ಸುದ್ದಿ
ಚಿತಾಗಾರದ ಸ್ಥಳವನ್ನು ಪರಿಶೀಲಿಸಿ, ಶೀಘ್ರ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು : ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರ ಮೃತ ದೇಹವನ್ನು ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂದು ಆರ್.ಅಶೋಕ್ ರವರು ಯಲಹಂಕ ತಾಲ್ಲೂಕು ಮಾವಳ್ಳಿಪುರ ಸಮೀಪದ ಚಿತಾಗಾರದ ಸ್ಥಳವನ್ನು ಪರಿಶೀಲಿಸಿ, ಶೀಘ್ರ ಚಾಲನೆ ನೀಡಲು ಅಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ಯಲಹಂಕ ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಶ್ರೀ ಎಸ್.ಆರ್.ವಿಶ್ವನಾಥ್ ಅವರು ಉಪಸ್ಥಿತರಿದ್ದರು.
ಸುದ್ದಿ
ರಾಜ್ಯಾದ್ಯಂತ ಲಾಕ್ಡೌನ್, ಬಾಗೇಪಲ್ಲಿ ತಾಲ್ಲೂಕಿನ ಕಲ್ಲು ಕ್ವಾರಿಗಳಿಗೆ ಅನ್ವಯವಾಗುವುದಿಲ್ಲವೇ?
ಬಾಗೇಪಲ್ಲಿ: ಕೋವಿಡ್ ನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಇಡೀ ದೇಶವೇ ತುರ್ತು ಸೇವಾ ಘಟಕವೆಂಬಂತೆ ಮಾರ್ಪಟ್ಟಿದೆ. ಶವ ಸಂಸ್ಕಾರ ಮಾಡುವುದೇ ಸವಾಲಾಗಿ ಪರಿಣಮಿಸುತ್ತಿರುವ ತುರ್ತು ಸಮಯದಲ್ಲಿ ರಾಜ್ಯ ಸರ್ಕಾರವು ಕಠಿಣ ಲಾಕ್ಡೌನ್ ಘೋಷಿಸಿದೆ. ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಸಂದರ್ಭದಲ್ಲಿ ತುರ್ತು ಸೇವೆಗಳನ್ನು ಹೊರತು ಪಡಿಸಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಲಾಗಿದೆ.
ಆದರೆ ಬಾಗೇಪಲ್ಲಿ ತಾಲ್ಲೂಕಿನ ಹೊನ್ನಂಪಲ್ಲಿ, ಮಾಡಪಲ್ಲಿ , ಮದಕವಾರಪಲ್ಲಿ ಸಮೀಪ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಮಾತ್ರ ಸ್ಥಗಿತಗೊಂಡಿಲ್ಲ. ಇಲ್ಲಿ ಸರಿಸುಮಾರು ನೂರು ಮಂದಿ ದುಡಿಯುತ್ತಿದ್ದಾರೆ. ಅವರಿಗೆ ಕೊರೋನಾ ಸಂಕಷ್ಟದಲ್ಲೂ ಬಿಡುವು ಕೊಡದೆ ಗಾಣದೆತ್ತಿನಂತೆ ದುಡಿಸಲಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಕಾರ್ಮಿಕ ಇಲಾಖೆ, ಜಿಲ್ಲಾಡಳಿತಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿವೆ.
ಸುದ್ದಿ
ಕೊಡಗಿನ ದುಬಾರೆ ಶಿಬಿರದಲ್ಲಿ ಇರಿಸಲಾಗಿರುವ ಕುಶ ಆನೆ ಬಿಡುಗಡೆ
ಕೊಡಗಿನ ದುಬಾರೆ ಶಿಬಿರದಲ್ಲಿ ಇರಿಸಲಾಗಿರುವ ಕುಶ ಆನೆಯನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸಿದ ಅರವಿಂದ ಲಿಂಬಾವಳಿ
ಬೆಂಗಳೂರು : ಇಂದು ಮಾನ್ಯ ಅರವಿಂದ ಲಿಂಬಾವಳಿಯವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯಪಡೆ ಮುಖ್ಯಸ್ಥರಾದ ಶ್ರೀ ಸಂಜಯ್ ಮೋಹನ್ ಹಾಗೂ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ) ಹಾಗೂ ವನ್ಯಜೀವಿ ಪರಿಪಾಲಕರಾದ ಶ್ರೀ ವಿಜಯ ಗೋಗಿ ಅವರೊಂದಿಗೆ ಸಭೆ ನಡೆಸಿ, ಕೊಡಗಿನ ದುಬಾರೆ ಶಿಬಿರದಲ್ಲಿ ಇರಿಸಲಾಗಿರುವ ಕುಶ ಆನೆಯನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸಿದರು.
ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆಯನ್ನು ಸೆರೆ ಹಿಡಿದು ತರಲಾಗಿತ್ತು, ಆದರೆ ಕುಶ ಆನೆಯನ್ನು ಸೆರೆ ಹಿಡಿದು ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ, ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ. ಕುಶ ಆನೆ ಆರೋಗ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುಶ ಆನೆಗೆ ರೋಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಬಿಡುಗಡೆ ಮಾಡಲು ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಬಂದ ಹಿನ್ನಲೆಯಲ್ಲಿ ದುಬಾರೆ ಆನೆ ಶಿಬರದ ಸಮೀಪದಲ್ಲಿರುವ ಶ್ರೀಮತಿ ಪ್ರಜ್ಞಾ ಚೌಟ ಅವರ ವಶದಲ್ಲಿರುವ ಆನೆಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಸೂಚಿಸಲಾಯಿತು.
ಸುದ್ದಿ
ಆಂಬ್ಯುಲೆನ್ಸ್ ನಲ್ಲೇ ಹೆರಿಗೆ, ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ
ಬಾಗೇಪಲ್ಲಿ: ತಾಲ್ಲೂಕಿನ ಕುಗ್ರಾಮಗಳಿಗೆ ಆರೋಗ್ಯ ಸೇವೆಗಳು ಸಿಗುವುದು ಕಷ್ಟಕರವಾಗಿರುತ್ತದೆ. ಇನ್ನು ಈ ಕೋವಿಡ್ ನ ಕಷ್ಟಕಾಲದಲ್ಲಿ ಮತ್ತಷ್ಟು ಕಠಿಣ. ತುರ್ತು ಸಂದರ್ಭದಲ್ಲಿ ತಾಲ್ಲೂಕು ಆಸ್ಪತ್ರೆಗೆ ತಲುಪಲು ಸರಿಯಾದ ರಸ್ತೆಗಳಿಲ್ಲ. ಹೀಗಿರುವಾಗ ಇಂದು ಬೆಳಗಿನ ಜಾವ ಸುಮಾರು 5 ಗಂಟೆ ಸಮಯಕ್ಕೆ ಆಂಬ್ಯುಲೆನ್ಸ್ ನಲ್ಲಿ ಹೆರಿಗೆ ಆದ ಘಟನೆ ತಾಲ್ಲೂಕಿನ ಜಿ.ಮದ್ದೆಪಲ್ಲಿ ಸಮೀಪ ನಡೆದಿದೆ.
ಜಿ.ಮದ್ದೆಪಲ್ಲಿ ಗ್ರಾಮದ ಕಲಾವತಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಸಿಕೊಂಡಿದ್ದು, ತಕ್ಷಣ 108 ತುರ್ತು ಸೇವಾ ವಾಹನಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಶೀಘ್ರವಾಗಿ ಗ್ರಾಮವನ್ನು ತಲುಪಿದ 108 ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದಾರೆ. 108 ವಾಹನದಲ್ಲಿ ಹೋಗುವಾಗ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಮಾರ್ಗಮದ್ಯದಲ್ಲೆ ಸಿಬ್ಬಂದಿಯಾದ ಡಿ.ವಿ ಮುರಳಿ ಹಾಗೂ ಪೈಲೆಟ್ ಜಿ.ಶ್ರೀನಿವಾಸರವರು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಡು ಮಗುವಿಗೆ ಜನಿಸಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ಪ್ರಸ್ತುತ ತಾಯಿ, ಮಗುವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಇಂತಹ ಕೋವಿಡ್ ನ ಲಾಕ್ಡೌನ್ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿದ 108 ಸಿಬ್ಬಂದಿಯವರಿಗೆ ಕಲಾವತಿ ಮತ್ತು ಕುಟುಂಬದವರು ಕೃತಜ್ಞತೆ ಸಲ್ಲಿಸಿದರು.
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?