Connect with us
Ad Widget

ಕ್ರೀಡೆ

ಗುಂಜೂರು ಗ್ರಾಮದ ಸ.ನಂ .104 ರಲ್ಲಿ ಕ್ರೀಡಾಂಗಣ : ಅಧಿಕಾರಿಗಳೊಂದಿಗೆ ಸಭೆ

Published

on

ಬೆಂಗಳೂರು : ವಿಧಾನಸೌಧದ ಕಛೇರಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಜೂರು ಗ್ರಾಮದ ಸ.ನಂ .104 ರಲ್ಲಿ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿರುವ ಸ್ಥಳದ ಬಗ್ಗೆ – ಅರಣ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾನ್ಯ ಅರವಿಂದ ಲಿಂಬಾವಳಿ ರವರು ಸಭೆ ನಡೆಸಿ, ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಗುಂಜೂರು ಪಾಳ್ಯಲ್ಲಿ ಅಂತರರಾಷ್ಟ್ರೀಯ
ಕ್ರೀಡಾಂಗಣ ನಿರ್ಮಿಸಲು 27 ಎಕರೆ ಜಾಗ ಈ ಹಿಂದೆ ಮಂಜೂರಾಗಿತ್ತು. ಈ ಸ್ಥಳ ಡೀಮ್ಡ್ ಫಾರೆಸ್ಟ್ ನ ಮಧ್ಯಭಾಗದಲ್ಲಿ ಬರುವುದುದರಿಂದ ರಸ್ತೆ ಸಂಪರ್ಕ ಕೂಡ ಇರುವುದಿಲ್ಲ ಹೀಗಾಗಿ ಇದನ್ನು ಡೀಮ್ಡ್ ಫಾರೆಸ್ಟ್ ಗೆ ಬಿಡಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಬದಲಾಗಿ ಸದ್ಯ ಸಿಡಿಪಿ ರಸ್ತೆ ಮಾಡಲಾಗುತ್ತಿದ್ದು, ಸಿಡಿಪಿ ರಸ್ತೆಯ ಪಕ್ಕದ ಜಾಗದಲ್ಲಿಯೇ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಲು ಉಪಯೋಗಸಿಕೊಂಡರೇ ಸೂಕ್ತ ಎಂದು ತೀರ್ಮಾನಿಸಿ, ಅದರಂತೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Advertisement
Click to comment

Leave a Reply

Your email address will not be published. Required fields are marked *

ಕ್ರೀಡೆ

ಐಪಿಎಲ್​ 14ನೇ ಆವೃತ್ತಿಯ 2ನೇ ಭಾಗ : ಬಿಸಿಸಿಐ ವಿಶೇಷ ಮಹಾಸಭೆ

Published

on

ಮುಂಬೈ: ಬಿಸಿಸಿಐನ ವಿಶೇಷ ಮಹಾಸಭೆ (ಎಸ್​ಜಿಎಂ) ಇಂದು ನಡೆಯಲಿದ್ದು, ಐಪಿಎಲ್​ 14ನೇ ಆವೃತ್ತಿಯ 2ನೇ ಭಾಗ ಮತ್ತು ಟಿ20 ವಿಶ್ವಕಪ್​ ಟೂರ್ನಿಯ ಆತಿಥ್ಯದ ಬಗ್ಗೆ ಮಹತ್ವದ ನಿರ್ಧಾರಗಳು ಹೊರಬೀಳುವ ನಿರೀಕ್ಷೆ ಇದೆ. ಜತೆಗೆ ರಣಜಿ ಕ್ರಿಕೆಟಿಗರಿಗೆ ಪರಿಹಾರ ನೀಡುವುದನ್ನು ಸೇರಿದಂತೆ ದೇಶೀಯ ಕ್ರಿಕೆಟ್​ ಬಗ್ಗೆಯೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.

ಸೆಪ್ಟೆಂಬರ್​ 15ರಿಂದ ಅಕ್ಟೋಬರ್​ 15ರ ನಡುವೆ ಐಪಿಎಲ್​ ಟೂನಿರ್ಯ ಮುಂದುವರಿದ ಭಾಗವನ್ನು ಆಯೋಜಿಸಲು ಬಿಸಿಸಿಐ ಈಗಾಗಲೆ ಯೋಜನೆ ರೂಪಿಸಿದ್ದು, ಇದಕ್ಕಾಗಿ 3 ವಾರಗಳ ವೇಳಾಪಟ್ಟಿಯನ್ನೂ ಅಂತಿಮಗೊಳಿಸುವ ನಿರೀಕ್ಷೆ ಇದೆ. ಕರೊನಾ ವೈರಸ್​ ಹಾವಳಿಯ ನಡುವೆ ಟಿ20 ವಿಶ್ವಕಪ್​ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಒಲವು ತೋರಿದ್ದು, ಜೂನ್​ 1ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಕುರಿತು ಚರ್ಚೆಗಳು ನಡೆಯಲಿವೆ.

Continue Reading

ಕ್ರೀಡೆ

ಕೋಚ್ ನಿಧನಕ್ಕೆ ಕಂಬನಿ‌ ಮಿಡಿದ ಕಬ್ಬಡ್ಡಿ ಕ್ರೀಡಾಪಟು ಬಾಲಾಜಿ

Published

on

ಬಾಗೇಪಲ್ಲಿ: ಮಾಜಿ ಅಂತರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾ ಪಟು ಕೊರೋನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಗೋಪಾಲಪ್ಪ ಎಂಬ ಸಾಮಾನ್ಯ ಕುಟುಂಬದಿಂದ ಬಂದು ಕಬ್ಬಡ್ಡಿ ಕ್ರೀಡೆಯಲ್ಲಿ ದೇಶವನ್ನು ಹಲವು ಸಲ ಪ್ರತಿನಿಧಿಸಿದ್ದರು. ಪ್ರೋ ಕಬ್ಬಡ್ಡಿ ಸೀಸನ್-೨ ರಲ್ಲಿ ಮುಂಬೈ ತಂಡ ಚಾಂಪಿಯನ್ ಆದಾಗ ತಂಡದಲ್ಲಿ ಆಡಿದ್ದರು.

ಕರ್ನಾಟಕದ ಕಬ್ಬಡ್ಡಿ ಉತ್ತಮ ರೈಡರ್ ಆಗಿದ್ದರು. ಅವರು ಇಂದು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಕುಟುಂಬಸ್ಥರು, ಅಭಿಮಾನಿಗಳಲ್ಲಿ ಮತ್ತು ಶಿಷ್ಯರಲ್ಲಿ ಅತೀವ ದುಃಖ ತಂದಿದೆ.‌ ನನಗೆ ಮುಖ್ಯ ಕೋಚ್ ಆಗಿದ್ದ ಗೋಪಾಲಪ್ಪರವರ ಸಾವು ನಂಬಲಾಗುತ್ತಿಲ್ಲ. ಉತ್ತಮ ರೈಡರ್ ಹಾಗೂ ನನ್ನಂತಹ ಅದೆಷ್ಟೋ ಕಬ್ಬಡ್ಡಿ ಪ್ರತಿಬನೆಗಳನ್ನು ಸೃಷ್ಟಿಸಿದ್ದಾರೆ ಎಂದು ಬಾಗೇಪಲ್ಲಿಯ ಕಬ್ಬಡ್ಡಿ ಕ್ರೀಡಾ ಪಟು ಬಾಲಾಜಿ ಸಂತಾಪ ಸೂಚಿಸಿದರು.

Continue Reading

ಕ್ರೀಡೆ

ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರದಲ್ಲಿ ಖ್ಯಾತ ನಟಿ ತಾಪ್ಸಿ ಪನ್ನು

Published

on

ಬಾಲಿವುಡ್‌ನ ಖ್ಯಾತ ನಟಿ ತಾಪ್ಸಿ ಪನ್ನು ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಬಯೋಪಿಕ್‌ಗೆ ಕನ್ನಡ ಖ್ಯಾತ ನಟ ಜೆಕೆ ಎಂಟ್ರಿ ಕೊಟ್ಟಿದ್ದಾರೆ.

ಶಬಾಷ್ ಮಿಥು ಹೆಸರಿನಲ್ಲಿ ಸೆಟ್ಟೇರಿರುವ ಚಿತ್ರದಲ್ಲಿ ತಾಪ್ಸಿ ಪನ್ನು ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕನ್ನಡದ ನಟ ಜೆಕೆ ನಟಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್