Connect with us
Ad Widget

ಸುದ್ದಿ

ನಟ ಚೇತನ್ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್

Published

on

ಬೆಂಗಳೂರು: ‘ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎನ್ನಲಾದ ಆರೋಪದಡಿ ನಟ ಚೇತನ್ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್‌ ಕುಮಾರ್ ಶರ್ಮಾ ಎಂಬುವರು ದೂರು ನೀಡಿದ್ದಾರೆ. ಧಾರ್ಮಿಕ ಭಾವನೆ ಕೆರಳಿಸುವುದು (ಐಪಿಸಿ 129(ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153 (ಬಿ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಚೇತನ್‌ ಮಾತನಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ. ಹಿಂದೂ ಧರ್ಮ ನಾನಾ ಪ್ರವರ್ಗಗಳಲ್ಲಿ ಇರುವವರನ್ನು ಬೇರ್ಪಡಿಸಿ ಅವರಲ್ಲಿ ಧರ್ಮಾಂಧತೆಯನ್ನು ಹುಟ್ಟುಹಾಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಚೇತನ್‌ ಅವರು, ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂಬುದಾಗಿ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಸುದ್ದಿ

ಕಿರಾಣಿ ಅಂಗಡಿಗಳಲ್ಲಿ ಅಕ್ರಮ‌ ಮದ್ಯ ಮಾರಾಟ

Published

on

ಕಿರಾಣಿ ಅಂಗಡಿಗಳಲ್ಲಿ ಅಕ್ರಮ‌ ಮದ್ಯ ಮಾರಾಟ, ತಹಶಿಲ್ದಾರರ ದಾಳಿ, ಸಾವಿರಾರು ರೂಪಾಯಿಗಳ ಬೆಲೆ ಬಾಳುವ ಅಕ್ರಮ ಮದ್ಯ ವಶ.

ಬಾಗೇಪಲ್ಲಿ: ತಾಲೂಕಿನಾದ್ಯಂತ ವಿವಿಧ ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕುಸುಮವಾಣಿ ಪತ್ರಿಕೆಯ ಸಂಚಿಕೆ 11 ರಲ್ಲಿ ಸುದ್ದಿ ಪ್ರಕಟವಾಗಿತ್ತು. ಅದೇ ರೀತಿಯಲ್ಲಿ ಇಂದು ತಹಶಿಲ್ದಾರರಾದ ಡಿ. ಎ.ದಿವಾಕರರವರು ನೇತೃತ್ವದಲ್ಲಿ ವಿವಿದೆಡೆ ದಾಳಿ ಮಾಡಿ ಅಕ್ರಮ ಮದ್ಯ ವಶ ಪಡಿಸಿಕೊಂಡಿದ್ದಾರೆ.

ತಾಲೂಕಿನ ಗೂಳೂರು ಹೋಬಳಿ ಜಿಲಾಜಿರ್ಲ ,ಪಾತಪಾಳ್ಯ ಹೋಬಳಿ ಮುಗಿರೆಡ್ಡಿಪಲ್ಲಿ ಗ್ರಾಮಗಳಲ್ಲಿ ಮೇಲೆ ತಾಲ್ಲೂಕು ತಹಶಿಲ್ದಾರ್ ದಾಳಿ ನಡೆಸಿದರು. ಲಾಕ್​ಡೌನ್​ ಅವಧಿಯಲ್ಲಿ ಅಕ್ರಮವಾಗಿ ವಿವಿಧ ಅಂಗಡಿಗಳಲ್ಲಿ ಮಾರಾಟವಾಗುತ್ತಿದ್ದ ಮದ್ಯವನ್ನು ಸೀಜ್​ ಮಾಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮದ ಅಂಗಡಿಗಳ ಮೇಲೆ ದಾಳಿ ನಡೆಸಿ ಮದ್ಯದ ಬಾಟಲ್ ಹಾಗೂ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.ಈ ದಾಳಿ ಮಾಡಿರುವ ಬಗ್ಗೆ ತಹಶಿಲ್ದಾರರು ಮಾಹಿತಿ ನೀಡಿದ್ದು, ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಗತಗೊಂಡಿದ್ದೇವೆ. ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದಿದ್ದಾರೆ.

Continue Reading

ಸುದ್ದಿ

ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿರುವ ಪ್ರದೀಪ್ ಕುಮಾರ್ : ಹುಟ್ಟುಹಬ್ಬಕ್ಕೆ ಶುಭಕೋರಿದ ಗೆಳೆಯರ ಬಳಗ

Published

on

ಚನ್ನಪಟ್ಟಣ : ವಿದ್ಯಾರ್ಥಿದೆಸೆಯಿಂದಲೇ ಹೋರಾಟದ ಗೀಳನ್ನು ಮೈಗೂಡಿಸಿಕೊಂಡು, ವಿದ್ಯಾರ್ಥಿಗಳ ಆಶೋತ್ತರ ಈಡೇರಿಕೆ ಗಳಿಗಾಗಿ ಪ್ರತಿಭಟನೆ ಹಾಗೂ ಸಾಮಾಜಿಕ ಹೋರಾಟಗಳ ಮೂಲಕ ಹಾಗೂ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳನ್ನು ಸಮಾಜಕ್ಕೆ ಹಂಚುತ್ತ ಮತ್ತು ಹಲವಾರು ವ್ಯಕ್ತಿತ್ವ ಶಿಬಿರಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ್ದಾರೆ ಅಪ್ಪಗೆರೆ ಪ್ರದೀಪ್ ಕುಮಾರ್.

ಕನ್ನಡ, ಸಮಾಜಶಾಸ್ತ್ರ, ಮನಶಾಸ್ತ್ರ ಹಾಗೂ ಗ್ರಾಮೀಣ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದ ಅಂಬೇಡ್ಕರ್ ಜಾನಪದ ಹೀಗೆ ಇನ್ನೂ ಹಲವು ವಿಭಾಗದಲ್ಲಿ ಡಿಪ್ಲೊಮೋ ಗಳಿಸಿದ್ದು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಗ್ರಾಮೀಣ ಅಭಿವೃದ್ಧಿ ಅಧ್ಯಯನದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು 33 ವರ್ಷ ಕಳೆದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಬುದ್ಧ ಬಸವ ಅಂಬೇಡ್ಕರ್ ರವರಿಗೆ ನಮನಗಳನ್ನು ತಿಳಿಸುವ ಮೂಲಕ ಆಚರಿಸಿಕೊಂಡಿದ್ದಾರೆ.
ಈ ಸುಸಂದರ್ಭದಲ್ಲಿ ಮಹೇಶ ಮೌರ್ಯ, ಗ್ರಾಪಂ ಮಾಜಿ ಸದಸ್ಯ ಶಿವಮೂರ್ತಿ, ಶಿಕ್ಷಣ ಇಲಾಖೆ ಶಶಿಕುಮಾರ್, ರಾಜೇಶ್ ಯುವ ಮುಖಂಡರಾದ ಮಂಜುನಾಥ್, ಮನೋಜ್ ,ವಿನೋದ್, ಕುಮಾರ್ ,ಶ್ರೀನಿವಾಸ್, ನಾಗೇಶ್, ಕೃಷ್ಣಪ್ಪ ,ಲೋಕೇಶ್ ಸತೀಶ್ ಗೌಡ ಹಾಗೂ ಗೆಳೆಯ ಬಳಗ ಇವರ ಜನ್ಮದಿನಕ್ಕೆ ಶುಭಕೋರಿದ್ದಾರೆ.

Continue Reading

ಸುದ್ದಿ

ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಾಗಾರಕ್ಕೆ ನಿಮ್ಹಾನ್ಸ್ ನಲ್ಲಿ ಚಾಲನೆ

Published

on

ಬೆಂಗಳೂರು : ಕೋವಿಡ್ ಮೂರನೆಯ ಅಲೆಯ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೋವಿಡ್-19 ಸೋಂಕು ನಿರ್ವಹಣೆಯ ಕುರಿತು ಬಿ ಬಿ ಎಂ ಪಿ ವೈದ್ಯರಿಗೆ ಮತ್ತು ಮಕ್ಕಳ ತಜ್ಞರಿಗೆ ರಾಜ್ಯದ ಮೊಟ್ಟ ಮೊದಲ ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಾಗಾರಕ್ಕೆ ನಿಮ್ಹಾನ್ಸ್ ನಲ್ಲಿ ಚಾಲನೆ ನೀಡಲಾಯಿತು. ಮೂರನೇ ಅಲೆ‌ ಮಕ್ಕಳಿಗೆ ಅಪಾಯಕಾರಿಯಾಗಿರಲಿದೆ ಎಂಬ‌ ಅಭಿಪ್ರಾಯ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ವೈದ್ಯರು ಸಾಕಷ್ಟು ಅಧ್ಯಯನ‌ ನಡೆಸಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕೆಂದು ಕರೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್, ಅಶೋಕ್ ರವರು, ಬಿ ಬಿ ಎಮ್ ಪಿ ಮುಖ್ಯ ಆಯುಕ್ತರಾದ ಶ್ರೀ ಗೌರವ ಗುಪ್ತ ಹಾಗೂ ಇತರ ತಜ್ಞ ವೈದ್ಯರು ಉಪಸ್ಥಿತರಿದ್ದರು.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್