Connect with us
Ad Widget

ಸುದ್ದಿ

ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ

Published

on

ಕಡಪ: ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ‌ ಮುಖ್ಯಮಂತ್ರಿಯವರ ತವರು ಜಿಲ್ಲೆಯಾದ ಕಡಪಾದಲ್ಲಿ ನಡೆದಿದೆ.

ಇಲ್ಲಿನ ಕಳಸಪಾಡು ಬ್ಲಾಕ್ ನಲ್ಲಿರುವ ಮಾಮಿಲ್ಲಪಲ್ಲೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟಕವನ್ನು ಅಳವಡಿಸಲೆಂದು ಕಲ್ಲು ಕೊರೆಯುತ್ತಿದ್ದ ವೇಳೆ ಸ್ಫೋಟಕ ಸಿಡಿದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಪೊರುಮಾಮಿಲ್ಲಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಲ್ಲು ಕ್ವಾರಿಯಲ್ಲಿ ಸ್ಫೋಟಕ ಅಳವಡಿಸುತ್ತಿದ್ದಾಗ ಸ್ಫೋಟ ಸಂಭವಿಸಿಲ್ಲ, ಕ್ವಾರಿಗೆ ಸ್ಫೋಟಕಗಳನ್ನು ಸಾಗಿಸುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಜೀವರಕ್ಷಕ ಔಷಧಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರ

Published

on

ಶಿಡ್ಲಘಟ್ಟ : ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಶ್ರೀ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ತರಿಸಲಾಗಿದ್ದ ಜೀವರಕ್ಷಕ ಔಷಧಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು.

ಕ್ಷೇತ್ರದ ಜನರು ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ನಲುಗಿಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದ ಜನರ ಆರೋಗ್ಯ ಕಾಪಾಡುವುದು ಸೆರಿದಂತೆ ಯಾರೊಬ್ಬರಿಗೂ ಯಾವುದೇ ತೊಂದರೆಯಾಗಬಾರದು ಎನ್ನುವುದು ಟ್ರಸ್ಟಿನ ಅಧ್ಯಕ್ಷ ಬಿ.ಎನ್.ರವಿಕುಮಾರ್ ರ ಆಶಯವಾಗಿದೆ. ಜನರ ಹಿತದೃಷ್ಟಿಯಿಂದ ಸುಮಾರು 20 ಲಕ್ಷ ರೂ ಬೆಲೆಯ ಜೀವರಕ್ಷಕ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಅದರಂತೆ ಇದೀಗ ನಗರದ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿಗಳ ನೀಡಿದ್ದ ಪಟ್ಟಿಯಂತೆ ಆಂಟಿಬಯೋಟಿಕ್ ಇಂಜೆಕ್ಷನ್ ಗಳು, ಶ್ವಾಸಕೋಶದ ಇನ್ಫೆಕ್ಷನ್ ತಡೆಯಲು ಬಳಸುವ ಇಂಜೆಕ್ಷನ್ ಗಳು ಸೇರಿದಂತೆ ಎಲ್ಲಾ ಜೀವರಕ್ಷಕ ಇಂಜೆಕ್ಷನ್ ಗಳನ್ನು ಮುಂಬಯಿ, ಪೂನಾ ಮುಂತಾದೆಡೆಗಳಿಂದ ತರಿಸಿ ಕೊಡುತ್ತಿದ್ದೇವೆ.

ನಮ್ಮ ಉದ್ದೇಶ ನಮ್ಮ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಬೇಕು, ಕೊರೊನಾ ದಿಂದ ಕ್ಷೇತ್ರದಾಧ್ಯಂತ ಸಾವು ನೋವುಗಳು ಸಂಭವಿಸುವುದನ್ನು ತಡೆಯುವಲ್ಲಿ ನೆರವಾಗುವುದಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಡಿಎಚ್‌ಓ ಹಾಗೂ ಟಿಎಚ್‌ಓ ಅವರು ಸೂಚಿಸಿದ್ದೇ ಆದರೆ ಪ್ರತಿಯೊಂದು ಕುಟುಂಬಕ್ಕೂ ಆರೋಗ್ಯ ಕಿಟ್‌ಗಳನ್ನು ಪೂರೈಸಲು ನಾವು ಸಿದ್ದರಿದ್ದೇವೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ಕೊರೊನಾ ಎರಡನೇ ಅಲೆ ಹಿನ್ನಲೆಯಲ್ಲಿ ರಾಜ್ಯ ಸೇರಿದಂತೆ ದೇಶದಲ್ಲೆಡೆ ಜನ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸಹಕಾರಿಯಾಗಲೆಂದು ಟ್ರಸ್ಟ್ ವತಿಯಿಂದ ಅಗತ್ಯ ಜೀವರಕ್ಷಕ ಔಷಧಿಗಳನ್ನು ಇಂದು ಪೂರೈಸಲಾಗಿದೆ. ಈ ಹಿಂದೆ ಇದೇ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಒಂದೊಂದು ಆಂಬ್ಯುಲೆನ್ಸ್ ವಿತರಿಸಲಾಗಿತ್ತು. ಇದೀಗ ಔಷಧಿ ಸೇರಿದಂತೆ ಆರೋಗ್ಯ ಸಿಬ್ಬಂದಿಗಾಗಿ ಮಾಸ್ಕ್‌ಗಳನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ಟ್ರಸ್ಟ್ ಸಿದ್ದವಾಗಿದೆ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಯಾರಾದರೂ ದಾನಿಗಳಿಂದ ಕೊಡಿಸುವಂತೆ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಂಕ್ ಮುನಿಯಪ್ಪ ರ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಅವರು ಬಿ.ಎನ್.ರವಿಕುಮಾರ್ ರ ಮೂಲಕ ನಾವು ಬೇಡಿಕೆಯಿಟ್ಟಷ್ಟು ಓಷಧಿಗಳನ್ನು ಇಂದು ಪೂರೈಸುವ ಜೊತೆಗೆ ಆರೋಗ್ಯ ಸಿಬ್ಬಂದಿಗೆ ಎನ್ ೯೫ ಮಾಸ್ಕ್‌ಗಳನ್ನು ಸಹ ನೀಡಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡಿ ಮಾತನಾಡಿ, ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಸಮಾಜ ಸೇವಕರು, ದಾನಿಗಳು ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ, ಇದರೊಂದಿಗೆ ಜನರ ಸಹಕಾರವೂ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ವಿ.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಉಪಾಧ್ಯಕ್ಷ ಅಪ್ಸರ್‌ಪಾಷ, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ಸದಸ್ಯ ಗಜೇಂದ್ರ, ಮುಖಂಡರಾದ , ಎಸ್.ಎಂ.ರಮೇಶ್, ಹೆಚ್.ಜಿ. ಶಶಿಕುಮಾರ್, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಹೆಚ್.ಶಂಕರ್ ಮುಂತಾದವರು ಹಾಜರಿದ್ದರು.

ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಸಮಾಜ ಸೇವೆ

ವೆಲ್ಡಿಂಗ್ ಅಂಗಡಿ ಮಾಲೀಕನಿಂದ ಕೋವಿಡ್-19 ರೋಗಿಗಳಿಗಾಗಿ ಆಕ್ಸಿಜನ್ ಪೂರೈಕೆ

Published

on

ಮಸ್ಕಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಆಕ್ಸಿಜನ್ ಇಲ್ಲದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.

ಈ ಸುದ್ದಿ ಕೇಳಿದ ಮಸ್ಕಿ ತಾಲೂಕಿನ ವೆಲ್ಡಿಂಗ್ ಅಂಗಡಿಯ ಮಾಲೀಕರೊಬ್ಬರು ತಮ್ಮ ಅಂಗಡಿ ಬಳಕೆಗಾಗಿ ತಂದಿಟ್ಟಿದ್ದ ಆಕ್ಸಿಜನ್ ಸಿಲೆಂಡರ್ ಗಳನ್ನು ಕೊರೋನ ರೋಗಿಗಳಿಗೆ ಸಿಂಧನೂರಿನ ಬಸನಗೌಡ ಬಾದರ್ಲಿ ಫೌಂಡೇಶನ್ ಗೆ ಕಳಿಸಿದ್ದಾರೆ.

ಮಸ್ಕಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಭಾರತ ವೆಲ್ಡಿಂಗ್ ಶಾಪ್ ಮಾಲಿಕ ಜಾಫರ್ ಎನ್ನುವವರು ತಮ್ಮ ಅಂಗಡಿಯಲ್ಲಿ ವೆಲ್ಡಿಂಗ್ ಕೆಲಸಕ್ಕಾಗಿ ತಂದಿಟ್ಟಿದ್ದ 5 ಆಕ್ಸಿಜನ್ ಸಿಲಿಂಡರ್ಗಳನ್ನು ಸಿಂಧನೂರಿನ ಬಸನಗೌಡ ಬಾದರ್ಲಿ ಫೌಂಡೇಶನ್ ಗೆ ಟಾಟಾ ಎಸಿ ವಾಹನದ ಮೂಲಕ ಕಳಿಸಿದ್ದಾರೆ.

ಶಬ್ಬೀರ್ ಚೌದರಿ, ರಿಯಾಜ್ ಶೇಡ್ನಿಯವರ ಸಹಾಯದಿಂದ ಆಕ್ಸಿಜನ್ ಸಿಲೆಂಡರ್ ಗಳನ್ನು ಸಾಗಿಸಿದರು.

ಇದರಿಂದ ಇಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಅಂಗಡಿಯಲ್ಲಿ ಕೆಲಸವನ್ನು ಸ್ಥಗಿತ ಮಾಡಿ ಜನರ ಜೀವ ಉಳಿಸುವುದಕ್ಕಾಗಿ ಇಂತಹ ಪುಣ್ಯ ಕೆಲಸಕ್ಕೆ ಮುಂದಾಗಿರುವ ಜಾಪುರ್ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ,

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಜಂಗಮಕೋಟೆಯಲ್ಲಿ ನವೀಕರಣಗೊಂಡ ಹೊರ ಪೋಲಿಸ್ ಠಾಣೆ

Published

on

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆಯಲ್ಲಿ ನವೀಕರಣಗೊಂಡ ಹೊರ ಪೋಲಿಸ್ ಠಾಣೆಗೆ ಜಿಲ್ಲಾ ಪೋಲಿಸ್ ಎಸ್.ಪಿ ಜಿ.ಕೆ. ಮಿಥುನ್ ಕುಮಾರ್‍ ಶುಕ್ರವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಸುಮಾರು ಎಂಬತ್ತು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಸೇರಿರುವ ಜಂಗಮಕೋಟೆ ಹೊರ ಪೋಲಿಸ್ ಠಾಣೆ ಯ ಕಟ್ಟಡವನ್ನು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನಗಳೊಂದಿಗೆ ದಾನಿಗಳ ನೆರವು ಪಡೆದು ತುಂಬಾ ಅಚ್ಚುಕಟ್ಟಾಗಿ ಜನಸ್ನೇಹಿ ಮತ್ತು ಪರಿಸರಸ್ನೇಹಿ ಪೋಲಿಸ್ ಕಟ್ಟಡವನ್ನಾಗಿ ಇಲ್ಲಿನ ಸಿಬ್ಬಂದಿ ನವೀಕರಣಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಸ್ವಾಗತ ಕಮಾನು, ಗೇಟ್, ಸುಂದರ ಉದ್ಯಾನ, ಮಳೆ ಕೊಯ್ಲು ಪದ್ಧತಿ ಅನುಸರಿಸಿ ಬೃಹತ್ ನೀರಿನ ಸಂಪು, ಧ್ವಜಸ್ಥಂಭ ಎಲ್ಲವೂ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಇವರ ಈ ಉತ್ತಮ ಆಲೋಚನೆ ಹಾಗೂ ಪ್ರಯತ್ನಕ್ಕಾಗಿ ಐಜಿ ಕಚೇರಿ ಮತ್ತು ಎಸ್.ಪಿ ಕಚೇರಿಯಿಂದ ಪ್ರಶಂಸಾ ಪತ್ರ ಮತ್ತು ನಗದು ಬಹುಮಾನ ಕೊಡಲಾಗಿದೆ ಎಂದರು.

ಎ.ಎಸ್.ಐ ವೆಂಕಟರಾಜು, ಮುಖ್ಯಪೇದೆ ರಂಗನಾಥ್, ಪೇದೆಗಳಾದ ಶಿವರಾಜ್ ಕುಮಾರ್‍, ಪೃಥ್ವಿರಾಜ್, ಮಂಜೇಶ್ ಮತ್ತು ಬಾಬು ಅವರ ಕಾರ್ಯವನ್ನು ಮುಕ್ತಕಠದಿಂದ ಶ್ಲಾಘಿಸಿದ್ದೇವೆ. ಪೊಲೀಸರು ಜನಸೇವಕರು ಮತ್ತು ಪರಿಸರ ಪ್ರೇಮಿಗಳೆಂದು ಇವರೆಲ್ಲ ನಿರೂಪಿಸಿದದಾರೆ ಎಂದು ಹೇಳಿದರು.

ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್