ಮನರಂಜನೆ
ಬಿಗ್ ಬಾಸ್ ಕನ್ನಡ ಶೋವನ್ನೂ ರದ್ದು ಮಾಡಲಿ : ಸಾಮಾಜಿಕ ಜಾಲತಾಣದಲ್ಲಿ ಆಗ್ರಹ
ಬೆಂಗಳೂರು: ಕೊರೋನಾನಿಂದಾಗಿ ಎಲ್ಲಾ ಟಿವಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಐಪಿಎಲ್ ಕೂಡಾ ರದ್ದಾಗಿದೆ. ಹೀಗಿರುವಾಗ ನೂರಾರು ಜನರು ಕೆಲಸ ಮಾಡುವ ಬಿಗ್ ಬಾಸ್ ಶೋ ಯಾಕೆ ಪ್ರಸಾರ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಬಿಗ್ ಬಾಸ್ ಶೋನಲ್ಲೂ ನೂರಾರು ಜನರು ಕೆಲಸ ಮಾಡುತ್ತಾರೆ. ಅವರ ಸುರಕ್ಷತೆಯೂ ಮುಖ್ಯವಲ್ಲವೇ? ಹಾಗಾಗಿ ಬಿಗ್ ಬಾಸ್ ಕನ್ನಡ ಶೋವನ್ನೂ ರದ್ದು ಮಾಡಲಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಮನರಂಜನೆ
ನಟಿ ಮೇಘನಾ ಗಾವಂಕರ್ ಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು : ನಟಿ ಮೇಘನಾ ಗಾವಂಕರ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೇಘನಾ ಗಾವಂಕರ್ ಆರಂಭದಲ್ಲಿ ‘ಕುಮುದ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದರು ನಂತರ 2010ರಂದು ‘ನಮ್ ಏರಿಯಲ್ಲೊಂದಿನ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
2013ರಂದು ಲವ್ಲಿ ಸ್ಟಾರ್ ಪ್ರೇಮ್ ಜೊತೆ ‘ಚಾರ್ ಮಿನರ್’ ಚಿತ್ರದಲ್ಲಿ ನಟಿಸಿದರು ಈ ಚಿತ್ರದ ಮೂಲಕ ಮೇಘನಾ ಗಾವಂಕರ್ ಸಾಕಷ್ಟು ಜನಪ್ರಿಯತೆ ಪಡೆದರು. ನಟಿ ಮೇಘನಾ ಗಾವಾಂಕರ್ 1985 ಮೇ 8ರಂದು ಕಲಬುರಗಿಯಲ್ಲಿ ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಮನರಂಜನೆ
ನಟಿ ಶುಭ್ರ ಅಯ್ಯಪ್ಪ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು : ನಟಿ ಶುಭ್ರ ಅಯ್ಯಪ್ಪ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಶುಭ್ರ ಅಯ್ಯಪ್ಪ 2014ರಂದು ತೆಲುಗಿನಲ್ಲಿ ‘ಪ್ರತಿನಿಧಿ’ ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು.
2015ರಂದು ಕನ್ನಡದಲ್ಲಿ ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಸಿನಿಮಾದಲ್ಲಿ ಗೀತಾ ಎಂಬ ಪಾತ್ರದಲ್ಲಿ ನಟಿಸಿದರು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದರು.
ಮನರಂಜನೆ
‘ಗಿಣಿರಾಮ’ ಧಾರಾವಾಹಿಯ ನಾಯಕಿ ನಯನಾ ನಾಗರಾಜ್ ಗೆ ಕೊರೊನಾ ಪಾಸಿಟಿವ್
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಮಹಾಮಾರಿ ಅಟ್ಟಹಾಸ ಹೆಚ್ಚುತ್ತಲೇ ಹೋಗುತ್ತಿದೆ. ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಸಾವುಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದೆ.
ಇದೀಗ ‘ಗಿಣಿರಾಮ’ ಧಾರಾವಾಹಿಯ ನಾಯಕಿ ನಯನಾ ನಾಗರಾಜ್ ಅವರು ಕೊರೋನಾ ಸೋಂಕು ತಗುಲಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿಸಿರುವ ನಟಿ, ‘ಈ ಸೋಂಕು ಹೇಗೆ ಬಂತು ಅನ್ನೋದೇ ತಿಳಿಯುತ್ತಿಲ್ಲ ಎಂದಿದ್ದಾರೆ.
-
Politics4 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
Politics4 days ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ3 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
Politics4 weeks ago
ಸಿಂದಗಿಯಲ್ಲಿ ರಾಜ್ಯ ಮಟ್ಟದ ಸಿಂಗಿಂಗ್ ಕಾಂಪಿಟೇಶನ್ ಚಾಲನೆ