ಸುದ್ದಿ
ನಮ್ಮ ಕಮಿಟಿ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದ ಖಬರಸ್ತಾನ್ ಕಮಿಟಿ ಅಧ್ಯಕ್ಷ ಶಂಶೀರ್
ಶಿಡ್ಲಘಟ್ಟ : ತಾಲ್ಲೂಕಿನ ಕೋವಿಡ್ ಮೃತರು ಯಾವುದೇ ಜಾತಿ, ಧರ್ಮ, ಮತದವರಾಗಿರಲಿ ಅವರವರ ಆಚಾರ ವಿಚಾರಕ್ಕೆ ಅನುಗುಣವಾಗಿ ಅತ್ಯಂತ ಗೌರವಯುತವಾಗಿ ನಮ್ಮ ಕಮಿಟಿ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಖಬರಸ್ತಾನ್ ಕಮಿಟಿ ಅಧ್ಯಕ್ಷ ಶಂಶೀರ್ ತಿಳಿಸಿದರು.
ನಗರದಲ್ಲಿ ಸೋಮವಾರ ಈದ್ಗಾಮೈದಾನದ ಬಳಿ ಖಬರಸ್ತಾನ್ ಕಮಿಟಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡಿದರು. ಕೊರೊನಾ ಬಂದು ನಿಧನರಾದವರ ಅಂತ್ಯಸಂಸ್ಕಾರಕ್ಕೆ ಎಲ್ಲೆಡೆ ಬಹಳ ತೊಂದರೆಯಾಗುತ್ತಿದೆ. ಬಂಧುಗಳೇ ನೆರವಿಗೆ ಬರುತ್ತಿಲ್ಲ. ಈ ಕಾರಣದಿಂದ ಶಿಡ್ಲಘಟ್ಟ ಖಬರಸ್ತಾನ್ ಕಮಿಟಿ ವತಿಯಿಂದ ಕೋವಿಡ್ ನಿಂದ ಮೃತರಾದವರಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ. ನಮ್ಮ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಿದೆ. ಏನೇ ತೊಂದರೆಯಾದರೂ ಬೆಂಗಳೂರಿಗೆ ಹೋಗಬೇಕು, ಹೆಣವಾಗಿ ವಾಪಸ್ ಬರಬೇಕು. ಈ ಬಗ್ಗೆ ಶಾಸಕರು ಮತ್ತು ಉಸ್ತುವಾರಿ ಸಚಿವರು ಗಮನ ಹರಿಸಬೇಕು. ಅವರು ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಬೇಕು. ಆಗ ಇಲ್ಲಿನ ಸಮಸ್ಯೆ ಅವರಿಗೆ ತಿಳಿಯುತ್ತದೆ ಮತ್ತು 24 ಗಂಟೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಮಾನಸಿಕ ಸ್ಥೈರ್ಯ ಮೂಡುತ್ತದೆ ಎಂದರು.
ಈ ಸಂಧರ್ಭದಲ್ಲಿ ಖಬರಸ್ತಾನ್ ಕಮಿಟಿ ಕಾರ್ಯದರ್ಶಿ ಮೌಲಾ, ಮುನಿಕೃಷ್ಣಪ್ಪ, ಹುಸೇನ್ ಶರೀಫ್, ಅಮೀರ್ ಖಾನ್, ನದ್ದು, ಅಫ್ರೋಜ್ ಅಹಮದ್, ಗೌಸ್ ಖಾನ್, ಸೈಯದ್ ಮತೀನ್, ದಾದು, ಸುಲೇಮಾನ್, ದಾದಾಪೀರ್, ನದೀಪ್ ಪಾಷ, ಆಸೀಫ್, ಇರ್ಫಾನ್ ಮುಂತಾದವರು ಹಾಜರಿದ್ದರು.
ವರದಿ: ಕೆ.ಮಂಜುನಾಥ್.ಶಿಡ್ಲಘಟ್ಟ
ಸುದ್ದಿ
ಶ್ರೀ ಮಾದರ ಚನ್ನಯ್ಯ ನಗರದಲ್ಲಿ ಅಂತರರಾಷ್ಟ್ರೀಯ ಕಾಮಿ೯ಕರ ದಿನಾಚರಣೆ
ವಿಜಯಪುರ : ಜಿಲ್ಲೆಯ ತಾಳಿಕೋಟಿಯಲ್ಲಿ ಇಂದು ದಿನಾಂಕ:- 01-05-2021ರಂದು ಅಂತರರಾಷ್ಟ್ರೀಯ ಕಾಮಿ೯ಕರು ದಿನಾಚರಣೆಯನ್ನು ಶ್ರೀ ಮಾದರ ಚನ್ನಯ್ಯ ನಗರದಲ್ಲಿ ಆಚರಣೆ ಮಾಡಲಾಯಿತು ಡಾ//ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಕಾರ್ಮಿಕ ಯುವ ಘಟಕದ ಅಧ್ಯಕ್ಷರಾದ ನಜೀರ್ ಚೋರಗಸ್ತಿ ರಾಮಣ್ಣ ಕಟ್ಟಿಮನಿ ನಾಗಪ್ಪ ಕಟ್ಟಿಮನಿ ಮಾಲಾರ್ಪಣೆ ಮಾಡಲಾಯಿತು ವಿವಿಧ ಸಾಮಾನುಗಳಿಗೆ ಸಲಿಕೆ ಪುಟ್ಟಿ ಗುದ್ದಲಿ ಪೂಜೆ ಸಲ್ಲಿಸಲಾಯಿತ್ತು. ಈ ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಸೇನೆ ತಾಲೂಕು ಕಾಯ೯ದಶಿ೯ರಾದ ಗೋಪಾಲ ಹಣಮಂತ ಕಟ್ಟಿಮನಿ ಮೊದಲಿಗೆ ಎಲ್ಲಾ ಕಾಮಿ೯ಕರಿಗೆ ಕಾಮಿ೯ಕ ದಿನಾಚರಣೆ ಶುಭಾಶಯಗಳು ಹಾಗೂ ಕಾಮಿ೯ಕರಿಗೆ ಬರುವ ಸವಲತ್ತುಗಳನ್ನು ಮಧ್ಯವತಿ೯ಗಳು ಆವಳಿಯಿಂದ ನಿಜವಾದ ಕಾಮಿ೯ಕರಿಗೆ ಮುಟ್ಟುವುದಿಲ್ಲ
ಅದಕ್ಕಾಗಿ ಸಕಾ೯ರ ಬರುವ ಸವಲತ್ತುಗಳನ್ನು ಕಟ್ಟು ನಿಟ್ಟಿನ ಕ್ರಮವನ್ನು ನೀಡಬೇಕು ನಿಜವಾದ ಕಾಮಿ೯ಕರಿಗೆ ಮುಟ್ಟುಬೇಕು ಸಕಾ೯ರ ಆದೇಶ ಮಾಡಬೇಕು .
ಕಾರ್ಮಿಕರಾ ಬಸವರಾಜ ಮಾದರ ತಾಯಪ್ಪ ಮಾದರ ಗಿರೀಶ್ ಕಟ್ಟಿಮನಿ ರವಿ ಶಿರೋಳ ಮಾದರ ಸಮಾಜ ಮುಖಂಡರಾದ ಯಮನಪ್ಪ ಕಟ್ಟಿಮನಿ ಬಸಪ್ಪ ಶಿರೋಳ ಮರೇಪ್ಪ ಶಿರೋಳ ಹುಲಗಪ್ಪ ಮಾದರ ಇನ್ನೂ ಅನೇಕ ಕಾಮಿ೯ಕರು ಈ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ದೇವು ಕೂಚಬಾಳ
ಸುದ್ದಿ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತನ ಗೋಳಾಟ
ಮಸ್ಕಿ :- ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕಾಲಿಕ ಮಳೆಯೊಂದಿಗೆ ಜೋರಾದ ಬಿರುಗಾಳಿ ಬೀಸಿದ ಪರಿಣಾಮ ತಾಲೂಕಿನ ಹಲವು ಕಡೆಗಳಲ್ಲಿ ಭತ್ತದ ಬೆಳೆ ನೆಲಕ್ಕುರುಳಿದ್ದು.
ಕೋಯ್ಲಿಗೆ ಬಂದ ಬೆಳೆ ಮಣ್ಣು ಪಾಲಾಗಿದೆ.ಹೀಗಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ತಾಲೂಕಿನಾದ್ಯಂತ ಗುರುವಾರ ತಡರಾತ್ರಿ ನಾನಾ ಕಡೆ ಮಳೆಯೊಂದಿಗೆ, ವಾಯುದೇವನ ಆರ್ಭಟ ಹೆಚ್ಚಾಗಿದ್ದು .ಇದರಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೆ ಮಲಗಿದೆ.
ಭತ್ತದ ಕಾಳುಗಳು ನೆಲಕ್ಕೆ ಬಿದ್ದಿರುವುದರಿಂದ ಬೆಳೆ ನಷ್ಟವಾಗಿದ್ದು. ಅಲ್ಲದೆ ಅಳಿದುಳಿದಿದ್ದನ್ನು ಸಂಗ್ರಹಿಸಲು ರೈತರು ಹೈರಾಣ ಆಗುವಂತಾಗಿದೆ.
ವಾರದೊಳಗೆ ಭತ್ತದ ಬೆಳೆಯನ್ನು ಕಟಾವ್‌ಮಾಡಲು ರೈತರು ತಯಾರಿ ನಡೆಸಿದ್ದರು. ಇನ್ನೇನು ರಾಶಿ ಮಾಡಿಕೊಂಡು, ಶ್ರಮದ ಫಲ ಧಕ್ಕಿಸಿಕೊಳ್ಳಬೇಕು ಎಂಬ ಖುಷಿಯಲ್ಲಿದ್ದವರು ಪಾಲಿಗೆ, ಏಕಾಏಕಿ ಬಿರುಗಾಳಿ ಅಪ್ಪಳಿಸಿದ್ದು ಮಣ್ಣಿನ ಮಕ್ಕಳಾದ ರೈತರಿಗೆ ಕನಲುವಂತೆ ಮಾಡಿದೆ.
ದುಬಾರಿ ರಸಗೊಬ್ಬರ, ಕ್ರಿಮಿ ನಾಶಕ ಔಷಧವನ್ನು ಸಿಂಪರಣೆ ಮಾಡಿದ್ದು.ಗದ್ದೆಯಲ್ಲಿ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನಾಟಿ ಮಾಡಿಸಿ, ಉತ್ತಮವಾಗಿ ಬೆಳೆ ನಿರೀಕ್ಷೆಯಲ್ಲಿದ್ದರು.ಆದರೆ, ಎಲ್ಲ ಮಾಡಿ ಇನ್ನೇನು ಬೆಳೆ ಕೈ ಸೇರುತ್ತದೆ ಅಂದುಕೊಳ್ಳುವರಷ್ಟಲ್ಲಿಯೇ ಮಳೆ ಮತ್ತು ಗಾಳಿ ರೈತರ ಆಸೆಗೆ ತಣ್ಣೀರೆರಚಿದೆ.
ಮಸ್ಕಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೀಗೆ ಬೇಸಿಗೆ ಮಳೆಯ ಅವಘಡ ಮುಂದುವರೆದಿವೆ.
ಇನ್ನಿತರ ಕಡೆಗೆಗಳಲ್ಲಿ ಭತ್ತವನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದ್ದು. ಕೆಲವು ಕಡೆಗೆ ಈಗಾಗಲೇ ಮುಂಚಿತವಾಗಿ ನಾಟಿ ಮಾಡಿದ ರೈತರು ಭತ್ತವನ್ನು ಕಟಾವ್ ಮಾಡಿದ್ದಾರೆ. ಇನ್ನೂ ತಡವಾಗಿ ನಾಟಿ ಮಾಡಿದವರು ವಾರದೊಳಗೆ ಕಟಾವ್ ಮಾಡಲು ನಿರ್ಧರಿಸಿದ್ದರು. ಆದರೆ, ಈ ಘಟನೆ ಅನ್ನದಾತರನ್ನು ಕುಗ್ಗುವಂತೆ ಮಾಡಿದೆ.
ಮಳೆ ಜತೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಭತ್ತದ ಬೆಳೆ ನೆಲಕ್ಕುರಳಿದೆ.
ಇನ್ನೇನು ವಾರದೊಳಗೆ ಕಟಾವ್ ಮಾಡುತ್ತಿದ್ದೇವು ಎಂದು ಬಳಗಾನೂರು ಗ್ರಾಮದ ರೈತರು ,ಅನ್ನದಾತರಗಿ ಕಣ್ಣೀರಿಟ್ಟಿದ್ದಾರೆ.
ಎಲ್ಲೆಡೆ ಮಹಾಮಾರಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಈ ಸೊಂಕು ತಗಲದಂತೆ ಮುಂಜಾಗ್ರತೆ ವಹಿಸಬೇಕು ಮತ್ತು ತಪ್ಪದೆ ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದು ಸರ್ಕಾರ ಜಾಗೃತಿ ಸಂದೇಶ ನೀಡಿದೆ. ಆದರೆ ಬೆಳೆ ಹಾನಿಗೊಳಗಾದ ನಷ್ಟ ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ರೈತರ ಬದುಕು ಕಂಗಾಲಾಗಿದ್ದು ಇದನ್ನು ಕೇಳುವರ್ಯಾರು ಯಾರು ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ಪ್ರತಿಯೊಬ್ಬರಿಗೂ ಆಹಾರ,ಆರೋಗ್ಯ ಭದ್ರತೆ ಒದಗಿಸಬೇಕು-ಎಸ್ಎಫ್ಐ ಒತ್ತಾಯ
ಬಾಗೇಪಲ್ಲಿ: ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲಾಕ್ಡೌನ್ ಜಾರಿ ಮಾಡಿದೆ. ಇದರಿಂದಾಗಿ ದಿನನಿತ್ಯ ಬಡವರು, ನಿರ್ಗತಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರವು ಬಡವರಿಗೆ ಆಹಾರ,ಆರೋಗ್ಯ ಭದ್ರತೆ ಒದಗಿಸಬೇಕೆಂದು ಇಂದು ಎಸ್ಎಫ್ಐ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಸ್ಎಫ್ಐ ಸಂಚಾಲಕರು ತಾವಿದ್ದ ಜಾಗದಿಂದಲೇ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೀಶ್, ಕೊರೋನಾ ಮಹಾಮಾರಿಯಿಂದಾಗಿ ಬಡಜನರ ಬದುಕು ಬರ್ಬರಗೊಂಡಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಹಾಸಿಗೆ, ಆಕ್ಸಿಜನ್ ದೊರೆಯುತ್ತಿಲ್ಲ. ಬಡಬಗ್ಗರಿಗೆ ಸೋಂಕು ತಗುಲಿದರೆ ರಸ್ತೆಯಲ್ಲೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ಆರೋಗ್ಯ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು. ಲಾಕ್ಡೌನ್ ನಿಂದಾಗಿ ದಿನನಿತ್ಯ ಕೂಲಿ ಮಾಡಿ ಬದುಕುತ್ತಿದ್ದ,ಬಡವರು ಹಸಿವಿನಿಂದ ಬಳಲುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಸರ್ಕಾರವು ಪ್ರತಿ ಬಡ ಕುಟುಂಬಕ್ಕೂ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದರು.
ಈ ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರಾದ ಪವನ್, ಸಂತೋಷ್, ಬಾಲಾಜಿ, ಗಣೇಶ್,ಬಾಲಾಜಿ ನಾಯಕ್, ಜಗದೀಶ್ ಮತ್ತಿತರರು ಹಾಜರಿದ್ದರು.
-
Politics3 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ3 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ4 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?
-
Politics3 weeks ago
ಸಿಂದಗಿಯಲ್ಲಿ ರಾಜ್ಯ ಮಟ್ಟದ ಸಿಂಗಿಂಗ್ ಕಾಂಪಿಟೇಶನ್ ಚಾಲನೆ