Connect with us
Ad Widget

ರಾಜ್ಯ

ರಾಜ್ಯದಲ್ಲಿ ಮತ್ತೊಂದು ಸ್ಪೋಟ, ಓರ್ವ ಸಾವು

Published

on

ಹಾಸನ: ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸೂತಕದ ಛಾವೆ ಮರೆಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಹಾಸನ ತಾಲೂಕಿನ ಚಾಕೇನಹಳ್ಳಿಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಸಂಪತ್ (27) ಎಂಬ ಯುವಕ ಸಾವನ್ನಪ್ಪಿದ್ದು , ಮತ್ತಿಬ್ಬರು ಗಾಯಗೊಂಡಿದ್ದಾರೆ. ಒಬ್ಬ ಗಾಯಾಳುವನ್ನು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಮತ್ತೋರ್ವನನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಪೋಟಕಗಳನ್ನು ಸ್ಥಳಾಂತರಿಸುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಶಾಂತಿನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Politics

ವಿವಿಧ ಕೃಷಿ ಪರಿಕರಗಳ ವಿತರಣೆ ಸಮಾರಂಭ

Published

on

ಹಿರೇಕೆರೂರು : ಕೃಷಿ ಇಲಾಖೆಯ ವತಿಯಿಂದ ನಗರದ ಪೊಲೀಸ್ ಮೈದಾನದಲ್ಲಿ, ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸ್ಮರಣಾರ್ಥ ಆಯೋಜಿಸಿದ್ದ “ವಿವಿಧ ಕೃಷಿ ಪರಿಕರಗಳ ವಿತರಣೆ ಸಮಾರಂಭ”ದಲ್ಲಿ ಭಾಗಿಯಾದ ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳಿಗೆ ಬಳಸುವ ಸಾಮಗ್ರಿಗಳನ್ನು, ಟ್ರ್ಯಾಕ್ಟರ್, ಸ್ಪ್ರಿಂಕ್ಲರ್ ಪೈಪುಗಳು ಹಾಗೂ ಹಸುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ನಗರದ ಗಣ್ಯರು, ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ರಾಜ್ಯ

ಟೀ, ಕಾಫಿ ಬೊಂಡ ತಿಂಡಿ ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ

Published

on

ಬಾಗೇಪಲ್ಲಿ: ತಾಲೂಕಿನ ಕ.ರಾ.ರ.ಸಾ.ಸ.ಘಟಕದ ವತಿಯಿಂದ ಸಾರಿಗೆ ನೌಕರರು, ಶುಕ್ರವಾರ ಕಪ್ಪುಪಟ್ಟಿ ಧರಿಸಿ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಟೀ, ಕಾಫಿ ಬೊಂಡ ತಿಂಡಿ ಮಾರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ನೌಕರರ ರಾಜ್ಯ ಕ.ರಾ.ರ.ಸಾ.ಸ ಬಾಗೇಪಲ್ಲಿ ತಾಲ್ಲೂಕು ಘಟಕದ ಅದ್ಯಕ್ಷ ಚಂಡೂರು ಮೂರ್ತಿ ಮಾತನಾಡಿ ಸರ್ಕಾರ ನೌಕರರ ಕಷ್ಟವನ್ನು ಅರ್ಥಮಾಡಿಕೊಂಡು, ಆರನೇ ವೇತನವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ದಿನನಿತ್ಯದ ಎಲ್ಲಾ ಬೆಲೆಗಳು ದುಬಾರಿಯಾಗಿದ್ದು, ಸರ್ಕಾರ ನೀಡುತ್ತಿರುವ ಅತ್ಯಂತ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು.

ನಲ್ಲಪ್ಪರೆಡ್ಡಿಪಲ್ಲಿ ಮಂಜುನಾಥ ಮಾತನಾಡಿ, 6ನೇ ವೇತನ ಜಾರಿಗೊಳಿಸಲು ಸರ್ಕಾರ ನೀಡಿದ್ದ ಗಡುವು ಪೂರ್ಣಗೊಂಡಿದೆ.

ನೌಕರರ ಸಂಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ನಮ್ಮನ್ನು ಸರ್ಕಾರಿ ನೌಕರರೆಂದು ಘೋಷಿಸಿ ಎಂದು ಹೋರಾಡುತ್ತಲೇ ಬಂದಿದ್ದೇವೆ. ಹಾಗಾಗಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

Continue Reading

ರಾಜ್ಯ

ಮಹಿಳಾ ಪೊಲೀಸ್ ಪೇದೆ ತುಂಬು ಗರ್ಭಿಣಿಗೆ ಮನೆಯ ಸಂಪ್ರದಾಯದಂತೆ ಸೀಮಂತ

Published

on

ಶಿಡ್ಲಘಟ್ಟ : ಕರ್ತವ್ಯ ನಿರತ ಮಹಿಳಾ ಪೋಲಿಸ್ ಪೇದೆ ತುಂಬು ಗರ್ಭಿಣಿ ಶ್ರೀಮತಿ ಜಮುನಾ ಅವರಿಗೆ ತವರು ಮನೆಯ ಸಂಪ್ರಾದಯದಂತೆ ಶಿಡ್ಲಘಟ್ಟ ನಗರ ಠಾಣೆ ಪಿ.ಎಸ್.ಐ ಕೆ.ಸತೀಶ್ ಮತ್ತುಮಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಪದ್ಮಮ್ಮ ಹಾಗೂನ ಸಹದ್ಯೋಗಿಗಳಾದ ಅಂಬಿಕಾ ಮತ್ತು ಶ್ವೇತ ಇವರ ತಂಡದವರ ಸಹಕಾರದಿಂದ ತುಂಬು ಗರ್ಭೀಣಿಯವರಾದ ಜಮುನಾಅವರಿಗೆ ಸೀಮಂತ ಮಾಡಿ ಕಳುಹಿಸಿಕೊಡಬೇಕು ಎಂಬ ಒಳ್ಳೆಯ ಅಲೋಚನೆಯಿಂದ ಇನ್ಸ್ ಪೆಕ್ಟರ್ ಸತೀಶ್ ಅವರ ಅನುಮತಿ ಮೇರೆಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಹೆಣ್ಣು ಮಕ್ಕಳಿಗೆ ಎಲ್ಲಾ ಶಾಸ್ತ್ರಗಳ ಪೈಕಿ ” ಸೀಮಂತ” ಶಾಸ್ತ್ರವು ಒಂದು ಭಾವನಾತ್ಮಕ ಸಂಬಂಧ ಹೆಣ್ಣಿನೊಂದಿಗೆ ಹೊಂದಿದೆ. ತನ್ನ ಕರುಳ ಕುಡಿಯನ್ನ ಗರ್ಭದಲ್ಲಿ ಹೊತ್ತ ಹೆಣ್ಣು ಪುಟ್ಟ ಕಂದನ ಆಗಮನದ ನಿರೀಕ್ಷೆಯಲ್ಲಿದ್ದು ಮಹಿಳಾ ಪೊಲೀಸ್ ಪೇದೆ ಜಮುನಾಗೆ ಸೀಮಂತ ಮಾಡಿದರು.

ತಲೆ ತುಂಬಾ ಹೂ ಮುಡಿಸಿ, ಕೈ ಗೆ ಬಳೆ ತೊಡಿಸಿ ಹರಿಶಿಣ, ಕುಂಕುಮ ಹಚ್ಚಿ ಮುತ್ತೈದೆ ಶಾಸ್ತ್ರ ಅಣ್ಣನ ಸ್ಥಾನದಲ್ಲಿ ನಿಂತು ಇನ್ಸ್ ಪೆಕ್ಟರ್ ಸತೀಶ್ ರವರು ಸೇರಿದಂತೆ ಅವರ ಸಿಬ್ಬಂದಿ‌ ಹೆಣ್ಣು‌ಮಗಳಿಗೆ ತಲೆ ಮೇಲೆ ಅಕ್ಷತೆಕಾಳು ಹಾಕಿ ಜೀವನದಲ್ಲಿ‌ ಒಳ್ಳೆಯದಾಗಲೀ ಎಂದು ಶುಭ ಹಾರೈಸಿ ಆರ್ಶೀವದಿಸಿದರು
ಪೊಲೀಸ್ ಠಾಣೆಯಲ್ಲಿ ಒಬ್ಬ ಸಹದ್ಯೋಗಿ ಮಹಿಳಾ ಪೊಲೀಸ್ ಪೇದೆಗೆ ಸೀಮಂತ ಮಾಡಿ‌ ಖುಷಿಯಾಗಿ ಕಳುಹಿಸಿರುವ ಶುಭ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮಂಜುನಾಥ, ರೆಡ್ಡಿ, ಗುಪ್ತ, ವೆಂಕಟೇಶ್, ಅಮರನಾಥ, ಸುಭ್ರಮಣಿ, ಅಂಬಿಕಾ, ಶ್ವೇತ ಸೇರಿದಂತೆ ನಗರ ಠಾಣೆಯ ಎಲ್ಲಾ ಪೋಲಿಸ್ ಸಿಬ್ಬಂದಿ ಹಾಜರಿದ್ದರು.

ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್