ಮನರಂಜನೆ
ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಿಯಾ ವಾರಿಯರ್
2018ರಲ್ಲಿ ಪುಟ್ಟ ವಿಡಿಯೋ ಕ್ಲಿಪ್ನಿಂದಾಗಿ ರಾತ್ರೋರಾತ್ರಿ ಸ್ಟಾರ್ ಆದ ಹುಡುಗಿ ಈ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier).
ಆ ಒಂದು ವೈರಲ್ ವಿಡಿಯೋದಲ್ಲಿ ಕೇವಲ ಒಂದೇ ಒಂದು ಕಣ್ಸನ್ನೆಯಿಂದ ಈ ಹುಡುಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈಗ ಇದೇ ಪ್ರಿಯಾವಾರಿಯರ್ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಿಯಾ ವಾರಿಯರ್ ಇದೇ ಮೊದಲ ಸಲ ಇಷ್ಟು ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಸಲ ಟಾಪ್ಲೆಸ್ ಫೋಟೋ ವನ್ನು ಪ್ರಿಯಾ ಹಂಚಿಕೊಂಡಿದ್ದಾರೆ.
ಪ್ರಿಯಾ ಅವರ ಈ ಬೋಲ್ಡ್ ಹಾಗೂ ಹಾಟ್ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ.
ಮನರಂಜನೆ
ಬುದ್ಧಿಮಾಂದ್ಯ ಶಾಲೆಯ ಮಕ್ಕಳಿಗೆ ನೆರವಾಗುವ ಮೂಲಕ ಹೃದಯವಂತಿಕೆ ಮೆರೆದ ಕಿಚ್ಚ
ಬೆಂಗಳೂರು: ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಕಿಚ್ಚ ಸುದೀಪ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.
ಇದೀಗ ಇವರು ತಮ್ಮ ಹುಡುಗರ ಮೂಲಕ ಗುಂಡ್ಲುಪೇಟೆಯ ಬುದ್ಧಿಮಾಂದ್ಯ ಶಾಲೆಯ ಮಕ್ಕಳಿಗೆ ನೆರವಾಗುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಹಿರಿಯ ಕಲಾವಿದರಿಗೆ ಕಿಟ್ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದ ಸುದೀಪ್, ಶಾಲಾ ಶಿಕ್ಷಕರಿಗೂ ನೆರವಾಗಿದ್ದರು. ಇದೀಗ ಸಂಕಷ್ಟದಲ್ಲಿರುವ ಮಕ್ಕಳಿಗೆ ತಮ್ಮ ಕೈಲಾದ ನೆರವು ನೀಡಿದ್ದಾರೆ.
ಮನರಂಜನೆ
ಸಿನಿಮಾಗೆ ಕಳಿಸೋದಕ್ಕೂ ಮುನ್ನವೇ ಮಗಳಿಗೆ ಕಿವಿ ಮಾತನ್ನು ಹೇಳಿದ್ದರಂತೆ ಶ್ರೀದೇವಿ
ಸದ್ಯ ಬಾಲಿವುಡ್ ನಟಿಯರ ಮಕ್ಕಳು ಇಂಡಸ್ಟ್ರಿಯಲ್ಲಿ ಮಿಂಚ್ತಾ ಇದ್ದಾರೆ. ಅದರಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕೂಡ ಒಬ್ಬರು. ಸದ್ಯ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಾ ಇದ್ದಾರೆ.
ಶ್ರೀದೇವಿಗೆ ಮಗಳು ಜಾಹ್ನವಿಯನ್ನ ಬಾಲಿವುಡ್ ಗೆ ಇಂಟ್ರುಡ್ಯೂಸ್ ಮಾಡ್ಬೇಕು ಅನ್ನೋ ಆಸೆ ಬಹಳ ಇತ್ತು. ಅದರಂತೆ ತಯಾರಿ ಕೂಡ ನಡೆಸಿದ್ರು. ಆದ್ರೆ ದುರದೃಷ್ಟವಶಾತ್ ಸಿನಿಮಾ ರಿಲೀಸ್ ಗೂ ಮುನ್ನವೇ ಸಾವನ್ನಪ್ಪಿದ್ದರು. ಆದ್ರೆ ಸಿನಿಮಾಗೆ ಕಳಿಸೋದಕ್ಕು ಮುನ್ನವೇ ಮಗಳಿಗೆ ಕಿವಿ ಮಾತನ್ನು ಹೇಳಿದ್ದರಂತೆ. ಆ ಮಾತನ್ನು ಇದೀಗ ಜಾಹ್ನವಿ ನೆನೆಪಿಸಿಕೊಂಡಿದ್ದಾರೆ.
ನನ್ನಮ್ಮ ನನಗೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ಯಾರ ಮೇಲೂ ಡಿಪೆಂಡ್ ಆಗ್ಬೇಡ. ನಿನ್ನ ಸ್ವಂತ ಟ್ಯಾಲೆಂಟ್ ನಿಂದ ಬೆಳೆಯಬೇಕು.
ಅದು ಕೇವಲ ಚಿತ್ರರಂಗವಷ್ಟೇ ಅಲ್ಲ. ಬೇರೆಲ್ಲೇ ಆದರೂ ಕೂಡ ಅವಲಂಬಿತಳಾಗಬೇಡ ಎಂದು ಸಲಹೆ ನೀಡಿದ್ದರಂತೆ.
ಮನರಂಜನೆ
ತೋಟದ ಕೆಲಸದಲ್ಲಿ ರವೀನಾ ಟಂಡನ್
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಮಂದಿ ನಟರು ಹಳ್ಳಿಗಳಿಗೆ, ತಮ್ಮ ಫಾರಂ ಹೌಸ್‌ಗಳಿಗೆ ತಮ್ಮ ವಾಸ್ತವ್ಯ ಬದಲಾಯಿಸಿಕೊಂಡು, ‘ಸಾಂಧರ್ಭಿಕ ಕೃಷಿ’ಯಲ್ಲಿ ತೊಡಗಿದ್ದಾರೆ.
ಆದರೆ ನಟಿಯರು ಹೀಗೆ ಕೃಷಿಗೆ ಇಳಿದಿರುವುದು ಕಡಿಮೆ. ಕನ್ನಡದಲ್ಲಿಯೂ ನಟಿಸಿರುವ ಬಾಲಿವುಡ್ ನಟಿ ರವೀನಾ ಟಂಡನ್ ಈ ಲಾಕ್‌ಡೌನ್ ಅವಧಿಯಲ್ಲಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಟಿ ರವೀನಾ ಟಂಡನ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವಿಡಿಯೋದಲ್ಲಿ ರವೀನಾ ಸಲಿಕೆ ಹಿಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಡಿಯೋ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ರವೀನಾ ಟಂಡನ್, ‘ತೋಟದಲ್ಲಿ ಕೆಲಸಗಾರರು ಉಳಿಸಿ ಹೋಗಿದ್ದ ಪ್ಲಾಸ್ಟಿಕ್ ಅನ್ನು ಹೆಕ್ಕಿ ತೆಗೆಯುವ ಕಾರ್ಯ ಮಾಡಿದೆ. ನನ್ನ ತೋಟದಲ್ಲಿ ಮಾತ್ರವಲ್ಲದೆ ಅಕ್ಕ-ಪಕ್ಕದ ಜಮೀನಿನಲ್ಲಿಯೂ ಇದ್ದ ಪ್ಲಾಸ್ಟಿಕ್ ಅನ್ನು ಆಯ್ದು ಸ್ವಚ್ಛತೆ ಕಾರ್ಯ ಮಾಡಿದೆವು.
ಈ ವೀಕೆಂಡ್ ಹೀಗೆ ಉತ್ತಮ ಕಾರ್ಯದೊಂದಿಗೆ ಸಮಾಪ್ತಿಯಾಯಿತು’ ಎಂದಿದ್ದಾರೆ ರವೀನಾ ಟಂಡನ್.
-
Politics2 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics2 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
ಸುದ್ದಿ4 weeks ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ
-
ಸುದ್ದಿ4 weeks ago
ನರೇಗಾ ಯೋಜನೆಯಲ್ಲಿ ಕಾಮಗಾರಿಗಳಿಗೆ ಯಂತ್ರಗಳ ಬಳಕೆ