Politics
ಸಿಂದಗಿಯಲ್ಲಿ ರಾಜ್ಯ ಮಟ್ಟದ ಸಿಂಗಿಂಗ್ ಕಾಂಪಿಟೇಶನ್ ಚಾಲನೆ
ಸಿಂದಗಿ : ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷ ಶ್ರೀಮತಿ ಸುಜಾತ ಕಳ್ಳಿಮನಿ ಹೇಳಿದರು.
ಪಟ್ಟಣದ ರಾಗ ರಂಜಿನಿ ಸಂಗೀತ ಅಕಾಡೆಮಿ ವಾಯ್ಸ್ ಆಫ್ ಸಿಂದಗಿ ಸೀಜನ್ 2 ರಾಜ್ಯ ಮಟ್ಟದ ಸಿಂಗಿಂಗ್ ಕಾಂಪಿಟೇಶನ್ ಉದ್ಘಾಟನಾ ಸಮಾರಂಭವನ್ನು ರವಿವಾರರಂದು ಪಟ್ಟಣದ ಮಾಂಗಲ್ಯಭವನದಲ್ಲಿ ನಡೆದ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾ ಅಭ್ಯಾಸದೊಂದಿಗೆ ಸಂಗೀತ ಕಲಿಯಬೇಕು , ಸಂಗೀತಾ ಆಲಿಸುವದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದರು.
ಧಾರವಾಡದ ಜಿ.ಆರ್ ಗ್ರುಫ್ ಸಂಸ್ಥಾಪಕ ಶಿವಾನಂದ ಪಾಟೀಲ (ಸೋಮಜಾಳ) ಮಾತನಾಡಿ ಉತ್ತಮ ಸಾಹಿತ್ಯದ ಜೊತೆಗೆ ಸಂಗೀತದ ಸ್ವರ ಸೇರಿಸಿದಾಗ ಹಾಡು ಉತ್ತಮವಾಗಿ ಹೊರಹೊಮ್ಮತ್ತದೆ ಎಂದರು.
ಅಸಂಘಟಿತ ಕಾರ್ಮಿಕ ವಲಯದ ಜಿಲ್ಲಾ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಮುತ್ತು ಶಾಬಾದಿ ಮಾತನಾಡಿ ಸಂಗೀತದಿಂದ ನಮ್ಮ ಮೈಮನಸ್ಸು ಹೂವಿನ ಮಕರಂದವನ್ನು ಹೀರುವ ದುಂಬಿಯಾಗಿರುತ್ತದೆ.
ನಮ್ಮ ಮನಸ್ಸು ಸುಂದರವಾಗಿ ಗಾಳಿಯಲ್ಲಿ ತೇಲಾಡುವಂತೆ ಸಂಗೀತ ಮಾಡುತ್ತದೆ ಎಂದರು.
ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ ನಮ್ಮ ಸುತ್ತಲೂ ಸುಂದರ ಗಾಳಿಯಲ್ಲಿ ಸಂಗೀತವಿದೆ, ಹರಿಯುವ ನೀರಿನಲ್ಲಿ ಸಂಗೀತವಿದೆ, ಮಗುವಿನ ಅಳುವಿನಲ್ಲಿ ಸಂಗೀತವಿದೆ ಹಕ್ಕಿಗಳ ಚಿಲಿಪಿಲಿಯ ಕಲರವದಲ್ಲೂ ಸಂಗೀತ ಇದೆ. ಇದನ್ನು ಪರಿಶುದ್ಧವಾದ ಮನಸ್ಸಿನಿಂದ ಆಲಿಸುವ ದೊಡ್ಡ ಗುಣಗಳು ಬೆಳೆಸಿಕೊಳ್ಳಬೇಕು ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರೊ.ಶಾಂತೂ ಹಿರೇಮಠ ಸಭೆ ಅಧ್ಯಕ್ಷಸ್ಥಾನವಹಿಸಿ ಅವರು ಮಾತನಾಡಿದರು. ಯಂಕಂಚಿ ಹಿರೇಮಠದ ಅಭಿನವ ರುದ್ರಮನಿ ಶಿವಾಚಾರ್ಯರು ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಪುರಸಭೆ ಸದಸ್ಯ ಹಣಮಂತ ಸುಣಗಾರ ಕಾಂಗ್ರೆಸ್ ಮುಖಂಡ ಎಂ.ಆರ್ ತಾಂಬೋಳಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಲಿಂಗ ಚೌಧರಿ , ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಕಾವ್ಯಾಕೋಚಿಂಗ್ ಸ್ಕೂಲ್ ಸಂಚಾಲಕ ಚಂದ್ರಶೇಖರ ನಾಗರಬೆಟ್ಟ , ಖ್ಯಾತ ವೈದ್ಯ ಡಾ // ಶಿವಾನಂದ ಹೊಸಮನಿ , ಉಪನ್ಯಾಸಕ ಸಿದ್ಧಲಿಂಗ ಕಿಣಗಿ , ರಾಘವೇಂದ್ರ ಸಂಗೀತ ಪಾಠ ಶಾಲೆಯ ಮಹಾಂತೇಶ ನಾಗೋಜಿ , ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಹಣಮಂತ ಹೂಗಾರ , ಅಶೋಕ ಕೊಳಾರಿ ,ರಾಗರಂಜಿನಿ ಸಂಗೀತ ಅಕಾಡೆಮಿ ಸಂಚಾಲಕ ಡಾ.ಪ್ರಕಾಶ ಮೂಡಲಗಿ , ಸಂಗೀತಾ ತಿರ್ಪುಗಾರಾದ ಶ್ರೀಮಂತ ಅವಟಿ , ಚಂದ್ರಶೇಖರ ಜಾದವ , ಶ್ರೀದೇವಿ ಬಂಡರಿಕರ್ವ ವೇದಿಕೆ ಮೇಲೆ ಇದ್ದರು. ಚನ್ನು ವಾರದ , ಡಾ.ಪ್ರಶಾಂತ ಬಮ್ಮಣಿ , ಉಪನ್ಯಾಸಕ ಸಾಹಿತಿ ಮಂಜುನಾಥ ಜುನಗೊಂಡ , ಉಪನ್ಯಾಸಕ ವರದಿಗಾರ ಮಾಹಾಂತೇಶ ನೂಲನವರ ,ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಅಗಸರ , ಶಿಕ್ಷಕ ಬಸಲಿಂಗಯ್ಯ ಹಿರೇಮಠ,
ಸಂಗೀತ ಶಿಕ್ಷಕ ಮುತ್ತುರಾಜ ಅಲ್ದಿ , ಜ್ಞಾನೇಶ ಗೌರವ ,ಸಾಹಿತಿ ಗುಂಡಪ್ಪ ಕುಂಬಾರ , ಶಿಕ್ಷಕ ಗುರುನಾಥ ಅರಳಗುಂಡಗಿ , ಉಪನ್ಯಾಸಕ ಪ್ರದೀಪ ಕತ್ತಿ , ಶಿಕ್ಷಕ ಮಾಳು ಹೊಸೂರ, ಮುಖ್ಯಗುರುಮಾತ್ಯ ಪ್ರೇಮಾ ನಾಯ್ಕ , ದೇವರಹಿಪ್ಪರಗಿ ಕಸಾಪ ಅಧ್ಯಕ್ಷ ಸಿದ್ದು ಮೇಲಿನಮನಿ, ಕವಿಯಾತ್ರಿ ಶೃುತಿ ಮೇಲಿನಮನಿ, ಶಿಕ್ಷಕಿ ಹೊನ್ನಮ್ಮ ಹಿರೇಮಠ ,ಸಾಹಿತಿ ಅಶೋಕ ಬಿರಾದಾರ,ವರದಿಗಾರ ಸಿದ್ದು ಪೂಜಾರಿ ,ಸಿದ್ದಯ್ಯ ಹಿರೇಮಠ , ಸಂಗೀತಗಾರಾದ ಪ್ರಲ್ಹಾದ ಜಿ ಕೆ. ಯಲಾಲಿಂಗ ಬಿರಾದಾರ , ಶಿವಾನಂದ ಪರಸಪ್ಪಗೋಳ, ಜೀವನ ಪ್ರಕಾಶ ಕಲಬುರ್ಗಿ, ವೀಣಾ ನಾಯ್ಕ , ಪ್ರಶಾಂತ ಕೆಂಭಾವಿ , ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಲಬುರ್ಗಿ , ಬಾಗಲಕೋಟಿ, ಬೆಳಗಾವಿ , ಬೀದರ , ಯಾದಗೀರಿ , ಶಿಕಾರಿಪುರ, ಬೆಂಗಳೂರು , ಜತ್ತ, ಮಿರಾಜ , ಜಿಲ್ಲೆಯ 23೦ ಯುವ ಸಂಗೀತಗಾರರು ಭಾಗವಹಿಸಿದರು , ಅವರ ಧ್ವನಿ ಪರೀಕ್ಷ ಮಾಡಲಾಯಿತ್ತು ಎಂದು ರಾಗ ರಂಜನಿ ಸಂಚಾಲಕ ಡಾ.ಪ್ರಕಾಶ ತಿಳಿಸಿದರು.
ವರದಿ : ರಾಘವೇಂದ್ರ ಭಜಂತ್ರಿ
Politics
ರೋಹಿಣಿ ಸಿಂಧೂರಿ, ಡಿ.ಹೆಚ್.ಓ ಹಾಗೂ ಕೊರೊನಾ ವಾರಿಯರ್ಸ್ ಗೆ ಧನ್ಯವಾದಗಳು ಎಂದ ಪ್ರತಾಪ್ ಸಿಂಹ
ಮೈಸೂರಿ : ನಗರದ ಮೇಟಗಳ್ಳಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಪ್ರತಾಪ್ ಸೋರ್ಯ ರವರು ಕೋವಿಡ್- 19 ಲಸಿಕೆಯನ್ನು ಪಡೆದರು.
45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಿದ್ದು, ದಯವಿಟ್ಟು ಅರ್ಹ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಲಸಿಕೆ ಪಡೆಯಬೇಕೆಂದು ವಿನಂತಿಸುತ್ತೇನೆ.
ಮೈಸೂರು ಜಿಲ್ಲೆಯಲ್ಲಿ 4 ಲಕ್ಷ ಲಸಿಕೆಯನ್ನು ಹಾಕಿಸಬೇಕೆಂದು ಕೊಟ್ಟಿದ್ದ ಟಾರ್ಗೆಟ್ ನಲ್ಲಿ ಹೆಚ್ಚು ಕಡಿಮೆ 4 ಲಕ್ಷದ ಸಮೀಪಕ್ಕೆ ಬಂದಿದ್ದೀವಿ. ಪ್ರತಿನಿತ್ಯ 25 ಸಾವಿರ ಲಸಿಕೆ ಯನ್ನು ಹಾಕಿಸಬೇಕೆಂದು ಟಾರ್ಗೆಟ್ ಇದೆ . ಪ್ರತಿ ನಿತ್ಯ ನಾವು 35 ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹಾಗೂ ಲಸಿಕೆ ಉತ್ಸವದಲ್ಲಿ ಮೈಸೂರು ಮುಂಚೂಣಿಯಲ್ಲಿದೆ.
ಇದಕ್ಕೆ ಕಾರಣಕರ್ತರಾದ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ರವರಿಗೆ, ಡಿ.ಹೆಚ್.ಓ ಹಾಗೂ ಎಲ್ಲಾ ಕೊರೋನಾ ವಾರಿಯರ್ಸ್ ರವರಿಗೆ ಧನ್ಯವಾದಗಳು ಎಂದು ತಿಳಿಸಿದರು.
Politics
ಮಸ್ಕಿ ಕ್ಷೇತ್ರದ ಅಭ್ಯರ್ಥಿ ಪ್ರತಾಪಗೌಡರ ವಿರೋಧಿ ಅಲೆ ಸಿಎಂಗೆ ತಲೆ ಬಿಸಿ
ಮಸ್ಕಿ:- ಮಸ್ಕಿ ಚುನಾವಣೆಯಲ್ಲಿ ಬಿಜೆಪಿ ಅಬ್ಯರ್ಥಿಯನ್ನು ಗೆಲ್ಲಿಸಲು ಹರಸಾಹಸ ಪಡುತ್ತಿರುವ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಸ್ಕಿ ಉಪ ಚುನಾವಣೆ ಉಸ್ತುವಾರಿ ನೀಡಿರುವ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ಸಿಎಂ, ಕ್ಷೇತ್ರದಲ್ಲಿ ಪಕ್ಷ ವಿರೋಧಿ ಅಲೆಯಿದ್ದರು ಸರಿಪಡಿಸುವ ಕೆಲಸ ಮಾಡದೇ ಇರುವದಕ್ಕೆ ತಲೆ ಬಿಸಿ ಮಾಡಿಕೊಂಡು ಮುಖಂಡರುಗಳಿಗೆ ಚೀರಾಡಿ ಹಾರಾಡಿ ಬೆವರಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುದುಗಲ್ ಪಟ್ಟಣದ ದೊಡ್ಡನಗೌಡ ನಿವಾಸದಲ್ಲಿ ವಾಸ್ತವ್ಯ ಮಾಡಿರುವ ಮುಖ್ಯಮಂತ್ರಿ ಮಸ್ಕಿ ಕ್ಷೇತ್ರಕ್ಕೆ ಆಗಮಿಸಿ ಒಂದು ದಿನ ಪ್ರಚಾರ ಕಾರ್ಯ ಕೈಗೊಂಡಿದ್ದರು. ಆದರೆ ಕ್ಷೇತ್ರದಲ್ಲಿ ಜನರ ಅಸಮಧಾನವನ್ನು ಅರ್ಥೈಸಿಕೊಂಡು ಉಸ್ತುವಾರಿಗಳ ಸಭೆ ನಡೆಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಮಸ್ಯೆಗಳು, ಪರಿಹಾರ ಕಂಡುಕೊಳ್ಳಬೇಕಿದ್ದ ಉಸ್ತುವಾರಿಗಳು ಪ್ರಚಾರಸಭೆಗೆ ಸೀಮಿತವಾಗಿರುವದು.ಮತಗಳನ್ನು ಸೆಳೆದು ತಿಳಿವಾತಾವರಣ ನಿರ್ಮಿಸದಿರುವದಕ್ಕೆ ಸಿಎಂ ರನ್ನು ಕೆಂಡಮಂಡಲರನ್ನಾಗಿಸಿದೆ.
ಬಿಜೆಪಿ ಪಕ್ಷದ ಕಾರ್ಯದರ್ಶಿ ಎನ್.ರವಿಕುಮಾರ, ಸಚಿವ ಶ್ರೀರಾಮುಲು, ಪುತ್ರ ವಿಜಯೇದ್ರ, ಶಾಸಕರುಗಳಾದ ರಾಜೂಗೌಡ ಮತ್ತು ಡಾ.ಶಿವರಾಜಪಾಟೀಲ್ ಒಳಗೊಂಡ ಪ್ರಮುಖರ ಸಭೆ ನಡೆಸಿ ಪಕ್ಷದ ಅಬ್ಯರ್ಥಿ ಗೆಲುವಿಗೆ ಪ್ರಚಾರದೊಂದಿಗೆ ಸಮಸ್ಯೆಗಳತ್ತ ಪರಿಹರಿಸಲು ಮುಂದಾಗುವಂತೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರ ವಿರುದ್ದ ಕ್ಷೇತ್ರದಲ್ಲಿ ವಿರೋಧಿ ಅಲೆ ಎದುರಾಗಿರುವದು ಬಿಜೆಪಿ ನಾಯಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದರೂ ಜನರು ಬಿಜೆಪಿ ಅಬ್ಯರ್ಥಿ ಪರ ಒಲವು ತೋರದೇ ಬಹಿರಂಗವಾಗಿ ವಿರೋಧ ಮಾಡುತ್ತಿರುವದು ಬಿಸಿತುಪ್ಪವಾಗಿ ಪರಿಗಣಿಸಿದೆ.
ಪ್ರಾರಂಭದಿಂದಲೇ 5ಎ ಹೋರಾಟವನ್ನು ನಿರ್ಲಕ್ಷಿಸುತ್ತಲೇ ಬಂದ ಪ್ರತಾಪಗೌಡ ಪಾಟೀಲ್‌ರು ಕ್ಷೇತ್ರದ ನಿರ್ಣಾಯಕ ಗ್ರಾಮಗಳನ್ನು ಕಡೆಗಣಿಸಿರುವದು ಸಮಸ್ಯೆಗೆ ಕಾರಣವಾಗಿದೆ.
ಸಚಿವ ಶ್ರೀರಾಮುಲು 5ಎ ಕಾಲುವೆ ಮುಖಂಡರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗದೇ ಇರುದವರಿಂದ ಅನೇಕ ಹಂತದ ಪ್ರಯತ್ನಗಳನ್ನು ಬಿಜೆಪಿ ಮುಖಂಡರು ನಡೆಸಿದ್ದರೂ ವರ್ಕೌಟ್ ಆಗದೇ ಇರುವದರಿಂದ ಆತಂಕ ಎದುರಾಗುವಂತಾಗಿದೆ ಎಂದುಹೇಳಲಾಗಿದೆ.
5ಎ ಹೋರಾಟವನ್ನು ಬೆಂಬಲಿಸುತ್ತಿರುವ ಗ್ರಾಮಗಳಲ್ಲಿ ವಿಜಯೇಂದ್ರ ಅನೇಕ ತಂತ್ರಗಾರಿಕೆ ಅನುಸರಿಸುತ್ತಿದ್ದರೂ ಯಾವುದೇ ಫಲ ನೀಡದೇ ಇರುವದರಿಂದ ಸಮಸ್ಯೆ ಎದುರಿಸುವಂತಾಗಿದೆ.
ಗುಪ್ತಚರ ಮಾಹಿತಿಯೂ ಸೇರಿದಂತೆ ಮಸ್ಕಿ ಕ್ಷೇತ್ರದಲ್ಲಿರುವ ಅಸಮಧಾನವನ್ನು ಸರಿದೂಗಿಸಲು ಮುಖ್ಯಮಂತ್ರಿಗಳು ಎಲ್ಲಾ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿಯ ಮತದಾರರನ್ನು ಸೆಳೆಯಲು ಹಣ ಹಂಚಿಕೆ ಸಂದರ್ಭದಲ್ಲಿ ಗುಟ್ಟು ರಟ್ಟಾಗಿರುವದು ಪಕ್ಷದ ಇಮೇಜಿಗೆ ಧಕ್ಕೆ ತಂದಿದೆ.ಇದನ್ನೇ ಅಸ್ತ್ರವನ್ನಾಗಿ ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ಚಾಟಿ ಏಟು ಬೀಸುತ್ತಿದ್ದಾರೆ.ಕ್ಷೇತ್ರದಲ್ಲಿ ಸ್ವಾಭಿಮಾನ ಮತ್ತು ಹಣದ ಪ್ರಭಾವದ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ
ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮಸ್ಕಿ ಕ್ಷೇತ್ರಕ್ಕೆ ಬಾರದೇ ಇರುವ ಕುರಿತು ಅಸಮಧಾನ ವ್ಯಕ್ತವಾಗಿದೆ. ಪಕ್ಷ ಸವದಿಯರನ್ನು ಬಸವಕಲ್ಯಾಣದ ಉಸ್ತುವಾರಿಯನ್ನಾಗಿ ನೇಮಿಸಿದೆ. ಆದರೆ ಜಿಲ್ಲೆ ಉಸ್ತುವಾರಿಯಾಗಿದ್ದರೂ ಒಮ್ಮೆ ಬಂದು ಹೋದವರು ಮತ್ತೆ ಬಂದಿಲ್ಲ ಎಂಬದು ಸಹ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಜಿಲ್ಲೆಯ ಪ್ರಭಾವಿ ಮತ್ತು ಹಿರಿಯ ಶಾಸಕ,ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಶಿವನಗೌಡ ನಾಯಕ ಚುನಾವಣೆ ಚಟುವಟಿಕೆಗಳಿಂದ ದೂರ ಇರುವದು ಕೂಡ ವ್ಯಾಪಕ ಚರ್ಚೆಯಾಗುತ್ತಿದೆ.
ಮಾನ್ವಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಶಾಸಕ ಕೆ.ಶಿವನಗೌಡ ನಾಯಕರ ಸೇವೆಯನ್ನು ಪಕ್ಷ ಬಳಸಿಕೊಳ್ಳದಿರುವದು ಕೂಡ ಪ್ರಚಾರ ಕಣದಲ್ಲಿ ಚರ್ಚೆಯಾಗುತ್ತಿದೆ.
ಉಸ್ತುವಾರಿ ವಹಿಸಿಕೊಂಡುವರು ಇಲ್ಲಿಯವರೆಗೆ ಪರಸ್ಥಿತಿಯನ್ನು ಸುಧಾರಿಸಲು ಯಾವ ಸಕರಾತ್ಮಕ ಕ್ರಮಗಳನ್ನು ಮುಂದಾಗದೇ ಇರುವದಕ್ಕೆ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಉಸ್ತುವಾರಿಗಳಿಗೆ ಟಾಸ್ಕ್ ನೀಡಿರುವ ಸಿಎಂ ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಮೂಲಕ ಗೆಲುವಿಗೆ ಶ್ರಮಿಸುವಂತೆ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
Politics
ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ಗೆ ಕೋವಿಡ್ ದೃಢ
ಮಸ್ಕಿ :-ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಕೋವಿಡ್ ದೃಢವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಾಕಿದ್ದಾರೆ.
ಇದರ ಬಗ್ಗೆ ಪ್ರತಾಪಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ :- ನನಗೆ ಕೊವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಗಿ ಇದ್ದೇನೆ. ಯಾರೂ ಆತಂಕ ಪಡಬೇಕಾಗಿಲ್ಲ, ಶೀಘ್ರ ಗುಣಮುಖನಾಗಿ ಬರುತ್ತೇನೆ.17 ರಂದು ಮತದಾನ ಇದ್ದು ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮನ್ನು ಭೇಟಿ ಮಾಡುತ್ತಾರೆ. ಅವರನ್ನು ನಾನೇ ಎಂದು ಪರಿಭಾವಿಸಿ ಆಶೀರ್ವದಿಸಲು ಮತ್ತು ಕಮಲದ ಗುರುತಿಗೆ ಮತ ನೀಡಲು ಕೋರುತ್ತೇನೆ. ನಿಮ್ಮ ಮತ್ತು ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಲು ವಿನಂತಿಸುತ್ತೇನೆ ಎಂದು ಮಸ್ಕಿ
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಹೇಳಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Uncategorized4 weeks ago
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
-
Politics3 weeks ago
ಪುರಸಭೆಯ ಸ್ಥಾಯಿ ಸಮಿತಿಗೆ ಎ.ನಂಜುಂಡಪ್ಪ ಅವಿರೋಧ ಆಯ್ಕೆ
-
ಸುದ್ದಿ2 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ6 days ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?