ಸುದ್ದಿ
ಪುರಾತನ ಪರಂಪರೆಯೇ ವಿಶ್ವ ಪರಿಸರ ದಿನವನ್ನು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಆಚರಣೆ
ಮಸ್ಕಿ :- ಪರಿಸರ ಶುಚಿಯಾಗಿ ಇದ್ದರೆ ಜಗತ್ತು ಆರೋಗ್ಯದಿಂದ ಉತ್ತಮವಾಗಿ ಇರುತ್ತದೆ ಇಲ್ಲದೆ ಹೋದರೆ ಆಯಾ ತಪ್ಪುತ್ತದೆ.
ಜೂನ್ 05 ನೇ ಎನ್ವಿರಾನ್ಮೆಂಟ್ ಡೇ ಪರಿಸರ ದಿನಾಚರಣೆ ಎಂದು ಆಚರಿಸುತ್ತೇವೆ.
ಇಂದಿನ ಕೊರೊನಾ ಸಂದರ್ಭದಲ್ಲಿ ಪರಿಸರದ ಮಹತ್ವತೆಯ ಕುರಿತು ನಮಗೆ ನಾವೇ ಜಾಗೃತರಾಗುವ ರೀತಿ ಪರಿಸರ ಕಿವಿ ಹಿಂಡಿದೆ ನಿಸರ್ಗದಲ್ಲಿ ಇರುವ ಅನೇಕ ಗಿಡಗಳು ಬಹಳಷ್ಟು ಮಹತ್ವವನ್ನು ಪಡೆದಿವೆ.
ವೇದಗಳ ಕಾಲದಲ್ಲಿ ಅಶ್ವಿನಿ ಮಾಸದ ಕೊನೆಯಲ್ಲಿ ನಿಸರ್ಗವನ್ನು ಪೂಜಿಸಿ ಪಶುಗಳನ್ನು ಪರಿಸರ ಮತ್ತು ಪಶುಗಳೆ ಆಸ್ತಿ ಎಂದು ಭಾವಿಸಿದ್ದರು.
ಅರಳಿ ಗಿಡ ಮಹಾನ್ ಗಿಡ ಸಾಕ್ಷಾತ್ ವಿಷ್ಣುವಿನ ವಾಸಸ್ಥಳ ಎಂದು , ಬೇವಿನ ಗಿಡ ದೇವಿಯ ವಾಸ ಎಂದು, ತುಳಸಿ ಗಿಡ ಲಕ್ಷ್ಮಿಯ ವಾಸ ಎಂದು ಪೂಜಿಸುತ್ತಿದ್ದರು.
ಇಂದಿನ ದಿನಗಳಲ್ಲಿ ಆ ಪುರಾತನ ಪರಂಪರೆಯೇ ವಿಶ್ವ ಪರಿಸರ ದಿನಾಚರಣೆ ಹಾಗಿದೆ.
ಈ ದಿನವನ್ನು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮಸ್ಕಿ ತಾಲೂಕ ದಂಡಾಧಿಕಾರಿ ಗಳು ಮತ್ತು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಶ್ರೀ ಮಲ್ಲಿಕಾರ್ಜುನ್ ಇತ್ಲಿ ಹಾಗೂ ಸಾಹಿತಿಗಳಾದ ಮಹಾಂತೇಶ್ ಮಸ್ಕಿ ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತರು ಪಾರ್ಶ್ವನಾಥ ಕೋಲಾರ ಭಾರತ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರು , ಕಾರ್ಯದರ್ಶಿಗಳಾದ ಶಿವಪ್ಪ ಹಸಮಕಲ್ , ಮಸ್ಕಿ ಲಯನ್ಸ್ ಕ್ಲಬ್ ನ ಗಣ್ಯರಾದ ಡಾಕ್ಟರ್ ಬಿ. ಎಚ್. ದಿವಾಟರ್ ಹಾಗೂ ಉಪಸ್ಥಿತರಿದ್ದರು.
ಸುದ್ದಿ
ಚನ್ನಪಟ್ಟಣದ ಅಪ್ಪಗೆರೆಯ ವಾರ್ಡಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ
ಚನ್ನಪಟ್ಟಣ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಚನ್ನಪಟ್ಟಣದ ಅಪ್ಪಗೆರೆಯ ವಾರ್ಡಿನಲ್ಲಿ ತಾಲೂಕಿನ Dysp ರಮೇಶ್ ಹಾಗೂ ಅಪ್ಪಗೆರೆಯ ವಾರ್ಡಿನ ನಗರಸಭೆ ಸದಸ್ಯರಾದ ಲೋಕೇಶ್ ಸರ್ವಮಂಗಳ ಅವರು ಹಾಗೂ ಗ್ರಾಮದ ಹಿರಿಯ ಮುಖಂಡರಾದ ಶಿವಮೂರ್ತಿ ಗ್ರಾಮ ಪಂಚಾಯತಿ ಸದಸ್ಯರಾದ ಕಿರಣ್. ಅಪ್ಪಗೆರೆ ಮಂಜುನಾಥ್, ಎಸ್ಎಲ್ಎನ್ಎಂ ITI ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ವೈದ್ಯರಾದ ಮಲ್ಲೇಗೌಡ (ಮೂಳೆ ತಜ್ಞರು) ಬಹುಜನ ಚಳುವಳಿ ಮುಖಂಡರು ಅಪ್ಪಗೆರೆ ಪ್ರದೀಪ್ ಹಾಗೂ ಗ್ರಾಮದ ಯುವಕರು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು,
ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕೂಗುವ ಮೂಲಕ ಆಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು.
ಸುದ್ದಿ
ವನಸಿರಿ ಫೌಂಡೇಶನ್ (ರಿ) ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಮೂಲಕ ಆಚರಣೆ
ಮಸ್ಕಿ :- ತಾಲೂಕಿನ ಗದ್ರಟಗಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಸ್ಕಿ ತಾಲೂಕಿನ ಶಾಸಕರಾದ ಆರ್ ಬಸನಗೌಡ ತುರುವಿಹಾಳ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹನುಮೇಶ್ ಬಾಗೋಡಿ ತುರ್ವಿಹಾಳ್ ಹಾಗೂ ರಾಜು ಕುರುಕುಂದ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ , ಚಂದ್ರಶೇಖರ್ ಪವಾಡಶೆಟ್ಟಿ , ಗುರುರಾಜ್ ಗದ್ರಟಗಿ , ಹನುಮೇಶ್ ಬಗೋಡಿ ತುರ್ವಿಹಾಳ್ , ಅಮರೇಶ್ ಹತ್ತಿಗುಡ್ಡ , ನಾಗರಾಜ್ ಹತ್ತಿಗುಡ್ಡ , ಪ್ರದೀಪ್ ಪೂಜಾರಿ , ಬಸವ ಸಾಲಗುಂದ , ವೀರೇಶ್ ಸೋಮಲಾಪುರ , ಯಶವಂತ , ಇನ್ನು ಹಲವಾರು ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸಸಿ ನೆಡುವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ
ಮಸ್ಕಿ :- ನಗರದಲ್ಲಿ ಪರಿಸರ ಜಾಗೃತಿ ಹಾಗೂ 10,001 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನೂತನ ಶಾಸಕರಾದ ಆರ್ ಬಸನಗೌಡ ತುರ್ವಿಹಾಳ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ನೂತನ ಶಾಸಕ ಆರ್ ಬಸನಗೌಡ ತುರುವಿಹಾಳ
ಜೂನ್ 05 ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು ತದನಂತರ ಪ್ರಪಂಚಾಧ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದ್ದು ನೆಲ , ಮಣ್ಣು , ಬೆಳೆ , ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತದೆ. ಆದ್ದರಿಂದ, ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ , ಹಾಗೂ ಜಲಮಾಲಿನ್ಯ ,ಚುನಾವಣೆಯಲ್ಲಿ , ಶಬ್ದಮಾಲಿನ್ಯ , ವಾಯುಮಾಲಿನ್ಯಗಳಿಗೆ ಮನುಷ್ಯನೇ ಮೂಲ ಕಾರಣ.
ಪರಿಸರ ಸ್ನೇಹಿ ಬಟ್ಟೆ ತೊಡುಗೆಗಳು, ಪ್ಲಾಸ್ಟಿಕ್ ಬಳಸದೇ ಎಲ್ಲೆಂದರಲ್ಲಿ ಬಿಸಾಕದೇ ಇರುವುದು ಆದಷ್ಟೂ ಕಡಿಮೆ ಕಸದ ಉತ್ಪತ್ತಿ , ನೀರಿನ ಮಿತವ್ಯಯ ಬಳಕೆ , ರಾಸಾಯನಿಕಗಳನ್ನು ಬಳಸದೇ ಇರುವುದು , ಬಯಲು ಮಲವಿಸರ್ಜನೆ ತಡೆಗಟ್ಟುವುದರಿಂದ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಕೂಡ ಪರಿಸರ ಸ್ನೇಹಿ ಕಾರ್ಯಕ್ರಮಗಳೇ.ಈ ಎಲ್ಲಾ ಕೆಲಸಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವೆಂದು ಮಾಡಿದರೆ ಪರಿಸರ ಸಂರಕ್ಷಣೆಗೆ ಇದೇ ನಾವು ಕೊಡುವ ಉಡುಗೊರೆ ಹಾಗೂ ನಮ್ಮ ಮುಂದಿನ ಪೀಳಿಗೆ ನಾವು ಕೊಡುವ ಒಂದು ಅಮೂಲ್ಯ ಸಂಪತ್ತು ಎಂದು ತಿಳಿಸಿದರು.
ನಮ್ಮ ಸುತ್ತಮುತ್ತಲಿನ ಪ್ರದೇಶವೇ ಪರಿಸರ ಈ ಪರಿಸರವೂ ಮರಗಿಡಗಳು ಹಾಗೂ ಪ್ರಾಣಿ ಪಕ್ಷಿಗಳಿಂದ ಕೂಡಿದೆ ಇದರೊಂದಿಗೆ ಮಾನವನು ಅನ್ಯೋನ್ಯತೆಯಿಂದ ಜೀವಿಸುತ್ತಾನೆ.
ಇವೆಲ್ಲದರ ನಡುವೆ ಮಾನವರು ತನ್ನ ಸ್ವಾರ್ಥತೆಯನ್ನು ತೋರಿಸುತ್ತಾನೆ ಪರಿಸರದ ಬಗೆಗಿನ ಕಾಳಜಿ ಕೇವಲ ಪರಿಸರ ದಿನಾಚರಣೆಯ ದಿನದಂದು ಮಾತ್ರ ಇರದೇ ಪ್ರತಿ ದಿನವು ಪರಿಸರ ದಿನಾಚರಣೆಯಾಗಬೇಕು ಎಂದರು.
ಪರಿಸರದ ಸಂರಕ್ಷಣೆಗೆಂದು ಯೋಜನೆಯಿಂದ ನೀಡುತ್ತಿರುವ ಗಿಡಗಳನ್ನು ಇಂದಿನ ದಿನ ನೆಡುವುದು ಮಾತ್ರವಲ್ಲ ಅದನ್ನು ಸರಿಯಾಗಿ ನೀರು ಮತ್ತು ಗೊಬ್ಬರ ಹಾಕಿ ಬೆಳೆಸಬೇಕು ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು.
ಮಸ್ಕಿ ನಗರದಲ್ಲಿ ಬೀದಿಗಳಲ್ಲಿ ಯಮನ ವೇಷ ಹಾಗೂ ಕೊರೊನಾ ವೇಷ ಧರಿಸಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಯಿತು.
ಯಮನ ವೇಷ ಧರಿಸಿ ಕೈಯಲ್ಲಿ ಗಧೆ ಹಿಡಿದು ನೀವು ಕಡ್ಡಾಯವಾಗಿ ಮಾಸ್ಕ್ ಧರಿಸಿ ವಿನಾಕಾರಣ ಅಪಾಯಕ್ಕೆ ಆಹ್ವಾನ ನೀಡದಿರಿ ಎಂಬ ಸಂದೇಶ ನೀಡಿದರು. ಹುಚ್ಚು ಮಾನವರೇ ನೀವು ಮಾಸ್ಕ್ ಧರಿಸಿ ನಿಮ್ಮ ಜೀವವನ್ನು ನೀವು ಉಳಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಿದರು.
ಚಿಕ್ಕ ಮಕ್ಕಳಿಗೂ ಸಹ ಕರೆದು ತಮ್ಮ ನೀನು ಮಾಸ್ಕ್ ಧರಿಸು, ಎಲ್ಲರಿಗೂ ತಿಳಿ ಹೇಳು ಎಂದ ಯಮ ಧರ್ಮರಾಯನ ಸ್ಟೈಲ್ ನಲ್ಲಿ ಡೈಲಾಗ್ ಹೇಳಿ ಜಾಗೃತಿ ಮೂಡಿಸಿದರು.
ಪ್ರತಿಯೊಬ್ಬರು ಕೊರೊನಾ ಬಗ್ಗೆ ಜಾಗೃತಿ ವಹಿಸಬೇಕು ಭಯ ಪರಿಹಾರವಲ್ಲ, ಜಾಗೃತಿಯೇ ಪರಿಹಾರ, ಜಾಗೃತಿಯೇ ಕೊರೊನಾ ಸೋಂಕು ನಿಗ್ರಹಕ್ಕೆ ದಿವ್ಯ ಔಷಧ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದಿರಿ ಗುಣಮಟ್ಟದ ಮಾಸ್ಕ್ ಧರಿಸಿ, ಕಡ್ಡಾಯವಾಗಿ ಪದೇ ಪದೇ ಸಾಬೂನಿನಿಂದ ಕೈ ತೊಳೆದುಕೊಳ್ಳಿ. ಈ ಎಲ್ಲ ಆರೋಗ್ಯ ಸೂತ್ರ ಪಾಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಸ್ಕಿಯ ತಹಸಿಲ್ದಾರ್ ಬಲರಾಮ ಕಟ್ಟಿಮನಿ , ಹಿರಿಯರಾದ ಮಹಾಂತೇಶ ಮಸ್ಕಿ , ಅಪ್ಪಾಜಿಗೌಡ , ಜಿಲಾನಿ ಖಾಜಿ , ಮಲ್ಲಯ್ಯ ಬುಳ್ಳಾ , ಮಲ್ಲಿಕಾರ್ಜುನ ಪಾಟೀಲ್ ಯದಲದಿನ್ನಿ , ಹನುಮಂತಪ್ಪ ಮುದ್ದಾಪೂರ ಹಾಗೂ ಇನ್ನಿತರ ಮುಖಂಡರು ಮತ್ತು ಸಂಸ್ಥೆಯ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ , ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ , ಮಲ್ಲಿಕಾರ್ಜುನ ಬಡಿಗೇರ್ , ಅಮೀತ್ ಕುಮಾರ್ ಪುಟ್ಟಿ , ಕಾರ್ತಿಕ್ ಜೋಗೀನ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Politics2 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics3 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ4 weeks ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಸುದ್ದಿ3 weeks ago
ಹರಳಕೆರೆ ಗ್ರಾಮದಲ್ಲಿ ಹಸುವನ್ನು ಬಲಿತೆಗೆದುಕೊಂಡ ಚಿರತೆ : ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು