ಸುದ್ದಿ
ದಲಿತ ಹೋರಾಟಗಾರ ನಾಗಪ್ಪ (ಮುರಾರಿ) ತತ್ತಿ ಇನ್ನಿಲ್ಲ
ಮಸ್ಕಿ :- ತಾಲೂಕಿನ ದಲಿತ ಹೋರಾಟಗಾರ ಶ್ರಮಜೀವಿ ಎಂದೆ ಪ್ರಖ್ಯಾತಿ ಪಡೆದ ನಾಗಪ್ಪ (ಮುರಾರಿ) ತತ್ತಿ ನಿಧನರಾಗಿದ್ದು. ಅವರು ಸಮಾಜದಲ್ಲಿ ದಲಿತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಕ್ರಾಂತಿಗೀತೆಗಳನ್ನು ಹಾಡುವುದರ ಮೂಲಕ ಸಂಘಟನೆಯಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ಪಡೆದಿದ್ದರು ಕೆಲದಿನಗಳ ಕಾಲ ಅನಾರೋಗ್ಯದಿಂದ ಇದ್ದವರು ಇಂದು ನಿಧನರಾಗಿದ್ದು ದಲಿತ ಸಮಾಜಕ್ಕೆ ದಲಿತ ಸಂಘಟನೆಗೆ ತುಂಬಲಾರದ ನಷ್ಟವಾಗಿದೆ.
ನಾಗಪ್ಪ (ಮುರಾರಿ) ತತ್ತಿ ಇವರು ಅಪಾರ ಬಂಧುಬಳಗವನ್ನು ಬಿಟ್ಟು ಆಗಲಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು ಮತ್ತು ಧರ್ಮ ಪತ್ನಿ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಆಗಲಿದ್ದಾರೆ.
ದಲಿತ ಸಮಾಜದ ಹಿರಿಯ ಮುಖಂಡರಾದ ಶ್ರೀ ಅಂಬಣ್ಣ ಹರ್ಲೇಕರ್, ರಾಯಚೂರು ಹನುಮಂತಪ್ಪ ವೆಂಕಟಾಪುರ್, ದಾನಪ್ಪ ನಿಲಗಲ್, ಸುರೇಶ್ ಅಂತ್ರಗಂಗೆ ಮಲ್ಲಯ್ಯ ಬಳ್ಳಾ, ದೊಡ್ಡಪ್ಪ ಮುರಾರಿ, ಅಶೋಕ್ ಮುರಾರಿ ಮಲ್ಲಯ್ಯ ಮುರಾರಿ, ಎಚ್ಪಿ ಮುರಾರಿ, ರಾಮಯ್ಯ ಮುರಾರಿ, ಪಮಯ್ಯ ಮುರಾರಿ ಸೇರಿದಂತೆ ಇನ್ನಿತರ ಸಂಘಟನೆ ಮುಖಂಡರು ದಲಿತ ಪರ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಭೀತಿಯಿಂದ ಭಗವಾನ್ ಮಹಾವೀರರ ಜಯಂತಿ ಸರಳವಾಗಿ ಆಚರಣೆ
ಮಸ್ಕಿ:- ನಗರದ ಸರಕಾರಿ ಆಸ್ಪತ್ರೆಯಲ್ಲಿ ಭಗವಾನ್ ಶ್ರೀ 1008 ಮಹಾವೀರ ತೀರ್ಥಂಕರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕೊರೋನಾ ವೈರಸ್ ಲಾಕ್ ಡೌನ್ 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜೈನ್ ಬಸದಿಯಲ್ಲಿ ಜೈನ್ ಬಾಂಧವರೆಲ್ಲಾ ಸೇರಿ ಸಂಭ್ರಮಿಸುತ್ತಿದ್ದರು.
ಆದರೆ ಈ ದಿನವನ್ನ ಇಂದು ಅವರವರ ಮನೆಯಲ್ಲಿಯೇ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ಸಮಾರ್ಪಣೆ ಮಾಡಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ.
ಜಗತ್ತಿಗೆ ಅಹಿಂಸಾ ತತ್ವ ಬೋಧಿಸಿದ ತೀರ್ಥಂಕರ ಜಯಂತಿಯನ್ನು ಅವರ ತತ್ವಗಳನ್ನು ಇತರರಿಗೂ ತಿಳಿಸಿ ಸನ್ಮಾರ್ಗದಲ್ಲಿ ನಡೆಯುತ್ತೇವೆ ಲಾಕ್ ಡೌನ್ ಎಂಬುದು ದೇಶಕ್ಕೆ ಬಂದಿರುವ ಪಿಡಗು ಇದನ್ನು ಹೊಡೆದು ಓಡಿಸಲು ಕೈಗೊಂಡಿರುವ ನಿರ್ಧಾರ ಆದ್ದರಿಂದ ನಾವು ಮನೆಯಲ್ಲಿ ತೀರ್ಥಂಕರರ ಜಯಂತಿ ಆಚರಿಸುವುದು ಒಂದು ಸನ್ಮಾರ್ಗವೇ ಎಂದು ಜೈನ್ ಸಮಾಜದ ಕಾರ್ಯದರ್ಶಿ ಹೇಳಿದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ತೊಗರಿ ಹೊಟ್ಟಿನ ಬಣವೆಗೆ ಬೆಂಕಿ : ಸ್ಥಳಕ್ಕೆ ಅಗ್ನಿ ಶಾಮಕ ಆಗಮನ
ತಾಳಿಕೋಟಿ : ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ತೊಗರಿ ಹೊಟ್ಟಿನ ಬನಮೆಗೆ ಬೆಂಕಿ ಬಿದ್ದಿರುವ ಘಟನೆ ಬೆಳಕಿಗೆ ಬಿದ್ದಿದೆ.
ಮೈಲೇಶ್ವರ್ ಗ್ರಾಮದ ರೈತ ಸಂಗಮೇಶ ವಡಗೇರಿ ಎಂಬ ರೈತ ತನ್ನ ಹೊಲದಲ್ಲಿ ಕೂಡಿಸಿಟ್ಟಿರುವ ಸುಮಾರು 5 ಕೂರಗಿ ಜಮೀನಿನಷ್ಟು ತೊಗರಿ ಹೊಟ್ಟಿನ ಬಣಮೆಗೆ ಬೆಂಕಿ ಬಿದ್ದಿರುವುದನ್ನು ತಿಳಿದ ಜಮೀನಿನ ಮಾಲೀಕ ಜಮೀನಿಗೆ ತೆರಳಿ ಬೆಂಕಿಯನ್ನು ನಂಧಿಸಲು ಪ್ರಯತ್ನಿಸುತ್ತಾರೆ.
ಬೆಂಕಿಯು ಆರದ ಕಾರಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತಕ್ಷಣವೆ ಆಗಮಿಸಿ ಬೆಂಕಿಯನ್ನು ಆರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಮೀನಿನ ರೈತ ಸಂಗಮೇಶ ವಡಿಗೇರಿ ಅವರು ನಮ್ಮ ಜಮೀನದಲ್ಲಿ ಕೂಡಿಟ್ಟಿರುವ ಹೊಟ್ಟಿನ ಬಣಮೆಗೆ ಬೆಂಕಿ ಹೇಗೆ ತಗುಲಿದೆ ಎಂದು ನಮಗೆ ತಿಳಿದಿಲ್ಲ, ಯಾರು ಹಚ್ಚಿದ್ದಾರೋ ಅಥವಾ ತಾನಾಗಿಯೇ ಬಿಸಿಲಿಗೆ ಹತ್ತಿದೆಯೋ ಏನೂ ಗೊತ್ತಿಲ್ಲ ನನಗೆ ಇದರಿಂದ ಸುಮಾರು 20000 ದಿಂದ 30000 ರೂಪಾಯಿ ಮೌಲ್ಯದ ಹೊಟ್ಟು ನಾಶವಾಗಿದೆ ಎಂದು ತಿಳಿಸಿದ.
ಹೊಟ್ಟಿನ ಬಣಮೆಗೆ ಬೆಂಕಿ ತಗುಲಿ ಇದರಿಂದ ಆಗಿರುವ ಸುಮಾರು 20000 ರಿಂದ 30000 ರೂಪಾಯಿಗಳವರೆಗೆ ನಮಗೆ ನಷ್ಟವಾಗಿದೆ ಈ ನಷ್ಟವು ಸಂಭವಿಸಿರುವ ಕಾರಣ ಸರ್ಕಾರವು ನಮಗೆ ಧನ ಸಹಾಯ ನೀಡಬೇಕು ಎಂದು ರೈತನು ಮಾಧ್ಯಮದ ವರದಿಗಾರರ ಮೂಲಕ ಸರ್ಕಾರಕ್ಕೆ ತಿಳಿಸಿದರು.
ಹೊಟ್ಟಿನ ಬಣಮೆಗೆ ಬೆಂಕಿ ತಗುಲಿರುವ ಜಮೀನಿನ ರೈತನ ತಂದೆಯು ಕೆಲವು ದಿನಗಳ ಹಿಂದೆ ಮರಣಹೊಂದಿದ್ದು ಈಗ ನಾನು, ನನ್ನ ತಮ್ಮ, ಮತ್ತು ನನ್ನ ತಾಯಿ ಸೇರಿ ಜಮೀನು ಸಾಗುವಳಿ ಮಾಡುತ್ತಾ ಹೋಗುತ್ತಿದ್ದೆವು ಎಂದು ನೋವಿನ ಮೂಲಕ ತಿಳಿಸಿದರು. ಇದೆ ಸಂದರ್ಭದಲ್ಲಿ ನಮಗೆ ಈಗ ಆಗಿರುವ ನಷ್ಟವನ್ನು ಸರ್ಕಾರವು ಧನ ಸಹಾಯ ಮಾಡಬೇಕು ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಜಮೀನಿನ ರೈತ ಸಂಗಮೇಶ ವಡಗೇರಿ, ಅಗ್ನಿಶಾಮಕದಳದ ಸಿಬ್ಬಂದಿಗಳಾದ ಪ್ರಭು ಸಣ್ಣಕ್ಕಿ, ಕೆ.ಬಿ.ಮುಲ್ಲಾ, ಅಂಬಳನೂರು, ಎಚ್.ಸಿ.ಕರಕಳ್ಳಿ, ಮತ್ತು ಮೈಲೇಶ್ವರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
1) ತಾಲೂಕಿನ ಮೈಲೇಶ್ವರ ಗ್ರಾಮದ ರೈತನ ತೊಗರಿ ಹೊಟ್ಟಿನ ಬಣಮೆಗೆ ಬೆಂಕಿ.
2) ಸುಮಾರು 20 ಸಾವಿರದಿಂದ 30 ಸಾವಿರ ರೂಪಾಯಿ ಮೊತ್ತದ ನಷ್ಟವಾಗಿದೆ ಎಂದು ತಿಳಿಸಿದ ರೈತ.
3) ಬೆಂಕಿಯನ್ನು ನಂದಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು.
4) ಬೆಂಕಿ ತಗುಲಿ ಆಗಿರುವ ನಷ್ಟಕ್ಕೆ ಸರ್ಕಾರವು ಧನ ಸಹಾಯ ನೀಡಬೇಕು ಎಂದು ತಿಳಿಸಿದರು.
ವರದಿ : ದೇವು ಕೂಚಬಾಳ
ಸುದ್ದಿ
ಮಸ್ಕಿ ತಾಲೂಕಿನ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ಭಾಗ್ಯ ಮರೀಚಿಕೆ
ಮಸ್ಕಿ : ತಾಲೂಕಿನ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಪ್ರಾರಂಭಗೊಳ್ಳಲಿ ಎಂದು ಸಾರ್ವಜನಿಕರ ಬೇಡಿಕೆಯಾಗಿದೆ.
ಆದರೆ ಮಸ್ಕಿ ಜನತೆಯ ಬಹುಕಾಲದ ಬೇಡಿಕೆಯೊಂದು ಕೊನೆಗೂ ಈಡೇರಿದಂತಾಗಿದೆ.
ಮೇಲ್ದರ್ಜೆಗೆ ಏರಿ ಹಲವು ವರ್ಷಗಳಾದರೂ ಸುಸಜ್ಜಿತ ಕಟ್ಟಡ ಭಾಗ್ಯವಿಲ್ಲದೆ ಮೂಲ ಸೌಕರ್ಯದಿಂದ ವಂಚಿತವಾಗಿದ್ದ ಮಸ್ಕಿ ನಗರದ ಸರಕಾರಿ ಆಸ್ಪತ್ರೆಗೆ ಈಗ ನೂತನ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು ಇನ್ನು ಮುಗಿಯದೆ ನೆನೆಗುದಿ ಬಿದ್ದಿದೆ.
ಮಸ್ಕಿ ಜನತೆಯ ಬಹುಕಾಲದ ಬೇಡಿಕೆಯೊಂದು ಕೊನೆಗೂ ಈಡೇರುತ್ತಿಲ್ಲ .
30 ಹಾಸಿಗೆಗಳ ಮೂಲಭೂತ ವ್ಯವಸ್ಥೆಗಳನ್ನೊಳಗೊಂಡ ಆಸ್ಪತ್ರೆ ಎದ್ದು ನಿಂತಿದ್ದು ಈ ಭಾಗದ ಜನತೆಯ ಬೇಡಿಕೆಯನ್ನು ರಾಜ್ಯ ಸರಕಾರ ಸಾಕಾರಗೊಳಿಸಿದ. ಭಾವನೆ ಜನರಲ್ಲಿ ಮೂಡಿದೆ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ತಿಳಿದಿರುವ ಸಾರ್ವಜನಿಕರ ಆಸೆ ನಿರಾಸೆ ಯಂತಾಗಿದೆ.
ಮಸ್ಕಿಯು ಈಗಾಗಲೇ ತಾಲೂಕು ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 8 ವರ್ಷಗಳ ಹಿಂದೆ 6 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ನೂತನ ಕಟ್ಟಡ ನಿರ್ಮಾಣವಾಗದೆ ನೆನೆಗುದಿಗೆ ಬಿದ್ದಿರುವ ಸಮುದಾಯ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಕೋಟಿ ಕೋಟಿ ರೂ. ಬಿಡುಗಡೆ ಮಾಡಿದ್ದು, ಈ, ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿಲ್ಲ .
6 ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದೆ. ದಿನಂಪ್ರತಿ ಸುಮಾರು 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುವ ಈ ಆಸ್ಪತ್ರೆಯನ್ನು ಬಿಟ್ಟರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜನರು ಸಿಂಧನೂರು, ಮತ್ತು ಲಿಂಗಸೂರು ಹಾಗೂ ಆಕ್ಸಿಡೆಂಟ್ ಆದರೆ ಅತಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ, ಬಳ್ಳಾರಿ, ರಾಯಚೂರು, ಜಿಲ್ಲೆಯ ಕಡೆ ತೆರಳಬೇಕಾದ ಅನಿವಾರ್ಯತೆ ಇದೆ.
ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗೆ ಹೋಗುವಾಗ ಸಮಯದಲ್ಲಿ ದಾರಿಯ ಮಧ್ಯೆ ಪ್ರಾಣ ಕಳೆದುಕೊಳ್ಳುವ ಸಂದರ್ಭ ಬಂದಿದ್ದು ಇದನ್ನು ಅರಿತುಕೊಳ್ಳದೆ ಇರುವಂತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಟ್ಟಡದ ಕಡೆ ಒಂದು ಬಾರಿ ಗಮನಹರಿಸಬೇಕಾಗಿದೆ .
ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಮುಂದೆ ಜಾಲಿ ಗಿಡಗಳು ಹೆಮ್ಮರವಾಗಿ ಬೆಳೆದಿದ್ದು, ಹಾಗೂ ಒಳಗಡೆ ಕುಡುಕರ ತಾಣವಾಗಿದ್ದು ಇದರ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
ಮಸ್ಕಿ ತಾಲೂಕಿನ ಅಧಿಕಾರಿಗಳು ಈ ಕಟ್ಟಡ ಯಾವಾಗ ಸಂಪೂರ್ಣ ಕಾಮಗಾರಿ ಮಾಡುತ್ತಾರೆ ಎಂದು ಕಾದುನೋಡಬೇಕಾಗಿದೆ???
ವರದಿ : ದುರ್ಗೇಶ್ ಭೋವಿ ಮಸ್ಕಿ
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?