ರಾಜ್ಯ
ಉಮೇಶ್ ಕತ್ತಿ ಅವರ ಭಾವಚಿತ್ರವನ್ನು ಹಾಗೂ ಧಿಕ್ಕಾರಗಳನ್ನು ಬರೆದಿರುವ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ
ಶಿಡ್ಲಘಟ್ಟ :ಆಹಾರ ಸಚಿವ ಉಮೇಶ್ ಕತ್ತಿ ಅವರ ಭಾವಚಿತ್ರವನ್ನು ಹಿಡಿದು ಹಾಗೂ ಧಿಕ್ಕಾರಗಳನ್ನು ಬರೆದಿರುವ ಪೋಸ್ಟರ್ ಗಳನ್ನು ಹಿಡಿದು ಯುವಕರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಎನ್ ಎಸ್ ಯು ಐ ಸಂಘಟನೆಯ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಅವರ ನೇತೃತ್ವದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮೌನವಾಗಿ ಪ್ರತಿಭಟಿಸಿದರು.
ಇಡೀ ದೇಶದಲ್ಲಿ ಕೊರೊನಾದಿಂದಾಗಿ ಜನ ಸಾಯುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಈ ರಾಜ್ಯದಲ್ಲಿ ಪಡಿತರರಿಗೆ ನೀಡುತ್ತಿರುವಂಥ 5ಕೆಜಿ ಅಕ್ಕಿಯನ್ನು 2ಕೆಜಿ ಇಳಿಸಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ದೂರವಾಣಿ ಮುಖಾಂತರ ಸಚಿವರ ಜತೆ ಮಾತನಾಡುತ್ತ ಇರುವಂತ ಸಂದರ್ಭದಲ್ಲಿ ರೈತನ ಜೊತೆ ಅವಹೇಳನವಾಗಿ ಮಾತನಾಡಿರುವುದು ಇಡೀ ದೇಶದ ರೈತರಿಗೆ ಮಾಡಿದ ಅವಮಾನವಾಗಿದೆ. ತಕ್ಷಣ ಆ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಎನ್ ಎಸ್ ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಭಾಸ್ಕರ್, ಆನಂದ್, ಮುರಳಿ, ಕೇಶವ, ರಾಮ ಚಂದ್ರ, ದೇವರಾಜ್, ಪಾಪಣ್ಣ, ಮುನಿರಾಜು, ಪ್ರಮೋದ್ ಹಾಜರಿದ್ದರು
ವರದಿ: ಕೆ.ಮಂಜುನಾಥ್ .ಶಿಡ್ಲಘಟ್ಟ
ರಾಜ್ಯ
ಭತ್ತ ಬೆಲೆ ಕುಸಿತ : ಕಂಗಾಲಾದ ಅನ್ನ ದಾತ
ಮಸ್ಕಿ:- ತಾಲೂಕಿನಲ್ಲಿ ಈ ಬಾರಿ ಬಂಪರ್ ಭತ್ತದ ಬೆಳೆ ಬಂದಿದ್ದು, ಭತ್ತದ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ಈಗಾಗಲೇ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಕೆಲ ರೈತರು ಭತ್ತ ಕಟಾವು ಮಾಡಿಸಿ ಒಂದು ಎಕರೆಗೆ 40 ರಿಂದ 45 ಚೀಲ (70 ಕೆ.ಜಿ) ಇಳುವರಿ ಬಂದಿದ್ದು.
ಈಗಾಗಲೇ ಎಡದಂಡೆ ಕಾಲುವೆ ಮತ್ತು ಪಂಪ್‌ಸೆಟ್ ಮೂಲಕ ಬೆಳೆದ ಭತ್ತದ ಶೇ. 25ರಷ್ಟು ಭತ್ತದ ಕಟಾವು ಮುಕ್ತಾಯವಾಗಿದೆ.
ಭತ್ತವನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದು, 70 ಕೆಜಿ ಚೀಲಕ್ಕೆ ಮೊದಲು ರೂ. 1800 ರೂಪಾಯಿ ಇದ್ದ ದರ ಪ್ರಸ್ತುತ ರೂ. 1605 ರೂಪಾಯಿಗೆ ಕುಸಿತ ಕಂಡಿದೆ.
ಇನ್ನೂ ಶೇ. 75ರಷ್ಟು ಭತ್ತ ಕಟಾವು ಮಾಡುವುದು ಬಾಕಿ ಇದ್ದು, ಬಹುತೇಕ ರೈತರು ಮುಂದಿನ ವಾರದಲ್ಲಿ ಭತ್ತ ಕಟಾವು ಮಾಡಿ ಮಾರುಕಟ್ಟೆಗೆ ತರುವುದರಿಂದ ಮತ್ತಷ್ಟು ದರ ಕುಸಿಯುವ ಸಂಭವವಿದೆ.
ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರ ಭತ್ತಕ್ಕೆ (ಎ. ಗ್ರೇಡ್ 100 ಕೆಜಿ) ಕ್ವಿಂಟಲ್‌ಗೆ ರೂ. 1885, ಸಾಮಾನ್ಯ ಭತ್ತಕ್ಕೆ ರೂ. 1865 ಬೆಂಬಲ ದರ ಘೋಷಣೆ ಮಾಡಿತ್ತು. ಕಳೆದ ತಿಂಗಳು ಗಂಗಾಕಾವೇರಿ ರೂ. 1750, ಆರ್.ಎನ್.ಆರ್ ಭತ್ತಕ್ಕೆ ರೂ. 1850 ರಿಂದ ರೂ. 1900ರ ವರೆಗೆ ಮಾರಾಟವಾಗಿತ್ತು.
ಆದರೆ ಸ್ಥಳಿಯ ಮಾರುಕಟ್ಟೆಯಲ್ಲಿ 75 ಕೆಜಿ, ಗಂಗಾ ಕಾವೇರಿ ರೂ. 1650, ಆರ್.ಎನ್.ಆರ್ ಭತ್ತಕ್ಕೆ ರೂ. 1650 ದರ ನಿಗದಿಯಾಗಿದ್ದರೂ ಭತ್ತ ಕೊಳ್ಳಲು ವ್ಯಾಪಾರಿಗಳು ಮುಂದೆ ಬಾರದೆ ಇರುವುದರಿಂದ ರೈತರು ಕಟಾವು ಮಾಡಿದ ಭತ್ತವನ್ನು ಹೊಲ ಮತ್ತು ಗದ್ದೆ ಬಯಲು ಶಾಲಾ ಆವರಣ ಆವರಣದಲ್ಲಿ ರಾಶಿ ಹಾಕಿಕೊಳ್ಳುತ್ತಿದ್ದಾರೆ.
ಸದ್ಯ ಶೇ. 25ರಷ್ಟು ರೈತರು ಭತ್ತ ಕಟಾವು ಮಾಡಿ ಮಾರಾಟ ಮಾಡುತ್ತಿದ್ದು ಪ್ರಸ್ತುತ ಇರುವ ದರ ಮುಂಬರುವ ದಿನಗಳಲ್ಲಿ ಇರುವುದು ಖಚಿತವಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿಲ್ಲ. ಇದರಿಂದಾಗಿ ಭತ್ತದ ದರವು ಇನ್ನಷ್ಟು ಕುಸಿಯುವುದೆಂಬ ಆತಂಕ ಈ ಭಾಗದ ರೈತರನ್ನು ಕಾಡುತ್ತಿದೆ. ಆದ್ದರಿಂದ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವುದರೊಂದಿಗೆ ತಾಲೂಕಿನ ಬಳಗನೂರು , ತೋರಣದಿನ್ನಿ ಮತ್ತು ಮಸ್ಕಿಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ರೈತರು ಒತ್ತಾಯಿಸಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
ರಾಜ್ಯ
ಸೋಮಯಾಜಲ ಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಿಡಿಲಿಗೆ ಬಲಿ
ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ ಸೋಮಯಾಜಲಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಿಡಿಲಿಗೆ ಬಲಿಯಾಗಿದ್ದಾರೆ.
ಅಂಬರೀಷ್ ಇವರ ಪುತ್ರ ಗೌತಮ್, ಮಗಳಾದ ವಾಣಿಶ್ರೀ, ಲಾವಣ್ಯ ಮೃತರು. ಕಳೆದ ಬುಧವಾರ (ಏ.21) ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗಿತ್ತು. ಅಂದು ರಾತ್ರಿ ಅಂಬರೀಷ್ ಅವರ ಕಲ್ಲುಚಪ್ಪಡಿ ಮನೆಗೆ ಸಿಡಿಲು ಬಡಿದಿತ್ತು. ಪರಿಣಾಮ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಗಂಭೀರ ಗಾಯಗೊಂಡಿದ್ದರು. ಅಂಬರೀಷ್, ಪತ್ನಿ ಗಾಯತ್ರಮ್ಮ, ಮಕ್ಕಳಾದ ವಾಣಿಶ್ರೀ, ಲಾವಣ್ಯ, ದರ್ಶನ್, ಗೌತಮ್ ಮತ್ತು ಅಂಬರೀಷ್ ಅವರ ತಂದೆ ಜಗನ್ ಅವರ ಸ್ಥಿತಿ ಚಿಂತಾಜನಕವಾಗಿತ್ತು.
ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಏ.25ರಂದು 4 ವರ್ಷದ ಬಾಲಕ ಗೌತಮ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಅದೇ ದಿನ ಸಂಜೆ ತಂದೆ ಅಂಬರೀಷ್ ಕೂಡ ಕೊನೆಯುಸಿರೆಳೆದಿದ್ದರು. ಮರುದಿನ ಮಗಳು ವಾಣಿಶ್ರೀ ಮೃತಪಟ್ಟಳು. ನಿನ್ನೆ ರಾತ್ರಿ(ಏ.27) ಲಾವಣ್ಯ ಕೊನೆಯುಸಿರೆಳೆದಳು. ಇನ್ನು ಉಳಿದ ಮೂವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯತ್ರಮ್ಮ, ದರ್ಶನ್, ಜಗನ್ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ವರದಿ.ಕೆ.ಮಂಜುನಾಥ್.ಶಿಡ್ಲಘಟ್ಟ
ರಾಜ್ಯ
ಬೆಳ್ಳಂಬೆಳಗ್ಗೆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹಲ್ಲೆ
ಬಾಗೇಪಲ್ಲಿ: ವ್ಯಕ್ತಿಯೋರ್ವನ ಮೇಲೆ ಅಪರಚಿತ ವ್ಯಕ್ತಿಗಳಿಂದ ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಪೋತೆಪಲ್ಲಿ ಕ್ರಾಸ್ ಬಳಿ ದುರ್ಘಟನೆ.
ಬೆಳಗಿನ ಜಾವ 4 ಗಂಟೆಯಲ್ಲಿ ಮಾರುಕಟ್ಟೆಗೆ ಹೋಗುವಾಗ ಅಪರಿಚಿತರಿಂದ ದಾಳಿ ನಡೆದಿದ್ದು, ಐವಾರಪಲ್ಲಿ ಗ್ರಾಮದ ನರಸಿಂಹಮೂರ್ತಿ (38) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರ್ತಿಸಲಾಗಿದೆ. ಸದ್ಯ ನರಸಿಂಹಮೂರ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುವಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ದಾಳಿಗೆ ಆತನ ಅನೈತಿಕ ಸಂಬಂಧವೇ ಕಾರಣವೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-
Politics2 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ4 weeks ago
ಎಪ್ರಿಲ್ 1ನ್ನು ಮೂಖ೯ರ ದಿನವೆಂದು ಆಚರಿಸುವ ಬದಲು ಅರವಟ್ಟಿಗೆ ದಿನ ಎಂದು ಆಚರಣೆ
-
ಸುದ್ದಿ2 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ3 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?