ರಾಜ್ಯ
ಗುರುವಾರ ಸಂಜೆ ದಿಢೀರನೆ ಸುರಿದ ಬೃಹದಾಕಾರದ ಆಲಿಕಲ್ಲು ಮಳೆ : ಕೆಲವೆಡೆ ರೈತರಿಗೆ ಅಪಾರ ನಷ್ಟ
ಶಿಡ್ಲಘಟ್ಟ : ಗುರುವಾರ ಸಂಜೆ ದಿಡೀರನೆ ಸುರಿದ ಬೃಹದಾಕಾರದ ಆಲೀಕಲ್ಲು ಮಳೆಯಿಂದ ತಾಲ್ಲೂಕಿನ ಕೆಲವೆಡೆ ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ತಾಲ್ಲೂಕಿನ ಬಶೆಟ್ಟಹಳ್ಳಿ ವ್ಯಾಪ್ತಿಯ ಅಮ್ಮಗಾರಹಳ್ಳಿ, ಗೌಡನಹಳ್ಳಿ ಸುತ್ತಮುತ್ತಲಿನ ರೈತರ ಪಾಲಿಹೌಸ್‌ಗಳು ಹಾಳಾಗಿದ್ದು, ಬಹುತೇಕ ದ್ರಾಕ್ಷಿ, ಟಮೋಟ ತೋಟಗಳು ಬೃಹತ್ ಆಲಿಕಲ್ಲು ಮಳೆಯಿಂದಾಗಿ ನೆಲಕಚ್ಚಿವೆ.
ಹಿಂದೆಂದೂ ಕಂಡರಿಯದಂತಹ ಸುಮಾರು 2 ಅಡಿ ಸುತ್ತಳತೆಯ ಬೃಹತ್ ಆಲಿಕಲ್ಲು ‘ಬಂಡೆ’ಗಳು ದಿಢೀರನೆ ಆಕಾಶದಿಂದ ಬೀಳತೊಡಗಿದವು. ನೋಡನೋಡುತ್ತಿದ್ದಂತೆ ಬೆಳೆಗೆ ಕಟ್ಟಿದ್ದ ಪಾಲಿಹೌಸ್‌ಗಳು ನೆಲಕಚ್ಚ್ಚಿದವು. ಪಾಲಿಹೌಸ್ ಹಾಳಾಗುವ ಜೊತೆಗೆ ದ್ರಾಕ್ಷಿ ಸೇರಿದಂತೆ ರೈತರು ಬೆಳೆದ ವಿವಿಧ ಬೆಳೆಗಳು ಹಾಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗೌಡನಹಳ್ಳಿ ಸಮೀಪದ ಎನ್.ಬಚ್ಚೇಗೌಡ ಅವರಿಗೆ ಸೇರಿರುವ 6 ಎಕರೆ ದ್ರಾಕ್ಷಿ ತೋಟ, ಒಂದು ಎಕರೆ ಟೊಮೇಟೋ ಮತ್ತು ಒಂದು ಎಕರೆ ಕೋಸು ಬೆಳೆಗಳು ಕೊನೆಯ ಹಂತದಲ್ಲಿದ್ದವು. ಮಾರಾಟದ ಹಂತದಲ್ಲಿದ್ದ ಈ ಬೆಳೆಗಳು ಭಾರೀಗಾತ್ರದ ಆಲೀಕಲ್ಲು ಮಳೆಯಿಂದಾಗಿ ನಾಶವಾಗಿದ್ದು, ಸುಮಾರು 27 ಲಕ್ಷ ರೂಗಳಷ್ಟು ನಷ್ಟ ಉಂಟಾಗಿರುವುದಾಗಿ ಅವರು ತಿಳಿಸಿದ್ದಾರೆ.
ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ
ರಾಜ್ಯ
ಬೆಳ್ಳಂಬೆಳಗ್ಗೆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹಲ್ಲೆ
ಬಾಗೇಪಲ್ಲಿ: ವ್ಯಕ್ತಿಯೋರ್ವನ ಮೇಲೆ ಅಪರಚಿತ ವ್ಯಕ್ತಿಗಳಿಂದ ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಪೋತೆಪಲ್ಲಿ ಕ್ರಾಸ್ ಬಳಿ ದುರ್ಘಟನೆ.
ಬೆಳಗಿನ ಜಾವ 4 ಗಂಟೆಯಲ್ಲಿ ಮಾರುಕಟ್ಟೆಗೆ ಹೋಗುವಾಗ ಅಪರಿಚಿತರಿಂದ ದಾಳಿ ನಡೆದಿದ್ದು, ಐವಾರಪಲ್ಲಿ ಗ್ರಾಮದ ನರಸಿಂಹಮೂರ್ತಿ (38) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರ್ತಿಸಲಾಗಿದೆ. ಸದ್ಯ ನರಸಿಂಹಮೂರ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುವಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ದಾಳಿಗೆ ಆತನ ಅನೈತಿಕ ಸಂಬಂಧವೇ ಕಾರಣವೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯ
ಕೊಪ್ಪ ಹೋಬಳಿಯ ತಗ್ಗಹಳ್ಳಿ ಅಂಬೇಡ್ಕರ್ ಭವನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ
ಮಂಡ್ಯ : 14-4-21 ರ ರಾತ್ರಿ, ಕೊಪ್ಪ ಹೋಬಳಿಯ ತಗ್ಗಹಳ್ಳಿ ಅಂಬೇಡ್ಕರ್ ಭವನದಲ್ಲಿ ಡಾ: ಬಿ.ಅರ್. ಅಂಬೇಡ್ಕರ್ ಅವರ 130 ನೇ ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ರಾಂತಿ ಗಾಯಕ ಮತ್ತು ಹೋರಾಟಗಾರ ಹುರುಗಲವಾಡಿ ರಾಮಯ್ಯ ಅಸ್ಪೃಶ್ಯತೆಯ ಕರಾಳ ನೋವುಗಳನ್ನುಂಡ ಅಂಬೇಡ್ಕರ್ ಅವರು ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ವಿದ್ಯೆ ಪಡೆದು ವಿಶ್ವ ಜ್ಞಾನಿಯಾಗಿ ಬೆಳೆದು ನಿಂತಿದ್ದಾರೆ.
ಅಪಾರ ವಿದ್ವತ್ತನ್ನು ಪಡೆದ ಅಂಬೇಡ್ಕರ್ 64 ವಿಷಯಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಸಮಾನತೆಯ ಶ್ರೇಷ್ಟ ಸಂವಿಧಾನ ಬರೆದ ಅಂಬೇಡ್ಕರ್ ಅವರು ಭಾರತ ಭಾಗ್ಯವಿದಾತರಾಗಿದ್ದಾರೆ. ಭಾರತದ ಭವಿಷ್ಯ ಸಂವಿಧಾನದಲ್ಲಿದೆ, ಸಂವಿಧಾನ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಅಧ್ಯಕ್ಷ ತೆ ವಹಿಸಿ ಮಾತನಾಡಿದ ದಲಿತ ಮುಖಂಡ ಟಿ ಎಂ ಸುಂದರೇಶ್ ಅಂಬೇಡ್ಕರ್ ಅವರಂತೆ ಇಂದಿನ ಪೀಳಿಗೆ ಓದು, ಅಧ್ಯಯನದಲ್ಲಿ ತಲ್ಲೀನರಾಗಬೇಕು. ವಿದ್ಯೆಯೊಂದೇ ನಮಗೆ ಮುಂದುವರಿಯುವ ಮಾರ್ಗ ಎಂದರು.
ಟಿ ವಿ ರವೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ ಎಸ್ ಬೋರಯ್ಯ, ಟಿ ಎಂ ಗುರುಸ್ವಾಮಿ, ಮಲ್ಲೇಶ್, ಲೋಕೇಶ್ ವೇದಿಕೆಯಲ್ಲಿದ್ದರು. ಲಿಖಿತ್, ಮದನ್, ನಂದನ್ ಪ್ರಾರ್ತಿಸಿದರು. ಮನೋಜ್ ಕುಮಾರ್ ನಿರೊಪಣೆ ಮಾಡಿದರು, ವಿಶ್ವ ನಾರಾಯಣ್ ಸ್ವಾಗತಿಸಿ, ಟಿ ಎಸ್ ರಮೇಶ್ ವಂದಿಸಿದರು.
ರಾಜ್ಯ
ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಆಶೀರ್ವಾದ ಪಡೆದ ಸತೀಶ್ ಜಾರಕಿಹೊಳಿ
ಬಾಗಲಕೋಟೆ : ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಗುರುವಾರ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ ರವರು ಆಶೀರ್ವಾದ ಪಡೆದರು. ಉಪಚುನಾವಣೆ ಕುರಿತು ಸ್ವಾಮೀಜಿ ಅವರೊಂದಿಗೆ ಸುದೀರ್ಘ ಕಾಲ ಚರ್ಚೆ ನಡೆಸಲಾಯುತು. ಕಳೆದ 30 ವರ್ಷಗಳ ರಾಜಕೀಯ ಸೇವೆಯೇ ನಿಮ್ಮ ಕೈ ಹಿಡಿಯಲಿದೆ. ಬೆಳಗಾವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೀರಿ ಎಂದು ಶ್ರೀಗಳು ಆಶೀರ್ವಾದ ಮಾಡಿದರು.
ಉಪಚುನಾವಣೆ ಕುರಿತು ಸ್ವಾಮೀಜಿ ಅವರೊಂದಿಗೆ ಸುದೀರ್ಘ ಕಾಲ ಚರ್ಚೆ ನಡೆಸಿದರು. ಕಳೆದ 30 ವರ್ಷಗಳ ರಾಜಕೀಯ ಸೇವೆಯೇ ನಿಮ್ಮ ಕೈ ಹಿಡಿಯಲಿದೆ. ಬೆಳಗಾವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೀರಿ ಎಂದು ಶ್ರೀಗಳು ಆಶೀರ್ವಾದ ಮಾಡಿದರು.
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?