Politics
ವಿವಿಧ ಕೃಷಿ ಪರಿಕರಗಳ ವಿತರಣೆ ಸಮಾರಂಭ
ಹಿರೇಕೆರೂರು : ಕೃಷಿ ಇಲಾಖೆಯ ವತಿಯಿಂದ ನಗರದ ಪೊಲೀಸ್ ಮೈದಾನದಲ್ಲಿ, ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸ್ಮರಣಾರ್ಥ ಆಯೋಜಿಸಿದ್ದ “ವಿವಿಧ ಕೃಷಿ ಪರಿಕರಗಳ ವಿತರಣೆ ಸಮಾರಂಭ”ದಲ್ಲಿ ಭಾಗಿಯಾದ ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳಿಗೆ ಬಳಸುವ ಸಾಮಗ್ರಿಗಳನ್ನು, ಟ್ರ್ಯಾಕ್ಟರ್, ಸ್ಪ್ರಿಂಕ್ಲರ್ ಪೈಪುಗಳು ಹಾಗೂ ಹಸುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ನಗರದ ಗಣ್ಯರು, ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Politics
ವಿಧಾನಸೌಧದ ಆವರಣದಲ್ಲಿರುವ ಡಾII ಬಾಬು ಜಗಜೀವನರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ
ಬೆಂಗಳೂರು : ಭಾರತದ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನರಾಮ್ ಅವರ 114ನೇ ಜನ್ಮದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.
Politics
ಉಳ್ಳವರು ಸಮಾಜಮುಖಿ ಕಾರ್ಯಗಳಿಗೆ ನೆರವಾಗಿ : ಪಿಜಿಆರ್ ಸಿಂಧ್ಯಾ
ಟಿ.ದಾಸರಹಳ್ಳಿ : ‘ಉಳ್ಳವರು ಸಮಾಜಮುಖಿ ಕಾರ್ಯಗಳಿಗೆ ಆರ್ಥಿಕ ಸಹಾಯ ಹಾಗೂ ಸಹಕಾರ ನೀಡಬೇಕು’ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದರು.
ಮಾಗಡಿ ಮುಖ್ಯರಸ್ತೆಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಬೆಳಕು ಅಕಾಡೆಮಿಯ 7ನೇ ವಾರ್ಷಿಕೋತ್ಸವ ಹಾಗೂ ಅಶ್ವಿನಿ ಅಂಗಡಿ ಅವರ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಅಶ್ವಿನಿ ಅಂಗಡಿ ಅವರು ಹುಟ್ಟಿನಿಂದಲೂ ಸಂಪೂರ್ಣ ದೃಷ್ಟಿದೋಷ ಹೊಂದಿದ್ದರೂ ಲೆಕ್ಕಿಸದೆ ಉತ್ತಮ ಶಿಕ್ಷಣ ಪಡೆದು ಪದವೀಧರೆಯಾಗಿದ್ದಾರೆ. ವಿಶೇಷಚೇತನರಿಗೆ ಔದ್ಯೋಗಿಕ ಶಿಕ್ಷಣ ನೀಡುವಲ್ಲಿ ಸಫಲರಾಗಿದ್ದಾರೆ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಂಧರ ಬಾಳಿಗೆ ಬೆಳಕಾಗಲು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.
ಬೆಳಕು ಅಕಾಡೆಮಿಯ ಸಂಸ್ಥಾಪಕಿ ಅಶ್ವಿನಿ ಅಂಗಡಿ ಮಾತನಾಡಿ ‘ಉತ್ತಮ ಶಿಕ್ಷಣ ಪಡೆಯಲು ಹಾಗೂ ಅಂದುಕೊಂಡಿದ್ದನ್ನು ಸಾಧಿಸಲು ಅಂಧತ್ವ ನನಗೆ ಎಂದೂ ಅಡ್ಡಿಯಾಗಲಿಲ್ಲ. ಆದರೆ ಉದ್ಯೋಗಕ್ಕೆ ಪೂರಕವಾದ ಕಂಪ್ಯೂಟರ್ ಶಿಕ್ಷಣ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರೂ ನನ್ನ ದೃಷ್ಟಿ ದೋಷವನ್ನು ನೆಪವಾಗಿಟ್ಟುಕೊಂಡು ಉದ್ಯೋಗ ನೀಡಲು ಮಾಲೀಕರು ನಿರಾಕರಿಸುತ್ತಿದ್ದರು. ಅಂತಿಮವಾಗಿ ಬಹುರಾಷ್ಟ್ರೀಯ ಕಂಪೆನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಸಿಕ್ಕರೂ ನನ್ನಂತೆ ದೃಷ್ಟಿದೋಷವುಳ್ಳವರಿಗೆ ಉತ್ತಮ ಶಿಕ್ಷಣ ಹಾಗೂ ತರಬೇತಿ ನೀಡಲು ಮನಸ್ಸು ಹಾತೊರೆಯುತ್ತಿತ್ತು ಇದರ ಫಲವಾಗಿ ಹಾಗೂ ಸಮಾನ ಮನಸ್ಕರ ಸಹಕಾರದಿಂದಾಗಿ ಬೆಳಕು ಅಕಾಡೆಮಿ ಸ್ಥಾಪನೆಗೊಂಡಿದೆ.
ಸದ್ಯ 35 ಅಂಧ ವಿದ್ಯಾರ್ಥಿಗಳ ಜತೆಗೆ 20 ಸಾಮಾನ್ಯ ವಿದ್ಯಾರ್ಥಿಗಳಿಗೆ ಊಟ, ವಸತಿ, ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಸೇರಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕ ಶಿಕ್ಷಣ ನೀಡಲಾಗುತ್ತಿದೆ’ ‘ಸಹಾಯಕರ ನೆರವಿಲ್ಲದೆ ಸ್ಕ್ರೀನ್ ರೀಡರ್ ಮುಖೇನ ಅಂಧ ವಿದ್ಯಾರ್ಥಿಗಳೇ ಸ್ವತಃ ಪರೀಕ್ಷೆ ಬರೆಯುವ ಹೊಸ ಶಿಕ್ಷಣ ಕ್ರಾಂತಿ ನಮ ಶಾಲೆಯಲ್ಲಿ ನಡೆಯುತ್ತಿದೆ. ಜತೆಗೆ ಅಂಧ ವಿದ್ಯಾರ್ಥಿಗಳು ತಮ್ಮಿಷ್ಟದ ವಿಜ್ಞಾನ ವಿಷಯ ಕಲಿಯಲು ಆ ವಿಶೇಷ ಪ್ರಯೋಗಾಲಯ ತೆರೆಯಲಾಗಿದೆ. ವಿಜ್ಞಾನ ಮಾದರಿಗಳು ಹಾಗೂ ಮನುಷ್ಯನ ಅಂಗಾಂಗಗಳನ್ನು ಸ್ಪರ್ಶಿಸಿ ಅನುಭವಿಸುವ ಅವಕಾಶ ಬೆಳಕು ಅಕಾಡೆಮಿಯಲ್ಲಿದೆ ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ’ ಎಂದರು.
ಇದೇ ವೇಳೆ ಅಶ್ವಿನಿ ಅಂಗಡಿ ಅವರ ಸೀಮಂತ ಕಾರ್ಯಕ್ರಮ ನೆರವೇರಿತು. ಚಂಡೆ ವಾದ್ಯ, ಪೂಜಾ ಕುಣಿತ ವಿವಿಧ ಬಗೆಯ ನೃತ್ಯ ಮಾಡಿ ಸುಶ್ರಾವ್ಯವಾಗಿ ಹಾಡಿ ಅಂಧ ಮಕ್ಕಳು ಸಭಿಕರ ಕಣ್ಮನ ತಣಿಸಿದರು.
ಕ್ಯಾಪ್ಟನ್ ನವೀನ್ ನಾಗಪ್ಪ, ಲೇಖಕ ನವೀನ್ ಲಕ್ಕೂರ್, ಸಮರ್ಥನಂ ಮಹಾಂತೇಶ್, ಬೆಳಕು ಅಕಾಡೆಮಿ ಅಧ್ಯಕ್ಷ ಡಾ. ಪ್ರದೀಪ್ ಎಸ್, ಅಂತಾರಾಷ್ಟ್ರೀಯ ಸಂಯೋಜಕಿ
ಡಾ.ಮಂಜುಳ ಬಟ್ಟಲೂರಿ, ಅಶ್ವಿನಿ ಅಂಗಡಿ ಪತಿ ವೀರೇಶ್, ಪಾಲಕರಾದ ವೇದಾವತಿ, ಪ್ರಕಾಶ್ ಮೊದಲಾದವರಿದ್ದರು.
Politics
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ವತಿಯಿಂದ ಸಾಧಕರಿಗೆ ಸನ್ಮಾನ
ಪೀಣ್ಯ ದಾಸರಹಳ್ಳಿ:’ ಜಾತಿಭೇದವಿಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ನಮ್ಮ ಕಮಿಟಿಯಿಂದ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ’ ಎಂದು ಹ್ಯೂಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಹೇಳಿದರು.
ತರಬನಹಳ್ಳಿಯ ಅರ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೋವಿಡ್ ಸಮಯದಲ್ಲಿ ಇಡೀ ಬೆಂಗಳೂರಿನಲ್ಲಿ ನಮ್ಮ ಕಮಿಟಿ ನಗರ ಅಧ್ಯಕ್ಷರು ಆಹಾರ ಕಿಟ್, ಊಟ ನೀಡಿದ್ದಾರೆ’
‘ನಾವು ಯಾವುದೇ ರಾಜಕೀಯ ಪಕ್ಷದವರಲ್ಲ, ಜನ ಸೇವೆ ಮಾಡುತ್ತಾ ಅನ್ಯಾಯದ ವಿರುದ್ಧ ಹೋರಾಟ ಮಾಡಿ ನ್ಯಾಯ ಕೊಡಿಸಲು ನಿಮ್ಮೆಲ್ಲರ ಸಹಾಯ ಮುಖ್ಯ. ಈಗಾಗಲೇ ಅನೇಕ ಕಡೆಗಳಲ್ಲಿ ನ್ಯಾಯ ಕೊಡಿಸಿದ್ದೇವೆ’
ಬೆಂಗಳೂರು ನಗರ ಅಧ್ಯಕ್ಷ ಎಂ.ಡಿ.ಅಂಜದ್ ಮಾತನಾಡಿ ನಮ್ಮ ಹಕ್ಕುಗಳ ರಕ್ಷಣೆ ಮಾಡು ಇಂತಹ ಕಮಿಟಿ ಬಹಳ ಮುಖ್ಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರ ಹಿತ ಕಾಯಲು ಕಮಿಟಿಯು ಕಾರ್ಯಪ್ರವೃತ್ತವಾಗುತ್ತಿದೆ ಎಂದರು .
‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಇಂದು ಸನ್ಮಾನ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ’ ಎಂದು ಶುಭಕೋರಿದರು.
ಈ ಸಮಯದಲ್ಲಿ ಸನ್ಮಾನಿತರಿಗೆ ಪುಷ್ಪ ವೃಷ್ಟಿಯನ್ನು ಸುರಿಸಿ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು.ಈ ವೇಳೆ ಕಮಿಟಿಯ ಆಗುಹೋಗುಗಳ ಬಗ್ಗೆ ಚರ್ಚಿಸಲಾಯಿತು.
ಸಮಾರಂಭದಲ್ಲಿ ಕಮಿಟಿಯ ರಾಜ್ಯ ಪಿ. ಆರ್. ಓ. ನವ್ಯ, ನಗರ ಅಧ್ಯಕ್ಷ ಎಂ.ಡಿ. ಅಂಜದ್ , ರಾಜ್ಯ ಸಹಕಾರ್ಯದರ್ಶಿ ಮಹಮದ್ ಅಜ್ಗರ್ , ರಾಜ್ಯ ಸಂಚಾಲಕ ಪ್ರವೀಣ್ ರೆಡ್ಡಿ, ರಾಜ್ಯ ಸದಸ್ಯ ಅರುಣ್ ಶ್ರೀನಿವಾಸ್, ಸುಕನ್ಯ, ಸುಲೋಚನ, ಭಾರತಿ, ಮಂಜುಳಾ ಮುಂತಾದವರಿದ್ದರು.
-
Uncategorized3 weeks ago
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
-
Politics2 weeks ago
ಪುರಸಭೆಯ ಸ್ಥಾಯಿ ಸಮಿತಿಗೆ ಎ.ನಂಜುಂಡಪ್ಪ ಅವಿರೋಧ ಆಯ್ಕೆ
-
ರಾಜ್ಯ4 weeks ago
ಪಟ್ಟಣದ ಎಲೆಟ್ ಪದವಿಪೂರ್ವ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ
-
ಸುದ್ದಿ4 days ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ