Connect with us
Ad Widget

ಸುದ್ದಿ

ಕರ್ನಾಟಕದ ಕಲಬುರಗಿ ಸೇರಿ‌ ದೇಶದ ಎಂಟು ಕಡೆಗಳಲ್ಲಿ ವಿಮಾನ ತರಬೇತಿ ಅಕಾಡೆಮಿ ಸ್ಥಾಪನೆ

Published

on

ನವದೆಹಲಿ : ಕರ್ನಾಟಕದ ಕಲಬುರಗಿ ಸೇರಿ‌ ದೇಶದ ಎಂಟು ಕಡೆಗಳಲ್ಲಿ ವಿಮಾನ ತರಬೇತಿ ಅಕಾಡೆಮಿ ಸ್ಥಾಪನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅನುಮತಿ ನೀಡಿದೆ.

ಬೆಳಗಾವಿ ಕಲಬುರ್ಗಿ ಅಲ್ಲದೆ ಜಲಗಾವ್, ಲಿಲಾಬರಿ, ಕಜುರಾವೋ ,ಸೇರಿದಂತೆ ದೇಶದ ಎಂಟು ಕಡೆಗಳಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಅನುಮಾನ ತರಬೇತಿ ಅಕಾಡೆಮಿ ಸ್ಥಾಪನೆ ನೀಡಲು‌ ಸಮ್ಮತಿ ನೀಡಿದೆ.

ವಿದೇಶಗಳಲ್ಲಿರುವ ವಿಮಾನ ತರಬೇತಿ ಸಂಸ್ಥೆಗಳ ಮಾದರಿಯಲ್ಲೇ ಭಾರತದಲ್ಲಿ ಅತ್ಯುತ್ತಮ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ವಿಮಾನ ತರಬೇತಿ ಅಕಾಡೆಮಿಗಳಲ್ಲಿ ನಾಗರಿಕ ವಾಣಿಜ್ಯ ಚಟುವಟಿಕೆಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ‌.

ಆತ್ಮನಿರ್ಬರ ಭಾರತ ಯೊಜನೆಯಡಿ ದೇಶದ ಎಂಟು ಕಡೆ ನಿಮಾನ ತರಬೇತಿ ಅಕಾಡೆಮಿ ಸ್ಥಾಪನೆ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಿದೆ ಮುಂದಿನ ದಿನಗಳಲ್ಲಿ ವಾಯುಯಾನ ಕ್ಷೇತ್ರದಲ್ಲಿ ಮತ್ತಷ್ಟು ಜನರನ್ನು ತರಬೇತಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

Politics

ಕೂಲಿ ಕಾರ್ಮಿಕರಿಗೆ ಲಸಿಕೆಯನ್ನು ನೀಡಬೇಕು ಮತ್ತು ಮೊದಲ ಆದ್ಯತೆ ನೀಡಬೇಕು : ಬಿವಿಎಸ್ ಮನವಿ

Published

on

ರಾಮನಗರ : ಇಂದು ಭಾರತೀಯ ವಿದ್ಯಾರ್ಥಿ ಸಂಘ(BVS)ರಾಮನಗರ ಜಿಲ್ಲೆ ವತಿಯಿಂದ ರಾಮನಗರದ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ Covid 19 ಲಸಿಕೆಯನ್ನು ನೀಡಬೇಕೆಂದು ಮತ್ತು ಇವರಿಗೆ ಮೊದಲ ಆದ್ಯತೆ ನೀಡಬೇಕೆಂದು. ಮಾನ್ಯ (ADC)ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ. ವೆಂಕಟೇಶ್.ಎಸ್ ಜಿಲ್ಲಾದ್ಯಕ್ಷರು . ಜಿಲ್ಲಾ ದಲಿತ ಸಂಘಟನೆಯ ಅದ್ಯಕ್ಷರಾದ ಶಿವಕುಮಾರಸ್ವಾಮಿ ರವರು ಮತ್ತು BVS ನ ಪೊಷಕರಾದ ಹರೀಶ್ ರವರು ಉಪಸ್ಥಿತಿತರಿದ್ದರು.

Continue Reading

ಸುದ್ದಿ

ಬುದ್ದಿನ್ನಿ.ಎಸ್ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು : ಮನವಿ ಪತ್ರ ಸಲ್ಲಿಕೆ

Published

on

ಬುದ್ದಿನ್ನಿ.ಎಸ್ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಬುದ್ದಿನ್ನಿ ಗ್ರಾಮಸ್ಥರಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಕೆ

ಮಸ್ಕಿ :- ಮಸ್ಕಿ ಕ್ಷೇತ್ರದ ನೂತನ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಬುದ್ದಿನ್ನಿ.ಎಸ್ ಗ್ರಾಮಕ್ಕೆ ಭೇಟಿ ನೀಡಿ ಪ್ರೌಢಶಾಲೆಯ ಕಟ್ಟಡ ವೀಕ್ಷಿಸಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ದೂರವಾಣಿಯ ಮುಖಾಂತರ ಮಾತನಾಡಿದರು.

ನಂತರ ಪ್ರೌಢಶಾಲೆಯ ಮಾಹಿತಿಯನ್ನು ಗ್ರಾಮಸ್ಥರಿಂದ ಪಡೆದುಕೊಂಡು ಬುದ್ದಿನ್ನಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ ಆದರೆ ಪ್ರೌಢಶಾಲೆ ಇಲ್ಲದೆ ಇರುವುದರಿಂದ ಪ್ರೌಢಶಾಲೆಯಲ್ಲಿ ಓದುವಂಥ ವಿದ್ಯಾರ್ಥಿಗಳು ನೂತನ ಕಟ್ಟಡ ಇಲ್ಲದೆ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರೌಢಶಾಲೆ ಅತಿ ಅವಶ್ಯಕವಾಗಿರುವುದರಿಂದ ಬುದ್ದಿನ್ನಿ.ಎಸ್ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಿ ಮಾಡುವಂತೆ ಮನವಿ ಪತ್ರವನ್ನು ಶಾಸಕ ಬಸನಗೌಡ ತುರುವಿಹಾಳ ಅವರಿಗೆ ಶಾಲಾ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮನವಿ ಪತ್ರವನ್ನು ಬುಧವಾರ ನೀಡಿದರು. ನಂತರ ಶಾಸಕರು ಶಾಲಾ ಮಕ್ಕಳಿಗೆ ಪೂರೈಕೆ ಯಾಗಿರುವ ಪಡಿತರ ವಿತರಣೆಗೆ ಚಾಲನೆ ನೀಡಿದರು.

ನೂತನ ಶಾಸಕರು ಬುದ್ದಿನ್ನಿ ಎಸ್ ಗ್ರಾಮಕ್ಕೆ ಬುಧವಾರ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ಶಾಲಾ ಸಿಬ್ಬಂದಿ ವರ್ಗದವರಿಂದ ಆರ್. ಬಸನಗೌಡ ತುರುವಿಹಾಳರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ. ಎಂ.ಸಿ ಅಧ್ಯಕ್ಷರಾದ ನಾಗರೆಡ್ಡಪ್ಪ ದೇವರಮನಿ , ಉಪಾಧ್ಯಕ್ಷರಾದ ಹನುಮಂತ ಬುದ್ದಿನ್ನಿ , ಸದಸ್ಯರಾದ ಮೌನೇಶ್ ದೇವರಮನಿ , ರಮೇಶ್ ಭಜಂತ್ರಿ , ಹಾಗೂ ಶಾಲೆಯ ಮುಖ್ಯಗುರುಗಳಾದ ದುರುಗಣ್ಣ, ಹಿರಿಯ ಶಿಕ್ಷಕ ಕಳಕಪ್ಪ , ಸಹಶಿಕ್ಷಕ ಆದೇಶ , ಮಲ್ಲನಗೌಡಷ, ಶರಣಪ್ಪ ದೇವರಮನೆ , ರೆಡ್ಡಪ್ಪ ಹಾಗೂ ಇತರರು ಭಾಗಿಯಾಗಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಸುದ್ದಿ

ಹಸಿದವರಿಗೆ ಅನ್ನದಾನಿಯಾಗಿ ಮನ ಮಿಡಿದ ಮಸ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷ : ಹನುಮೇಶ ಬಾಗೋಡಿ

Published

on

ಮಸ್ಕಿ :- ನಗರದಲ್ಲಿ ಯೂತ್ ಕಾಂಗ್ರೆಸ್ ಹಸಿದವರಿಗೆ ಅನ್ನದಾನಿಯಾಗಿ ಮನಮೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ ಹಾಗೂ ಮುಖಂಡರಿಂದ ಹಸಿದವರಿಗೆ ಆಹಾರ ಕಿಟ್ಟು ವಿತರಿಸಿದರು.

ಯುತ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪರಿಶ‍್ರಮದಿಂದ ಗಳಿಸಿದ ಹಣದಿಂದ ಬಡವರಿಗೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ ನಗರ ವ್ಯಾಪ್ತಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸಲಾಯಿತು.

ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ನೂತನ ಶಾಸಕರಾದ ಆರ್.ಬಸನಗೌಡ ತುರುವಿಹಾಳ ಸೂಚನೆ ನೀಡಿದ್ದು , ಅದರಂತೆ ಹೆಚ್ಚಿನ ಜನರಿಗೆ ನಾವು ನೆರವಾಗುತ್ತಿದ್ದೇವೆ ಇದು ಸರ್ಕಾರದ ದುಡ್ಡಲ್ಲ , ಇದು ಕಾರ್ಯಕರ್ತರ ಹಣ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಸ್ಪಂದಿಸುತ್ತಿದ್ದು.

ಜನಪರ ಕಾರ್ಯಕ್ರಮಗಳು ಪಕ್ಷಕ್ಕೆ ಸದಾ ಶ್ರೀ ರಕ್ಷಣೆ ಆಗಲಿವೆ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಜನರ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದ್ದು.

ಪಕ್ಷಾತೀತವಾಗಿ ಎಲ್ಲರೂ ಲಸಿಕೆ ಪಡೆಯಲು ಮುಂದಾಗಬೇಕು ಸೋಂಕಿನಿಂದ ಎಲ್ಲರೂ ರಕ್ಷಣೆ ಪಡೆಯಬೇಕು ಎಂದು ಹನುಮೇಶ ಬಾಗೋಡಿ ಯೂಥ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ವಂತ ಹಣದಿಂದ ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ವಾರ್ಡ್‌ಗಳಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವ ಕೊರೊನಾ ಸೇನಾನಿಗಳಿಗೆ , ಕೂಲಿ ಕಾರ್ಮಿಕರು,ಪೌರಕಾರ್ಮಿಕರು, ನಿರಾಶ್ರಿತರಿಗೆ , ಲಾರಿ ವಾಹನ ಚಾಲಕರಿಗೆ , ಸೇರಿ 100 ಆಹಾರ ಕಿಟ್​ಗಳ ವಿತರಣೆ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಊರುಗಳಿಗೆ ಹೋಗಲು ವಾಹನ ವಿಲ್ಲದೆ ಪರದಾಡುತ್ತಿರುವ ಜನರನ್ನು ಕಂಡು ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ್ ಬಾಗೋಡಿ ಹಾಗೂ ಕಾರ್ಯಕರ್ತರು ಸೇರಿ ಲಾರಿ ಹಾಗೂ ಪಬ್ಲಿಕ್ ವಾಹನಗಳಿಗೆ ತಡೆಹಿಡಿದು ಜನಗಳನ್ನು ಅವರ ಊರುಗಳತ್ತ ಸಾಗಿಸುವ ಕೆಲಸವನ್ನು ಮಾಡಿದರು ಈ ಕೆಲಸವನ್ನು ನೋಡಿ ಜನಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ , ಅಂಬರೀಶ್ ಕಾಸರೆಡ್ಡಿ ತಿಡಿಗೋಳ , ಹುಸೇನಬಾಷಾ ಬಳಗನೂರು , ಅಲ್ಲಾಂ ಭಾಷಾ ಗೋನಾಳ , ಮಲ್ಲನಗೌಡ ಗೋನಾಳ , ಮಂಜುನಾಥ ಗುಡದೂರು , ಹುಲಿಗೇಶ ಮಸ್ಕಿ , ಅಂಬರೀಶ್ ನಾಯಕ್ ಅತ್ತಿಗುಡ್ಡ , ಮೈಬೂಬ್ ಮಸ್ಕಿ , ಅಮರೇಗೌಡ ಕಡಬೂರ್, ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ಪತ್ರಿಕಾ ಮಾಧ್ಯಮದವರು ಪಾಲ್ಗೊಂಡಿದ್ದರು.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್