Connect with us
Ad Widget

ಕೊರೊನಾ

ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್

Published

on

ಬೆಂಗಳೂರು: ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ಸಿನಿ ತಾರೆಯರು ತಮ್ಮದೇ ಆದ ನೆರವು ನೀಡುತ್ತಿದ್ದು, ನಟ ಕಿಚ್ಚ ಸುದೀಪ್ ಅವರು ಕೂಡ ಸಹಾಯ ಹಸ್ತ ಚಾಚಿದ್ದಾರೆ.

ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಅವರು ನೆರವಾಗುತ್ತಿದ್ದಾರೆ. ಈಗ ಸುದೀಪ್ ಗುರುಗಳಿಗೆ ನೆರವಾಗಲು ಮುಂದಾಗಿದ್ದು, ಖಾಸಗಿ ಶಾಲೆಯ ಶಿಕ್ಷಕರಿಗೆ ತಲಾ ಎರಡು ಸಾವಿರ ರೂಪಾಯಿ ಗೌರವಧನ ನೀಡಲಿದ್ದಾರೆ.

ಮೊದಲ ಹಂತದಲ್ಲಿ ಗುರುಗಳಿಗೆ ನಮನ ಕಾರ್ಯಕ್ರಮದಡಿ 50 ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲಿದ್ದು, ಆರ್ಥಿಕ ಸಂಕಷ್ಟದಲ್ಲಿ ಇರುವವರು ಈ 6360334455 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕೊರೊನಾ

ಬಡವರಿಗೆ ಊಟ ನೀರು ವಿತರಣೆ

Published

on

ಪೀಣ್ಯ ದಾಸರಹಳ್ಳಿ:’ ಕೊರೊನಾ ಲಾಕ್ ಡೌನ್ ನಿಂದ ಬಹಳಷ್ಟು ಬಡಜನರು ಸಂಕಷ್ಟದಲ್ಲಿರುವುದನ್ನು ಕಂಡು ಅವರಿಗೆ ಊಟ ನೀಡುತ್ತಿರುವುದು ಒಳ್ಳೆಯ ಕಾರ್ಯ’ ಎಂದು ಮಾಜಿ ಶಾಸಕ ಎಸ್. ಮುನಿರಾಜು ಹೇಳಿದರು.
‘ಮಲಸಂದ್ರದ ಅಯ್ಯಪ್ಪ ಬಡಾವಣೆಯಲ್ಲಿ ಜೆ.ಡಿ. ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ರಾಜು ಅವರು ಆಯೋಜಿಸಲಾದ ಉಚಿತ ಊಟ ನೀರು ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ದಿನನಿತ್ಯ ಬಡಜನರು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ನಮ್ಮ ಮುಖಂಡರೆಲ್ಲಾ ಸೇರಿ ಊಟ ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಯಾರಿಗೆ ಅವಶ್ಯಕತೆ ಇದೆಯೋ ಅವರು ಊಟ ಪಡೆದು ಕೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಟಿ.ಶಿವಕುಮಾರ್, ಹೇಮಾಚಲರೆಡ್ಡಿ,ರಾಜು, ಆನಂದ್ ರೆಡ್ಡಿ, ನವೀನ್ ರಾವ್, ವಿನೋದ್ ಗೌಡ, ಲಕ್ಷ್ಮೀ ನಾರಾಯಣ,( ಲಚ್ಚಿ) ರಮೇಶ್,ಅಪ್ಪಿ, ಭಕ್ತಿ, ಶಫಿ,ತಮ್ಮಯ್ಯಾ ಚಾರ್, ಕಿರಣ್ ರಾವ್ ಮುಂತಾದವರಿದ್ದರು.

Continue Reading

ಕೊರೊನಾ

ಕೋವಿಡ್ ಸಂಕಷ್ಟವನ್ನು ನಿಭಾಯಿಸುವಲ್ಲಿ ತಾಲ್ಲೂಕು ಯಂತ್ರಾಂಗ ಸಂಪೂರ್ಣ ವಿಫಲ- ಎಂ.ಪಿ ಮುನಿವೆಂಕಟಪ್ಪ

Published

on

ಬಾಗೇಪಲ್ಲಿ: ತಾಲ್ಲೂಕು ಕೋವಿಡ್ ಎರಡನೇ ಅಲೆಯ ಮತ್ತು ಲಾಕ್​ಡೌನ್ ಬಗ್ಗೆ ಇಂದು ಸಿಪಿಐಎಂ ಪಕ್ಷದ ತಾಲ್ಲೂಕು ಸಮಿತಿ ,ಸಿಐಟಿಯು ತಾಲ್ಲೂಕು ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, ಸಧ್ಯದ ಪರಿಸ್ಥಿತಿ ಕೋವಿಡ್ ಕೇರ್ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ.? ಪ್ರತಿ ನಿತ್ಯ ತಾಲ್ಲೂಕಿನಲ್ಲಿ ಕೋವಿಡ್ ಟೆಸ್ಟ್ ಗಳು ಎಷ್ಟು ನಡೆಯಿತ್ತಿವೆ?. ಎಷ್ಟು ಕೊರೋನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ? ಸಾವನ್ನಪ್ಪುತ್ತಿರುವವರೆಷ್ಟು ಜನ ಎಂಬ ಸ್ಪಷ್ಟ ಮಾಹಿತಿ ಶಾಸಕರಿಗೆ ಇಲ್ಲ.

ಎಲ್ಲೆಡೆ ಇಂದಿರಾ ಕ್ಯಾಂಟಿನ್ ಮೂಲಕ ಪಟ್ಟಣ, ನಗರ ಪ್ರದೇಶಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ ಹಸಿವನ್ನು ನೀಗಿಸುವ ಕೆಲಸ ನಡೆಯುತ್ತಿದೆ. ಆದರೆ ಬಾಗೇಪಲ್ಲಿ ಪಟ್ಟಣದಲ್ಲಿ ಹಸಿವಿನಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಕ್ಯಾಂಟಿನ್ ತೆರೆಯದೇ ಶಾಸಕರು ಏನು ಮಾಡುತ್ತಿದ್ದಾರೆ. ತಮ್ಮ ಟ್ರಸ್ಟ್ ನಿಂದ ಮಾಧ್ಯಮ ಪ್ರಚಾರಕ್ಕೆ ಮಾತ್ರ ಊಟದ ವಿತರಣೆ ಮಾಡಿ, ಒಂದಲ್ಕೆರಡು ಹೇಳಿಕೊಳ್ಳುತ್ತಾರೆ ಎಂದರು.

ನಂತರ ಕರ್ನಾಟಕ ಪ್ರಾಂತ್ಯ ರೈತ ಸಂಘ ಜಿಲ್ಲಾದ್ಯಕ್ಷ ಮಂಜುನಾಥ ರೆಡ್ಡಿ ಮಾತನಾಡಿ ಪಡಿತರ ಆಹಾರ ಅವ್ಯವಸ್ಥೆ ವಿತರಣೆ ಬಗ್ಗೆ‌ ಶಾಸಕರು ಲಕ್ಷ್ಯವಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಹಾಗೂ ಕೋವಿಡ್ ಎರಡನೇ ಅಲೆ ದಿನದಂದ ದಿನಕ್ಕೆ ಹೆಚ್ಚಾಗಿತ್ತಿದ್ದರೂ ಗಂಭೀರತೆ ಇಲ್ಲದೆ ಶಾಸಕರು ನಡೆದುಕೊಳ್ಳುತ್ತಿದ್ದಾರೆ. ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ ಮೂಲಸೌಕರ್ಯ ಗಳ ಕೊರತೆ , ಶುಚಿತ್ವ, ಸರಿಯಾಗಿ ಊಟ ಪೂರೈಕೆ ಬಗ್ಗೆ, ಕೋವಿಡ್ ಬಗ್ಗೆ ತಾಲ್ಲೂಕು ಆಡಳಿತ ಸರಿಯಾದ ಮಾಹಿತಿ ನೀಡುತ್ತಿಲ್ಲ ತಾಲ್ಲೂಕು ಶಾಸಕರು ಹಾಗೂ ತಾಲ್ಲೂಕು ಆಡಳಿತ ಯಂತ್ರಾಂಗ ಸಂಪೂರ್ಣ ವಿಫಲವಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್​ಗಳು, ಐಸಿಯು, ವೆಂಟಿಲೇಟರ್ ಲಭ್ಯತೆ, ಆಕ್ಸಿಜನ್ ಕಾನ್ಸನ್​ಟ್ರೇಟರ್​ನಿಂದಾಗುತ್ತಿರುವ ಉಪಯೋಗ, ಔಷಧ ಲಭ್ಯತೆಯಲ್ಲೂ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಈಗಾಗಲೇ ಆಟೋ, ಕ್ಯಾಬ್ ಚಾಲಕರು, ಹೂವಿನ ಬೆಳೆಗಾರರು, ಕಟ್ಟಡ ಕಾರ್ಮಿಕರನ್ನು ಒಳಗೊಂಡಂತೆ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಪ್ಯಾಕೇಜ್ ಗಳು ನಿಜವಾದ ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಭೆಯಲ್ಲಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಮಹಮ್ಮದ್ ಅಕ್ರಂ,‌ ಸಿಐಟಿಯು ಮುಖಂಡರಾದ ಆಂಜನೇಯರೆಡ್ಡಿ ಮುಸ್ತಫಾ, ಡಿವೈಎಫ್ಐ ಹೇಮಚಂದ್ರ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀರಾಮ್ ನಾಯಕ್, ಎಡಪಂಥೀಯ ಚಿಂತಕ ರಘುರಾಮ ರೆಡ್ಡಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

Continue Reading

ಕೊರೊನಾ

ಮಹಾಮಾರಿ ಕೊರೊನಾ ಅಂತ್ಯಕ್ಕಾಗಿ ಊರಿನ ಜನರಿಂದ ಪೂಜೆ

Published

on

ಮಹಾಮಾರಿ ಕೊರೊನಾ ಅಂತ್ಯಕ್ಕಾಗಿ ಊರಿನ ಎಲ್ಲಾ ಆಪತ್ಬಾಂಧವ ಗ್ರಾಮ ದೇವರುಗಳಿಗೆ ಪೂಜೆಸಲ್ಲಿಸಿದ ಉದ್ಬಾಳ್ ಗ್ರಾಮಸ್ಥರು

ಮಸ್ಕಿ: ತಾಲೂಕಿನ ಉದ್ಬಾಳ್ ಗ್ರಾಮದಲ್ಲಿ ಕೊರೊನಾ ಸೋಂಕಿನ ಭೀತಿ ನಗರ, ಪಟ್ಟಣವನ್ನು ದಾಟಿ ಗ್ರಾಮೀಣ ಪ್ರದೇಶವನ್ನೂ ಆವರಿಸಿದ್ದು, ತಾಲ್ಲೂಕಿನ ಬೇರೆಬೇರೆ ಗ್ರಾಮಸ್ಥರು ಪ್ಲೇಗ್‌ ಹಾಗೂ ಕೊರೊನಾ ಮಾರಿಯನ್ನು ಸಾಗುಹಾಕುವ ಹಲವು ಆಚರಣೆಗಳನ್ನು ಮಾಡಲು ಮುಂದಾಗಿದ್ದಾರೆ.

ತಾಲ್ಲೂಕಿನ ಬಳಗಾನೂರು ಹೋಬಳಿಯ ಉದ್ಬಾಳ್. ಗ್ರಾಮಸ್ಥರು ಊರಿನ ಎಲ್ಲ ದೇವರುಗಳಿಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ಇದರ ಅಂಗವಾಗಿ ಊರಿನ ಬೀದಿಗಳನ್ನೆಲ್ಲಾ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ದೇವರಿಗೆ ತೊಂಬಿಟ್ಟಿನ ಆರತಿ ಮಾಡಿ ಪೂಜೆ ಸಲ್ಲಿಸಿದರು. ಯಾವುದೇ ದುಷ್ಟ ಶಕ್ತಿ ಗ್ರಾಮದೊಳಕ್ಕೆ ಬಾರದಿರಲೆಂದು ದೇವರಲ್ಲಿ ಮನವಿ ಮಾಡಿಕೊಂಡರು.

ತಾಲ್ಲೂಕಿನ ಹಲವೆಡೆ ಕೊರೊನಾ ಸೋಂಕು ಸಾಗುಹಾಕುವ ಪೂಜೆಗಳನ್ನು ಮಾಡುತ್ತಿದ್ದಾರೆ.

ವರದಿ : ದುರ್ಗೇಶ್ ಭೋವಿ ಮಸ್ಕಿ

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್