Connect with us
Ad Widget

ರಾಜ್ಯ

2ನೇ ದಿನಕ್ಕೆ ಕಾಲಿಟ್ಟ K.S.R.T.C ಸಿಬ್ಬಂದಿ ಪ್ರತಿಭಟನೆ ರಸ್ತೆಗೆ ಇಳಿಯದ ಬಸ್ಸುಗಳು ಪ್ರಯಾಣಿಕರು ಪರದಾಟ

Published

on

ಮಸ್ಕಿ .ಎ.8 :- ರಾಜ್ಯದಲ್ಲಿ ನಡೆದ K.S.R.T.C ಸಿಬ್ಬಂದಿ ಪ್ರತಿಭಟನೆ ಇಂದು 2ನೇ ದಿನವಾದರೂ ಬಸ್ಸುಗಳು ರಸ್ತೆಗೆ ಇಳಿಯದೇ ಪ್ರಯಾಣಿಕರು ಪರದಾಡುವಂತಾಗಿದೆ.

6 ನೇ ವೇತನ ಆಯೋಗ ಜಾರಿ ಶಿಫಾರಸು ಮಾಡುವಂತೆ ಒತ್ತಾಯಿಸಿ 2ನೇ ದಿನವಾದ ಇಂದು ಸಾರಿಗೆ ಇಲಾಖೆ ಸಿಬ್ಬಂದಿ ಹೊಂದಿರುವ ಪ್ರತಿಭಟನೆ ಪರಿಣಾಮವಾಗಿ K.S.R.T.C ಬಸ್ಸುಗಳು ರಸ್ತೆಗೆ ತಿಳಿಯುವುದಿಲ್ಲ ಎಂದು ಹೇಳಿದರು.

ತಾಲೂಕಿನ ಮಸ್ಕಿಯಲ್ಲಿ ಪ್ರಯಾಣಿಕರ ಸಂಚಾರ ಅಸ್ತವ್ಯಸ್ತವಾಗಿ ಖಾಸಗಿ ಬಸ್ಸುಗಳು, ಆಟೋ, ಕ್ರುಷರ್ ಮಿನಿ ಬಸ್ಸುಗಳಲ್ಲಿ ಖಾಸಗಿ ಚಾಲಕರು ಕೇಳಿದಷ್ಟು ಪ್ರಯಾಣಿಕರು ಹಣವನ್ನು ಕೊಟ್ಟು ಊರಿನತ್ತ ಪ್ರಯಾಣವನ್ನು ನಡೆಸಿದರು,

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ರಾಜ್ಯ

ಗುದ್ದಲಿ ಪೂಜೆ ಮಾಡಬೇಕೆಂದು ಒತ್ತಾಯಿಸಿ ಸತ್ಯಾಗ್ರಹ

Published

on

ಗುದ್ದಲಿ ಪೂಜೆ ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ

ಶಿಡ್ಲಘಟ್ಟ : ನಗರದ ತಾಲ್ಲೂಕು ಕಛೇರಿಯ ಮುಂಬಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ಸ್ಥಳ ಗುರ್ತಿಸಿ ಏ. 14 ಅಂಬೇಡ್ಕರ್ ಜಯಂತಿ ದಿನದಂದು ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಇಲಾಖೆಯ ಖಾಲಿ ಜಮೀನಿನಲ್ಲಿ ನೂತನ ಭವನ ನಿರ್ಮಾಣಕ್ಕಾಗಿ ಸ್ಥಳ ಗುರ್ತಿಸಿ ಗುದ್ದಲಿ ಪೂಜೆ ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೋಂಡಿದ್ದಾರೆ. ವಿಪರ್ಯಾಸವೆಂದರೆ 25 ವರ್ಷಗಳಿಂದ ಹೋರಾಟ ಮಾಡಿಕೊಂಡು ಮನವಿ ಸಲ್ಲಿಸಿಕೊಂಡು ಬರುತ್ತಿದ್ದರೂ ಸಹ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ನಗರದ ಹೃದಯಭಾಗದಲ್ಲಿ ಸ್ಥಳ ಗುರ್ತಿಸಿ ಭವನ ನಿರ್ಮಾಣ ಮಾಡಲು ಅಧಿಕಾರಿಗಳು ವಿಳಂಬ ಅನುಸರಿಸುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕ್ಷೇತ್ರದ ಶಾಸಕ ಮುನಿಯಪ್ಪನವರಂತೂ ಭವನಗಳ ನಿರ್ಮಾಣದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಅನೇಕ ವರ್ಷಗಳಿಂದ ಮನವಿ ಪತ್ರಗಳು ಸಲ್ಲಿಸುತ್ತಿದ್ದರೂ ಸ್ಪಂದಿಸದೇ ಇರುವುದಕ್ಕೆ ಇಂದು ಡಾ.ಅಂಬೇಡ್ಕರ್ ಭವನಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸಂಘಟನೆಗಳ ಆಕ್ರೋಶವಾಗಿದೆ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಈ ಧರೆ ಪ್ರಕಾಶ್ , ಅದ್ಯಕ್ಷ ಗಂಜಿಗುಂಟೆ ನರಸಿಂಹಮೂರ್ತಿ . ದಸಂಸ ಜಿಲ್ಲಾ ಸಂ ಸಂಚಾಲಕರು ಎನ್.ಎ.ವೆಂಕಟೇಶ್ (ವೆಂಕಿ), ಮೇಲೂರು ಮಂಜುನಾಥ್ .ಚಲಪತಿ, ಕೊಟಹಳ್ಳಿ ದ್ಯಾವಕೃಷ್ಣಪ್ಪ, ನಾಗನರಸಿಂಹ. ಕೆ.ನಾರಾಯಣಸ್ವಾಮಿ. ಎಸ್.ಎಂ.ಮಂಜುನಾಥ್ ಗುರುಮೂರ್ತಿ, , ಗ್ಯಾಸ್ ನಾಗರಾಜ್, , ಕುಂದಲಗುರ್ಕಿ ಮುನೀಂದ್ರ ದೊಡ್ಡ ದಾಸರಹಳ್ಳಿ ದೇವರಾಜು ಮುಂತಾದವರು ಹಾಜರಿದ್ದರು .

ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ

Continue Reading

Politics

ವಿವಿಧ ಕೃಷಿ ಪರಿಕರಗಳ ವಿತರಣೆ ಸಮಾರಂಭ

Published

on

ಹಿರೇಕೆರೂರು : ಕೃಷಿ ಇಲಾಖೆಯ ವತಿಯಿಂದ ನಗರದ ಪೊಲೀಸ್ ಮೈದಾನದಲ್ಲಿ, ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸ್ಮರಣಾರ್ಥ ಆಯೋಜಿಸಿದ್ದ “ವಿವಿಧ ಕೃಷಿ ಪರಿಕರಗಳ ವಿತರಣೆ ಸಮಾರಂಭ”ದಲ್ಲಿ ಭಾಗಿಯಾದ ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಕೃಷಿ ಚಟುವಟಿಕೆಗಳಿಗೆ ಬಳಸುವ ಸಾಮಗ್ರಿಗಳನ್ನು, ಟ್ರ್ಯಾಕ್ಟರ್, ಸ್ಪ್ರಿಂಕ್ಲರ್ ಪೈಪುಗಳು ಹಾಗೂ ಹಸುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ನಗರದ ಗಣ್ಯರು, ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ರಾಜ್ಯ

ರಾಜ್ಯದಲ್ಲಿ ಮತ್ತೊಂದು ಸ್ಪೋಟ, ಓರ್ವ ಸಾವು

Published

on

ಹಾಸನ: ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸೂತಕದ ಛಾವೆ ಮರೆಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಹಾಸನ ತಾಲೂಕಿನ ಚಾಕೇನಹಳ್ಳಿಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಸಂಪತ್ (27) ಎಂಬ ಯುವಕ ಸಾವನ್ನಪ್ಪಿದ್ದು , ಮತ್ತಿಬ್ಬರು ಗಾಯಗೊಂಡಿದ್ದಾರೆ. ಒಬ್ಬ ಗಾಯಾಳುವನ್ನು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಮತ್ತೋರ್ವನನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಪೋಟಕಗಳನ್ನು ಸ್ಥಳಾಂತರಿಸುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಶಾಂತಿನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್