Connect with us
Ad Widget

ಮನರಂಜನೆ

ಹ್ಯಾರಿ ಪಾಟರ್ ಖ್ಯಾತಿಯ ಪೌಲ್​ ರಿಟರ್​ ನಿಧನ

Published

on

ಮುಂಬೈ : ಹಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಕಲಾವಿದ ಪೌಲ್​ ರಿಟರ್​ ಅವರು ಸೋಮವಾರ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಬಹಳ ಕಾಲದಿಂದ ಅವರು ಬ್ರೇನ್​ ಟ್ಯೂಮರ್​ನಿಂದ ಬಳಲುತ್ತಿದ್ದರು. ಕಡೆಗೂ ಚಿಕಿತ್ಸೆ ಫಲಕಾರಿಯಾಗದೇ ಏ.5ರ ರಾತ್ರಿ ನಿಧನರಾದರು ಎಂದು ಪೌಲ್​ ರಿಟರ್​ ಪರ ವಕ್ತಾರರು ತಿಳಿಸಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

1992ರಿಂದ ಸಿನಿಮಾದಲ್ಲಿ ನಟನೆ ಆರಂಭಿಸಿದ ಪೌಲ್​ ರಿಟರ್​ ಅವರು ಅನೇಕ ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ಹಾಲಿವುಡ್​ನ ಜನಪ್ರಿಯ ‘ಹ್ಯಾರಿ ಪಾಟರ್​’ ಸಿನಿಮಾದಲ್ಲಿ ಅವರು ಗಮನಾರ್ಹ ಅಭಿನಯ ನೀಡಿದ್ದರು. ಬ್ರಿಟಿಷ್​ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಫೇಮಸ್​ ಆಗಿದ್ದ ಪೌಲ್​ ರಿಟರ್​ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಮನರಂಜನೆ

ಇಂಧನ ಬೆಲೆ ಏರಿಕೆಯ ವಿರುದ್ದ ಸೈಕಲ್ ನಲ್ಲಿ ಮತಗಟ್ಟೆ ಕಡೆ ಹೊರಟ ವಿಜಯ್ ದಳಪತಿ

Published

on

ಕೇಂದ್ರ ಸರ್ಕಾರವು ಇಂಧನ ಏರಿಕೆ ಮಾಡುತ್ತಲೇ ಇದೆ. ಈಗಾಗಲೇ ₹100 ರ ಗಡಿ ಸಮೀಪಿಸುತ್ತಿದೆ. ಇದನ್ನು ಹಲವು ರೀತಿಯಲ್ಲಿ ಖಂಡಿಸಲಾಗುತ್ತಿದೆ.

ಇಂದು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳು ಸೂಪರ್​ಸ್ಟಾರ್​ ದಳಪತಿ ವಿಜಯ್ ಸೈಕಲ್​​​​ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್​ ಮಾಡಿ ಗಮನ ಸೆಳೆದಿದ್ದಾರೆ.

ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್​ ಇಂಟರ್​ನ್ಯಾಷನಲ್​ ಪ್ರೀ ಸ್ಕೂಲ್​ನ ಮತಗಟ್ಟೆಯಲ್ಲಿ ವಿಜಯ್ ಮತ ಚಲಾಯಿಸಿದರು. ವಿಜಯ್ ಸೈಕಲ್ ಸವಾರಿ ವೇಳೆ ಕೆಲ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಭಾರೀ ಸಂಖ್ಯೆಯ ಅಭಿಮಾನಿಗಳು ಸುತ್ತುವರಿದಿದ್ರಿಂದ ವಿಜಯ್ ಬೇಗನೆ ಅಲ್ಲಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.

ಬಳಿಕ ಅವರು ತಮ್ಮ ಸಿಬ್ಬಂದಿಯೊಬ್ಬರ ಟೂ ವೀಲರ್​ನಲ್ಲಿ ಹಿಂದೆ ಕುಳಿತು ಪ್ರಯಾಣ ಮುಂದುವರಿಸಬೇಕಾಯ್ತು. ವಿಜಯ್ ಅವರ ಮತ್ತೋರ್ವ ಸಿಬ್ಬಂದಿ ಸೈಕಲ್​ ತೆಗೆದುಕೊಂಡು ಹೋದ್ರು. ಇನ್ನು ಮತಗಟ್ಟೆ ಬಳಿಯೂ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ಅವರನ್ನ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ರು.

ವಿಜಯ್ ಅವರು ಮತಗಟ್ಟೆಗೆ ಸೈಕಲ್​ನಲ್ಲಿ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ತಮ್ಮ ನೆಚ್ಚಿನ ನಟ ಬಿಸಿಲಿನಲ್ಲೂ, ಫೇಸ್​ ಮಾಸ್ಕ್​ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ. ಅದು ಸುಲಭವಲ್ಲ ಎಂದು ವಿಜಯ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ. ಇನ್ನು ವಿಜಯ್ ಅವರು ಇಂಧನ ದರ ಏರಿಕೆ ಖಂಡಿಸಲು ಸೈಕಲ್​ನಲ್ಲಿ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ.

Continue Reading

ಮನರಂಜನೆ

ತಾಳಿಕೋಟಿಯ ಶ್ರೀ ಸಾಯಿ ಮೇಲೋಡಿ ಆರ್ಕೆಸ್ಟ್ರಾ

Published

on

ತಾಳಿಕೋಟೆ : ಶ್ರೀ ಸಾಂಬ ಪ್ರಭು ಶರಣ ಮುತ್ಯಾನ ರವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಳಿಕೋಟಿಯ ಶ್ರೀ ಸಾಯಿ ಮೇಲೋಡಿ ಆರ್ಕೆಸ್ಟ್ರಾ ವತಿಯಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ದಂತ ನಿಂಗರಾಜ ಶರಣರು, ಹಾಗೂ ಪುರಸಭೆಯ ಅಧ್ಯಕ್ಷರಾದ ಸಂಗಮೇಶ್ ಇಂಗಳಗಿ, ಜೈಸಿಂಗ್ ಮೂಲಿಮನಿ, ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ, ನಿಂಗರಾಜ್ ಕುಂಟೋಜಿ, ವಾಸುದೇವ್ ಹೆಬ್ಸೂರು, ಮಾನ್ಸಿಂಗ್ ಕೋಕಟ್ನೂರ್ ಸಿದ್ದನಗೌಡ ಪೊಲೀಸ್ ಪಾಟೀಲ್, ಸಿದ್ದಣ್ಣ ಶರಣರ, ಶಿವಶಂಕರ ಹಿರೇಮಠ, ತಂಡದ ಗಾಯಕರಾದ ಅಂಬರೀಶ್ ಇಂಗಳಗಿ, ಕಾಶಿನಾಥ್ ಕಾರಗನೂರು , ಹಿರಿಯ ಪತ್ರಕರ್ತರಾದ ಜಿಟಿ ಗೋರ್ಪಡೆ, ವಿಶೇಷ ಆಹ್ವಾನಿತರಾದ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಉಪೇಂದ್ರ, ಸಿದ್ದಾರ್ಥ್ ಬೈಚಬಾಳ, ಗಾಯಕಿಯರಾದ ಶೀಲಾ ಹಿರೇಮಠ, ದೀಪ ಮುದ್ದೇಬಿಹಾಳ, ಭಾಗ್ಯ ತಾಳಿಕೋಟಿ ಹಾಗೂ ಗಾಯಕರಾದ ಬಿಎಂ ಗೋಗಿ, ಸಂಗಮೇಶ್ ನಾಲತವಾಡ, ಪ್ರಭು ಸಣ್ಣಕ್ಕಿ, ಆನಂದ ಮುದ್ದೇಬಿಹಾಳ, ಬಸನಗೌಡ ಪಾಟೀಲ್, ಪರಶುರಾಮ್ ಯಾಳವಾರ, ಮುತ್ತು ಕುಂಬಾರ, ಬಸವರಾಜ್ ಮಸ್ಕನಾಳ, ಪ್ರಭು ಸಣ್ಣಕ್ಕಿ, ಹರೀಶ್ ಬಸರಿಕಟ್ಟಿ ಕಿಶೋರ್ ಕುಮಟೆ, ಸಿದ್ದು ಚಿಮಲಗಿ, ತಾಳಿಕೋಟೆ ಸಮಸ್ತ ನಾಗರಿಕರು ರಸಮಂಜರಿ ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು.

ವರದಿ: ದೇವು ಕೂಚಬಾಳ ತಾಳಿಕೋಟೆ

Continue Reading

ಮನರಂಜನೆ

“ವರ್ಷದ ಕನ್ನಡಿಗ ಪ್ರಶಸ್ತಿ 2021” : ಆ.ರ್ ಅಶೋಕ್

Published

on

ಬೆಂಗಳೂರು : ಜೆಡಬ್ಲ್ಯೂ ಮ್ಯಾರಿಯೊಟ್ ಹೋಟೆಲ್ ನಲ್ಲಿ ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯ ವತಿಯಿಂದ ಪ್ರತಿವರ್ಷ ಕೊಡಮಾಡುವ “ವರ್ಷದ ಕನ್ನಡಿಗ ಪ್ರಶಸ್ತಿ 2021″ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್ ಅಶೋಕ್ ಅವರು ಸಾಧಕರಿಗೆ ಪ್ರಶಸ್ತಿ ವಿತರಿಸಿದರು.

“ವರ್ಷದ ಕನ್ನಡಿಗ ಪ್ರಶಸ್ತಿ”ಯ ಮೂಲಕ ಕನ್ನಡಿಗರು ಮಾಡಿದ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಎಂದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್