದಲ್ಲಿ ಇದ್ದ ಗುತ್ತಿಗೆದಾರನಿಗೆ ತರಾಟಗೆ ತೆಗೆದುಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ನೆಡೆಸುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾದ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಸಂಸದರು ಜಿಲ್ಲೆಯ ಎಲ್ಲಾ ಶಾಸಕರು ಉನ್ನತ ಮಟ್ಟದ ಅಧಿಕಾರಿಗಳು ಸೇರಿ ಯಾವುದೇ ಕಾರಣಕ್ಕೂ ಕೊಪ್ಪಳ ಏತನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ವಿಳಂಬ ಮಾಡಬಾರದು ಮತ್ತು ಕಾಮಗಾರಿ ಯಾವುದೇ ಕಾರಣಕ್ಕೂ ಕಳಪೆ ಆಗಬಾರದು ಎಂದು ಸಭೆಯಲ್ಲಿ ಹೇಳಲಾಗಿದೆ.

ಆದರೆ ಈ ಒಂದು ಕಾಮಗಾರಿಯು ಈ ಭಾಗದ ರೈತರ ಕನಸಿನ ಗೋಪುರವಾಗಿದ್ದು, ಯಾವುದೇ ಕಾರಣಕ್ಕೂ ರೈತರ ಕನಸಿಗೆ ತಣ್ಣೀರು ಎರಚಲು ನಾನು ಬಿಡುವುದಿಲ್ಲಾ, ಈ ಕಾಮಗಾರಿಯು ಮಣ್ಣು ಮಿಶ್ರಿತ ಮರಳುನ್ನು ಬಳಸುವ ಮುಖಾಂತರ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಚರ್ಚೆ ಮಾಡಿ ಕಳಪೆ ಕಾಮಗಾರಿ ನಡೆಯದಂತೆ ನೋಡಿಕೊಳ್ಳುತ್ತೇನೆ.

ಇಷ್ಟಲ್ಲದೇ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಶಿಸ್ತು ಕ್ರಮಕೈಗೊಂಡು ಕಾಮಗಾರಿ ಉತ್ತಮ ರೀತಿಯಲ್ಲಿ ನಿರ್ವಹಣೆ ಯಾಗುವಂತೆ ಮಾಡುತ್ತೇನೆ ಎಂದರು.

ಈ ವಿಷಯವನ್ನು ನನ್ನ ಗಮನಕ್ಕೆ ಮಾದ್ಯಮದವರು ತಂದಿದ್ದು ಸಂತೋಷವಾಯಿತು. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾಕೆ ಈ ರೀತಿಯಾಗಿ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ, ಇವರಿಗೆ ಸಕಾಲಕ್ಕೆ ಸರ್ಕಾರ ಹಣ ಪಾವತಿ ಮಾಡುತ್ತಿದೆ. ಹೀಗಿದ್ದಾಗ್ಯೂ ಕಳಪೆ ಕಾಮಗಾರಿ ನೆಡೆಸುವದು ಎಷ್ಟರ ಮಟ್ಟಿಗೆ ಸರಿ..? ಇದು ರೈತರ ಕೆಂಗಣ್ಣಿಗೆ ಗುರಿಯಾಗುತ್ತದೆ ಇದನ್ನು ಪರಿಗಣಿಸಿ ಉತ್ತಮ ಗುಣಮಟ್ಟದ ಕಾಮಗಾರಿ ನೆಡೆಸುವಂತೆ ಸೂಚನೆ ನೀಡುತ್ತೇನೆ. ಇನ್ನೊಮ್ಮೆ ರೀತಿಯಾಗಿ ನೆಡೆದರೆ ನಾನೇ ಸ್ವತಃ ಸ್ಥಳದಲ್ಲೇ ಟೆಂಟ್ ಹಾಕಿ ಹೋರಾಟ ನೆಡೆಸಿ, ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಬದಲಾವಣೆ ಮಾಡುವಂತೆ ಸರಕಾರಕ್ಕೆ ಒತ್ತಡ ಹಾಕುತ್ತೇನೆ ಎಚ್ಚರಿಸಿದ್ದಾರೆ.

ವರದಿ: ನಾಗರಾಜ ಭೋವಿ

Continue Reading
Advertisement
Click to comment

Leave a Reply

Your email address will not be published. Required fields are marked *

Politics

ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ

Published

on

ಶಿಡ್ಲಘಟ್ಟ : ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ಈಗಾಗಲೇ 1.2 ಲಕ್ಷ ಕ್ಕಿಂತ ಹೆಚ್ಚು ಆದಾಯ ಹೊಂದಿರುವವರ ಪಡಿತರ ಚೀಟಿ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಮಾರ್ಚ್ ಅಂತ್ಯದೊಳಗೆ ಅಂತಹವರು ಸ್ವಯಂ ಪ್ರೇರಿತರಾಗಿ ಪಡಿತರ ಚೀಟಿ ವಾಪಸ್ಸು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪಡಿತರ ಅಕ್ಕಿಯ ದುರುಪಯೋಗದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಪಡಿತರ ವಿತರಕರಿಂದ ಅಕ್ಕಿಯ ದುರ್ಬಳಕೆ ಹಾಗೂ ಕಳ್ಳತನದಂತಹ ಪ್ರಕರಣಗಳು ಕಂಡು ಬಂದಲ್ಲಿ ಪಡಿತರ ವಿತರಕರು ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗುವ ಪಡಿತರ ಅಕ್ಕಿಯ ದುರುಪಯೋಗದ ಕುರಿತು ಆರೋಪಗಳು ಕೇಳಿ ಬರುತ್ತಿದ್ದು, ಪಡಿತರ ವಿತರಿಸುವ ಅಂಗಡಿಗಳಲ್ಲಿ, ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪಡಿತರ ಅಕ್ಕಿ ದುರ್ಬಳಕೆಯನ್ನು ತಡೆಯಬೇಕು ಎಂದರು.

ನಗರದ ಹೊರವಲಯದ ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳು ಕೆಟ್ಟು ತಿಂಗಳುಗಳು ಕಳೆದರೂ ದುರಸ್ತಿ ಪಡಿಸಿಲ್ಲ ಕೂಡಲೇ ದುರಸ್ತಿಗೊಳಿಸುವಂತೆ ನಗರಸಭೆ ಸೇರಿದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ರಸ್ತೆಯ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಸೇರಿದಂತೆ ಫುಟ್ ಪಾತ್ ಮೇಲೆ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುವುವವರನ್ನು ತೆರವುಗೊಳಿಸಿ ಎಂದರು.

ಎಲ್ಲಾ ಇಲಾಖೆಗಳಿಂದ ಸರ್ಕಾರದ ಯೋಜನೆಗಳು ಅಥವಾ ಕಾಮಗಾರಿಗಳನ್ನು ಜಾರಿಗೊಳಿಸುವ ಮುನ್ನ ನಮ್ಮ ಗಮನಕ್ಕೆ ತರುವ ಜೊತೆಗೆ ಸಕಾಲದಲ್ಲಿ ಅನುದಾನ ಬಳಸಿಕೊಂಡು ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಇಓ ಚಂದ್ರಕಾಂತ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ . ಡಾ.ಬಿ.ಆರ್ .ಅಂಭೆಡ್ಕರ್ ಅಭಿವೃದ್ದಿ ನಿಗಮದ ಶಿಡ್ಲಘಟ್ಟ ತಾಲೂಕು ಅಭಿವೃದ್ದಿ ಅಧಿಕಾರಿ ಎಂ.ರಾಜಶೇಖರ್ ಸೇರಿದಂತೆ ತಾಲೂಕು ಮಟ್ಟದವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

Politics

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ

Published

on

ಮಸ್ಕಿ: ಎರಡು ವರ್ಷಗಳ ಹಿಂದೆ ಫೆ ೧೪ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಳಗುರ್ಕಿ ಗ್ರಾಮದ ಹಾಲಿ ಸೈನಿಕ ವೆಂಕಟೇಶ್ ,ಮಾಜಿ ಸೈನಿಕರದ ಚನ್ನಾಗೌಡ, ಗುರಪ್ಪ,ರೈತ ಮತ್ತು ಸೈನಿಕರ ಅಭಿಮಾನಿಗಳ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಓಂಕಾರ ಜಿ ಎಂ, ಮಧ್ವರಾಜ್ ಆಚಾರ್ಯ, ವಿನೋದ್ ಭಾಂಡಗೆ, ಅನಿಲರಾಜ್ ವಕೀಲರು, ಪ್ರಲ್ಹಾದ ಕೆಂಗಲ್, ಹನುಮೇಶ ಜಾಗೀರದಾರ ಅವಿನಾಶ್ ದೇಶಪಾಂಡೆ, ಸಾಬಣ್ಣ ಭೂಪನವರ್ , ವಿರೇಶ ಮಾಳಿಗಿ, ಶರಣಪ್ಪ ಮರಳಿ, ಶಿವರಾಜ ಸಸಾಲಮಾರಿ, ದ್ರಾಕ್ಷಿಯಣಿ ಬಸವನ ಗೌಡ, ರೇಷ್ಮಾ, ಚನ್ನ, ಕೃಷ್ಣ, ಚಂದ್ರು, ಮಲ್ಲಿಕಾರ್ಜುನ ಜೇನುರು ಹಲವರಿದ್ದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading

Politics

ನೂತನ ಹೆಲಿಪ್ಯಾಡ್ ಮೈದಾನ, ಆರೋಗ್ಯ ಕೇಂದ್ರಕ್ಕೆ ಮಂಜೂರಾದ ವಾಹನದ ಉದ್ಘಾಟನೆ

Published

on

ಹಿರೇಕೆರೂರು : ತಾಲೂಕಿನ ಬಸರಿಹಳ್ಳಿ ಗ್ರಾಮದ ಬಳಿ ಎಮ್.ಐ.ಡಿ.ಪಿ. ಯೋಜನೆಯಡಿ ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಹೆಲಿಪ್ಯಾಡ್ ಮೈದಾನವನ್ನು ಇಂದು ಉದ್ಘಾಟಿಸಲಾಯಿತು. ನಂತರ, ಆರೋಗ್ಯ ಇಲಾಖೆ ವತಿಯಿಂದ ಕೊಡ ಗ್ರಾಮದ ಆರೋಗ್ಯ ಕೇಂದ್ರಕ್ಕೆ ನೂತನವಾಗಿ ಮಂಜೂರಾದ ವಾಹನದ ಉದ್ಘಾಟನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಬಿ.ಸಿ ಪಾಟೀಲ್, ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್, ಅಧಿಕಾರಿಗಳು, ಸ್ಥಳೀಯ ಮುಖಂಡರು, ಗಣ್ಯರು ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್