ಸುದ್ದಿ
ಅಂಬೇಡ್ಕರ್ ಭವನ ನಿರ್ಮಾಣ: ಗುದ್ದಲಿ ಪೂಜೆ ಗೆ ಒತ್ತಾಯ
ಅಂಬೇಡ್ಕರ್ ಜಯಂತಿಗೆ ಮೊದಲು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ರಿಗೆ ಮನವಿ
ಶಿಡ್ಲಘಟ್ಟ : ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಕೆಲ ಕಾಲ ಪ್ರತಿಭಟನೆ ನಡೆಸಿ ತ್ವರಿತವಾಗಿ ಅಂಬೇಡ್ಕರ್ ಭವನಕ್ಕೆ ಸ್ಥಳ ಗುರುತಿಸುವುದು ಸೇರಿದಂತೆ ಅಂಬೇಡ್ಕರ್ ಜಯಂತಿಗೆ ಮೊದಲು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ದಲಿತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಈಧರೆ ಪ್ರಕಾಶ್ ಮಾತನಾಡಿದರು.
ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ನಿರಂತರವಾಗಿ ಹೋರಾಟಗಳು ಹಮ್ಮಿಕೊಳ್ಳುವ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ನಗರದ ಹೃದಯಭಾಗದಲ್ಲಿ ಸ್ಥಳ ಗುರ್ತಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಲಾಗಿದೆ. ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸದೇ ಇರುವುದು ಕ್ಷೇತ್ರದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಶಾಸಕರು ಸೇರಿದಂತೆ ಸಂಸದರ ಬಳಿ ಹಲವಾರು ಬಾರಿ ಈ ಬಗ್ಗೆ ಚರ್ಚೆ ಮಾಡಿದಾಗ ಅಧಿಕಾರಿಗಳಿಗೆ ಆ ತಕ್ಷಣಕ್ಕೆ ಸ್ಥಳ ಗುರುತಿಸುವಂತೆ ಸೂಚನೆ ನೀಡುತ್ತಾರಾದರೂ ಯಾವುದೇ ಪ್ರಯೋಜನವಾಗಿಲ್ಲ. ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿನ ಖಾಲಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳ ಗುರುತಿಸಲು ಈ ಹಿಂದೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಇದೇ ಏಪ್ರಿಲ್ 8 ರ ಗುರುವಾರದಿಂದ ದಲಿತ ಸಂಘಟನೆಗಳ ಒಕ್ಕೂಟದಿಂದ ಅನಿರ್ಧಿಷ್ಟಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಲಾಗಿದೆ. ಮುಂಬರುವ ಅಂಬೇಡ್ಕರ್ ಜಯಂತಿಗೆ ಮೊದಲು ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡುವುದು ಸೇರಿದಂತೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಈ ಭಾರಿಯ ಅಂಬೇಡ್ಕರ್ ಜಯಂತಿ ಆಚರಿಸುವ ಅಗತ್ಯವಿಲ್ಲ, ಅಂಬೇಡ್ಕರ್ ಭವನ ನಿರ್ಮಾನಕ್ಕೆ ಮುಂದಾಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಎಚ್ಚರಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ ರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ ಈಗಾಗಲೇ ಉಪವಿಭಾಗಾಧಿಕಾರಿಗಳು ಸೇರಿದಂತೆ ಸಂಬಂದಪಟ್ಟ ಇಲಾಖೆಯವರಿಗೆ ಸ್ಥಳ ಮಂಜೂರು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಮತ್ತೊಮ್ಮೆ ತಾವು ನೀಡಿರುವ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ.ಎಸ್ ದ್ಯಾವಕೃಷ್ಣಪ್ಪ, ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ, ತಾತಹಳ್ಳಿ ಚಲಪತಿ, ದೇವರಮಳ್ಳೂರು ಕೃಷ್ಣಪ್ಪ, ಜೆ.ವೆಂಕಟಾಪುರ ವಿಜಯಕುಮಾರ, ಭಕ್ತರಹಳ್ಳಿ ಪ್ರತೀಶ್, ಬೈಯಪ್ಪನಹಳ್ಳಿ ಗುರುಮೂರ್ತಿ, ಡಿ.ಸಿ.ನರಸಿಂಹಮೂರ್ತಿ, ಮುನಿಕೃಷ್ಣ, ಶಂಕರ, ಮೂರ್ತಿ, ಕನ್ನಪನಹಳ್ಳಿ ರಾಮಾಂಜಿನಪ್ಪ ಮುಂತಾದವರು ಹಾಜರಿದ್ದರು.
ರಾಜ್ಯ
2ನೇ ದಿನಕ್ಕೆ ಕಾಲಿಟ್ಟ K.S.R.T.C ಸಿಬ್ಬಂದಿ ಪ್ರತಿಭಟನೆ ರಸ್ತೆಗೆ ಇಳಿಯದ ಬಸ್ಸುಗಳು ಪ್ರಯಾಣಿಕರು ಪರದಾಟ
ಮಸ್ಕಿ .ಎ.8 :- ರಾಜ್ಯದಲ್ಲಿ ನಡೆದ K.S.R.T.C ಸಿಬ್ಬಂದಿ ಪ್ರತಿಭಟನೆ ಇಂದು 2ನೇ ದಿನವಾದರೂ ಬಸ್ಸುಗಳು ರಸ್ತೆಗೆ ಇಳಿಯದೇ ಪ್ರಯಾಣಿಕರು ಪರದಾಡುವಂತಾಗಿದೆ.
6 ನೇ ವೇತನ ಆಯೋಗ ಜಾರಿ ಶಿಫಾರಸು ಮಾಡುವಂತೆ ಒತ್ತಾಯಿಸಿ 2ನೇ ದಿನವಾದ ಇಂದು ಸಾರಿಗೆ ಇಲಾಖೆ ಸಿಬ್ಬಂದಿ ಹೊಂದಿರುವ ಪ್ರತಿಭಟನೆ ಪರಿಣಾಮವಾಗಿ K.S.R.T.C ಬಸ್ಸುಗಳು ರಸ್ತೆಗೆ ತಿಳಿಯುವುದಿಲ್ಲ ಎಂದು ಹೇಳಿದರು.
ತಾಲೂಕಿನ ಮಸ್ಕಿಯಲ್ಲಿ ಪ್ರಯಾಣಿಕರ ಸಂಚಾರ ಅಸ್ತವ್ಯಸ್ತವಾಗಿ ಖಾಸಗಿ ಬಸ್ಸುಗಳು, ಆಟೋ, ಕ್ರುಷರ್ ಮಿನಿ ಬಸ್ಸುಗಳಲ್ಲಿ ಖಾಸಗಿ ಚಾಲಕರು ಕೇಳಿದಷ್ಟು ಪ್ರಯಾಣಿಕರು ಹಣವನ್ನು ಕೊಟ್ಟು ಊರಿನತ್ತ ಪ್ರಯಾಣವನ್ನು ನಡೆಸಿದರು,
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ತಾಳಿಕೋಟೆ ಬಸ್ಸುಗಳು ಇಲ್ಲದೆ ಪ್ರಯಾಣಿಕರ ಪರದಾಟ : ಖಾಸಗಿ ವಾಹನಗಳ ದರ್ಬಾರ್
ತಾಳಿಕೋಟೆ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ತಾಳಿಕೋಟಿ ಬಸ್ ನಿಲ್ದಾಣ ಬಿಕೋ ಎನ್ನುತಿದೆ.
ಬಸ್ಗಳಿಲ್ಲದೆ ಪ್ರಯಾಣಿಕರು ವಿಜಯಪುರ, ಮುದ್ದೇಬಿಹಾಳ, ಸಿಂದಗಿ, ಕಲಕೇರಿ, ಸುರಪುರಕ್ಕೆ ಹೋಗುವ ಪ್ರಯಾಣಿಕರು ಬೆಳೆಗ್ಗೆಯಿಂದ ಪರದಾಟ ನಡೆಸಿದರು.
ಖಾಸಗಿ ವಾಹನಗಳು ಪ್ರಯಾಣಿಕರಿಂದ ಅಧಿಕ ಮೊತ್ತ ತೆಗೆದುಕೊಂಡು ಕರೆದುಕೊಂಡು ಹೋಗುವದು ಕಂಡು ಬಂತು.
ಮುಷ್ಕರ ಹಿನ್ನೆಲೆಯಲ್ಲಿ ಎಲ್ಲಾ ಬಸಗಳು ತಾಳಿಕೋಟೆ ಬಸ್ ನಿಲ್ದಾಣ ಮತ್ತು ಘಟಕದಲ್ಲಿ ನಿಲ್ಲಿಸಿರುವದು ತಾವುಗಳು ನೋಡಬಹುದು..
ವರದಿ :- ದೇವು ಕೂಚಬಾಳ ತಾಳಿಕೋಟೆ
ಸುದ್ದಿ
ಬಾಗೇಪಲ್ಲಿಯಲ್ಲಿ ಸಾರಿಗೆ ಮುಷ್ಕರ ಸಂಪೂರ್ಣ ಯಶಸ್ವಿ
ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಬೆಂಬಲ ನೀಡಿದ ಪ್ರಜಾಸಂಘರ್ಷ ಸಮಿತಿ & ರೈತ ಸಂಘಟನೆಗಳು
ಬಾಗೇಪಲ್ಲಿ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಎಲ್ಲಾ ಕಡೆ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಕೆಂಪು ಬಸ್‌ಗಳ ಸಂಚಾರ ನಿಂತುಹೋಗಿದೆ. ಇನ್ನು; ಮುಷ್ಕರದ ಮಾಹಿತಿ ಇದ್ದುದರಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದು ಕಂಡು ಬಂದಿತು.
ಪಿಎಸ್ಎಸ್, ರೈತ ಸಂಘಟನೆಗಳ ಬೆಂಬಲ
ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ (ಪಿಎಸ್ಎಸ್) ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮ ರೆಡ್ಡಿ ನೇತೃತ್ವದಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಸೇನೆ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ವಿ.ಶ್ರೀರಾಮರೆಡ್ಡಿ; ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು ಅವುಗಳನ್ನು ಈಡೇರಿಸಲು
ಬಿಜೆಪಿಯವರು ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಂದು ರೀತಿ ಸರ್ವಾಧಿಕಾರಿಯಾಗಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೊಂದು ರೀತಿಯ ಸರ್ವಾಧಿಕಾರಿ’ ಎಂದು ಆರೋಪಿಸಿದರು.
ಸಾರಿಗೆ ನೌಕರರ ನ್ಯಾಯಸಮ್ಮತ ಬೇಡಿಕೆಯನ್ನು ಪೂರೈಸಲು ಸಮಯ ಹಾಳು ಮಾಡುತ್ತದೆ ಹಾಗೂ ಬೇಡಿಕೆಯನ್ನು ಪೂರೈಸಿದೇ ಏಕೆ
ಮೀನಾಮೇಷ ಎಣಿಸುವುದು ಸರಿಯಲ್ಲ. ಚುನಾವಣಾ ನೀತಿ ಸಂಹಿತೆಯ ನೆಪ ಹೇಳದೆ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.
ಪಿ.ಎಸ್. ಎಸ್. ಜಿಲ್ಲಾ ಮುಖಂಡ ಚನ್ನರಾಯಪ್ಪ ಮಾತನಾಡಿ
ಸಾರಿಗೆ ನೌಕರರ ತಮ್ಮ
ಜೀವಿಸುವ ಹಕ್ಕನ್ನು ಕೇಳುತ್ತಿರುವ ನಮ್ಮ ಪ್ರಯತ್ನವನ್ನು ಹತ್ತಿಕ್ಕಲು ಒಂದಲ್ಲ ಒಂದು ರೀತಿಯಲ್ಲಿ ಹುನ್ನಾರ ನಡೆಸುತ್ತಿರುವ ಸರಕಾರ ಹಾಗೂ ಅಧಿಕಾರಿ ವರ್ಗಕ್ಕೆ ನಮ್ಮ ಧಿಕ್ಕಾರವಿರಲಿ…..ಸಾವಿರಾರು ಶೋಷಿತ ಬಡ ಸಾರಿಗೆ ನೌಕರರ ಕಣ್ಣೀರಿನ ಶಾಪ ನಿಮ್ಮನ್ನು ತಟ್ಟದೆ ಇರದು
ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಸಾರಿಗೆ ನೌಕರರ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲು ಸಿದ್ದ ಎಂದು ಹೇಳಿದರು.
-
Uncategorized3 weeks ago
ದೇಶದ ಮೊಟ್ಟಮೊದಲ ಹೊಗೆ ರಹಿತ ಗ್ರಾಮದಲ್ಲಿ ಮತ್ತೆ ಹೊಗೆ.?!
-
Politics3 weeks ago
ಪುರಸಭೆಯ ಸ್ಥಾಯಿ ಸಮಿತಿಗೆ ಎ.ನಂಜುಂಡಪ್ಪ ಅವಿರೋಧ ಆಯ್ಕೆ
-
ಸುದ್ದಿ1 week ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 days ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?