ಕ್ರೀಡೆ
6 ಸಾವಿರ ರನ್ ಸರದಾರ ವಿರಾಟ್ ಕೊಹ್ಲಿ
ಮುಬೈ : ಐಪಿಎಲ್ ನಲ್ಲಿ 6000 ರನ್ ಕಲೆಹಾಕಿದ ಮೊದಲ ಆಟಗಾರ ಎಂಬ ಹಿರಿಮೆಗೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 5,448 ರನ್ ಗಳಿಸಿರುವ ಚೆನ್ನೈ ತಂಡದ ಸುರೇಶ್ ರೈನಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಗುರುವಾರ ಮುಂಬೈನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧ ಔಟಾಗದೆ 72 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರು ನೂತನ ಮೇಲುಗೈ ಸ್ಥಾಪಿಸಿದ್ದಾರೆ.
ಕ್ರೀಡೆ
ಅಪರೂಪದ ದಾಖಲೆ ಬರೆದ ರಾಯಲ್ ಚಾಲೆಂಜರ್ಸ್ ತಂಡ
ಚೆನ್ನೈ: ಭಾನುವಾರ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ತಂಡ 38 ರನ್ ಜಯ ಗಳಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿರಾಟ್ ಕೊಹ್ಲಿ ಪಡೆ ಈ ಸೀಸನ್‌ನ ಮೂರನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಆರ್‌ಸಿಬಿ ಅಪರೂಪದ ದಾಖಲೆಗಳಿಗೂ ಕಾರಣವಾಗಿದೆ.
ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ತಂಡ ಟೂರ್ನಿಯ ಆರಂಭದಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದ ದಾಖಲೆಯಿಲ್ಲ. ಆದರೆ ಈ ಬಾರಿ ಆರ್‌ಸಿಬಿ ಟೂರ್ನಿ ಆರಂಭದಲ್ಲೇ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಗೆಲುವಿನ ಹುಮ್ಮಸ್ಸಿನಲ್ಲಿದೆ. ಆರ್‌ಸಿಬಿ ಈ ಆಟ ನೋಡಿದರೆ ಈ ಸೀಸನ್‌ನಲ್ಲಿ ಬೆಂಗಳೂರು ಕಪ್ ಗೆದ್ದರೂ ಅಚ್ಚರಿಯಿಲ್ಲ.
ಕ್ರೀಡೆ
ಡೆಲ್ಲಿ ಕ್ಯಾಪಿಟಲ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಕಾದಾಟ
ಮುಂಬೈ: ಐಪಿಎಲ್ ಪಂದ್ಯಾವಳಿಯ 14ನೇ ಸೀಸನ್‌ನ ಎರಡನೇ ಪಂದ್ಯವು ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ಇಂದು ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದೆ.
ಡ್ಯಾಡಿಸ್ ಆರ್ಮಿ ಎಂದೇ ಕರೆಯಲ್ಪಡುತ್ತಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡವು ಕಳೆದ ಋತುವಿನಲ್ಲಿ ಆರಬ್‌ರಾಷ್ಟ್ರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಇಡೀ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದು ಬಿಟ್ಟರೆ ಉಳಿದಂತೆ ತಂಡದ ಪ್ರದರ್ಶನ ಮಾತ್ರ ಉತ್ತಮವಾಗಿದೆ.
ಕ್ರೀಡೆ
ಇಂದು ಹದಿನಾಲ್ಕನೇ ಆವೃತ್ತಿಯ ಉದ್ಘಾಟನಾ ಪಂದ್ಯ : ಆರ್ ಸಿ ಬಿ vs ಮುಂಬೈ ಸೆಣಸಾಟ
ಚೆನ್ನೈ : ದೇಶದಾದ್ಯಂತ ಕರೋನ ಎರಡನೇ ಅಲೆ ಉಲ್ಬಣಗೊಳ್ಳುತ್ತಿರುವ ನಡುವೆಯೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಯ ಚೊಚ್ಚಲ ಪಂದ್ಯ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಚಾಲನೆಗೊಳ್ಳಲಿದೆ. ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಶುಭಾರಂಭ ಮಾಡಲು ಮುಂದಾಗಿವೆ.
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?