ಕ್ರೀಡೆ
ಇಂದು ನಡೆಯಬೇಕಾಗಿದ್ದ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ರದ್ದು
ನವದೆಹಲಿ: ಅತಿ ಎಚ್ಚರಿಕೆ ಮತ್ತು ಕಡ್ಡಾಯ ಕೋವಿಡ್ ನಿರ್ಬಂಧಗಳ ಪಾಲನೆಯ ಹೊರತಾಗಿಯೂ ಮಾರಕ ಕೊರೋನಾ ವೈರಸ್ ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ್ದು, ಕೋಲ್ಕತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ಸೋಂಕಿಗೆ ತುತ್ತಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ಒಕ್ಕರಿಸಿದ್ದು, ಇದು ಇಂದಿನ ಪಂದ್ಯದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಮೂಲಗಳ ಪ್ರಕಾರ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಇಬ್ಬರು ಆಟಗಾರರ ಪೈಕಿ ಬಯೋ ಬಬಲ್ನಲ್ಲಿ ಇರುವ ಓರ್ವ ಕ್ರಿಕೆಟ್ ಆಟಗಾರನಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದ್ದು, ಇದು ಇತರೆ ಆಟಗಾರರಿಗೂ ಸೋಂಕಿನ ಭೀತಿ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಅಂದರೆ ಮೇ 3 ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ನಡುವೆ ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಇಂದಿನ ಐಪಿಎಲ್ ಪಂದ್ಯವನ್ನು ಮುಂದೂಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ಈ ಸಂಬಂಧ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕ್ರೀಡೆ
ಘಟಾನುಘಟಿ ಬ್ಯಾಟ್ಸ್‌ಮನ್ ಗಳ ವೈಫಲ್ಯದಿಂದ ಆರ್‌ಸಿಬಿ ಸೋಲಿಗೆ ಗುರಿ
ಅಹಮ್ಮದಾಬಾದ್ : ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ನೀಡಿದ 180 ರನ್ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗಿಲ್ಲ. ಘಟಾನುಘಟಿ ಬ್ಯಾಟ್ಸ್‌ಮನ್ ವೈಫಲ್ಯದಿಂದ ಆರ್‌ಸಿಬಿ ಸೋಲಿಗೆ ಗುರಿಯಾಗಿದೆ.
180 ರನ್ ಟಾರ್ಗೆಟ್ ಪಡೆದ ಆರ್‌ಸಿಬಿ ಆರಂಭದಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಜೊತೆಯಾಟ ಆರ್‌ಸಿಬಿ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಕೊಹ್ಲಿ 35 ರನ್ ಸಿಡಿಸಿ ಔಟಾದರು.
ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ ಅಬ್ಬರಿಸಲಿಲ್ಲ. ಇತ್ತ ರಜತ್ ಪಾಟಿದಾರ್ 31 ರನ್ ಸಿಡಿಸಿ ಔಟಾದರು. ಶಹಬ್ಬಾಝ್ ಅಹಮ್ಮದ್ ಹಾಗೂ ಡೇನಿಯಲ್ ಸ್ಯಾಮ್ಸ್ ಕೂಡ ನೆರವಾಗಲಿಲ್ಲ. ಅಂತಿಮ ಹಂತದಲ್ಲಿ ಕೈಲ್ ಜಾಮಿನ್ಸ್ ಹಾಗೂ ಹರ್ಶಲ್ ಪಟೇಲ್ ಹೋರಾಟ ನಡೆಸಿದರು.
ಹರ್ಶಲ್ ಪಟೇಲ್ 31 ರನ್ ಸಿಡಿಸಿ ಔಟಾದರು. ಕೈಲ್ ಜಾಮಿನ್ಸನ್ ಅಜೇಯ 16 ರನ್ ಹಾಗೂ ಈ ಮೂಲಕ ಆರ್‌ಸಿಬಿ ವಿಕೆಟ್ 58 ನಷ್ಟಕ್ಕೆ 145 ರನ್ ಸಿಡಿಸಿತು. ಹರ್ಪ್ರೀತ್ ಬ್ರಾರ್ 3 ವಿಕೆಟ್ ಕಬಳಿಸಿ ಮಿಂಚಿದರು. 34 ರನ್ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಲ್ಲಿ ಸ್ಥಾನಕ್ಕೇರಿತು.
ಕ್ರೀಡೆ
ಪಂಜಾಬ್ ಕಿಂಗ್ಸ್ ವಿರುದ್ಧವೂ ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ಸ್ ಚಾಲೆಂಜರ್ಸ್
ಬೆಂಗಳೂರು : ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ಸ್ ಚಾಲೆಂಜರ್ಸ್ ತಂಡ ಇಂದು ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣೆಸಾಟವನ್ನು ನಡೆಸಲಿದ್ದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿರುವ ವಿರಾಟ್ ಕೊಹ್ಲಿ ಬಳಗ ಸೋಲಿನ ಮೇಲೆ ಸೋಲು ಕಾಣುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧವೂ ಗೆಲುವಿನ ನಿರೀಕ್ಷೆಯಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಈ ಪಂದ್ಯಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯವನ್ನು ವಹಿಸಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಕ್ರೀಡೆ
6 ಸಾವಿರ ರನ್ ಸರದಾರ ವಿರಾಟ್ ಕೊಹ್ಲಿ
ಮುಬೈ : ಐಪಿಎಲ್ ನಲ್ಲಿ 6000 ರನ್ ಕಲೆಹಾಕಿದ ಮೊದಲ ಆಟಗಾರ ಎಂಬ ಹಿರಿಮೆಗೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 5,448 ರನ್ ಗಳಿಸಿರುವ ಚೆನ್ನೈ ತಂಡದ ಸುರೇಶ್ ರೈನಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಗುರುವಾರ ಮುಂಬೈನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಔಟಾಗದೆ 72 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರು ನೂತನ ಮೇಲುಗೈ ಸ್ಥಾಪಿಸಿದ್ದಾರೆ.
-
Politics3 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ3 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ4 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?
-
Politics3 weeks ago
ಸಿಂದಗಿಯಲ್ಲಿ ರಾಜ್ಯ ಮಟ್ಟದ ಸಿಂಗಿಂಗ್ ಕಾಂಪಿಟೇಶನ್ ಚಾಲನೆ