ಸುದ್ದಿ
ಬಲಿಷ್ಠ ಸಂಘಟನೆಯಿಂದ ಪ್ರತಿರೋಧ ಸಾಧ್ಯ
ಬಾಗೇಪಲ್ಲಿ: ಇಂದಿನ ಕಾಲಘಟ್ಟದಲ್ಲಿ ಸರ್ಕಾರಗಳು ಖಾಸಗೀಕರಣಕ್ಕೆ ಒತ್ತು ಕೊಡುತ್ತಿರುವುದು ಆಧುನಿಕ ಗುಲಾಮಗಿರಿಯ ಕಡೆ ಕೊಂಡೊಯ್ಯುತ್ತದೆ ಎಂದು ಡಿವೈಎಫ್ಐ ಜಿಲ್ಲಾ ಸಂಚಾಲಕ ಡಾ.ಅನಿಲ್ ಕುಮಾರ್ ರವರು ತಿಳಿಸಿದರು.
ಇಂದು ಪಟ್ಟಣದ ಸುಂದರಯ್ಯ ಭವನದಲ್ಲಿ ಏರ್ಪಡಿಸಿದ ಡಿವೈಎಫ್ಐ ನ ತಾಲ್ಲೂಕು ಸಮಾವೇಶದಲ್ಲಿ ಮಾತನಾಡಿದ ಅವರು ಯುವಜನತೆಯು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಂಡವಾಳಶಾಹಿಗಳ ವಿರುದ್ಧ ಬಲಿಷ್ಟವಾದ ಸಂಘಟನೆ ಕಟ್ಟುವ ಮೂಲಕ ಜನ ವಿರೋಧಿ, ಯುವಜನ ವಿರೋಧಿ ನೀತಿಗಳನ್ನು ಪ್ರಬಲವಾಗಿ ಖಂಡಿಸಬೇಕು ಎಂದರು.
ನಂತರ ಮಾತನಾಡಿದ ಕೃಷಿಕೂಲಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪರವರು ಮಾತನಾಡಿ ಈಗಿನ ಯುವಜನತೆಗೆ ಸಿನಿಮಾ ನಟರು ಆದರ್ಶವಾಗಬಾರದು, ಬದಲಾಗಿ ದೇಶದ ಸ್ವತಂತ್ರ್ಯಕ್ಕಾಗಿ ಬಲಿದಾನವಾದ ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳು ಆದರ್ಶವಾಗಬೇಕು.ಈ ನಿಟ್ಟಿನಲ್ಲಿ ಬದ್ಧತೆ, ತ್ಯಾಗದ ಮನೋಭಾವದಿಂದ ಮುನ್ನಗ್ಗಬೇಕು. ಡಿವೈಎಫ್ ಐ ಸಂಘಟನೆಗೆ ಯುವಜನರ ಸದಸ್ಯತ್ವ ಮಾಡಿಸುವ ಮೂಲಕ ಬಲಿಷ್ಟಗೊಳಿಸಬೇಕು. ಸಮಸ್ಯೆಗಳು ಇದ್ದಾಗ ಮದ್ಯಪ್ರವೇಶ ಮಾಡಿ ಪರಿಹಾರಕ್ಕೆ ಸಂಘಟನೆ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಡಿವೈಎಫ್ಐ ನ ತಾಲ್ಲೂಕು ಅಧ್ಯಕ್ಷ ರಘುರಾಮರೆಡ್ಡಿ, ಹರೀಶ್ ,ಪ್ರೊ.ವೆಂಕಟಶಿವಾರೆಡ್ಡಿ, ಎಸ್ಎಫ್ಐ ನ ಜಿಲ್ಲಾಧ್ಯಕ್ಷ ಸೋಮಶೇಖರ್, ಗಣೇಶ್,ನಾಗಭೂಷಣ,ನಂದಕುಮಾರ್ ,ಭಾಷಾ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ರಾಜ್ಯ
2ನೇ ದಿನಕ್ಕೆ ಕಾಲಿಟ್ಟ K.S.R.T.C ಸಿಬ್ಬಂದಿ ಪ್ರತಿಭಟನೆ ರಸ್ತೆಗೆ ಇಳಿಯದ ಬಸ್ಸುಗಳು ಪ್ರಯಾಣಿಕರು ಪರದಾಟ
ಮಸ್ಕಿ .ಎ.8 :- ರಾಜ್ಯದಲ್ಲಿ ನಡೆದ K.S.R.T.C ಸಿಬ್ಬಂದಿ ಪ್ರತಿಭಟನೆ ಇಂದು 2ನೇ ದಿನವಾದರೂ ಬಸ್ಸುಗಳು ರಸ್ತೆಗೆ ಇಳಿಯದೇ ಪ್ರಯಾಣಿಕರು ಪರದಾಡುವಂತಾಗಿದೆ.
6 ನೇ ವೇತನ ಆಯೋಗ ಜಾರಿ ಶಿಫಾರಸು ಮಾಡುವಂತೆ ಒತ್ತಾಯಿಸಿ 2ನೇ ದಿನವಾದ ಇಂದು ಸಾರಿಗೆ ಇಲಾಖೆ ಸಿಬ್ಬಂದಿ ಹೊಂದಿರುವ ಪ್ರತಿಭಟನೆ ಪರಿಣಾಮವಾಗಿ K.S.R.T.C ಬಸ್ಸುಗಳು ರಸ್ತೆಗೆ ತಿಳಿಯುವುದಿಲ್ಲ ಎಂದು ಹೇಳಿದರು.
ತಾಲೂಕಿನ ಮಸ್ಕಿಯಲ್ಲಿ ಪ್ರಯಾಣಿಕರ ಸಂಚಾರ ಅಸ್ತವ್ಯಸ್ತವಾಗಿ ಖಾಸಗಿ ಬಸ್ಸುಗಳು, ಆಟೋ, ಕ್ರುಷರ್ ಮಿನಿ ಬಸ್ಸುಗಳಲ್ಲಿ ಖಾಸಗಿ ಚಾಲಕರು ಕೇಳಿದಷ್ಟು ಪ್ರಯಾಣಿಕರು ಹಣವನ್ನು ಕೊಟ್ಟು ಊರಿನತ್ತ ಪ್ರಯಾಣವನ್ನು ನಡೆಸಿದರು,
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ಅಂಬೇಡ್ಕರ್ ಭವನ ನಿರ್ಮಾಣ: ಗುದ್ದಲಿ ಪೂಜೆ ಗೆ ಒತ್ತಾಯ
ಅಂಬೇಡ್ಕರ್ ಜಯಂತಿಗೆ ಮೊದಲು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ರಿಗೆ ಮನವಿ
ಶಿಡ್ಲಘಟ್ಟ : ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಕೆಲ ಕಾಲ ಪ್ರತಿಭಟನೆ ನಡೆಸಿ ತ್ವರಿತವಾಗಿ ಅಂಬೇಡ್ಕರ್ ಭವನಕ್ಕೆ ಸ್ಥಳ ಗುರುತಿಸುವುದು ಸೇರಿದಂತೆ ಅಂಬೇಡ್ಕರ್ ಜಯಂತಿಗೆ ಮೊದಲು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ದಲಿತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಈಧರೆ ಪ್ರಕಾಶ್ ಮಾತನಾಡಿದರು.
ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ನಿರಂತರವಾಗಿ ಹೋರಾಟಗಳು ಹಮ್ಮಿಕೊಳ್ಳುವ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ನಗರದ ಹೃದಯಭಾಗದಲ್ಲಿ ಸ್ಥಳ ಗುರ್ತಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಲಾಗಿದೆ. ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸದೇ ಇರುವುದು ಕ್ಷೇತ್ರದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಶಾಸಕರು ಸೇರಿದಂತೆ ಸಂಸದರ ಬಳಿ ಹಲವಾರು ಬಾರಿ ಈ ಬಗ್ಗೆ ಚರ್ಚೆ ಮಾಡಿದಾಗ ಅಧಿಕಾರಿಗಳಿಗೆ ಆ ತಕ್ಷಣಕ್ಕೆ ಸ್ಥಳ ಗುರುತಿಸುವಂತೆ ಸೂಚನೆ ನೀಡುತ್ತಾರಾದರೂ ಯಾವುದೇ ಪ್ರಯೋಜನವಾಗಿಲ್ಲ. ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿನ ಖಾಲಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳ ಗುರುತಿಸಲು ಈ ಹಿಂದೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಇದೇ ಏಪ್ರಿಲ್ 8 ರ ಗುರುವಾರದಿಂದ ದಲಿತ ಸಂಘಟನೆಗಳ ಒಕ್ಕೂಟದಿಂದ ಅನಿರ್ಧಿಷ್ಟಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಲಾಗಿದೆ. ಮುಂಬರುವ ಅಂಬೇಡ್ಕರ್ ಜಯಂತಿಗೆ ಮೊದಲು ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡುವುದು ಸೇರಿದಂತೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಈ ಭಾರಿಯ ಅಂಬೇಡ್ಕರ್ ಜಯಂತಿ ಆಚರಿಸುವ ಅಗತ್ಯವಿಲ್ಲ, ಅಂಬೇಡ್ಕರ್ ಭವನ ನಿರ್ಮಾನಕ್ಕೆ ಮುಂದಾಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಎಚ್ಚರಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ ರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ ಈಗಾಗಲೇ ಉಪವಿಭಾಗಾಧಿಕಾರಿಗಳು ಸೇರಿದಂತೆ ಸಂಬಂದಪಟ್ಟ ಇಲಾಖೆಯವರಿಗೆ ಸ್ಥಳ ಮಂಜೂರು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಮತ್ತೊಮ್ಮೆ ತಾವು ನೀಡಿರುವ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ.ಎಸ್ ದ್ಯಾವಕೃಷ್ಣಪ್ಪ, ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ, ತಾತಹಳ್ಳಿ ಚಲಪತಿ, ದೇವರಮಳ್ಳೂರು ಕೃಷ್ಣಪ್ಪ, ಜೆ.ವೆಂಕಟಾಪುರ ವಿಜಯಕುಮಾರ, ಭಕ್ತರಹಳ್ಳಿ ಪ್ರತೀಶ್, ಬೈಯಪ್ಪನಹಳ್ಳಿ ಗುರುಮೂರ್ತಿ, ಡಿ.ಸಿ.ನರಸಿಂಹಮೂರ್ತಿ, ಮುನಿಕೃಷ್ಣ, ಶಂಕರ, ಮೂರ್ತಿ, ಕನ್ನಪನಹಳ್ಳಿ ರಾಮಾಂಜಿನಪ್ಪ ಮುಂತಾದವರು ಹಾಜರಿದ್ದರು.
ಸುದ್ದಿ
ತಾಳಿಕೋಟೆ ಬಸ್ಸುಗಳು ಇಲ್ಲದೆ ಪ್ರಯಾಣಿಕರ ಪರದಾಟ : ಖಾಸಗಿ ವಾಹನಗಳ ದರ್ಬಾರ್
ತಾಳಿಕೋಟೆ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ತಾಳಿಕೋಟಿ ಬಸ್ ನಿಲ್ದಾಣ ಬಿಕೋ ಎನ್ನುತಿದೆ.
ಬಸ್ಗಳಿಲ್ಲದೆ ಪ್ರಯಾಣಿಕರು ವಿಜಯಪುರ, ಮುದ್ದೇಬಿಹಾಳ, ಸಿಂದಗಿ, ಕಲಕೇರಿ, ಸುರಪುರಕ್ಕೆ ಹೋಗುವ ಪ್ರಯಾಣಿಕರು ಬೆಳೆಗ್ಗೆಯಿಂದ ಪರದಾಟ ನಡೆಸಿದರು.
ಖಾಸಗಿ ವಾಹನಗಳು ಪ್ರಯಾಣಿಕರಿಂದ ಅಧಿಕ ಮೊತ್ತ ತೆಗೆದುಕೊಂಡು ಕರೆದುಕೊಂಡು ಹೋಗುವದು ಕಂಡು ಬಂತು.
ಮುಷ್ಕರ ಹಿನ್ನೆಲೆಯಲ್ಲಿ ಎಲ್ಲಾ ಬಸಗಳು ತಾಳಿಕೋಟೆ ಬಸ್ ನಿಲ್ದಾಣ ಮತ್ತು ಘಟಕದಲ್ಲಿ ನಿಲ್ಲಿಸಿರುವದು ತಾವುಗಳು ನೋಡಬಹುದು..
ವರದಿ :- ದೇವು ಕೂಚಬಾಳ ತಾಳಿಕೋಟೆ
-
Uncategorized4 weeks ago
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
-
Politics3 weeks ago
ಪುರಸಭೆಯ ಸ್ಥಾಯಿ ಸಮಿತಿಗೆ ಎ.ನಂಜುಂಡಪ್ಪ ಅವಿರೋಧ ಆಯ್ಕೆ
-
ಸುದ್ದಿ1 week ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ3 days ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?