Connect with us
Ad Widget

ಸುದ್ದಿ

ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?

Published

on

ಬಾಗೇಪಲ್ಲಿ: ತಾಲ್ಲೂಕಿನ ಪಿಚ್ಚಲವಾರಪಲ್ಲಿ ಗ್ರಾಮದ ಗುಣಕಲ ನರಸಿಂಹಪ್ಪ ಎಂಬ ಕುರಿಗಾಹಿಗೆ ಸೇರಿದ 9 ಕುರಿಗಳು ಸೋಮವಾರ ಸಂಜೆ ಸಾವನ್ನಪ್ಪಿವೆ. ಈ ದುರ್ಘಟನೆಗೆ ವಿಷ ಆಹಾರ ಸೇವೆನೆ ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಸತ್ತ ಕುರಿಗಳನ್ನು ಗುಣಿ ತೆಗೆದು ಅದಕ್ಕೆ ಹೂತಿಡಲಾಗಿದೆ.

ಕಳೆದೆರಡು ದಿನಗಳ ಹಿಂದೆ ಇದೇ ಗ್ರಾಮದ ಈಶ್ವರಪ್ಪ ಮತ್ತು ಬಯ್ಯಪ್ಪ ಎಂಬ ಇಬ್ಬರ ಕುರಿಗಾಹಿಗಳ ತಲಾ ಐದೈದು ಕುರಿಗಳು ಇದೇ ರೀತಿಯಲ್ಲಿ ಸಾವನ್ನಪ್ಪಿದ್ದವು.

ಇಂತಹ ಘಟನೆಗಳಿಂದಾಗಿ ಕುರಿಗಾಹಿಗಳು ತಮ್ಮ ಬದುಕಿನ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದ್ದು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿದೆ. ಆದರೆ ಇಲಾಖೆಯ ವತಿಯಿಂದ ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು ಕೊಡುತ್ತಿದ್ದ ಸತ್ತ ಕುರಿಗೆ ₹5000 ಪರಿಹಾರವನ್ನು ಈಗಿನ ಯಡಿಯೂರಪ್ಪ ಸರ್ಕಾರ ನಿಲ್ಲಿಸಿದೆ. ಕಳೆದ ಬಜೆಟ್ ನಲ್ಲಿ ಕುರಿಗಾಹಿಗಳ ನೆರವಿಗೆ ಪರಿಹಾರವನ್ನು ಘೋಷಿಸಿದೆಯಾದರೂ ಅಧಿಕೃತ ಆದೇಶ ಇನ್ನು ಇಲಾಖೆಗಳಿಗೆ ತಲುಪದ ಕಾರಣ ಕುರಿಗಾಹಿಗಳ ಪಾಲಿಗೆ ಕಹಿಯಾಗಿ ಪರಿಣಮಿಸಿದೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರಾಗಲಿ, ದಾನಿಗಳಾಗಲಿ ಕುರಿಗಾಹಿಗಳ ಸಹಾಯಕ್ಕೆ ಬರಬೇಕು, ಜೀವನದ ಆಸರೆಯಾಗಿದ್ದ ಕುರಿಗಳ ಸಾವಿನ ನೋವಿಗೆ ಸ್ಪಂದಿಸಬೇಕೆಂದು ಗುಣಕಲ ನರಸಿಂಹಪ್ಪ ಅಳಲನ್ನು ತೋಡಿಕೊಂಡರು.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಧಾರ್ಮಿಕ ಚೇತನ ಜನಪರ ಸೇವಾ ಟ್ರಸ್ಟ್ ವಾರ್ಷಿಕ ಸಮಾರಂಭ

Published

on

ಪೀಣ್ಯ ದಾಸರಹಳ್ಳಿ: ಪೀಣ್ಯ 1ನೇ ಹಂತದಲ್ಲಿರುವ ಧಾರ್ಮಿಕ ಚೇತನ ಜನಪರ ಸೇವಾ ಟ್ರಸ್ಟ್ ನ ವಾರ್ಷಿಕ ಸಮಾರಂಭವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೆಲ್ಪ್ ಏಜ್ ಇಂಡಿಯಾ ಮುಖ್ಯಸ್ಥ ಪ್ರಕಾಶ್, ಗಾಯಿತ್ರಿ, ಸ್ಟಾನ್ಲಿ ಸ್ಟೀಫನ್, ಟ್ರಸ್ಟ್ ನ ಅಧ್ಯಕ್ಷ ನರಸಿಂಹಯ್ಯ.ವಿ ಹಾಗೂ ಪದಾಧಿಕಾರಿಗಳು ಇದ್ದರು.

Continue Reading

ಸುದ್ದಿ

ತಾಲ್ಲೂಕು ಸಭಾಂಗಣದಲ್ಲಿ 114 ನೇ ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆ

Published

on

ಶಿಡ್ಲಘಟ್ಟ : ತಾಲ್ಲೂಕು ಸಭಾಂಗಣದಲ್ಲಿ 114 ನೇ ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆಯನ್ನು ನಾಡಹಬ್ಬಗಳ ಆಚರಣಾ ಸಮಿತಿವತಿಯಿಂದ ಆಚರಣೆ ಶಾಸಕ ವಿ.ಮುನಿಯಪ್ಪ ದೀಪ ಬೆಳಗಿಸಿ ಮಾತನಾಡಿದರು. ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು, ಹಸಿರು ಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು, ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದವರು. ಅವರ ಸೇವೆ ಸ್ಮರಣೀಯವಾದದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು. 114 ನೇ ಜಗಜೀವನ್ ರಾಮ್ ಜಯಂತಿ ಕರೋನಾ ಸೋಂಕು ಹಿನ್ನಲೆ ಸಾಂಕೇತಿಕವಾಗಿ ಆಚರಣೆ ಮಾಡಲಾಗಿದ್ದು ಅನ್ಯಥಾ ಭಾವಿಸಬೇಡಿ ಬಾಬೂ ರಾಮ್ ರವರು ಗಾಂಧೀಜಿಯವರ ಜೋತೆಯಲ್ಲಿ ಜಾತೀಯ ವ್ಯವಸ್ತೆ ಬದಲಾಯಿಸಲು ಹೋರಾಟ ಮಾಡಿದವರ ಮೊದಲ ನಾಯಕ 9 ಬಾರಿ ಸತತವಾಗಿ ಗೆದ್ದು ಒಳ್ಳೆಯ ಹುದ್ದೆಗಳನ್ನು ಪಡೆದು ಅನೇಕ ಬದಲಾವಣೆಗಳನ್ನು ತಂದ ಮಹಾನ್ ವ್ಯಕ್ತಿ ಎಂದು ತಹಶೀಲ್ದಾರ್ ರಾಜೀವ್ ಹೇಳಿದರು. ಕ್ರೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಸುಬ್ಬಾರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ, ದಲಿತ ಸಂಘಟನೆಗಳ ಮುಖಂಡರುಗಳಾದ ನಾಗ ನರಸಿಂಹ.ದ್ಯಾವಕೃಷ್ಣಪ್ಪ. ಕೆ.ನಾರಾಯಣಸ್ವಾಮಿ. ಕೆ.ಎನ್.ಮುನೀಂದ್ರ ಮುತ್ತೂರು ವೆಂಕಟೇಶ್ ನಗರಸಭೆ ಸದಸ್ಯ ಕೃಷ್ಣ ಮೂರ್ತಿ ಸೇರಿದಂತೆ ಸಮುದಾಯದ ಮುಖಂಡರುಗಳು ಮುಂತಾದವರು ಹಾಜರಿದ್ದರು.

ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ರಾಜ್ಯ

ಟೀ, ಕಾಫಿ ಬೊಂಡ ತಿಂಡಿ ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ

Published

on

ಬಾಗೇಪಲ್ಲಿ: ತಾಲೂಕಿನ ಕ.ರಾ.ರ.ಸಾ.ಸ.ಘಟಕದ ವತಿಯಿಂದ ಸಾರಿಗೆ ನೌಕರರು, ಶುಕ್ರವಾರ ಕಪ್ಪುಪಟ್ಟಿ ಧರಿಸಿ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಟೀ, ಕಾಫಿ ಬೊಂಡ ತಿಂಡಿ ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ನೌಕರರ ರಾಜ್ಯ ಕ.ರಾ.ರ.ಸಾ.ಸ ಬಾಗೇಪಲ್ಲಿ ತಾಲ್ಲೂಕು ಘಟಕದ ಅದ್ಯಕ್ಷ ಚಂಡೂರು ಮೂರ್ತಿ ಮಾತನಾಡಿ ಸರ್ಕಾರ ನೌಕರರ ಕಷ್ಟವನ್ನು ಅರ್ಥಮಾಡಿಕೊಂಡು, ಆರನೇ ವೇತನವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ದಿನನಿತ್ಯದ ಎಲ್ಲಾ ಬೆಲೆಗಳು ದುಬಾರಿಯಾಗಿದ್ದು, ಸರ್ಕಾರ ನೀಡುತ್ತಿರುವ ಅತ್ಯಂತ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು.

ನಲ್ಲಪ್ಪರೆಡ್ಡಿಪಲ್ಲಿ ಮಂಜುನಾಥ ಮಾತನಾಡಿ, 6ನೇ ವೇತನ ಜಾರಿಗೊಳಿಸಲು ಸರ್ಕಾರ ನೀಡಿದ್ದ ಗಡುವು ಪೂರ್ಣಗೊಂಡಿದೆ.

ನೌಕರರ ಸಂಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ನಮ್ಮನ್ನು ಸರ್ಕಾರಿ ನೌಕರರೆಂದು ಘೋಷಿಸಿ ಎಂದು ಹೋರಾಡುತ್ತಲೇ ಬಂದಿದ್ದೇವೆ. ಹಾಗಾಗಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್