Connect with us
Ad Widget

ಸುದ್ದಿ

ಶ್ರೀ ಮಾದರ ಚನ್ನಯ್ಯ ನಗರದಲ್ಲಿ ಅಂತರರಾಷ್ಟ್ರೀಯ ಕಾಮಿ೯ಕರ ದಿನಾಚರಣೆ

Published

on

ವಿಜಯಪುರ : ಜಿಲ್ಲೆಯ ತಾಳಿಕೋಟಿಯಲ್ಲಿ ಇಂದು ದಿನಾಂಕ:- 01-05-2021ರಂದು ಅಂತರರಾಷ್ಟ್ರೀಯ ಕಾಮಿ೯ಕರು ದಿನಾಚರಣೆಯನ್ನು ಶ್ರೀ ಮಾದರ ಚನ್ನಯ್ಯ ನಗರದಲ್ಲಿ ಆಚರಣೆ ಮಾಡಲಾಯಿತು ಡಾ//ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಕಾರ್ಮಿಕ ಯುವ ಘಟಕದ ಅಧ್ಯಕ್ಷರಾದ ನಜೀರ್ ಚೋರಗಸ್ತಿ ರಾಮಣ್ಣ ಕಟ್ಟಿಮನಿ ನಾಗಪ್ಪ ಕಟ್ಟಿಮನಿ ಮಾಲಾರ್ಪಣೆ ಮಾಡಲಾಯಿತು ವಿವಿಧ ಸಾಮಾನುಗಳಿಗೆ ಸಲಿಕೆ ಪುಟ್ಟಿ ಗುದ್ದಲಿ ಪೂಜೆ ಸಲ್ಲಿಸಲಾಯಿತ್ತು. ಈ ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಸೇನೆ ತಾಲೂಕು ಕಾಯ೯ದಶಿ೯ರಾದ ಗೋಪಾಲ ಹಣಮಂತ ಕಟ್ಟಿಮನಿ ಮೊದಲಿಗೆ ಎಲ್ಲಾ ಕಾಮಿ೯ಕರಿಗೆ ಕಾಮಿ೯ಕ ದಿನಾಚರಣೆ ಶುಭಾಶಯಗಳು ಹಾಗೂ ಕಾಮಿ೯ಕರಿಗೆ ಬರುವ ಸವಲತ್ತುಗಳನ್ನು ಮಧ್ಯವತಿ೯ಗಳು ಆವಳಿಯಿಂದ ನಿಜವಾದ ಕಾಮಿ೯ಕರಿಗೆ ಮುಟ್ಟುವುದಿಲ್ಲ
ಅದಕ್ಕಾಗಿ ಸಕಾ೯ರ ಬರುವ ಸವಲತ್ತುಗಳನ್ನು ಕಟ್ಟು ನಿಟ್ಟಿನ ಕ್ರಮವನ್ನು ನೀಡಬೇಕು ನಿಜವಾದ ಕಾಮಿ೯ಕರಿಗೆ ಮುಟ್ಟುಬೇಕು ಸಕಾ೯ರ ಆದೇಶ ಮಾಡಬೇಕು .
ಕಾರ್ಮಿಕರಾ ಬಸವರಾಜ ಮಾದರ ತಾಯಪ್ಪ ಮಾದರ ಗಿರೀಶ್ ಕಟ್ಟಿಮನಿ ರವಿ ಶಿರೋಳ ಮಾದರ ಸಮಾಜ ಮುಖಂಡರಾದ ಯಮನಪ್ಪ ಕಟ್ಟಿಮನಿ ಬಸಪ್ಪ ಶಿರೋಳ ಮರೇಪ್ಪ ಶಿರೋಳ ಹುಲಗಪ್ಪ ಮಾದರ ಇನ್ನೂ ಅನೇಕ ಕಾಮಿ೯ಕರು ಈ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ : ದೇವು ಕೂಚಬಾಳ

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತನ ಗೋಳಾಟ

Published

on

ಮಸ್ಕಿ :- ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕಾಲಿಕ ಮಳೆಯೊಂದಿಗೆ ಜೋರಾದ ಬಿರುಗಾಳಿ ಬೀಸಿದ ಪರಿಣಾಮ ತಾಲೂಕಿನ ಹಲವು ಕಡೆಗಳಲ್ಲಿ ಭತ್ತದ ಬೆಳೆ ನೆಲಕ್ಕುರುಳಿದ್ದು.
ಕೋಯ್ಲಿಗೆ ಬಂದ ಬೆಳೆ ಮಣ್ಣು ಪಾಲಾಗಿದೆ.ಹೀಗಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲೂಕಿನಾದ್ಯಂತ ಗುರುವಾರ ತಡರಾತ್ರಿ ನಾನಾ ಕಡೆ ಮಳೆಯೊಂದಿಗೆ, ವಾಯುದೇವನ ಆರ್ಭಟ ಹೆಚ್ಚಾಗಿದ್ದು .ಇದರಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೆ ಮಲಗಿದೆ.

ಭತ್ತದ ಕಾಳುಗಳು ನೆಲಕ್ಕೆ ಬಿದ್ದಿರುವುದರಿಂದ ಬೆಳೆ ನಷ್ಟವಾಗಿದ್ದು. ಅಲ್ಲದೆ ಅಳಿದುಳಿದಿದ್ದನ್ನು ಸಂಗ್ರಹಿಸಲು ರೈತರು ಹೈರಾಣ ಆಗುವಂತಾಗಿದೆ.

ವಾರದೊಳಗೆ ಭತ್ತದ ಬೆಳೆಯನ್ನು ಕಟಾವ್‌ಮಾಡಲು ರೈತರು ತಯಾರಿ ನಡೆಸಿದ್ದರು. ಇನ್ನೇನು ರಾಶಿ ಮಾಡಿಕೊಂಡು, ಶ್ರಮದ ಫಲ ಧಕ್ಕಿಸಿಕೊಳ್ಳಬೇಕು ಎಂಬ ಖುಷಿಯಲ್ಲಿದ್ದವರು ಪಾಲಿಗೆ, ಏಕಾಏಕಿ ಬಿರುಗಾಳಿ ಅಪ್ಪಳಿಸಿದ್ದು ಮಣ್ಣಿನ ಮಕ್ಕಳಾದ ರೈತರಿಗೆ ಕನಲುವಂತೆ ಮಾಡಿದೆ.

ದುಬಾರಿ ರಸಗೊಬ್ಬರ, ಕ್ರಿಮಿ ನಾಶಕ ಔಷಧವನ್ನು ಸಿಂಪರಣೆ ಮಾಡಿದ್ದು.ಗದ್ದೆಯಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನಾಟಿ ಮಾಡಿಸಿ, ಉತ್ತಮವಾಗಿ ಬೆಳೆ ನಿರೀಕ್ಷೆಯಲ್ಲಿದ್ದರು.ಆದರೆ, ಎಲ್ಲ ಮಾಡಿ ಇನ್ನೇನು ಬೆಳೆ ಕೈ ಸೇರುತ್ತದೆ ಅಂದುಕೊಳ್ಳುವರಷ್ಟಲ್ಲಿಯೇ ಮಳೆ ಮತ್ತು ಗಾಳಿ ರೈತರ ಆಸೆಗೆ ತಣ್ಣೀರೆರಚಿದೆ.

ಮಸ್ಕಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೀಗೆ ಬೇಸಿಗೆ ಮಳೆಯ ಅವಘಡ ಮುಂದುವರೆದಿವೆ.

ಇನ್ನಿತರ ಕಡೆಗೆಗಳಲ್ಲಿ ಭತ್ತವನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದ್ದು. ಕೆಲವು ಕಡೆಗೆ ಈಗಾಗಲೇ ಮುಂಚಿತವಾಗಿ ನಾಟಿ ಮಾಡಿದ ರೈತರು ಭತ್ತವನ್ನು ಕಟಾವ್‌ ಮಾಡಿದ್ದಾರೆ. ಇನ್ನೂ ತಡವಾಗಿ ನಾಟಿ ಮಾಡಿದವರು ವಾರದೊಳಗೆ ಕಟಾವ್‌ ಮಾಡಲು ನಿರ್ಧರಿಸಿದ್ದರು. ಆದರೆ, ಈ ಘಟನೆ ಅನ್ನದಾತರನ್ನು ಕುಗ್ಗುವಂತೆ ಮಾಡಿದೆ.

ಮಳೆ ಜತೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಭತ್ತದ ಬೆಳೆ ನೆಲಕ್ಕುರಳಿದೆ.
ಇನ್ನೇನು ವಾರದೊಳಗೆ ಕಟಾವ್‌ ಮಾಡುತ್ತಿದ್ದೇವು ಎಂದು ಬಳಗಾನೂರು ಗ್ರಾಮದ ರೈತರು ,ಅನ್ನದಾತರಗಿ ಕಣ್ಣೀರಿಟ್ಟಿದ್ದಾರೆ.

ಎಲ್ಲೆಡೆ ಮಹಾಮಾರಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಈ ಸೊಂಕು ತಗಲದಂತೆ ಮುಂಜಾಗ್ರತೆ ವಹಿಸಬೇಕು ಮತ್ತು ತಪ್ಪದೆ ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದು ಸರ್ಕಾರ ಜಾಗೃತಿ ಸಂದೇಶ ನೀಡಿದೆ. ಆದರೆ ಬೆಳೆ ಹಾನಿಗೊಳಗಾದ ನಷ್ಟ ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ರೈತರ ಬದುಕು ಕಂಗಾಲಾಗಿದ್ದು ಇದನ್ನು ಕೇಳುವರ್ಯಾರು ಯಾರು ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಪ್ರತಿಯೊಬ್ಬರಿಗೂ ಆಹಾರ,ಆರೋಗ್ಯ ಭದ್ರತೆ ಒದಗಿಸಬೇಕು-ಎಸ್ಎಫ್ಐ ಒತ್ತಾಯ

Published

on

ಬಾಗೇಪಲ್ಲಿ: ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲಾಕ್ಡೌನ್ ಜಾರಿ ಮಾಡಿದೆ. ಇದರಿಂದಾಗಿ ದಿನನಿತ್ಯ ಬಡವರು, ನಿರ್ಗತಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರವು ಬಡವರಿಗೆ ಆಹಾರ,ಆರೋಗ್ಯ ಭದ್ರತೆ ಒದಗಿಸಬೇಕೆಂದು ಇಂದು ಎಸ್ಎಫ್ಐ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಸ್ಎಫ್ಐ ಸಂಚಾಲಕರು ತಾವಿದ್ದ ಜಾಗದಿಂದಲೇ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೀಶ್, ಕೊರೋನಾ ಮಹಾಮಾರಿಯಿಂದಾಗಿ ಬಡಜನರ ಬದುಕು ಬರ್ಬರಗೊಂಡಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಹಾಸಿಗೆ, ಆಕ್ಸಿಜನ್ ದೊರೆಯುತ್ತಿಲ್ಲ.‌ ಬಡಬಗ್ಗರಿಗೆ ಸೋಂಕು ತಗುಲಿದರೆ ರಸ್ತೆಯಲ್ಲೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ಆರೋಗ್ಯ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು. ಲಾಕ್ಡೌನ್ ನಿಂದಾಗಿ ದಿನನಿತ್ಯ ಕೂಲಿ ಮಾಡಿ ಬದುಕುತ್ತಿದ್ದ,ಬಡವರು ಹಸಿವಿನಿಂದ ಬಳಲುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಸರ್ಕಾರವು ಪ್ರತಿ ಬಡ ಕುಟುಂಬಕ್ಕೂ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದರು.

ಈ ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರಾದ ಪವನ್, ಸಂತೋಷ್, ಬಾಲಾಜಿ, ಗಣೇಶ್,ಬಾಲಾಜಿ ನಾಯಕ್, ಜಗದೀಶ್ ಮತ್ತಿತರರು ಹಾಜರಿದ್ದರು.

Continue Reading

ರಾಜ್ಯ

ಭತ್ತ ಬೆಲೆ ಕುಸಿತ : ಕಂಗಾಲಾದ ಅನ್ನ ದಾತ

Published

on

ಮಸ್ಕಿ:- ತಾಲೂಕಿನಲ್ಲಿ ಈ ಬಾರಿ ಬಂಪರ್‌ ಭತ್ತದ ಬೆಳೆ ಬಂದಿದ್ದು, ಭತ್ತದ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಈಗಾಗಲೇ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಕೆಲ ರೈತರು ಭತ್ತ ಕಟಾವು ಮಾಡಿಸಿ ಒಂದು ಎಕರೆಗೆ 40 ರಿಂದ 45 ಚೀಲ (70 ಕೆ.ಜಿ) ಇಳುವರಿ ಬಂದಿದ್ದು.

ಈಗಾಗಲೇ ಎಡದಂಡೆ ಕಾಲುವೆ ಮತ್ತು ಪಂಪ್‌ಸೆಟ್‌ ಮೂಲಕ ಬೆಳೆದ ಭತ್ತದ ಶೇ. 25ರಷ್ಟು ಭತ್ತದ ಕಟಾವು ಮುಕ್ತಾಯವಾಗಿದೆ.

ಭತ್ತವನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದು, 70 ಕೆಜಿ ಚೀಲಕ್ಕೆ ಮೊದಲು ರೂ. 1800 ರೂಪಾಯಿ ಇದ್ದ ದರ ಪ್ರಸ್ತುತ ರೂ. 1605 ರೂಪಾಯಿಗೆ ಕುಸಿತ ಕಂಡಿದೆ.

ಇನ್ನೂ ಶೇ. 75ರಷ್ಟು ಭತ್ತ ಕಟಾವು ಮಾಡುವುದು ಬಾಕಿ ಇದ್ದು, ಬಹುತೇಕ ರೈತರು ಮುಂದಿನ ವಾರದಲ್ಲಿ ಭತ್ತ ಕಟಾವು ಮಾಡಿ ಮಾರುಕಟ್ಟೆಗೆ ತರುವುದರಿಂದ ಮತ್ತಷ್ಟು ದರ ಕುಸಿಯುವ ಸಂಭವವಿದೆ.

ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರ ಭತ್ತಕ್ಕೆ (ಎ. ಗ್ರೇಡ್‌ 100 ಕೆಜಿ) ಕ್ವಿಂಟಲ್‌ಗೆ ರೂ. 1885, ಸಾಮಾನ್ಯ ಭತ್ತಕ್ಕೆ ರೂ. 1865 ಬೆಂಬಲ ದರ ಘೋಷಣೆ ಮಾಡಿತ್ತು. ಕಳೆದ ತಿಂಗಳು ಗಂಗಾಕಾವೇರಿ ರೂ. 1750, ಆರ್‌.ಎನ್‌.ಆರ್‌ ಭತ್ತಕ್ಕೆ ರೂ. 1850 ರಿಂದ ರೂ. 1900ರ ವರೆಗೆ ಮಾರಾಟವಾಗಿತ್ತು.

ಆದರೆ ಸ್ಥಳಿಯ ಮಾರುಕಟ್ಟೆಯಲ್ಲಿ 75 ಕೆಜಿ, ಗಂಗಾ ಕಾವೇರಿ ರೂ. 1650, ಆರ್‌.ಎನ್‌.ಆರ್‌ ಭತ್ತಕ್ಕೆ ರೂ. 1650 ದರ ನಿಗದಿಯಾಗಿದ್ದರೂ ಭತ್ತ ಕೊಳ್ಳಲು ವ್ಯಾಪಾರಿಗಳು ಮುಂದೆ ಬಾರದೆ ಇರುವುದರಿಂದ ರೈತರು ಕಟಾವು ಮಾಡಿದ ಭತ್ತವನ್ನು ಹೊಲ ಮತ್ತು ಗದ್ದೆ ಬಯಲು ಶಾಲಾ ಆವರಣ ಆವರಣದಲ್ಲಿ ರಾಶಿ ಹಾಕಿಕೊಳ್ಳುತ್ತಿದ್ದಾರೆ.

ಸದ್ಯ ಶೇ. 25ರಷ್ಟು ರೈತರು ಭತ್ತ ಕಟಾವು ಮಾಡಿ ಮಾರಾಟ ಮಾಡುತ್ತಿದ್ದು ಪ್ರಸ್ತುತ ಇರುವ ದರ ಮುಂಬರುವ ದಿನಗಳಲ್ಲಿ ಇರುವುದು ಖಚಿತವಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿಲ್ಲ. ಇದರಿಂದಾಗಿ ಭತ್ತದ ದರವು ಇನ್ನಷ್ಟು ಕುಸಿಯುವುದೆಂಬ ಆತಂಕ ಈ ಭಾಗದ ರೈತರನ್ನು ಕಾಡುತ್ತಿದೆ. ಆದ್ದರಿಂದ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವುದರೊಂದಿಗೆ ತಾಲೂಕಿನ ಬಳಗನೂರು , ತೋರಣದಿನ್ನಿ ಮತ್ತು ಮಸ್ಕಿಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ರೈತರು ಒತ್ತಾಯಿಸಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್