Politics
ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
ನವದೆಹಲಿ : ದೇಶದಲ್ಲಿ ದಿನೇ ದಿನೇ ವೇಗವಾಗಿ ಹರಡುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಭಾನುವಾರ ರಾತ್ರಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಲಾಕ್‍ಡೌನ್ ಜಾರಿಯ ಬಗ್ಗೆ ಸರ್ಕಾರಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಲಾಕ್‍ಡೌನ್ ಜಾರಿಯಾದ ವೇಳೆ ಎದುರಾಗುವ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳ ತೀವ್ರತೆಯ ಬಗ್ಗೆ ಸುಪ್ರೀಂಕೋರ್ಟ್‍ಗೆ ಅರಿವಿದೆ. ಸರ್ಕಾರಗಳು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಕಾಲಕಾಲಕ್ಕೆ ಅಗತ್ಯ ನೆರವನ್ನು ನೀಡಿ ಜನಸಾಮಾನ್ಯರ ಹಿತ ಕಾಪಾಡಬೇಕು ಎಂದು ಸೂಚನೆ ನೀಡಿದೆ.
Politics
ತ್ವರಿತ ಆಕ್ಸಿಜನ್ ಪೂರೈಕೆಗೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು : ಚಾಮರಾಜ ನಗರದಲ್ಲಿ ನಡೆದ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ರವರು ಸೋಮವಾರ ಆಮ್ಲಜನಕ ಉತ್ಪಾದಕ ಮತ್ತು ಪೂರೈಕೆದಾರ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಆಮ್ಲಜನಕ ಪೂರೈಕೆಗೆ ಸಲಹೆಗಳನ್ನು ನೀಡಿದರು. ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಗಳ ಸಂಚಾರಕ್ಕೆ ಎಲ್ಲಿಯೂ ತಡೆ ಒಡ್ಡಬಾರದು, ಚಾಲಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
Politics
ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟ : ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು : ಚಾಮರಾಜನಗರ ಘಟನೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಯಾದ ಎಚ್.ಡಿ ಕುಮಾರಸ್ವಾಮಿ ಅವರು, ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಯಾವ ಸಚಿವರು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ಸಭೆ ಮೇಲೆ ಸಭೆ ನಡೆಸಿ ಸೌಲಭ್ಯ ಒದಗಿಸುವುದಾಗಿ ಹೇಳುತ್ತಾರೆ. ಸೌಲಭ್ಯ ನೀಡಿದ್ದರೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಈ ರೀತಿಯ ದುರಂತ ನಡೆಯುತ್ತಿರಲಿಲ್ಲ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಆದರೆ ಸಚಿವರು ಉದಾಸೀನ ಭಾವನೆಯಲ್ಲಿದ್ದಾರೆ. ಚಾಮರಾಜನಗರದ ಘಟನೆಗೆ ಸರಕಾರವೇ ನೇರ ಹೊಣೆ ಎಂದು ತಿಳಿಸಿದರು.
Politics
ಮಸ್ಕಿಯಲ್ಲಿ ರಾಜಕೀಯ ದ್ವೇಷದ ಕಿಚ್ಚು : ಹಲವರಿಗೆ ಗಾಯ ಹಾಗೂ ಪ್ರಕರಣ ದಾಖಲು
ಮಸ್ಕಿ :- ಕ್ಷೇತ್ರದಲ್ಲಿ ಸೋಲು ಗೆಲುವಿನ ಕಾವು ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯಕರ್ತರ ಜಗಳ.
ಮಸ್ಕಿ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಡು ಕಂಡಿರುವ ಪ್ರಕರಣ ದಾಖಲಾಗಿದೆ.
ಜಗಳದ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತ ಗಾಯಗೊಂಡಿದ್ದು ಮಸ್ಕಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು. ಕ್ಷೇತ್ರದ ನೂತನ ಶಾಸಕರಾದಂತಹ ಆರ್ ಬಸನಗೌಡ ತುರುವಿಹಾಳ ಬಂದು ಭೇಟಿ ನೀಡಿದರು.
ಜಗಳವಾದ ನಂತರ ಮಸ್ಕಿ ಪೊಲೀಸ್ ಠಾಣೆಯ ಮುಂದೆ 300 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ನಿಂತು ಪ್ರತಿಭಟನೆ ನಡೆಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ಬಸನಗೌಡ ತುರುವಿಹಾಳ ಗೆದ್ದ ತಕ್ಷಣ , ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Politics3 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
ಸುದ್ದಿ3 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ4 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?
-
Politics3 weeks ago
ಸಿಂದಗಿಯಲ್ಲಿ ರಾಜ್ಯ ಮಟ್ಟದ ಸಿಂಗಿಂಗ್ ಕಾಂಪಿಟೇಶನ್ ಚಾಲನೆ