Connect with us
Ad Widget

ಸುದ್ದಿ

ತಾಳಿಕೋಟೆ ಬಸ್ಸುಗಳು ಇಲ್ಲದೆ ಪ್ರಯಾಣಿಕರ ಪರದಾಟ : ಖಾಸಗಿ ವಾಹನಗಳ ದರ್ಬಾರ್

Published

on

ತಾಳಿಕೋಟೆ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ತಾಳಿಕೋಟಿ ಬಸ್ ನಿಲ್ದಾಣ ಬಿಕೋ ಎನ್ನುತಿದೆ.

ಬಸ್ಗಳಿಲ್ಲದೆ ಪ್ರಯಾಣಿಕರು ವಿಜಯಪುರ, ಮುದ್ದೇಬಿಹಾಳ, ಸಿಂದಗಿ, ಕಲಕೇರಿ, ಸುರಪುರಕ್ಕೆ ಹೋಗುವ ಪ್ರಯಾಣಿಕರು ಬೆಳೆಗ್ಗೆಯಿಂದ ಪರದಾಟ ನಡೆಸಿದರು.

ಖಾಸಗಿ ವಾಹನಗಳು ಪ್ರಯಾಣಿಕರಿಂದ ಅಧಿಕ ಮೊತ್ತ ತೆಗೆದುಕೊಂಡು ಕರೆದುಕೊಂಡು ಹೋಗುವದು ಕಂಡು ಬಂತು.

ಮುಷ್ಕರ ಹಿನ್ನೆಲೆಯಲ್ಲಿ ಎಲ್ಲಾ ಬಸಗಳು ತಾಳಿಕೋಟೆ ಬಸ್ ನಿಲ್ದಾಣ ಮತ್ತು ಘಟಕದಲ್ಲಿ ನಿಲ್ಲಿಸಿರುವದು ತಾವುಗಳು ನೋಡಬಹುದು..

ವರದಿ :- ದೇವು ಕೂಚಬಾಳ ತಾಳಿಕೋಟೆ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಬಾಗೇಪಲ್ಲಿಯಲ್ಲಿ ಸಾರಿಗೆ ಮುಷ್ಕರ ಸಂಪೂರ್ಣ ಯಶಸ್ವಿ

Published

on

ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಬೆಂಬಲ ನೀಡಿದ ಪ್ರಜಾಸಂಘರ್ಷ ಸಮಿತಿ & ರೈತ ಸಂಘಟನೆಗಳು

ಬಾಗೇಪಲ್ಲಿ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಎಲ್ಲಾ ಕಡೆ ಬಸ್‌ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಕೆಂಪು ಬಸ್‌ಗಳ ಸಂಚಾರ ನಿಂತುಹೋಗಿದೆ. ಇನ್ನು; ಮುಷ್ಕರದ ಮಾಹಿತಿ ಇದ್ದುದರಿಂದ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದು ಕಂಡು ಬಂದಿತು.

ಪಿಎಸ್ಎಸ್, ರೈತ ಸಂಘಟನೆಗಳ ಬೆಂಬಲ
ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ (ಪಿಎಸ್ಎಸ್) ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮ ರೆಡ್ಡಿ ನೇತೃತ್ವದಲ್ಲಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಸೇನೆ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ವಿ.ಶ್ರೀರಾಮರೆಡ್ಡಿ; ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು ಅವುಗಳನ್ನು ಈಡೇರಿಸಲು

ಬಿಜೆಪಿಯವರು ಪ್ರಜಾಪ್ರಭುತ್ವ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಂದು ರೀತಿ ಸರ್ವಾಧಿಕಾರಿಯಾಗಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೊಂದು ರೀತಿಯ ಸರ್ವಾಧಿಕಾರಿ’ ಎಂದು ಆರೋಪಿಸಿದರು.

ಸಾರಿಗೆ ನೌಕರರ ನ್ಯಾಯಸಮ್ಮತ ಬೇಡಿಕೆಯನ್ನು ಪೂರೈಸಲು ಸಮಯ ಹಾಳು ಮಾಡುತ್ತದೆ ಹಾಗೂ ಬೇಡಿಕೆಯನ್ನು ಪೂರೈಸಿದೇ ಏಕೆ
ಮೀನಾಮೇಷ ಎಣಿಸುವುದು ಸರಿಯಲ್ಲ. ಚುನಾವಣಾ ನೀತಿ ಸಂಹಿತೆಯ ನೆಪ ಹೇಳದೆ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.

ಪಿ.ಎಸ್. ಎಸ್. ಜಿಲ್ಲಾ ಮುಖಂಡ ಚನ್ನರಾಯಪ್ಪ ಮಾತನಾಡಿ
ಸಾರಿಗೆ ನೌಕರರ ತಮ್ಮ
ಜೀವಿಸುವ ಹಕ್ಕನ್ನು ಕೇಳುತ್ತಿರುವ ನಮ್ಮ ಪ್ರಯತ್ನವನ್ನು ಹತ್ತಿಕ್ಕಲು ಒಂದಲ್ಲ ಒಂದು ರೀತಿಯಲ್ಲಿ ಹುನ್ನಾರ ನಡೆಸುತ್ತಿರುವ ಸರಕಾರ ಹಾಗೂ ಅಧಿಕಾರಿ ವರ್ಗಕ್ಕೆ ನಮ್ಮ ಧಿಕ್ಕಾರವಿರಲಿ…..ಸಾವಿರಾರು ಶೋಷಿತ ಬಡ ಸಾರಿಗೆ ನೌಕರರ ಕಣ್ಣೀರಿನ ಶಾಪ ನಿಮ್ಮನ್ನು ತಟ್ಟದೆ ಇರದು
ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಸಾರಿಗೆ ನೌಕರರ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲು ಸಿದ್ದ ಎಂದು ಹೇಳಿದರು.

Continue Reading

ಸುದ್ದಿ

ಕೊರೊನಾ ಕಷ್ಟಕಾಲದಲ್ಲಿ ಕೊಳತೆ ಆಹಾರ ವಿತರಣೆಯ ಹೊಡೆತಕ್ಕೆ ತತ್ತರಿಸಿದ ಎಸ್ ಟಿ ಹಾಸ್ಟೆಲ್ ವಿದ್ಯಾರ್ಥಿಗಳು

Published

on

ಬಾಗೇಪಲ್ಲಿ: ಕೊರೊನಾ ಆತಂಕದಿಂದ ಲಾಕ್ಡೌನ್ ಆಗಿತ್ತು. ಸುಮಾರು ಒಂದು ವರ್ಷದ ನಂತರ ಶಾಲಾ, ಕಾಲೇಜುಗಳ ಬಾಗಿಲು ಮುಚ್ಚಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ಕಾಲೇಜುಗಳ ಬಾಗಿಲು ತೆಗೆದವು. ಹಾಗೇಯೇ ವಿದ್ಯಾರ್ಥಿ ನಿಲಯಗಳೂ ಬಾಗಿಲು ತೆರೆದು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಯುತು ಎಂದುಕೊಂಡರೆ, ಹಾಸ್ಟಲ್ ನಲ್ಲಿ ಅನುಕೂಲಗಳಿಗಿಂತ ಅನಾನೂಕೂಲಗಳೇ ಹೆಚ್ಚು ಎನ್ನುತ್ತಾರೆ ಬಾಗೇಪಲ್ಲಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು.

ಕೊಳತೆ ತರಕಾರಿಯಿಂದ ಸಾಂಬಾರು ತಯಾರು ಮಾಡಲಾಗುತ್ತಿದೆ. ಕೊಳತೆ ಬಾಳೆಹಣ್ಣು, ಮೊಟ್ಟೆಗಳ ವಿತರಣೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು. ಇನ್ನು ಶೌಚಾಲಯದಲ್ಲಿ ಸ್ವಚ್ಛತೆ ಇರುವುದಿಲ್ಲ, ಮುರಿದ ಬಾಗಿಲುಗಳಿಂದಾಗಿ ಮುಜುಗರದಲ್ಲೆ ಶೌಚಕ್ಕೆ ಹೋಗುವಂತ ದುಸ್ಥಿತಿ. ನೀರಿನ ಸಂಗ್ರಹಣೆಗೆಂದು ಇಟ್ಟಿರುವ ನೀರಿನ ಡ್ರಮ್ ನ್ನು ಸ್ವಚ್ಚಗೊಳಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್ ನಲ್ಲಿ ಸ್ವಚ್ಛತೆ ಕಾಪಾಡಿ, ಶುದ್ದವಾದ ಪೌಷ್ಟಿಕ ಆಹಾರ ನೀಡಬೇಕೆಂದು ವಿದ್ಯಾರ್ಥಿಗಳ ಒಕ್ಕೊರಳಿನ ಆಕ್ರೋಶವಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಮುಖಂಡ ಸುರೇಶ್ ತಿಳಿಸಿದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ನರಸಿಂಹಮೂರ್ತಿ, ಮುನೇಂದ್ರ, ನಾಗೇಂದ್ರರೆಡ್ಡಿ, ರಾಮಚಂದ್ರ, ಸುನಿಲ್, ಹರೀಶ್, ವೇಣು ಮುಂತಾದವರು ಹಾಜರಿದ್ದರು.

Continue Reading

ಸುದ್ದಿ

ನಾಯಿಗಳ ದಾಳಿಗೊಳಗಾದ ಕೃಷ್ಣಮೃಗವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ

Published

on

ಶಿಡ್ಲಘಟ್ಟ :ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ನಾಯಿಗಳ ಧಾಳಿಗೊಳಗಾದ ಕೃಷ್ಣಮೃಗವನ್ನು ಸೋಮವಾರ ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದರಾದರೂ ಅದು ಫಲಕಾರಿಯಾಗದೇ ಮೃತಪಟ್ಟಿದೆ.

ಬೇಸಿಗೆಯ ಬೇಗೆಯನ್ನು ತಡೆಯಲಾರದೆ ಕೃಷ್ಣಮೃಗ ಹಳ್ಳಿಯ ಬಳಿ ಬಂದಿರಬೇಕು. ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗಾಗಿ ನೀರನ್ನು ಇಡುವ ವ್ಯವಸ್ಥೆಯಾಗಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ ತಿಳಿಸಿದರು.
ಅರಣ್ಯ ಇಲಾಖೆಯ ರಮೇಶ್, ಗೋವಿಂದರಾಜ್, ಗ್ರಾಮ ಪಂಚಾಯಿತಿ ಸದಸ್ಯ ರಾಜಪ್ಪ, ರಂಜಿತ್, ಸುಮನ್ ಹಾಜರಿದ್ದರು.

ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್