ಸುದ್ದಿ
ನರೇಗಾ ಯೋಜನೆಯಲ್ಲಿ ಕಾಮಗಾರಿಗಳಿಗೆ ಯಂತ್ರಗಳ ಬಳಕೆ
ವಿಜಯಪುರ : ಜಿಲ್ಲೆಯ ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆ.
ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆ ಮಾಡುತ್ತಿದ್ದು ಸಾರ್ವಜನಿಕರಿಗೆ ಕೆಲಸ ನೀಡುತ್ತಿಲ್ಲ.
ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಬಯಕೆ ಮಾಡಿಕೊಂಡು ಕಾಮಗಾರಿಗಳನ್ನು ನಡೆಸಬೇಕು ಆದರೆ ಈಗ ಚಾಲ್ತಿಯಲ್ಲಿರುವ ಕಾಮಗಾರಿಗಳಲ್ಲಿ ಜನರಿಗೆ ಕೆಲಸ ಕೊಡದೆ ಯಂತ್ರಗಳ ಮುಖಾಂತರ ಕೆಲಸ ನಡೆಸುತ್ತಿರುವುದು ಕಂಡು ಬಂದಿದ್ದು ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾನದಂಡಗಳನ್ನು ಪಾಲಿಸುತ್ತಿಲ್ಲ.
ನರೇಗಾ ಯೋಜನೆಯ ಅಡಿಯಲ್ಲಿ ಮಾಡಿರುವ ಕಾಮಗಾರಿಗಳು, ಕ್ರಿಯಾ ಯೋಜನೆಯನ್ನು ಯಾರ ಗಮನಕ್ಕೂ ತರದೆ ಸಂಪೂರ್ಣವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ರಿಯಾ ಯೋಜನೆ ಜಾರಿ.
ಒಂದು ಕಾಮಗಾರಿಯನ್ನೂ ಮಾಡಲು ಸರ್ಕಾರವು ಅನುಮೋದನೆ ನೀಡಬೇಕಾದರೆ ಮೊದಲು ಗ್ರಾಮಸಭೆ, ಕ್ರಿಯಾ ಯೋಜನೆ, ಸದಸ್ಯರ ಒಪ್ಪಿಗೆ, ಹೀಗೆ ಇನ್ನಿತರ ಕಾನೂನುಗಳನ್ನು ಪಾಲಿಸಬೇಕು.
ತುಂಬಗಿ ಗ್ರಾಮ ಪಂಚಾಯತಿಯಲ್ಲಿ ಯಾವುದೆ ಗ್ರಾಮಸಭೆ ಕರೆಯದೆ ಹಳೆಯ 2019ರ ದಾಖಲೆಗಳನ್ನು ನೀಡಿ ಕ್ರಿಯಾ ಯೋಜನೆ ತಯಾರಿಸಿದ ಪಿ.ಡಿ.ಒ.
ಇದನ್ನು ಕೇಳಲು ಹೋದ ಗ್ರಾಮ ಪಂಚಾಯತ್ ಸದಸ್ಯನಿಗೆ ಇಲ್ಲ ಸರಿಯಾದ ಸ್ಪಂದನೆ.
ಗ್ರಾಮ ಪಂಚಾಯತ್ ಸದಸ್ಯನಿಗೆ ನಿನಗೆ ಬೇಕಾದ ದಾಖಲಾತಿಗಳನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಳ್ಳಿ ಎಂದು ಹೇಳುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ.
ಈ ಕಾಮಗಾರಿಗಳು ಸಂಪೂರ್ಣ ಕಾನೂನು ಬಾಹಿರ ಆಗಿರುವುದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರನ್ನು ನೀಡಿರುವುದಾಗಿ ತಿಳಿಸಿದ ಪಂಚಾಯತ್ ಸದಸ್ಯ.
ನರೇಗಾ ಯೋಜನೆಯಲ್ಲಿ ಈಗ ಚಾಲ್ತಿಯಲ್ಲಿರುವ ಕಾಮಗಾರಿಗಳು ಕಾನೂನು ಬಾಹಿರವಾಗಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಕೂಲಿ ಮತ್ತು ಕಾಮಗಾರಿಗಳ ಮಟರಿಯಲ್ ಬಿಲ್ ಸಂದಾಯ ಮಾಡದೆ ಪೆಂಡಿಂಗ್ ಇಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ಎಸ್.ಬಿ.ಕೊಳ್ಳಿ. ಅವರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಪಂಚಾಯತ್ ಸದಸ್ಯನ ದೂರಿಗೆ 2ನೇ ಬಾರಿ ಸ್ಥಳ ಪರಿಶೀಲನೆಗೆ ಆಗಮಿಸಿದ ತಾಳಿಕೋಟಿ ತಾಲೂಕಾ EO ಅಧಿಕಾರಿ ಲೋಕೇಶ್.
ಸದಸ್ಯರ ದೂರಿಗೆ ಸಂಬಂಧಿಸಿದಂತೆ ಕೆಲವು ದಾಖಲಾತಿಗಳನ್ನು ಈಗಾಗಲೇ ನೀಡಿದ್ದಾರೆ ಇನ್ನೂ ಕೆಲವು ದಾಖಲಾತಿಗಳನ್ನು ಇವತ್ತು ನೀಡುತ್ತಾರೆ ಏನು ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು
ವರದಿ : ದೇವು ಕೂಚಬಾಳ
ಸುದ್ದಿ
ಪಡಿತರ ಅಕ್ಕಿಯ ವಿತರಣೆ : 5 ಕೆಜಿ ಯಿಂದ 2 ಕೆಜಿಗೆ ಇಳಿಕೆ
ಪಡಿತರ ಅಕ್ಕಿಯ ವಿತರಣೆಯನ್ನು 5 ಕೆಜಿ ಯಿಂದ 2 ಕೆಜಿಗೆ ಇಳಿಕೆ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರ
ಶಿಡ್ಲಘಟ್ಟ :ದೇಶಾದ್ಯಂತ ಕೊರೊನಾ ಆವರಿಸಿ ಜನ ಸಾವು ಬದುಕಿನ ನಡುವೆ ಸೆಣಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಹಾರ ಪಡಿತರ ಅಕ್ಕಿಯ ವಿತರಣೆಯನ್ನು 5 ಕೆಜಿ ಯಿಂದ 2 ಕೆಜಿಗೆ ಇಳಿಸುವ ಮೂಲಕ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಎನ್ ಎಸ್ ಯು ಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಪತ್ರ ಚಳುವಳಿ ಕರೆಯ ಮೇರೆಗೆ ತಾಲ್ಲೂಕಿನ ಕುಂದಲಗುರ್ಕಿಯ ಯುವಕರೊಂದಿಗೆ ರಾಜ್ಯಾದ್ಯಂತ ಪಡಿತರ ಅಕ್ಕಿಯನ್ನು 2 ಕೆಜಿ ಯಿಂದ 10 ಕೆಜಿಗೆ ಏರಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು
ರಾಜ್ಯ ಸರ್ಕಾರದ ಅವೈಜ್ಞಾನಿಕ ತೀರ್ಮಾನಗಳಿಂದ ಜನ ಕೊರೊನಾದಿಂದ ಸಾಯುವ ಸ್ಥಿತಿ ಬಂದೊದಗಿದೆ. ಸಾಲದ್ದಕ್ಕೆ ಲಾಕ್ ಡೌನ್, ಕರ್ಫ್ಯೂ ಹೇರಿರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸಗಳಿಲ್ಲದೇ ಒದ್ದಾಡುತ್ತಿರುವ ಇಂತಹ ಸಂದರ್ಭದಲ್ಲಿ ೫ ಕೆಜಿ ನೀಡುತ್ತಿದ್ದ ಅಕ್ಕಿಯನ್ನು ೨ ಕೆಜಿಗೆ ಇಳಿಸಿ ಬಡವರನ್ನು ಹಸಿವಿನಿಂದ ಸಾಯುವ ಸ್ಥಿತಿಗೆ ತಂದಿದ್ದಾರೆ. ಕೂಡಲೇ ಕುಟುಂಬದ ಪ್ರತಿ ವ್ಯಕ್ತಿಗೂ ತಲಾ ಹತ್ತು ಕೆಜಿ ಯಂತೆ ಅಕ್ಕಿಯನ್ನು ವಿತರಿಸಬೇಕು ಎಂದು ಆಗ್ರಹಿಸಿ ಬರೆದ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಅಂಚೆ ಮೂಲಕ ರವಾನಿಸಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಚರಣ್, ಯುವ ಮುಖಂಡರಾದ ಭಾಸ್ಕರತೇಜಸ್, ಕೆ.ಎಂ.ಆನಂದ್. ಮುರಳಿ. ಅಶೋಕ. ಹರೀಶ್ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯ ಅಂಚೇ ಕಚೇರಿಯ ಮುಂಭಾಗದಲ್ಲಿ ಎನ್ ಎಸ್ ಯು ಐ ನೇತೃತ್ವದ ಯುವಕರ ತಂಡ ಕುಟುಂಬದ ಪ್ರತಿ ವ್ಯಕ್ತಿಗೂ ತಲಾ ಹತ್ತು ಕೆಜಿ ಯಂತೆ ಅಕ್ಕಿಯನ್ನು ವಿತರಿಸಬೇಕು ಎಂದು ಆಗ್ರಹಿಸಿ ಬರೆದ ಪತ್ರಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಂಚೆ ಮೂಲಕ ರವಾನಿಸಿದರು.
ವರದಿ: ಕೆ.ಮಂಜುನಾಥ್ ಶಿಡ್ಲಘಟ್ಟ
ಸುದ್ದಿ
ಉಚಿತ ಮೊಬೈಲ್ ಆಕ್ಸಿಜನ್ ವಾಹನ ಉದ್ಘಾಟನೆ
ಬೆಂಗಳೂರು : ನಗರದ ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದ ಮುಂಭಾಗ ಇಂದು ಜೈ ಶ್ರೀ ಗುರುದೇವ್
ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದ ಮುಂಭಾಗ ಇಂದು ಉಚಿತ ಮೊಬೈಲ್ ಆಕ್ಸಿಜನ್ ವಾಹನವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ಉದ್ಘಾಟಿಸಿದರು ಇದೇ ಸಂದರ್ಭದಲ್ಲಿ ಕೆಂಪೇಗೌಡ ಸಮುದಾಯದ ಭವನದಲ್ಲಿ ಸಿದ್ದ ಪಡಿಸಿರುವ 90 ಹಾಸಿಗೆಯುಳ್ಳ ಕೋವಿಡ್ 19 ಸೆಂಟರ್ ರನ್ನು ವೀಕ್ಷಿಸಿದರು.
ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್ ಹರೀಶ್ರವರು, ಬಿಬಿಎಂಪಿ ಮಾಜಿ ಸದಸ್ಯ ಕೆ ವಿ ರಾಜೇಂದ್ರ ಕುಮಾರ್ ರವರು, ಬಿಬಿಎಂಪಿ ವಲಯ ಆಯುಕ್ತರಾದ ಬಸವರಾಜು,ವಲಯ ಸಂಯೋಜಕ ಉಜ್ವಲ್ ಘೋಷ್ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ವಲಯ ಆರೋಗ್ಯ ಅಧಿಕಾರಿ ಗಳಾದ ಡಾ, ಮನೋರಂಜನ್ ಹೆಗ್ಡೆ ಸೇರಿದಂತೆ ಬಿಬಿಎಂಪಿಯ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.ವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕೆಂಪೇಗೌಡ ಸಮುದಾಯದ ಭವನದಲ್ಲಿ ಸಿದ್ದ ಪಡಿಸಿರುವ 90 ಹಾಸಿಗೆಯುಳ್ಳ ಕೋವಿಡ್ 19 ಸೆಂಟರ್ ರನ್ನು ವೀಕ್ಷಿಸಿದರು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಬಿಬಿಎಂಪಿ ಮಾಜಿ ಉಪ ಮಹಾಪೌರ ಎಸ್ ಹರೀಶ್,ರವರು,ಬಿಬಿಎಂಪಿ ಮಾಜಿ ಸದಸ್ಯ ಕೆ ವಿ ರಾಜೇಂದ್ರ ಕುಮಾರ್ ರವರು, ಬಿಬಿಎಂಪಿ ವಲಯ ಆಯುಕ್ತರಾದ ಬಸವರಾಜು,ವಲಯ ಸಂಯೋಜಕ ಉಜ್ವಲ್ ಘೋಷ್ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ವಲಯ ಆರೋಗ್ಯ ಅಧಿಕಾರಿ ಗಳಾದ ಡಾ, ಮನೋರಂಜನ್ ಹೆಗ್ಡೆ ಸೇರಿದಂತೆ ಬಿಬಿಎಂಪಿಯ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸುದ್ದಿ
ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರ ವಶಕ್ಕೆ
ಬೆಂಗಳೂರು: ಬೆಂಗಳೂರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸೋಂಕಿತರ ಹೆಸರಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಂದ ಹಣ ಪಡೆದು ಬೆಡ್ ಗಳನ್ನು ಕೊಡುತ್ತಿದ್ದ ತಂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಾಲದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಗಮನಸೆಳೆದಿದ್ದರು. ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
-
Politics3 weeks ago
ಇಂಡಿ ತಾಲೂಕಿನ ಗಾಣಿಗ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಣಿ ಸಭೆ
-
Politics2 days ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ3 weeks ago
ಬಾಬಾ ಸಾಹೇಬ್ ಅಂಬೇಡ್ಕರವರ 130ನೇ ಜನ್ಮ ದಿನಾಚರಣೆ
-
ಸುದ್ದಿ4 weeks ago
ಕುಬೇರರಿಗೆ ಎಟುಕುವಷ್ಟು ಸುಲಭವಾಗಿ ಕುರಿಗಾಹಿಗಳಿಗೆ ಸಿಗುತ್ತದೆಯೇ ಈ ಸರ್ಕಾರದ ಸೌಲಭ್ಯ?