ಮನರಂಜನೆ
ಇಂಧನ ಬೆಲೆ ಏರಿಕೆಯ ವಿರುದ್ದ ಸೈಕಲ್ ನಲ್ಲಿ ಮತಗಟ್ಟೆ ಕಡೆ ಹೊರಟ ವಿಜಯ್ ದಳಪತಿ
ಕೇಂದ್ರ ಸರ್ಕಾರವು ಇಂಧನ ಏರಿಕೆ ಮಾಡುತ್ತಲೇ ಇದೆ. ಈಗಾಗಲೇ ₹100 ರ ಗಡಿ ಸಮೀಪಿಸುತ್ತಿದೆ. ಇದನ್ನು ಹಲವು ರೀತಿಯಲ್ಲಿ ಖಂಡಿಸಲಾಗುತ್ತಿದೆ.
ಇಂದು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳು ಸೂಪರ್ಸ್ಟಾರ್ ದಳಪತಿ ವಿಜಯ್ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿ ಗಮನ ಸೆಳೆದಿದ್ದಾರೆ.
ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನ ಮತಗಟ್ಟೆಯಲ್ಲಿ ವಿಜಯ್ ಮತ ಚಲಾಯಿಸಿದರು. ವಿಜಯ್ ಸೈಕಲ್ ಸವಾರಿ ವೇಳೆ ಕೆಲ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಭಾರೀ ಸಂಖ್ಯೆಯ ಅಭಿಮಾನಿಗಳು ಸುತ್ತುವರಿದಿದ್ರಿಂದ ವಿಜಯ್ ಬೇಗನೆ ಅಲ್ಲಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.
ಬಳಿಕ ಅವರು ತಮ್ಮ ಸಿಬ್ಬಂದಿಯೊಬ್ಬರ ಟೂ ವೀಲರ್ನಲ್ಲಿ ಹಿಂದೆ ಕುಳಿತು ಪ್ರಯಾಣ ಮುಂದುವರಿಸಬೇಕಾಯ್ತು. ವಿಜಯ್ ಅವರ ಮತ್ತೋರ್ವ ಸಿಬ್ಬಂದಿ ಸೈಕಲ್ ತೆಗೆದುಕೊಂಡು ಹೋದ್ರು. ಇನ್ನು ಮತಗಟ್ಟೆ ಬಳಿಯೂ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ಅವರನ್ನ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ರು.
ವಿಜಯ್ ಅವರು ಮತಗಟ್ಟೆಗೆ ಸೈಕಲ್ನಲ್ಲಿ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ತಮ್ಮ ನೆಚ್ಚಿನ ನಟ ಬಿಸಿಲಿನಲ್ಲೂ, ಫೇಸ್ ಮಾಸ್ಕ್ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ. ಅದು ಸುಲಭವಲ್ಲ ಎಂದು ವಿಜಯ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ. ಇನ್ನು ವಿಜಯ್ ಅವರು ಇಂಧನ ದರ ಏರಿಕೆ ಖಂಡಿಸಲು ಸೈಕಲ್ನಲ್ಲಿ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ.
ಮನರಂಜನೆ
ತಾಳಿಕೋಟಿಯ ಶ್ರೀ ಸಾಯಿ ಮೇಲೋಡಿ ಆರ್ಕೆಸ್ಟ್ರಾ
ತಾಳಿಕೋಟೆ : ಶ್ರೀ ಸಾಂಬ ಪ್ರಭು ಶರಣ ಮುತ್ಯಾನ ರವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಳಿಕೋಟಿಯ ಶ್ರೀ ಸಾಯಿ ಮೇಲೋಡಿ ಆರ್ಕೆಸ್ಟ್ರಾ ವತಿಯಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ದಂತ ನಿಂಗರಾಜ ಶರಣರು, ಹಾಗೂ ಪುರಸಭೆಯ ಅಧ್ಯಕ್ಷರಾದ ಸಂಗಮೇಶ್ ಇಂಗಳಗಿ, ಜೈಸಿಂಗ್ ಮೂಲಿಮನಿ, ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ, ನಿಂಗರಾಜ್ ಕುಂಟೋಜಿ, ವಾಸುದೇವ್ ಹೆಬ್ಸೂರು, ಮಾನ್ಸಿಂಗ್ ಕೋಕಟ್ನೂರ್ ಸಿದ್ದನಗೌಡ ಪೊಲೀಸ್ ಪಾಟೀಲ್, ಸಿದ್ದಣ್ಣ ಶರಣರ, ಶಿವಶಂಕರ ಹಿರೇಮಠ, ತಂಡದ ಗಾಯಕರಾದ ಅಂಬರೀಶ್ ಇಂಗಳಗಿ, ಕಾಶಿನಾಥ್ ಕಾರಗನೂರು , ಹಿರಿಯ ಪತ್ರಕರ್ತರಾದ ಜಿಟಿ ಗೋರ್ಪಡೆ, ವಿಶೇಷ ಆಹ್ವಾನಿತರಾದ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಉಪೇಂದ್ರ, ಸಿದ್ದಾರ್ಥ್ ಬೈಚಬಾಳ, ಗಾಯಕಿಯರಾದ ಶೀಲಾ ಹಿರೇಮಠ, ದೀಪ ಮುದ್ದೇಬಿಹಾಳ, ಭಾಗ್ಯ ತಾಳಿಕೋಟಿ ಹಾಗೂ ಗಾಯಕರಾದ ಬಿಎಂ ಗೋಗಿ, ಸಂಗಮೇಶ್ ನಾಲತವಾಡ, ಪ್ರಭು ಸಣ್ಣಕ್ಕಿ, ಆನಂದ ಮುದ್ದೇಬಿಹಾಳ, ಬಸನಗೌಡ ಪಾಟೀಲ್, ಪರಶುರಾಮ್ ಯಾಳವಾರ, ಮುತ್ತು ಕುಂಬಾರ, ಬಸವರಾಜ್ ಮಸ್ಕನಾಳ, ಪ್ರಭು ಸಣ್ಣಕ್ಕಿ, ಹರೀಶ್ ಬಸರಿಕಟ್ಟಿ ಕಿಶೋರ್ ಕುಮಟೆ, ಸಿದ್ದು ಚಿಮಲಗಿ, ತಾಳಿಕೋಟೆ ಸಮಸ್ತ ನಾಗರಿಕರು ರಸಮಂಜರಿ ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು.
ವರದಿ: ದೇವು ಕೂಚಬಾಳ ತಾಳಿಕೋಟೆ
ಮನರಂಜನೆ
“ವರ್ಷದ ಕನ್ನಡಿಗ ಪ್ರಶಸ್ತಿ 2021” : ಆ.ರ್ ಅಶೋಕ್
ಬೆಂಗಳೂರು : ಜೆಡಬ್ಲ್ಯೂ ಮ್ಯಾರಿಯೊಟ್ ಹೋಟೆಲ್ ನಲ್ಲಿ ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯ ವತಿಯಿಂದ ಪ್ರತಿವರ್ಷ ಕೊಡಮಾಡುವ “ವರ್ಷದ ಕನ್ನಡಿಗ ಪ್ರಶಸ್ತಿ 2021″ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್ ಅಶೋಕ್ ಅವರು ಸಾಧಕರಿಗೆ ಪ್ರಶಸ್ತಿ ವಿತರಿಸಿದರು.
“ವರ್ಷದ ಕನ್ನಡಿಗ ಪ್ರಶಸ್ತಿ”ಯ ಮೂಲಕ ಕನ್ನಡಿಗರು ಮಾಡಿದ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಎಂದರು.
ಮನರಂಜನೆ
ಹಳ್ಳಿ ವಾತಾವರಣಗಳಲ್ಲಿ ಪ್ರೊಡಕ್ಷನ್ ನಂ.5 ಕಿರುಚಿತ್ರ ಒಂದು ಸುಂದರ ಪ್ರೇಮ ಕಥೆ
ರಾಯಚೂರು ಮಾ.22- ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ತಾಲೂಕಿನ ಕಲ್ಲೂರು, ಗಂಜಳ್ಳಿ, ಮನ್ಸಲಾಪುರ, ಕೊರ್ತೆಕುಂದ, ಗ್ರಾಮದ ಸುಂದರ ಪರಿಸರದಲ್ಲಿ ನಡೆದಿದ್ದ ಪ್ರೊಡಕ್ಷನ್ ನಂ 5 ಒಂದು ಸುಂದರ ಪ್ರೇಮ ಹಾಗೂ ಕಮರಷಿಯಲ್ ವಿಷಯ ಹೊಂದಿದ ಕಿರುಚಿತ್ರವು10 ದಿನಗಳ ಕಾಲ ಚಿತ್ರಿಕರಣ ಮಾಡಿ ಇಂದು ಯಶಸ್ವಿ ಯಾಗಿ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಬರುವ ಮುಂದಿನ ದಿನಗಳಲ್ಲಿ ಚಿತ್ರದ ಸಂಪೂರ್ಣ ತಾಂತ್ರಿಕ ಕೆಲಸವನ್ನು ಮುಗಿಸಿ ಜನರ ಮುಂದೆ ನೀಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಂದರ್ಭದಲ್ಲಿ ಈ ಚಿತ್ರದ ನಿರ್ದೇಶಕ ರಾಜ ರಾಯ್, ಚಿತ್ರದ ನಾಯಕ ರೆಮೋ, ನಾಯಕಿ ಖುಷಿ, ಖಳನಾಯಕ ಮಾಂತೂ ಕ್ರಿಶ್, ಛಾಯಾಗ್ರಾಹಕ,ವಿಜಯಕುಮಾರ್ ಜಿ ಹಾಗೂ ರಂಗಭೂಮಿ ಕಲಾವಿದರದ ನರಸಿಂಹ,ವಿಶಾಲ್ ಕಲಾವಿದರದ,ಶ್ಯಾಮ್,ಲಕ್ಶ್ಮಣ ಗೌಡ,ಪ್ರಭು, ಕೋಟೆ ರಾಜು, ದ್ರುವ (ಸಣ್ಣ ) ಪ್ರಭು,ವಿಜಯಲಕ್ಷ್ಮಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ ಕೆ.ಶಂಕರ್ ಕುರುಬದೊಡ್ಡಿ,ಮುತ್ತುರಾಜ್ ,
ಪವನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Uncategorized3 weeks ago
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
-
Politics2 weeks ago
ಪುರಸಭೆಯ ಸ್ಥಾಯಿ ಸಮಿತಿಗೆ ಎ.ನಂಜುಂಡಪ್ಪ ಅವಿರೋಧ ಆಯ್ಕೆ
-
ರಾಜ್ಯ4 weeks ago
ಪಟ್ಟಣದ ಎಲೆಟ್ ಪದವಿಪೂರ್ವ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ
-
ಸುದ್ದಿ5 days ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ