ಸುದ್ದಿ
ಬುದ್ದಿನ್ನಿ.ಎಸ್ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು : ಮನವಿ ಪತ್ರ ಸಲ್ಲಿಕೆ
ಬುದ್ದಿನ್ನಿ.ಎಸ್ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವಂತೆ ಬುದ್ದಿನ್ನಿ ಗ್ರಾಮಸ್ಥರಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಕೆ
ಮಸ್ಕಿ :- ಮಸ್ಕಿ ಕ್ಷೇತ್ರದ ನೂತನ ಶಾಸಕ ಆರ್. ಬಸನಗೌಡ ತುರುವಿಹಾಳ ಅವರು ಬುದ್ದಿನ್ನಿ.ಎಸ್ ಗ್ರಾಮಕ್ಕೆ ಭೇಟಿ ನೀಡಿ ಪ್ರೌಢಶಾಲೆಯ ಕಟ್ಟಡ ವೀಕ್ಷಿಸಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ದೂರವಾಣಿಯ ಮುಖಾಂತರ ಮಾತನಾಡಿದರು.
ನಂತರ ಪ್ರೌಢಶಾಲೆಯ ಮಾಹಿತಿಯನ್ನು ಗ್ರಾಮಸ್ಥರಿಂದ ಪಡೆದುಕೊಂಡು ಬುದ್ದಿನ್ನಿ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ ಆದರೆ ಪ್ರೌಢಶಾಲೆ ಇಲ್ಲದೆ ಇರುವುದರಿಂದ ಪ್ರೌಢಶಾಲೆಯಲ್ಲಿ ಓದುವಂಥ ವಿದ್ಯಾರ್ಥಿಗಳು ನೂತನ ಕಟ್ಟಡ ಇಲ್ಲದೆ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರೌಢಶಾಲೆ ಅತಿ ಅವಶ್ಯಕವಾಗಿರುವುದರಿಂದ ಬುದ್ದಿನ್ನಿ.ಎಸ್ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಿ ಮಾಡುವಂತೆ ಮನವಿ ಪತ್ರವನ್ನು ಶಾಸಕ ಬಸನಗೌಡ ತುರುವಿಹಾಳ ಅವರಿಗೆ ಶಾಲಾ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮನವಿ ಪತ್ರವನ್ನು ಬುಧವಾರ ನೀಡಿದರು. ನಂತರ ಶಾಸಕರು ಶಾಲಾ ಮಕ್ಕಳಿಗೆ ಪೂರೈಕೆ ಯಾಗಿರುವ ಪಡಿತರ ವಿತರಣೆಗೆ ಚಾಲನೆ ನೀಡಿದರು.
ನೂತನ ಶಾಸಕರು ಬುದ್ದಿನ್ನಿ ಎಸ್ ಗ್ರಾಮಕ್ಕೆ ಬುಧವಾರ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ಶಾಲಾ ಸಿಬ್ಬಂದಿ ವರ್ಗದವರಿಂದ ಆರ್. ಬಸನಗೌಡ ತುರುವಿಹಾಳರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ. ಎಂ.ಸಿ ಅಧ್ಯಕ್ಷರಾದ ನಾಗರೆಡ್ಡಪ್ಪ ದೇವರಮನಿ , ಉಪಾಧ್ಯಕ್ಷರಾದ ಹನುಮಂತ ಬುದ್ದಿನ್ನಿ , ಸದಸ್ಯರಾದ ಮೌನೇಶ್ ದೇವರಮನಿ , ರಮೇಶ್ ಭಜಂತ್ರಿ , ಹಾಗೂ ಶಾಲೆಯ ಮುಖ್ಯಗುರುಗಳಾದ ದುರುಗಣ್ಣ, ಹಿರಿಯ ಶಿಕ್ಷಕ ಕಳಕಪ್ಪ , ಸಹಶಿಕ್ಷಕ ಆದೇಶ , ಮಲ್ಲನಗೌಡಷ, ಶರಣಪ್ಪ ದೇವರಮನೆ , ರೆಡ್ಡಪ್ಪ ಹಾಗೂ ಇತರರು ಭಾಗಿಯಾಗಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ಹಸಿದವರಿಗೆ ಅನ್ನದಾನಿಯಾಗಿ ಮನ ಮಿಡಿದ ಮಸ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷ : ಹನುಮೇಶ ಬಾಗೋಡಿ
ಮಸ್ಕಿ :- ನಗರದಲ್ಲಿ ಯೂತ್ ಕಾಂಗ್ರೆಸ್ ಹಸಿದವರಿಗೆ ಅನ್ನದಾನಿಯಾಗಿ ಮನಮೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ ಹಾಗೂ ಮುಖಂಡರಿಂದ ಹಸಿದವರಿಗೆ ಆಹಾರ ಕಿಟ್ಟು ವಿತರಿಸಿದರು.
ಯುತ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪರಿಶ‍್ರಮದಿಂದ ಗಳಿಸಿದ ಹಣದಿಂದ ಬಡವರಿಗೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ ನಗರ ವ್ಯಾಪ್ತಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸಲಾಯಿತು.
ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ನೂತನ ಶಾಸಕರಾದ ಆರ್.ಬಸನಗೌಡ ತುರುವಿಹಾಳ ಸೂಚನೆ ನೀಡಿದ್ದು , ಅದರಂತೆ ಹೆಚ್ಚಿನ ಜನರಿಗೆ ನಾವು ನೆರವಾಗುತ್ತಿದ್ದೇವೆ ಇದು ಸರ್ಕಾರದ ದುಡ್ಡಲ್ಲ , ಇದು ಕಾರ್ಯಕರ್ತರ ಹಣ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಸ್ಪಂದಿಸುತ್ತಿದ್ದು.
ಜನಪರ ಕಾರ್ಯಕ್ರಮಗಳು ಪಕ್ಷಕ್ಕೆ ಸದಾ ಶ್ರೀ ರಕ್ಷಣೆ ಆಗಲಿವೆ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಜನರ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದ್ದು.
ಪಕ್ಷಾತೀತವಾಗಿ ಎಲ್ಲರೂ ಲಸಿಕೆ ಪಡೆಯಲು ಮುಂದಾಗಬೇಕು ಸೋಂಕಿನಿಂದ ಎಲ್ಲರೂ ರಕ್ಷಣೆ ಪಡೆಯಬೇಕು ಎಂದು ಹನುಮೇಶ ಬಾಗೋಡಿ ಯೂಥ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ವಂತ ಹಣದಿಂದ ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ವಾರ್ಡ್‌ಗಳಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವ ಕೊರೊನಾ ಸೇನಾನಿಗಳಿಗೆ , ಕೂಲಿ ಕಾರ್ಮಿಕರು,ಪೌರಕಾರ್ಮಿಕರು, ನಿರಾಶ್ರಿತರಿಗೆ , ಲಾರಿ ವಾಹನ ಚಾಲಕರಿಗೆ , ಸೇರಿ 100 ಆಹಾರ ಕಿಟ್ಗಳ ವಿತರಣೆ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಊರುಗಳಿಗೆ ಹೋಗಲು ವಾಹನ ವಿಲ್ಲದೆ ಪರದಾಡುತ್ತಿರುವ ಜನರನ್ನು ಕಂಡು ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ್ ಬಾಗೋಡಿ ಹಾಗೂ ಕಾರ್ಯಕರ್ತರು ಸೇರಿ ಲಾರಿ ಹಾಗೂ ಪಬ್ಲಿಕ್ ವಾಹನಗಳಿಗೆ ತಡೆಹಿಡಿದು ಜನಗಳನ್ನು ಅವರ ಊರುಗಳತ್ತ ಸಾಗಿಸುವ ಕೆಲಸವನ್ನು ಮಾಡಿದರು ಈ ಕೆಲಸವನ್ನು ನೋಡಿ ಜನಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ , ಅಂಬರೀಶ್ ಕಾಸರೆಡ್ಡಿ ತಿಡಿಗೋಳ , ಹುಸೇನಬಾಷಾ ಬಳಗನೂರು , ಅಲ್ಲಾಂ ಭಾಷಾ ಗೋನಾಳ , ಮಲ್ಲನಗೌಡ ಗೋನಾಳ , ಮಂಜುನಾಥ ಗುಡದೂರು , ಹುಲಿಗೇಶ ಮಸ್ಕಿ , ಅಂಬರೀಶ್ ನಾಯಕ್ ಅತ್ತಿಗುಡ್ಡ , ಮೈಬೂಬ್ ಮಸ್ಕಿ , ಅಮರೇಗೌಡ ಕಡಬೂರ್, ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ಪತ್ರಿಕಾ ಮಾಧ್ಯಮದವರು ಪಾಲ್ಗೊಂಡಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
ಸುದ್ದಿ
ವೈದ್ಯರ ನಡೆ ಹಳ್ಳಿಯ ಕಡೆ : ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ದಾರ್
ಶಿಡ್ಲಘಟ್ಟ : ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.
ತಾಲ್ಲೂಕಿನ ಹಾಟ್‌ಸ್ಪಾಟ್ ಹಾಗೂ ಕೆಂಪು ವಲಯದಲ್ಲಿ ಹೊಸದಾಗಿ ಸೋಂಕಿನ ಪ್ರಕರಣಗಳು ಕಂಡುಬಂದ ತಕ್ಷಣ ಅಲ್ಲಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಸೇರಿದಂತೆ ಆರೋಗ್ಯ ಸಿಬ್ಬಂದಿ ತಂಡ ಭೇಟಿ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ದೃಢವಾದಲ್ಲಿ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಸಹ ಪರೀಕ್ಷೆ ಮಾಡಿಸಲಾಗುತ್ತದೆ. ತಕ್ಷಣದಿಂದಲೇ ಅವರಿಗೆ ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಿ ಚಿಕಿತ್ಸೆ ನೀಡಲು ಪ್ರಾರಂಭಿಸಲಾಗುತ್ತದೆ.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಸೋಂಕು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಹೊಸಪೇಟೆ ಮತ್ತು ಜಂಗಮಕೋಟೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಜನರ ಕೊರೊನಾ ಪರೀಕ್ಷೆ ಹಾಗೂ ಜಾಗ್ರತಿ ಕಾರ್ಯಕ್ರಮಕ್ಕೆ ಸಹ ಅವರು ಚಾಲನೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಈಗ ಸ್ವಲ್ಪ ಪ್ರಮಾಣದಲ್ಲಿ ಸೋಂಕು ಇಳಿಕೆ ಕಾಣುತ್ತಿದೆ. ಆದರೂ ಎಚ್ಚರಿಕೆಯಿಂದ ಇರುವುದು ಅಗತ್ಯ. ಯಾವುದೇ ಗ್ರಾಮದಲ್ಲಿ ಪರೀಕ್ಷೆ ಮಾಡಲು ಸಹ ನಮ್ಮ ತಂಡ ಸಿದ್ಧವಿದೆ. ಕೊರೊನಾ ಲಕ್ಷಣ ಕಂಡುಬಂದಲ್ಲಿ ಕೂಡಲೇ ತಪಾಸಣೆ ಮಾಡಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡ ಕೂಡಲೇ ಆ ಗ್ರಾಮದಲ್ಲಿ ಸ್ಯಾನಿಟೈಜ್ ಮಾಡುವ ಜೊತೆಗೆ ಮುಂಜಾಗ್ರತಾ ಕ್ರಮವಹಿಸಲಾಗುತ್ತದೆ. ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಅವರು ಪೊಲೀಸ್ ಎಸ್.ಪಿ ಅವರ ಆದೇಶದಂತೆ ಮೂರು ಓಮ್ನಿ ವಾಹನಗಳನ್ನು ಬಾಡಿಗೆಗೆ ಮಾತನಾಡಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸಲುವಾಗಿ ಹಳ್ಳಿಗಳಿಗೆ ವೈದ್ಯರು ಹೋಗಲು ಅನುಕೂಲವಾಗಲೆಂದು ವ್ಯವಸ್ಥೆ ಮಾಡಿದರು.
ಡಾ.ಸುಂದರ್ ರಾಜ್, ಆಸ್ಪತ್ರೆಯ ಸಿಬ್ಬಂದಿ ಲೋಕೇಶ್, ವಿಜಯಮ್ಮ, ದೇವರಾಜು, ನಂದಿನಿ, ಕೇರ್ತಿ, ಮಂಜುನಾಥ್, ನವೀನ್, ಸುನಿಲ್, ಮಂಗಳಾ, ಮುನಿರತ್ನಮ್ಮ, ಯಶೋದಾ, ಅನೀತಾ, ರಾಧಾ ಮುಂತಾದವರು ಹಾಜರಿದ್ದರು.
ಕೆ.ಮಂಜುನಾಥ್.ಶಿಡ್ಲಘಟ್ಟ
ಸಮಾಜ ಸೇವೆ
ಪದನಾಮ ಬದಲಾವಣೆಗೆ ಸಂತಸ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ಮಸ್ಕಿ :- ಆರೋಗ್ಯ ಇಲಾಖೆಯಲ್ಲಿ ಹಗಲು-ರಾತ್ರಿಯೆನ್ನದೆ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಹಾಯಕರು ಬಹುದಿನಗಳ ಬೇಡಿಕೆಯಾಗಿದ್ದ ಪದನಾಮ ಬದಲಾವಣೆ ಆದ ಪ್ರಯುಕ್ತ ಲಿಂಗಸೂರು ತಾಲೂಕಿನ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಳಗ್ಗೆ ಹಣ್ಣು ಹಾಲು ಬ್ರೆಡ್ಡು ಬಿಸ್ಕೆಟ್ ವಿತರಿಸಿದರು.
ನಂತರ ಮಾತನಾಡಿದ ಗದ್ಯಪ್ಪ ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿಗಳು ಬಹುದಿನದ ಬೇಡಿಕೆಯಾಗಿದ್ದ ಆರೋಗ್ಯ ಸಹಾಯಕರ ಪದನಾಮ ಸದ್ಯ ಬದಲಾಗಿದ್ದು ಈಗ ಆರೋಗ್ಯ ಸಹಾಯಕರ ಬದಲಿಗೆ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳೆಂದು ಸಂಭೋದನೆ ಮಾಡಬೇಕು ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರೋಗ್ಯ ಹಿರಿಯ ರಕ್ಷಣಾ ಅಧಿಕಾರಿಯಾದ ಗಡ್ಡಪ್ಪ ಅವರು ಹೇಳಿದರು ಆರೋಗ್ಯ ನಿರೀಕ್ಷಣ ಅಧಿಕಾರಿ ಪದನಾಮ ಬದಲಾದ ಪ್ರಯುಕ್ತ ಹಣ್ಣು ಹಂಪಲ ಬ್ರೆಡ್ಡು ಬಿಸ್ಕೆಟ್ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಅವರು ನಮ್ಮ ಸಂಘದ ಬಹುದಿನ ಬೇಡಿಕೆ, ಪದನಾಮ ಬದಲಾವಣೆ ಕುರಿತು ಮನವಿಯನ್ನು ಆರೋಗ್ಯ ಇಲಾಖೆ ಅಂಗೀಕರಿಸಿ ನಮ್ಮನ್ನು ಆರೋಗ್ಯ ಸಹಾಯಕರ ಬದಲು ಆರೋಗ್ಯ ನಿರೀಕ್ಷೆಗಳ ಅಧಿಕಾರಿಗಳೆಂದು ಮಾಡಿದ್ದಕ್ಕೆ ಆರೋಗ್ಯ ಸಚಿವ ಡಾಕ್ಟರ್ ಕೆ ಸುಧಾಕರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಇದನ್ನು ನಾವು ಸ್ವಾಗತಿಸುತ್ತೇವೆ. ಬಹುದಿನದ ಬೇಡಿಕೆ ಈಡೇರಿಸಿದಕ್ಕೆ ಇಂದು ನಮ್ಮ ಸಂಘದಿಂದ ಮಸ್ಕಿ ಪಟ್ಟಣದಲ್ಲಿ ಕಡುಬಡವರಿಗೆ ಹಣ್ಣು ಹಂಪಲ ವನ್ನು ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಿರಿಯ ರಕ್ಷಣಾ ಅಧಿಕಾರಿ ಬಸವರಾಜ್ ಮಾತನಾಡಿ ನಮ್ಮ ಆರೋಗ್ಯ ನಿರೀಕ್ಷಣಾಧಿಕಾರಿಗಳು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹಲವಾರು ಸಾಂಕ್ರಮಿಕ ಕಾಯಿಲೆಗಳ ನಿಯಂತ್ರಣದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ , ಈಗ ಕೋವಿಡ್-19 ಸಂದರ್ಭದಲ್ಲಿ ಪಾಸಿಟಿವ್ ರೋಗಿಗಳ ಸಂಪರ್ಕ ಅವರ ಆರೈಕೆ ಮಾಡುತ್ತಾ ಜೀವದ ಅಂಗನೂ ತೊರೆದು ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇವರಿಗೆಲ್ಲ ಕೋವಿಡ್ ಬತ್ತವನ್ನು ಸರ್ಕಾರದಿಂದ ಕೊಡಬೇಕು ಈ ವಿಷಯವಾಗಿ ಆರೋಗ್ಯ ಸಚಿವರಿಗೆ ಕೇಂದ್ರ ಸಚಿವರಿಗೆ ನಮ್ಮ ಸಂಘದಿಂದ ಮನವಿಯನ್ನು ಸಲ್ಲಿಸುತ್ತಿದ್ದೇವೆ ಈ ಬೇಡಿಕೆಯ ಸಹ ಶೀಘ್ರವಾಗಿ ಸರಕಾರ ಈಡೇರಿಸುವ ಭರವಸೆ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಸರ್ಕಾರಿ ನೌಕರರ ಸಂಘದ , ಪ್ರಾ, ಆ, ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಶ್ರೀ ಗದ್ಯಪ್ಪ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರು ಶ್ರೀ ಬಸವರಾಜ ಹಾಗೂ ಪ್ರಸನ್ನ, ಶಾಂತಕುಮಾರ್, ಕಿರಣ್, ಅಮರೇಶ್, ರಾಜ ರಾಮ್ ಸಿಂಗ್, ಉಪಸ್ಥಿತರಿದ್ದರು.
ವರದಿ : ದುರ್ಗೇಶ್ ಭೋವಿ ಮಸ್ಕಿ
-
Politics2 weeks ago
ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಎನ್. ಎಚ್.ಶಿವಶಂಕರ್ ರೆಡ್ಡಿ
-
Politics2 weeks ago
ನಾಯಕರುಗಳು ಜನರ ಜೀವನದ ಜೊತೆ ಹುಡುಗಾಟ ಆಡುತ್ತಿದ್ದಾರೆ : ಮಾಜಿ ನಗರಸಭೆ ಸದಸ್ಯ ಪಿ. ಯಲ್ಲಪ್ಪ ಆರೋಪ
-
Politics4 weeks ago
ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ
-
ಸುದ್ದಿ4 weeks ago
ಸಿಎಂ ತವರು ಜಿಲ್ಲೆಯಲ್ಲಿ ಜಿಲೆಟಿನ್ ಸ್ಪೋಟ, 10 ಕ್ಕೂ ಹೆಚ್ಚು ಕಾರ್ಮಿಕರು ಬಲಿ